ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ಪಿರ್ಯಾದಿ ಜಲೇಶ್ ಶೆಟ್ಟಿ ಪ್ರಾಯ : 42 ವರ್ಷ ತಂದೆ : ದಿ: ಸಂಜೀವ ಶೆಟ್ಟಿ  ವಾಸ: ಶೆಟ್ಟಿ ಕಂಪೌಂಡ್, ಜೋಡುರಸ್ತೆ, ಅಲೆವೂರು ಇವರು ದಿನಾಂಕ 09.10.2022 ರಂದು ಉಡುಪಿ ತಾಲೂಕು ಅಲೆವೂರು ಗ್ರಾಮದ  ರಾಂಪುರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಗೆ ಹೋಗುವರೇ ಮದ್ಯಾಹ್ನ 12.40 ಗಂಟೆಯ ದೇವಸ್ಥಾನದ ಗೋಪುರದ ಬಳಿ ನಿಂತುಕೊಂಡಿದ್ದ ಸಮಯ ಉಡುಪಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ  ಹೋಗುವ ಸತ್ಯನಾಥ ಎಂಬ ಬಸ್ಸು ದೇವಸ್ಥಾನದ ಗೋಪುರದ ಬಳಿ ಬಂದು ನಿಂತಿದ್ದು. ಬಸ್ಸಿನಿಂದ ಒಬ್ಬ ವ್ಯಕ್ತಿ ಇಳಿಯುತ್ತಿದ್ದ ಸಮಯದಲ್ಲಿ ಬಸ್ಸಿನ ಕಂಡಕ್ಟರ್ ಬಸ್ಸು ಮುಂದಕ್ಕೆ ಚಲಿಸಲು ಯಾವುದೇ ಸೂಚನೆ ನೀಡದೇ ಇದ್ದರೂ ಕೂಡ ಸದ್ರಿ ಬಸ್ಸಿನ ಚಾಲಕನು ಬಸ್ಸನ್ನು ಒಮ್ಮೆಲೆ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು ತೀವ್ರ ಸ್ವರೂಪದ ಒಳ ಗಾಯವಾಗಿದ್ದು,  ಚಿಕತ್ಸೆಯ ಬಗ್ಗೆ ಪಿರ್ಯಾದಿದಾರರು ಹಾಗೂ ಇಲ್ಲಿದ್ದ ಸ್ಥಳೀಯವರು ಸೇರಿ ಅಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಬಸ್ಸಿನಿಂದ ಬಿದ್ದ ವ್ಯಕ್ತಿಯ ಬಗ್ಗೆ ವಿಚಾರಿಸಿದಲ್ಲಿಜಾರ್ಖಂಡ್ ರಾಜ್ಯದ ಮಂಜಯ್ ಕುಮಾರ್ 19 ವರ್ಷ, ಎಂಬುದಾಗಿ ತಿಳಿಯಿತು. ಹಾಗೂ ಅಪಘಾತ ಪಡಿಸಿದ ಬಸ್ಸಿನ ನಂಬ್ರ ನೋಡಲಾಗಿ ಕೆ.ಎ.20.ಸಿ.2849 ಆಗಿರುತ್ತದೆ. ಮತ್ತು ಚಾಲಕನ ಬಗ್ಗೆ ವಿಚಾರಿಸಲಾಗಿ ಆತನು ಹೆಸರು ರಾಕೇಶ್‌ ಎಂದು ತಿಳಿಯಿತು ನಂತರ ಮಂಜಯ್ ಕುಮಾರ್ ನನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾನ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ,  ಮಂಜಯ್ ಕುಮಾರ್ ರಾತ್ರಿ ಸುಮಾರು  11.00 ಗಂಟೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಈ  ಬಗ್ಗೆ  ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 187/2022, ಕಲಂ: 279,  304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ಅಜೇಯ್‌ ಎ ಶೆಟ್ಟಿ ಪ್ರಾಯ: 27 ವರ್ಷ ತಂದೆ: ಅಶೋಕ್‌ ಶೆಟ್ಟಿ ವಾಸ: ಬಂಗ್ಲೆ ಮನೆ, ಬಂಗ್ಲೆಗುಡ್ಡೆ, ಕುಕ್ಕುಂದೂರು ಇವರು ದಿನಾಂಕ 09.10.2022 ರಂದು ರಾತ್ರಿ 09:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ  ಮಣಿಪಾಲದ ಲಕ್ಷ್ಮೀಂದ್ರ ನಗರದ Adidas ಆಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿ 169(A) ರಲ್ಲಿ ತಮ್ಮ ಪರಿಚಯದ ಮುಮ್ತಾಜ್‌ ರವರ ಕಾರು ನಂ: KA 20 MC 9991 ನೇ ದನ್ನು ಪಾರ್ಕ್‌  ಮಾಡಲು ಪಾರ್ಕ್‌ ಲೈಟ್‌ ಹಾಕಿ ರಸ್ತೆ ಬದಿಗೆ ನಿಲ್ಲಸಲು ಪ್ರಯತ್ನಿಸುತ್ತಿರುವಾಗ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ AP 39 JQ 9444 ನೇ ಮೋಟಾರ್‌ ಸೈಕಲ್‌  ನ್ನು ಅದರ ಸವಾರ ವೆಮುಲ್  ಸುದರ್ಶನ್ ಚೌದುರಿ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಸ್ವಲ್ಪ ಹಿಂದೆ ಸ್ಕಿಡ್‌ ಆಗಿ ಬಿದ್ದ ಪರಿಣಾಮ ಅದರ ಸವಾರ ಮೋಟಾರ್‌ ಸೈಕಲ್‌ ನಿಂದ ಎಸೆಯಲ್ಪಟ್ಟು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ತರವಾದ ಗಾಯ ಹಾಗೂ ದೇಹದ ಇತರ ಕಡೆ ಗಾಯವಾಗಿರುತ್ತದೆ, ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಸೇರಿಸಿರುವುದಾಗಿದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ :188/2022, ಕಲಂ: 279,  338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿ ಪ್ರಸಾದ್‌ ಪಿ.ವಿ,ಎಸ್‌  ಪ್ರಾಯ: 54 ವರ್ಷ ತಂದೆ: ಪಿ ವೀರಪ್ಪ ವಾಸ: ಓಲ್ಡ್‌ ನಂಬ್ರ 257/ಐ, ಹೊಸ ನಂಬ್ರ 4206/1 2 ನೇ ಮೇನ್‌ , ಸೀತಾ ವೃತ್ತದ ಹತ್ತಿರ ಗಿರಿನಗರ ೪4 ನೇ ಹಂತ, ಬನಶಂಕರಿ 3 ನೇ ಸ್ಟೇಜ್‌, ಬೆಂಗಳೂರು ಇವರ ಅಕ್ಕನ ಮಗನಾದ ಸಮರ್ಥ ಎನ್‌ ಶಂಕರ ಪ್ರಾಯ: 21 ವರ್ಷ ಈತನು ಹಣಕಾಸಿನ ವ್ಯವಹಾರ ಮಾಡುತ್ತಿದ್ದು, ಅದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 07.10.2022 ರಂದು 09:30 ಗಂಟೆಯಿಂದ ದಿನಾಂಕ: 10.10.2022 ರ 09:40 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಶರಾವರಿ ಅಪಾರ್ಟ್‌ಮೆಂಟ್‌ ನ ರೂಮ್‌ ನಂ: 105 ರ ಹಾಲ್‌ ನಲ್ಲಿನ ಫ್ಯಾನ್‌ ಗೆ ಬಿಳಿ ಬೈರಾಸನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು   ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 36/2022 ಕಲಂ: 174 ಸಿ ಆರ್ ಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿ ಶಾಂತಾರಾಮ ಶೆಟ್ಟಿ, ಪ್ರಾಯ: 64 ವರ್ಷ, ತಂದೆ: ಬಣಾಲಿ ನಾರಾಯಣ ಶೆಟ್ಟಿ, ವಾಸ: ಚಪ್ಪರಮಕ್ಕಿ ಮನೆ, ಕೆರಾಡಿ ಗ್ರಾಮ, ಇವರ ತಂಗಿ ಶಾಂಭವಿ ಶೆಟ್ಟಿಯವರ ಗಂಡನಾದ ಬಿ ಶಾಮರಾಜ ಶೆಟ್ಟಿ, ಪ್ರಾಯ: 72 ವರ್ಷ ರವರು ವೀಪರೀತ ಮದ್ಯಪಾನ ಮಾಡುವ ಹವ್ಯಾಸ ಹೊಂದಿದ್ದು, ಸುಮಾರು 20 ವರ್ಷಗಳಿಂದ ಬ್ರಹ್ಮಾವರದ ಶಾಂತಿ ಧಾಮ ಆಶ್ರಮದಲ್ಲಿ ವಾಸವಾಗಿದ್ದು, ಇತ್ತೀಚಿಗೆ ಸದ್ರಿ ಆಶ್ರಮ ಬಿಟ್ಟು ಕುಂದಾಪುರದ ಅಂಗಡಿ ಪರಿಸರದಲ್ಲಿ ಮಲಗುತ್ತಿದ್ದು ದಿನಾಂಕ 09/10/2022 ರಂದು ಸಂಜೆ 04:00 ಗಂಟೆಗೆ ಕುಂದಾಪುರ ಕಸಬ ಗ್ರಾಮದ ಕೆನರಾ ಬ್ಯಾಂಕ್ ಬಳಿ ಶೇಟ್ ಬಿಲ್ಡಿಂಗ್ ಜಗಲಿಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿರುವುದಾಗಿದೆ. ಮೃತರು ಸರಿಯಾಗಿ ಆಹಾರ ಸೇವನೆ ಮಾಡದೇ ವೀಪರೀತ ಮದ್ಯಪಾನ ಸೇವನೆ ಮಾಡಿ ಯಾವುದೋ ಖಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  UDR No 36/2022 ಕಲಂ: 174 CrPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-10-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080