ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 09/10/2022 ರಂದು ಸುದೇಶ್ ಶೆಟ್ಟಿ,  ಎ.ಎಸ್.ಐ,  ಪಡುಬಿದ್ರಿ ಪೊಲೀಸ್ ಠಾಣೆ ಇವರು  ಹೈವೇ ಪೆಟ್ರೋಲ್ ಗಸ್ತು ಸಂಚಾರ ದಲ್ಲಿರುವ ಸಮಯ ಮಧ್ಯಾಹ್ನ 14:10 ಗಂಟೆ ಸಮಯಕ್ಕೆ ಕಾಪು ತಾಲೂಕು ನಡ್ಸಾಲು ಗ್ರಾಮದ, ಕಣ್ಣಂಗಾರ್ ಬಳಿ ಅಬ್ದುಲ್ ಹಮೀದ್ ಎಂಬುವವರ ಮನೆಯ ಹತ್ತಿರ ಪಡುಬಿದ್ರಿ ಕಡೆಯಿಂದ ಹೆಜಮಾಡಿ ಕಡೆಗೆ ಆರೋಪಿ KA-20-AB-3890 ಟಿಪ್ಪರ್ ಲಾರಿಯಲ್ಲಿ ದೊಡ್ಡ ದೊಡ್ಡ ಕಪ್ಪು ಶಿಲೆ ಪಾದೆ ಕಲ್ಲುಗಳನ್ನು ಹೇರಿಕೊಂಡು ಅತೀ ವೇಗವಾಗಿ ಅದರ ಚಾಲಕನು ಟಿಪ್ಪರನ್ನು  ಚಲಾಯಿಸಿಕೊಂಡು ಬಂದಾಗ  ಚಾಲಕನ ನಿಯಂತ್ರಣ ಕಳೆದ ಟಿಪ್ಪರ್  ಲಾರಿ ರಸ್ತೆಯ ಬಲಕ್ಕೆ ಚಲಿಸಿ ಡಿವೈಡರಿಗೆ ಲಾರಿಯ ಚಕ್ರ  ತಾಗಿ ನಿಯಂತ್ರಣ ಕಳೆದ ಟಿಪ್ಪರ್ ಲಾರಿಯು ಎಡ ಮಗ್ಗುಲಾಗಿ  ರಸ್ತೆಯ ಮೇಲೆ ಬಿದ್ದುದಲ್ಲದೇ ಲಾರಿಯಲ್ಲಿದ್ದ ಕಲ್ಲುಗಳು ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು. ಲಾರಿ ಕೂಡಾ ಜಖಂಗೊಂಡು ಲಾರಿ ಚಾಲಕನ ಬಲಕಾಲಿಗೆ ಗುದ್ದಿದ ಒಳನೋವು ಉಂಟಾಗಿರುತ್ತದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ  ಮನೋಜ್ ಕುಮಾರ ಹೆಗ್ಡೆ (40), ತಂದೆ: ಲೋಕೇಶ ಹೆಗ್ಡೆ, ವಾಸ: ಉರ್ಲಾಂಡಿ ಮನೆ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ ಇವರು  ದಿನಾಂಕ 09/10/2022 ರಂದು ಅವರ KA-21-M-8194 ನೇ ಕಾರಿನಲ್ಲಿ ತಂದೆ ಲೊಕೇಶ ಹೆಗ್ಡೆ , ಕಸ್ತೂರಿ, ನೀತಾ ಮತ್ತು ಮಗು ಆದಿತ್ಯ ರವರನ್ನು ಕುಳ್ಳಿರಿಸಿಕೊಂಡು ಹೆಬ್ರಿ ಮಾರ್ಗವಾಗಿ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಸಂಜೆ 04:20 ಗಂಟೆಗೆ ಹೆಬ್ರಿ ಗ್ರಾಮದ ತಾಣ ಜಂಕ್ಷನ್ ಬಳಿ ತಲುಪುವಾಗ ಬಚ್ಚಪು ಕಡೆ ರಸ್ತೆಯಿಂದ KA-18-N-3063 ನೇ ಕಾರನ್ನು ಅದರ ಚಾಲಕ ಅನಿರುದ್ದ್ ಕೆ.ಆಚಾರ್ಯ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಕಾರಿನ ಎಡಬದಿಯ ಹಿಂಬದಿ ಚಕ್ರಕ್ಕೆ ಢಿಕ್ಕಿ ಪಡಿಸಿದುದ್ದರಿಂದ ಕಾರಿನ ಚಕ್ರ ಒಡೆದು ಕಾರು ರಸ್ತೆಯ ಎಡ ಬದಿಯಲ್ಲಿರುವ ಅಶ್ವತ್ಥ ಮರದ ಕಟ್ಟೆಗೆ ಢಿಕ್ಕಿ ಹೊಡೆದಿರುತ್ತದೆ. ಕಾರಿನ ಮುಂಬದಿ ಮತ್ತು ಎಡಬದಿಯ ಭಾಗವು ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದ ಲೊಕೇಶ ಹೆಗ್ಡೆ ರವರಿಗೆ ತಲೆಯ ಬಳಿ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 09/10/2022 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿದಾರರಾದ ಸ್ಟ್ಯಾನಿ ಬ್ರಿಟ್ಟೋ (60), ತಂದೆ: ದಿವಂಗತ ಲಾಜರಸ್‌ ಬ್ರಿಟ್ಟೋ, ವಾಸ: ಶಿರ್ವ ಮಸೀದಿ  ಬಳಿ, ಶಿರ್ವ ಗ್ರಾಮ, ಕಾಪು  ತಾಲೂಕು ಇವರ ತಮ್ಮ ಎವುಜಿನ್‌ಬ್ರಿಟ್ಟೋ(50)  ಇವರು ಶಿರ್ವ ಪೇಟೆಯಿಂದ ಮನೆಗೆ ನಡೆದುಕೊಂಡು ಶಿರ್ವ ನ್ಯಾರ್ಮದ ಜಯರಾಮ್‌ ಸರ್ವೀಸ್‌ ಸ್ಟೇಶನ್‌ ಸಮೀಪ ಸಾರ್ವಜನಿಕ ರಸ್ತೆ ಬದಿಯಲ್ಲಿ ಬರುತ್ತಿರುವಾಗ ಕಟಪಾಡಿ  ಕಡೆಯಿಂದ ಶಿರ್ವ ಕಡೆಗೆ KA-20-D-1713 ನೇ   ನೊಂದಣಿ  ಸಂಖ್ಯೆಯ ಪಿಕ್‌ಅಪ್‌ ವಾಹನದ ಚಾಲಕ ಅಲೆಕ್ಷ್‌ ಜೋಸೆಫ್‌ ಬರ್ಬೋಜಾರವರು ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ರಸ್ತೆ  ಬದಿ  ನಡೆದುಕೊಂಡು  ಹೋಗುತ್ತಿದ್ದ ಎವುಜಿನ್‌ಬ್ರಿಟ್ಟೋರವರಿಗೆ  ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಕೂಡಲೇ ಅಂಬುಲೆನ್ಸ್‌ ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಪಿಕಪ್‌ ವಾಹನದ ಚಾಲಕನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ರಾತ್ರಿ 09:40 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ದಿನಾಂಕ  09/10/2022 ರಂದು 19:00 ಗಂಟೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರ್ ಪೆಟ್ರೋಲ್ ಬಂಕ್ ಬಳಿ ಹಾದು ಹೋಗಿರುವ ಬಜಗೊಳಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ KA20-ME-1081 ನೇ ನಂಬ್ರದ ಕಾರಿನ ಚಾಲಕ ಅಜಯ್ ಕುಮಾರ್  ತನ್ನ ಕಾರನ್ನು ನಾರಾವಿ ಕಡೆಯಿಂದ ಬಜಗೊಳಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದಿನಿಂದ ಹೋಗುತ್ತಿರುವ ಒಂದು ವಾಹನವನ್ನು ಓವರ್ ಟೇಕ್ ಮಾಡಿ ಕಾರನ್ನನು ತೀರಾ ಎಡಭಾಗಕ್ಕೆ ಚಲಾಯಿಸಿ ನಾರಾವಿ ಕಡೆಯಿಂದ ಬಜಗೊಳಿ ಕಡೆಗೆ ಪಿರ್ಯಾದಿದಾರರಾದ ಶ್ರೀಧರ ಯಾನೆ ಸತೀಶ್ (49), ತಂದೆ: ದಿ: ದೂಜ ಪೂಜಾರಿ, ವಾಸ: ಮಜುಲೋಡಿ ಹೌಸ್, ವಾಲ್ಪಾಡಿ ಅಂಚೆ, ನೆಲ್ಲಿಕಾರು ಗ್ರಾಮ ಮೂಡಬಿದ್ರೆ ತಾಲೂಕು, ದ ಕ ಜಿಲ್ಲೆ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ KA-19-EN-8709 ನೇ ನಂಬ್ರದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲ ಭುಜದ ಬಳಿ ತೀವ್ರ ಸ್ವರೂಪದ ಒಳನೋವು ಆಗಿದ್ದು ಕಾರ್ಕಳ ಗಾಜ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಹರೀಶ್ ಅಡಿಗ (46), ತಂದೆ: ಕೃಷ್ಣ ಅಡಿಗ, ವಾಸ: 5-150  ರಥಬೀದಿ , ಪೆರರ್ಡೂರು  ಗ್ರಾಮ  ಮತ್ತು ಅಂಚೆ ಉಡುಪಿ ಇವರು  ಬುಕ್ಕಿಗುಡ್ಡೆ ನಾರೇಲು  ಬ್ರಹ್ಮಾಸ್ಥಾನದ ಬಳಿ 1 ಎಕ್ರೆ ಜಾಗ ಖರೀದಿಸಿದ್ದು, ಜಾಗದಲ್ಲಿ ತೋಟವನ್ನು ಮಾಡಿದ್ದು ಅಲ್ಲಿ ಹೋಗಿ ಬರುತ್ತಿದ್ದು ದಿನಾಂಕ 07/10/2022 ರಂದು  ಅಲ್ಲಿಗೆ ಹೋಗಿ  ತೋಟದಲ್ಲಿ ಬಾವಿಗೆ ಅಳವಡಿಸಿದ್ದ ಪಂಪ್ ಸೆಟ್ ಮೂಲಕ ತೋಟಕ್ಕೆ ಸಂಜೆ 5:30 ಗಂಟೆಗೆ ನೀರು ಹಾಯಿಸಿ ಪೆರ್ಡೂರಿನ ಮನೆಗೆ ವಾಪಾಸು ಬಂದಿದ್ದು  ದಿನಾಂಕ  09/10/2022 ರಂದು ಬೆಳಿಗ್ಗೆ 10:00 ಗಂಟೆಗೆ ನೀರು ಬಿಡಲು ಬಾವಿಗೆ ಹೋಗಿ ನೋಡಿದಾಗ ಪಂಪ್ ಸೆಟ್ ಇರಲಿಲ್ಲ. ದಿನಾಂಕ 07/10/2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ  09/10/2022 ರ ಬೆಳಿಗ್ಗೆ 10:00 ಗಂಟೆ ಮಧ್ಯಾವಧಿಯಲ್ಲಿ  ಯಾರೋ ಕಳ್ಳರೂ  ಪಂಪ್‌ನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 10-10-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080