ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿ  ಶೈಲೇಶ್ ಶೆಟ್ಟಿ ಪ್ರಾಯ 37 ವರ್ಷ, ತಂದೆ: ದಿ: ಜಯರಾಮ ಶೆಟ್ಟಿ, ವಾಸ: ಕೊಡಮಜಲು ಮನೆ, ಬಳಕುಂಜೆ ಇವರು ನವಯುಗ ಕಂಪೆನಿಯಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ:09.10.2021 ರಂದು ಬೆಳಿಗ್ಗೆ 05.30 ಗಂಟೆಗೆ ಓರ್ವ ಟೆಂಪೋ  ಚಾಲಕ ತನ್ನ  ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೆಕ್ಸ್ ಸಮೀಪ  ಮಂಗಳೂರು ಕಡೆಯಿಂದ ಮಂಗಳೂರು-ಉಡುಪಿ ಮತ್ತು ಉಡುಪಿ-ಮಂಗಳೂರು ರಾ ಹೆ 66 ಮದ್ಯದ ಡಿವೈಡರ್  ತಿರುವಿಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಅಳವಡಿಸಿದ ನವಯುಗ ಕಂಪೆನಿಯ ಸೊತ್ತುಗಳು ಜಖಂಗೊಳಿಸಿರುವುದಾಗಿ ಮಾಹಿತಿ  ಬಂದಂತೆ ಪಿರ್ಯಾದಿದಾರರು ಕೂಡಲೇ ಉದ್ಯಾವರ ಗ್ರಾಮದ ಅಪಘಾತ ಸ್ಥಳಕ್ಕೆ ಬಂದು ನೋಡುವಾಗ ಟೆಂಪೋ ಡಿವೈಡರ್ ಮೇಲೆ  ಪಲ್ಟಿಯಾಗಿ ಬಿದ್ದಿದ್ದು  ಟೆಂಪೋ ಎದುರುಗಡೆ ಸಂಪೂರ್ಣ ಜಖಂ ಆಗಿರುತ್ತದೆ. ಟೆಂಪೋ ಒಳಗಿದ್ದ ಚಾಲಕನಿಗೆ ಗಂಬೀರ ಗಾಯವಾಗಿ ಆತನನ್ನು  ಉಡುಪಿ ಕಡೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿರುವ ವಿಚಾರ ತಿಳಿದಿದ್ದು ನವಯುಗ ಕಂಪನಿಯ  ಡಿವೈಡರ್ ನಲ್ಲಿ ಅಳವಡಿಸಿದ ಕ್ರ್ಯಾಶ್ ಬ್ಯಾರಿಯರ್ , ಸೋಲಾರ್ ಬ್ಲಿಂಕರ್ , ರೆಡ್ ರಿಪ್ಲೆಕ್ಟರ್ , ಜಖಂ ಗೊಂಡಿದ್ದು ಸುಮಾರು 1,05,271/- ರೂ ನಷ್ಟ ಉಂಟಾಗಿರುವುದಾಗಿದೆ. ಅಪಘಾತ ನಡೆಸಿದ ಟೆಂಪೋ  ಅಲ್ಲಿಯೇ ಇದ್ದು ಟೆಂಪೋ ನಂಬ್ರ KL-11-AV-9243 ನೇ ದರ ಚಾಲಕ ಶಾಕೀರ್ ಹುಸೇನ್ ಎಂದು ತಿಳಿಯಿತು. ಈ ಅಪಘಾತಕ್ಕೆ ಟೆಂಪೋ ನಂಬ್ರ KL-11-AV-9243 ನೇ ದರ ಚಾಲಕ ಶಾಕೀರ್ ಹುಸೇನ್ ನವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 158/2021  ಕಲಂ 279, 338, 427  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿ ಚೆನ್ನಯ್ಯ ಪೂಜಾರಿ ಪ್ರಾಯ 59 ವರ್ಷ , ತಂದೆ:ಅಮ್ಮಯ್ಯ ಪೂಜಾರಿ ವಾಸ:ದೇವಪ್ಪನ ತೊಪ್ಪು,ಉಪ್ಪುಂದ ಇವರ ಸಂಬಂಧಿ ಮರ್ಲ ಪೂಜಾರಿ ಎಂಬುವವರು  ದಿನಾಂಕ 09/10/2021 ರಂದು  ಪಿರ್ಯಾದಿದಾರರ  ದುರ್ಗಾಂಬಾ ಬಾರ್ ಬಿಜೂರು ಹತ್ತಿರ ಇರುವ ಗೂಡಾಂಗಡಿಗೆ ಬಂದು ವಾಪಾಸ್ಸು ಮನೆಗೆ ಹೋಗುವರೇ ಸಮಯ ಸುಮಾರು 11:00 ಗಂಟೆಗೆ ಗೂಡಾಂಗಡಿಯಿಂದ ಹೊರಟು ಬಿಜೂರು ದುರ್ಗಾಂಬ ಬಾರ್ ಎದುರು ರಾಹೆ 66ರ ಬೈಂದೂರು-ಕುಂದಾಪುರ ರಸ್ತೆಯ ಬಳಿ ಮಣ್ಣು ರಸ್ತೆಯಲ್ಲಿ ನಿಂತು ಕೊಂಡಿರುವಾಗ ಬೈಂದೂರು ಕಡೆಯಿಂದ ಓರ್ವ  ಕಾರು ಚಾಲಕನು ಆತನ ಬಾಬ್ತು ಕಾರನ್ನು ರಸ್ತೆಯ ತೀರಾ ಎಡ ಭಾಗಕ್ಕೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಮರ್ಲ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಮರ್ಲ ಪೂಜಾರಿಯವರು ಮಣ್ಣು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು  ಹಾಗೂ ಅಲ್ಲಿದ್ದ ರಿತೇಶ್ ಪೂಜಾರಿ ಹಾಗೂ ಕಾರು ಚಾಲಕ ಕೂಡಲೇ ಅಲ್ಲಿಗೆ ಓಡಿ ಹೋಗಿ ಮಣ್ಣು ರಸ್ತೆಯಲ್ಲಿ ಬಿದ್ದಿದ್ದ ಮರ್ಲ ಪೂಜಾರಿಯವರನ್ನು ಎತ್ತಿ ಉಪಚರಿಸಿದ್ದು, ಮರ್ಲ ಪೂಜಾರಿಯವರ ತಲೆಗೆ ಹಾಗೂ ಕಾಲಿಗೆ, ಕಣ್ಣಿನ ಬಳಿ ರಕ್ತಗಾಯವಾಗಿದ್ದು ಗಾಯಗೊಂಡ ಮರ್ಲ ಪೂಜಾರಿಯವರನ್ನು 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ಅಪಘಾತಪಡಿಸಿದ ಕಾರು ಚಾಲಕನು ಪಿರ್ಯಾದಿದಾರರ ಪರಿಚಯವಿರುವ ಮುಲ್ಲಿಕಟ್ಟೆಯ ಶರತ್ ಕುಮಾರ್ ಶೆಟ್ಟಿರವರಾಗಿದ್ದು, ಸದ್ರಿಯವರ ಕಾರು ನಂಬ್ರ ನೋಡಲಾಗಿ ಕೆಎ 20- ಎಂಎ-1953 ಆಗಿರುತ್ತದೆ.ಈ ಅಪಘಾತಕ್ಕೆ ಕೆಎ 20 ಎಂ ಎ 1953ನೇದರ ಕಾರು ಚಾಲಕ ಅವರ ಬಾಬ್ತು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವುದೇ ಕಾರಣವಾಗಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  161/2021 ಕಲಂ. 279, 337 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ಪಿರ್ಯಾದಿ ಕರುಣಾಕರ ಶೆಟ್ಟಿ( 39) ತಂದೆ: ನಾಣು ಶೆಟ್ಟಿವಾಸ: ಕಂಬಾರ್ ಮಕ್ಕಿ  ಮಾವಿನ  ಕಾರು ಕೊಲ್ಲೂರು ಗ್ರಾಮ ಇವರು  ದಿನಾಂಕ: 09-10-2021 ರಂದು ಬೆಳಗ್ಗೆ 09:05  ಗಂಟೆಗೆ  ಕೊಲ್ಲೂರು  ಕಡೆಯಿಂದ  ಮಾವಿನಕಾರು ಕಡೆಗೆ ತನ್ನ  ಮೋಟಾರು ಸೈಕಲ್‌ನ್ನು  ಚಲಾಯಿಸಿಕೊಂಡು  ಕೊಲ್ಲೂರು ಗ್ರಾಮ NH-766C ಶುಕ್ಲತೀರ್ಥ ದೇವಸ್ಥಾನದ ಬಳಿ ತಲುಪಿದಾಗ ಪಿರ್ಯಾದುದಾರರ  ಹಿಂದಿನಿಂದ  ಕೊಲ್ಲೂರು  ಕಡೆಯಿಂದ  ಹಾಲ್ಕಲ್‌ ಕಡೆಗೆ ಆರೋಪಿ ಗೋವರ್ಧನ KA20 P 8008   ಮಾರುತಿ ರಿಡ್ಜ್‌ ಕಾರನ್ನು ಅತೀ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ  ಶೇಡಿ ಮೂರ್ಕಣಿ ಎಂಬಲ್ಲಿ  ಕಾರಿನ ವೇಗವನ್ನು ನಿಯಂತ್ರಿಸಲಾಗದೇ ತೀರ ಬಲಬದಿಗೆ ಚಯಾಯಿಸಿ  ಹಾಲ್ಕಲ್ ಕಡೆಯಿಂದ ಕೊಲ್ಲೂರು ಕಡೆಗೆ  ದೇವರಾಜ್ ನಾಯ್ಕ್ ರವರು  ಚಲಾಯಿಸಿಕೊಂಡು ಹೋಗುತ್ತಿದ್ದ  KA 20 ED 9586ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ  ಪರಿಣಾಮವಾಗಿ ದೇವರಾಜ್ ನಾಯ್ಕ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ಬಲಕಾಲು ಮೊಣಕಾಲು ಬಳಿ ಮೂಳೆ ಮುರಿತ ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 32 /2021  ಕಲಂ: 279, 338 IPC  ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (43) ತಂದೆ: ಶಂಕರ ಶೆಟ್ಟಿ ವಾಸ: ರುಕ್ಮಿಣಿ ನಿವಾಸ, ಹುನ್ಸೆಜೆಡ್ಡು, ಭಕ್ರೆ, ಮುದ್ರಾಡಿ  ಇವರು  ದಿನಾಂಕ: 09/10/2021 ರಂದು ಸಂಜೆ 6-00 ಗಂಟೆಗೆ ಮುದ್ರಾಡಿ ಪೇಟೆಯಲ್ಲಿ ಬಟ್ಟೆ ಇಸ್ರ್ರಿ ಕೊಡಲು ಮುದ್ರಾಡಿಯ ಮಾಕೇಟ್ ನ ಬಳಿ ಬಂದಾಗ ಅಲ್ಲಿಗೆ ಅರೋಪಿತರಾದ ಗುರು ಪ್ರಸಾದ್ ಹೆಗ್ಡೆ, ವಿಜಯ ಹೆಗ್ಡೆ, ಸತೀಶ್ ಹೆಗ್ಡೆ  ಮತ್ತು ದೇವದಾಸ್ ಹೆಗ್ಡೆ ಇವರುಗಳು ಸಮಾನ ಉದ್ದೇಶವನ್ನು ಹೊಂದಿ ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಅವಾಚ್ಯಶಬ್ದದಿಂದ ಬೈದ್ದು  ಕೈಯಿಂದ ಪಿರ್ಯಾದಿದಾರರಿಗೆ ಹೊಡೆದರು ಅಗ ಪಿರ್ಯಾದಿದಾರರು ಅವರುಗಳಿಂದ ತಪ್ಪಿಸಿ ಓಡಿ ಹೋದಾಗ ಅವರುಗಳು ಬೆನ್ನಟ್ಟಿಕೊಂಡು ಬಂದು ನಿಲ್ಲು ಎಂದು ಹೇಳಿ ಇನ್ನು ಮುಂದೆ ನಮ್ಮ ತಂಟೆ ತಕರಾರಿಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ತಕ್ಷೀರಿಗೆ ಕಾರಣವೇನೆಂದರೆ ಪಿರ್ಯಾದಿದಾರರ ಮೇಲೆ ಆರೋಪಿತ ಗುರು ಪ್ರಸಾದ್ ಹೆಗ್ಡೆ ರವರಿಗೆ  ವೈಯಕ್ತಿಕ ಮನಸ್ತಾಪವಿದ್ದು. ಇದೇ ಉದ್ದೇಶದಿಂದ ಆರೋಪಿತರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿರುವುದಾಗಿದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ :59/2021 ಕಲಂ:,341, 506, 323, 504 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಪಿರ್ಯಾದಿ ಗುರುಪ್ರಸಾದ್ ಹೆಗ್ಡೆ (45) ತಂದೆ: ಭೋಜ ಹೆಗ್ಡೆ ವಾಸ: ಕೊಳಂಬೆ ಮನೆ, ಮುದ್ರಾಡಿ ಗ್ರಾಮ,ಇವರು  ದಿನಾಂಕ: 09/10/2021 ರಂದು ಸಂಜೆ 6-15 ಗಂಟೆಗೆ ಮುದ್ರಾಡಿ ಗ್ರಾಮದ ಮುದ್ರಾಡಿಯ ಬಲ್ಲಾಡಿ ಕ್ರಾಸ್ ಬಳಿವಿರುವಾಗ ಅಲ್ಲಿಗೆ ಆರೋಪಿತರಾದ ಸಂತೋಷ್ ಶೆಟ್ಟಿ, ರಾಜ ಶೆಟ್ಟಿ ಮತ್ತು ವಿನಯ ಶೆಟ್ಟಿ ರವರು ಸಮಾನ ಉದ್ದೇಶವನ್ನು ಹೊಂದಿ ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಅಡ್ಡಗಟ್ಟಿ ನಿಲ್ಲಿಸಿ ಆರೋಪಿತ ಸಂತೋಷ್ ಶೆಟ್ಟಿಯು ಪಿರ್ಯಾದಿದಾರರಲ್ಲಿ  ನೀನು ದಿನಾಂಕ: 05/10/2021 ರಂದು ತನ್ನ ಮೇಲೆ ಠಾಣೆಯಲ್ಲಿ ದೂರು ಕೊಟ್ಟು ಏನು ಮಾಡಿದ್ದಿ  ಎಂದು ಹೇಳಿದ್ದಲ್ಲದೇ ಆರೋಪಿತರುಗಳು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದರು ಅಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅಲ್ಲಿಗೆ ಪಿರ್ಯಾದಿದಾರರ ಅಣ್ಣ ವಿಜಯ ಹೆಗ್ಡೆ ಬಂದದ್ದನ್ನು ಆರೋಪಿತರುಗಳು ನೋಡಿ ಪಿರ್ಯಾದಿದಾರರಲ್ಲಿ ಈ ಸಾರಿ ನೀನು ಬದುಕಿದ್ದಿಯಾ ಇನ್ನು ಮುಂದೆ ಹೀಗೆ ಮಾಡಿದರೆ ನಿನ್ನನ್ನು ಕೊಂದು ಬಿಡುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ತಕ್ಷೀರಿಗೆ ಕಾರಣವೇನೆಂದರೆ ಪಿರ್ಯಾದಿದಾರರು  ದಿನಾಂಕ; 05/10/2021 ರಂದು ಆರೋಪಿತ ಸಂತೋಷ ಶೆಟ್ಟಿ ರವರ ಮೇಲೆ ಹೆಬ್ರಿ ಠಾಣೆಯಲ್ಲಿ ದೂರು ಅರ್ಜಿಯನ್ನು ನೀಡಿದ್ದು. ಇದೇ ಉದ್ದೇಶದಿಂದ ಆರೋಪಿತರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿರುವುದಾಗಿದೆ.ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 60/2021 ಕಲಂ:,341, 506, 323, 504 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ವಾಹನ ಕಳವು ಪ್ರಕರಣಗಳು

  • ಮಲ್ಪೆ: ಪಿರ್ಯಾದಿ ದಿನೇಶ ಮೋಗವೀರ(37) ತಂದೆ: ರಾಮಚಂದ್ರ ಮೆಂಡನ್ ವಾಸ: ಕೋಡಿ ಕನ್ಯಾನ್  ಸಾಸ್ತಾನ್ ಉಡುಪಿ ಇವರು ಮಲ್ಪೆ ಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು  ತನ್ನ KA 20 EG 9301 ನೇ  ಮೋಟಾರು ಸೈಕಲ್ ನ್ನು  ದಿನಾಂಕ : 3-10-2021 ರಂದು  ರಾತ್ರಿ 08:00 ಗಂಟೆಗೆ ಮಲ್ಪೆ  ಬಾಪುತೋಟ ಪಡುಕೆರೆ  ರಸ್ತೆ ಬದಿಯಲ್ಲಿ  ನಿಲ್ಲಿಸಿ   ಮೀನುಗಾರಿಕೆಗೆ ಹೋಗಿದ್ದು  ,ದಿನಾಂಕ 06-10-2021  ರಂದು ಬೆಳಿಗ್ಗೆ 10:00 ಗಂಟೆಗೆ  ಬಂದು  ನೋಡುವಾಗ ಪಿರ್ಯಾಧಿದಾರರ ಬೈಕ್ ಕಾಣಿಸದೆ ಇದ್ದು  ,ಪಿರ್ಯಾಧಿದಾರು  ಆಸುಪಾಸು ಹಾಗೂ ಇತರ ಕಡೆ ಹುಡುಕಾಡಿದಲ್ಲಿ  ಪತ್ತೆಯಾಗದೆ ಇದ್ದು ದಿನಾಂಕ 03-10-2021 ರಂದು  ರಾತ್ರಿ 08:00 ಗಂಟೆಯಿಂದ   ದಿನಾಂಕ 06-10-2021  ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ,ಕಳವಾದ ಬೈಕಿನ ಅಂದಾಜು ಮೌಲ್ಯ 25000 ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 113 /2021  ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-10-2021 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080