ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಬೈಂದೂರು: 08/09/2022 ರಂದು ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು ನಂ ಕೆಎ-20 ಜಿ-506 ನೇದರಲ್ಲಿ ಸಮಯ ಸುಮಾರು 16:30 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಸಿಗರೇಟು ಸೇವನೆ ಮಾಡಿಕೊಂಡು ಅಮಲಿನಲ್ಲಿರುವ ಮಹಮ್ಮದ್ ಶರೀಫ್ (25)ತಂದೆ:ಮಹಮ್ಮದ್ ಅಶ್ರಫ್  ವಾಸ: 8-5 ಮೊಮಿನ್ ಮೊಹಲ್ಲಾ , ಶಿರೂರು ಗ್ರಾಮ ಬೈಂದೂರು ತಾಲೂಕು ಈತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಸದ್ರಿ ವ್ಯಕ್ತಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಅವರನ್ನು ವಶಕ್ಕೆ ಪಡೆದುಕೊಂಡು ಕಛೇರಿಗೆ ಕರೆತಂದು ಸದ್ರಿ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ 08/09/2022 ರಂದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮಹಮ್ಮದ್ ಶರೀಫ್ ರವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿದ ಮೇರೆಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 180/2022 ಕಲಂ : 27(B) NDPS ACT-1985 ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕೆ. ಶ್ರೀಪತಿ ಭಟ್‌ (40) ತಂದೆ: ನರಸಿಂಹ ಭಟ್‌, ವಾಸ: ಕಂಬಿಕಲ್ಲು, ಕಕ್ಕುಂಜೆ ಗ್ರಾಮ ಬ್ರಹ್ಮಾವರ ಇವರು ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಾಹಗಣಪತಿ ದೇವಸ್ಥಾನದ ಆಢಳಿತ ಟ್ರಸ್ಟಿ ಆಗಿರುತ್ತಾರೆ. ಸದ್ರಿ ದೇವಸ್ಥಾನದಲ್ಲಿ ದಿನಾಂಕ 08/09/2022 ರಂದು ರಾತ್ರಿ 10 ಗಂಟೆಗೆ ಸೋಣೆಯಾರತಿ ಪೂಜೆ ಮುಗಿಸಿ ಬಾಗಿಲು ಹಾಕಿ ಹೋಗಿದ್ದು, ದಿನಾಂಕ 09/09/2022 ರಂದು ಬೆಳಿಗ್ಗೆ 6 ಗಂಟೆಗೆ ಶಿವರಾಮ ಶೆಟ್ಟಿ ಎಂಬವರು ಮೈಕ್‌ ಆನ್‌ ಮಾಡಲು ಬಂದಾಗ ದೇವಸ್ಥಾನದಲ್ಲಿ ಕಳವು ಆಗಿರುವ ಸಂಶಯಗೊಂಡು ಮಾಹಿತಿ ಕೆ. ಶ್ರೀಪತಿ ಭಟ್‌ ರವರಿಗೆ ತಿಳಿಸಿದ ಮೇರೆಗೆ ಇವರು ದೇವಸ್ಥಾನದಕ್ಕೆ ಬಂದು ಪರಿಶೀಲಿಸಿದಾಗ ಯಾರೋ ಕಳ್ಳರು ದಿನಾಂಕ 08/09/2022 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 09/09/2022 ರಂದು ಬೆಳಿಗ್ಗೆ 6 ಗಂಟೆಯ ಮಧ್ಯಾವಧಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ ಮುಂದಿನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಹಿಂಬಾಗಿಲಿನಿಂದ ಒಳ ಬಂದು ಯಾವುದೋ ವಸ್ತುವಿನಿಂದ ದೇವಸ್ಥಾನದ ಕಛೇರಿ ಕೊಠಡಿಯಲ್ಲಿದ್ದ ಗೋಡ್ರೇಜ್‌ಮತ್ತು ಕಾಣಿಕೆ ಹುಂಡಿ ಮೀಟಿ ಜಖಂಗೊಳಿಸಿ ತೆರೆದು ಗೋಡ್ರೇಜ್‌ನಲ್ಲಿದ್ದ ರೂಪಾಯಿ. 6,000/- ಮತ್ತು ಕಾಣಿಕೆ ಹುಂಡಿಯಲ್ಲಿದ್ದ ಅಂದಾಜು ರೂಪಾಯಿ 5,000/- ಒಟ್ಟು ರೂಪಾಯಿ 11,000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕಾರ್ಕಳ: ದಿನಾಂಕ 09/09/2022 ಬೆಳಿಗ್ಗೆ 08:30 ಗಂಟೆಗೆ ತೇಜಸ್ವಿ.ಟಿ. ಪಿ.ಎಸ್.ಐ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ತೇಜಸ್ವಿ.ಟಿ. ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ನಿಟ್ಟೆ ಗ್ರಾಮದ ಕೆಮ್ಮಣ್ಣು  ಡ್ಯಾಮ್‌ನ ಬಳಿಯ ಕೆ.ಪಿ.ಟಿ.ಸಿಎಲ್‌ನ ಪಾಳು ಬಿದ್ದ ಹಳೆಯ ಕಟ್ಟಡದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು  ಇಸ್ಪೀಟು ಜುಗಾರಿ  ಆಟ ಆಡುತ್ತಿರುವುದಾಗಿ  ಇವರಿಗೆ  ದೊರೆತ ವರ್ತಮಾನದಂತೆ ಬೆಳಿಗ್ಗೆ 09:15 ಗಂಟೆಗೆ ಇವರು ಸಿಬ್ಬಂದಿಯವರೊಂದಿಗೆ  ದಾಳಿ ನಡೆಸಿ ಆಪಾದಿತರಾದ 1.  ಪ್ರಥಮ್‌ಶೆಟ್ಟಿ (29) ತಂದೆ ರಮಣ ಶೆಟ್ಟಿ ವಾಸ ಪೊಂಜೆರ ಮನೆ, ಪರಪ್ಪಾಡಿ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 2. ಸಂದೀಪ (29) ತಂದೆ ಶೀನ ವಾಸ ನಿಟ್ಟೆ ಎರ್ಮುಂಜೆ   ಪಳ್ಳ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 3  .ಗುರು ಪ್ರಸಾದ (23) ತಂದೆ: ವಿಠಲ, ವಾಸ: ಮದನಾಡು ದರ್ಖಾಸ್‌‌ಮನೆ, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 4.  ರಾಜೇಶ್ ಪೂಜಾರಿ ವಾಸ: ಸೂರಂಟೆ ನಿಟ್ಟೆ ಕೆಮ್ಮಣ್ಣು ನಿಟ್ಟೆ ಗ್ರಾಮ ಇವರನ್ನು  ವಶಕ್ಕೆ ಪಡೆದು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ  ನಗದು ರೂಪಾಯಿ 1360/- , ಇಸ್ಪೀಟ್ ಎಲೆಗಳು -52, ನೆಲಕ್ಕೆ ಹಾಸಿದ ಬ್ಯಾನರ್-1, ಮತ್ತು ಇಸ್ಪೀಟ್ ಕಾರ್ಡ್ ನ ಪ್ಯಾಕೇಟ್-1 ನ್ನು  ಮುಂದಿನ ಕ್ರಮದ ಬಗ್ಗೆ ಮಹಜರು    ಮುಖೇನ  ವಶಕ್ಕೆ  ಪಡೆದು ಎನ್,ಸಿ ಅರ್ಜಿ ದಾಖಲಿಸಿಕೊಂಡಿದ್ದು, ಮಾನ್ಯನ್ಯಾಯಾಲಯದ ಡಿಸ್ ನಂಬ್ರ: 1913/2022   ದಿನಾಂಕ: 09/09/2022 ರಂತೆ ಅನುಮತಿ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022 ಕಲಂ:  87 K P ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 10-09-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080