ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (40),  ತಂದೆ : ಬಾಲ ಕೃಷ್ಣ ಶೆಟ್ಟಿ,  ವಾಸ : ಕಟ್ಟಿತ್ತು ಹೌಸ್ ಮುದರಂಗಡಿ, ಕುತ್ಯಾರು ಕಾಪು ತಾಲೂಕು  ಉಡುಪಿ  ಜಿಲ್ಲೆ ಇವರು ದಿನಾಂಕ 07/08/2022 ರಂದು ತನ್ನ KA-20-EZ-2346  ನೇ ಮೋಟಾರ್ ಸೈಕಲ್‌ನಲ್ಲಿ ಉಡುಪಿ ಮಂಗಳೂರು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಾಂಗಾಳ ಕಡೆಯಿಂದ  ಕಾಪು ಕಡೆಗೆ ಹೋಗುತ್ತಿರುವಾಗ ಪಾಂಗಾಳ ಗ್ರಾಮದ ನಾನಯರ ಗರಡಿ ಬಳಿ ತಲುಪುತ್ತಿದ್ದಂತೆ ಮಧ್ಯಾಹ್ನ 12:15 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಇಸ್ಮಾಯಿಲ್ ತನ್ನ ಆಟೋ ನಂಬ್ರ  KA-20-D-2668  ನೇದನ್ನು  ಅತೀ ವೇಗ  ಹಾಗೂ ಅಜಾಗರೂಕತೆಯಿಂದ ತೀರಾ ಎಡ ಬದಿಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದು, ಅವರ ಎಡ ತೊಡೆಯ ಭಾಗಕ್ಕೆ ತೀವೃವಾಗಿ ಗುದ್ದಿದ ಗಾಯವಾಗಿದ್ದು,  ಕೂಡಲೇ ಪಿರ್ಯಾದಿದಾರರನ್ನು ಢಿಕ್ಕಿ ಹೊಡೆದ ವಾಹನದಲ್ಲೆ ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು,  ನಂತರ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಎಡಸೊಂಟದ ಮೂಳೆ ಮುರಿದು ಗಾಯವಾಗಿದ್ದು ಅದಕ್ಕೆ ಶಸ್ತ್ರ ಚಿಕಿತ್ಸೆ  ಮಾಡಿಸಬೇಕೆಂದು ಹೇಳಿದ್ದಂತೆ ಶಸ್ತ್ರ ಚಿಕಿತ್ಸೆ  ಮಾಡಿಸಿದ್ದು, ಈ ಬಗ್ಗೆ ಇಸ್ಮಾಯಿಲ್ ನು  ಆಸ್ಪತ್ರೆಯ ಬಿಲ್ಲನ್ನು ಭರಿಸುವುದಾಗಿ ಒಪ್ಪಿಕೊಂಡಿದ್ದು, ನಂತರ ಹಣವನ್ನು ಕೊಡಲು ನಿರಾಕರಿಸಿದ ಕಾರಣ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಭಾಕರ ಆಚಾರ್ಯ (40), ತಂದೆ: ನಾರಾಯಣ ಆಚಾರ್ಯ, ವಾಸ: ಹೆಮ್ಮುಂಜೆ ಗುಡ್ಡೆಯಂಗಡಿ ಗ್ರಾಮ ಕುಂದಾಫುರ  ತಾಲೂಕು ಇವರ ಸಹೋದರ ಸುಧಾಕರ ಆಚಾರ್ಯ (35) ಇವರು   ವಿಪರೀತ ಶರಾಬು ಕುಡಿಯುವ  ಚಟ  ಹೊಂದಿದ್ದು,  ಶರಾಬು   ಕುಡಿದು  ಎಲ್ಲಾದರೂ    ಮಲಗುತ್ತಿದ್ದು  ಅದರಂತೆ  ದಿನಾಂಕ 09/08/2022  ರಂದು ಬೆಳಿಗ್ಗೆ  8:00 ಗಂಟೆಯಿಂದ  18:30 ಗಂಟೆಯ   ಮಧ್ಯದ  ಅವಧಿಯಲ್ಲಿ ಕುಂದಾಪುರ   ತಾಲೂಕಿನ   ಸಿದ್ದಾಪುರ  ಗ್ರಾಮದ  ಸಂತೆ ಮಾರ್ಕೆಟ್  ಒಳಗಡೆ  ಕುಳಿತ್ತುಕೊಂಡವರು ಶರಾಬು  ಕುಡಿಯುವ   ಚಟದಿಂದಲೊ ಅಥವಾ   ಇನ್ಯಾವುದೋ ಕಾಯಿಲೆಯಿಂದಲೊ   ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2022  ಕಲಂ: 174 ಸಿ̤̤.ಆರ್‌ .ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಅಜೆಕಾರು: ಪಿರ್ಯಾದಿದಾರರಾದ ರಕ್ಷಣ್‌ ಹೆಗ್ಡೆ (22), ತಂದೆ: ರಾಮಕೃಷ್ಣ ಹೆಗ್ಡೆ, ವಾಸ: ಸುರಭಿ ಮನೆ, ಕೈಕಂಬ, ಅಜೆಕಾರು, ಮರ್ಣೆ ಗ್ರಾಮ ಇವರ ತಂದೆ ರಾಮಕೃಷ್ಣ ಹೆಗ್ಡೆ(56) ರವರು ದಿನಾಂಕ 09/08/2022 ರಂದು ಕಡ್ತಲದ ಅವರ ಜಾಗದಲ್ಲಿ ಕೃಷಿ ಕೆಲಸ ಮಾಡುತ್ತಿರುವ ವೇಳೆ ಸಂಜೆ 5:45 ಗಂಟೆಗೆ ಎದೆನೋವು ಕಾಣಿಸಿಕೊಂಡಿದ್ದು, ಈ ಬಗ್ಗೆ ಅವರು ಅಜೆಕಾರಿನ ಖಾಸಗಿ ಕ್ಲಿನಿಕ್‌ಗೆ ಬಂದು ವೈದ್ಯರಲ್ಲಿ ಪರೀಕ್ಷಿಸಿಕೊಂಡಿದ್ದು, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಸಂಜೆ  6:50 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ರಾಮಕೃಷ್ಣ ಹೆಗ್ಡೆಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2022 2022  ಕಲಂ: 174 ಸಿ̤̤.ಆರ್‌ .ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಇಮ್ಯಾನುವೆಲ್ ಕಿರಣ್ (49), ತಂದೆ: ಸಾಮುವೆಲ್ ಜತ್ತನ್, ವಾಸ: ವಾಸುಕೀ ನಗರ  1 ನೇ ಕ್ರಾಸ್, ಕಾಸರಗೋಡು ಇವರು KA-04-MM-2636 ನೋಂದಣಿಯ  ರಾಯಲ್  ಫಿಶರ್ ಬೋಟ್ ನ್ನು ಹೊಂದಿದ್ದು  ಮಲ್ಪೆ ಬಂದರಿನಲ್ಲಿ  ಪಿರ್ಯಾದಿದಾರರ ಬೋಟಿನಲ್ಲಿ ಮೀನುಗಾರಿಕೆಯ ಕೆಲಸದ ಬಗ್ಗೆ ಅಗಸ್ಟ್ -1-2022 ರಂದು ತಮಿಳುನಾಡಿನ ಬಾಲಕೃಷ್ಣನ್ ಸಗಾಯ ಸ್ಟಾಲಿನ್ , ವಿನೋದ್, ಅಂತೋನಿ ರಾಬರ್ಟ್, ವಿಜಯ ಕುಮಾರ, ವಿನೋದ್ ಜೋಸ್, ಅರುಣ್ ,ಗಣೇಶನ್ ಇವರುಗಳು ಬಂದಿದ್ದು , ದಿನಾಂಕ 09/08/2022 ರಂದು ಮಲ್ಪೆ ಬಂದರಿನಲ್ಲಿ ಮಂಜಿ ಧಕ್ಕೆಯಲ್ಲಿ  ಪಿರ್ಯಾದಿದಾರರ ಬೋಟ್ ಸಮುದ್ರಕ್ಕೆ  ಮೀನುಗಾರಿಕೆಗೆ  ತೆರಳಲು ತಯಾರಿ ನಡೆಸುತ್ತಿರುವಾಗ ಸಂಜೆ 4:00 ಗಂಟೆಯ ಸಮಯಕ್ಕೆ ಗಣೇಶನ್(51) ಇವರು  ಬೋಟಿನ ಹಿಂಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋದಾಗ ಆಯತಪ್ಪಿ  ಆಕಸ್ಮಿಕವಾಗಿ ಬೋಟಿನಿಂದ  ಧಕ್ಕೆಯ ನೀರಿನಲ್ಲಿ  ಬಿದ್ದು ಮುಳುಗಿ ಕಾಣೆಯಾಗಿರುವುದಾಗಿ ಬೋಟಿನ ಡ್ರೈವರ್  ಬಾಲಕೃಷ್ಣನ್  ಇವರು ಪಿರ್ಯಾದಿದಾರರಿಗೆ ಪೋನ್ ಮುಖಾಂತರ ತಿಳಿಸಿದಂತೆ  ಪಿರ್ಯಾದಿದಾರರು  ಮಲ್ಪೆ  ಬಂದರಿಗೆ ಬಂದು  ಗಣೇಶನ್ ಇವರನ್ನು ಧಕ್ಕೆಯ ನೀರಿನಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಶಿರ್ವಾ: ಕಾಪು ತಾಲೂಕು ಬೆಳ್ಳೆ  ಗ್ರಾಮದ ಸರ್ವೆ ನಂಬ್ರ 69/7 ರಲ್ಲಿ 1-95 ಸೆಂಟ್ಸ ವಿಸ್ತೀರ್ಣದ ಜಮೀನು ಪಿರ್ಯಾದಿದಾರರಾದ ಲೀನಾ ಮಿನೇಜಸ್ (47), ಗಂಡ: ವಿಲಯಮ್ ಮಿನೇಜಸ್, ವಾಸ:ಕಬ್ಯಾಡಿ ಮನೆ, ಬೆಳ್ಳೆ ಗ್ರಾಮ, ಕಾಪು ತಾಲೂಕು ಇವರ ಗಂಡ ವಿಲಿಯಮ್ ಮಿನೇಜಸ್ ರವರಿಗೆ ಸೇರಿದ್ದು, ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಟ್ಟು ಅದಕ್ಕೆ ನೀರಿನ ಸ್ಪಿಂಕ್ಲರ್ ಪೈಪ್ ಗಳನ್ನು ಅಳವಡಿಸಿರುತ್ತಾರೆ. ದಿನಾಂಕ 09/08/2022 ರಂದು ಬೆಳಿಗ್ಗೆ 08:00 ಗಂಟೆ ಸಮಯಕ್ಕೆ ಆರೋಪಿಗಳಾದ ನಾಣುಮೂಲ್ಯ, ರತಿಮೂಲ್ಯ, ದಯಾನಂದ ಮೂಲ್ಯ, ಗಣೇಶ್ ಮೂಲ್ಯರವರು  ಪಿರ್ಯಾದಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಗಿಡಗಳನ್ನು ಕಿತ್ತು ಹಾಕಿ ನೀರಿನ ಸ್ಪಿಂಕ್ಲರ್ ಪೈಪ್ ಗಳನ್ನು ಒಡೆದು ಹಾಕಿರುತ್ತಾರೆ. ಈ ಬಗ್ಗೆ ಪ್ರಶ್ನಿಸಲು ಪಿರ್ಯಾದಿದಾರರು ಹೋದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 447, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಯೋಗೀಶ್‌ ಪೂಜಾರಿ (28), ತಂದೆ: ದಿ. ಶಶಿಧರ ಪೂಜಾರಿ, ವಾಸ: ಬೋಳಾರುಗುಡ್ಡೆ, ನಾರಾಯಣಗುರು ಸಂಘದ ಬಳಿ, ಉದ್ಯಾವರ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 09/08/2022 ರಂದು ರಾತ್ರಿ ಊಟಕ್ಕೆಂದು ತನ್ನ ಅಣ್ಣ ಮನೋಹರ್‌ ಪೂಜಾರಿ ಯವರೊಂದಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಶಿರಿಬೀಡು ಪಿಂಗಾರ ಹೋಟೇಲ್‌ಗೆ ಹೋಗಿದ್ದು 21:00 ಗಂಟೆಗೆ ಹೋಟೇಲ್‌ನಲ್ಲಿ ಆಪಾದಿತರಾದ ಸೂರಜ್‌, ಅನಿಲ್‌‌ ಹಾಗೂ ಇತರ ಇಬ್ಬರು ಒಟ್ಟು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಟೇಬಲ್‌ ಮೇಲಿದ್ದ ಬೀಯರ್‌ಗ್ಲಾಸ್‌ನಿಂದ ಆರೋಪಿ ಸೂರಜ್‌ಮತ್ತು ಅನಿಲ್‌ರವರು ಪಿರ್ಯಾದಿದಾರರು ಮತ್ತು ಅವರ ಅಣ್ಣನಿಗೆ ತಲೆ, ಎದೆ ಹಾಗೂ ಕೈಗಳಿಗೆ ಹಲ್ಲೆ ಮಾಡಿದ್ದು, ಇನ್ನಿಬ್ಬರು ಆರೋಪಿತರು ಕೈಯಿಂದ ಹೊಡೆದು ಕೈಯಿಂದ ಹೊಡೆದು, ಕಾಲಿನಿಂದ ತುಳಿದಿದ್ದಲ್ಲದೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ:  323, 324, 504, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಅನಿಲ್‌ (27), ತಂದೆ: ದಿ.ಶೇಖರ, ವಿಳಾಸ: ಕಾಡಬೆಟ್ಟು ವಿನೋಬನಗರ, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 09/08/2022 ರಂದು ರಾತ್ರಿ ಊಟಕ್ಕಾಗಿ ಸ್ನೇಹಿತ ಅವಿನಾಶ್‌ರವರೊಂದಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಶಿರಿಬೀಡು ಪಿಂಗಾರ ಹೋಟೇಲ್‌ಗೆ ಹೋಗಿದ್ದು, 21:00 ಗಂಟೆಗೆ ಹೋಟೇಲ್‌ನಲ್ಲಿ 4 ಜನ ಆಪಾದಿತರಾದ 1) ಮನೋಹರ, 2) ಯೋಗೀಶ್‌ ಮತ್ತು ಇತರ ಇಬ್ಬರು  ಒಟ್ಟು ಸೇರಿ ಬೈದು ನಿಂದನೆ ಮಾಡಿರುವುದಲ್ಲದೆ, ಬಿಯರ್‌ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ, ಕುತ್ತಿಗೆಗೆ, ಕೈಗೆ ಹಾಗೂ ಕಾಲಿಗೆ ಹಲ್ಲೆ ಮಾಡಿ, ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಕುತ್ತಿಗೆಯನ್ನು ಒತ್ತಿ ಹಿಡಿದಿರುತ್ತಾರೆ. ನಂತರ ಅವರ ಜೊತೆಯಲ್ಲಿ ಇದ್ದ ಇತರ ಇಬ್ಬರೂ ಕೈಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022 ಕಲಂ:  323, 324, 307, 504, 506 Rw 34 IPC & ಕಲಂ: 3(1)(r) 3(1)(s) SC ST ACT-1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-08-2022 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080