ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಪಾರ್ವತಿ (59), ಗಂಡ: ದಿ. ಗೋಪಾಲ ಪೂಜಾರಿ, ವಾಸ:: 3/120 ಕುಕ್ಕುಡೆ, ಹೊನ್ನಾಳ ಅಂಚೆ, ಹಾರಾಡಿಗ್ರಾಮ, ಬ್ರಹ್ಮಾವರ  ತಾಲೂಕು ಇವರು ತನ್ನ ಎರಡು ಗಂಡು ಮಕ್ಕಳೊಂದಿಗೆ ವಾಸಮಾಡಿಕೊಂಡಿರುವುದಾಗಿದೆ. ಅವರ ಕಿರಿಯ ಮಗನಾದ ಹರೀಶ್‌‌ ಜಿ (33) ಎಂಬುವವರು C.A ಪ್ರ್ಯಾಕ್ಟೀಸ್  ಮಾಡುತ್ತಿರುವುದಾಗಿದೆ. ಅವರಿಗೆ ಪ್ರತಿ ದಿನ ವಾಕಿಂಗ್‌‌ಗೆ ಹೋಗುವ ಅಭ್ಯಾಸವಿರುತ್ತದೆ. ಅವರು  ದಿನಾಂಕ  09/08/2021 ರಂದು ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯ ಮಧ್ಯಾವಧಿಯಲ್ಲಿ ವಾಸದ ಮನೆಯ ದಕ್ಷಿಣ ಭಾಗದದಲ್ಲಿರುವ ಕೃಷಿ ಗದ್ದೆಯ ಕಡೆಗೆ ವಾಕಿಂಗ್‌‌‌ ಬಗ್ಗೆ ಹೋಗುವಾಗ ದಾರಿಯ ಪಕ್ಕದಲ್ಲಿ ಎಗ್ರೇಸ್‌‌ ಡಿಸೋಜರವರ ಜಾಗದಲ್ಲಿ ಇರುವ ಆವರಣವಿಲ್ಲದ  ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ವಿನೋದ ಅಮಿನ (27), ತಂದೆ: ದಿನೇಶ ಪೂಜಾರಿ, ವಾಸ: ಮನೆ ನಂ: 7-220B,ಚಕ್ರತೀರ್ಥ ಮನೊಳ್ಳಿಗುಜ್ಜಿ, ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಪೋಸ್ಟ್  ಉಡುಪಿ ತಾಲೂಕು ಹಾಗೂ ಆರೋಪಿ  ದಿನೇಶ ಪೂಜಾರಿ (54), ವಾಸ: ಮನೆ ನಂ: 7-200 B, ಚಕ್ರತೀರ್ಥ ಮನೊಳ್ಳಿಗುಜ್ಜಿ, ಶಿವಳ್ಳಿ ಗ್ರಾಮ ಕುಂಜಿಬೆಟ್ಟು ಪೋಸ್ಟ್ ಉಡುಪಿ ತಾಲೂಕು ಇವರು  ತಂದೆ ಮಗನಾಗಿದ್ದು, ಈ ಹಿಂದಿನಿಂದಲೂ ಆರೋಪಿ ಮಗನಿಗೆ ದೈಹಿಕ ಹಲ್ಲೆ ಮಾಡಿ,  ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆರೋಪಿಯು ಪೊಲೀಸ್‌ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿರುತ್ತಾರೆ.  ದಿನಾಂಕ 19/12/2020 ರಂದು ಶಿವಳ್ಳಿ ಗ್ರಾಮದ ಮಣೋಳಿಗುಜ್ಜಿ, ಚಕ್ರ ತೀರ್ಥ ಎಂಬಲ್ಲಿ ಆರೋಪಿಯು ತನ್ನ 2ನೇ ಮಗ ಸುಶಾಂತ್‌ ಕುಮಾರ್‌ ಎಂಬುವವರಿಗೆ ದೈಹಿಕ ಹಲ್ಲೆ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಆರೋಪಿಯು ಸಾಕ್ಷಿದಾರರನ್ನು ಪದೇ ಪದೇ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಯಲದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021 ಕಲಂ: 323, 324, 341, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     
     

ಇತ್ತೀಚಿನ ನವೀಕರಣ​ : 10-08-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ