ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾಧ ರಾಘವೇಂದ್ರ ಆರ್ (36) ತಂದೆ: ಕೆ ರಾಮ ದೇವಾಡಿಗ ವಾಸ: ಜಯಲಕ್ಷ್ಮಿ  ನಿವಾಸ ಹಿರೇ ದೇವಸ್ಥಾನ ಬೆಟ್ಟು ಕೋಟ ಗಿಳಿಯಾರು ಗ್ರಾಮ ಬ್ರಹ್ಮಾವರ ಇವರು ದಿನಾಂಕ 09/07/2021 ರಂದು ಸಂಜೆ ಮನೆಯಿಂದ ಕೆಲಸದ ನಿಮಿತ್ತ ಹೊರಟು ಗಿಳಿಯಾರು ಕೋಟ ಅಮೃತೇಶ್ವರಿ ಜಂಕ್ಷನ್ ಗೆ ಬಂದು ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಹೋಗಲು ಕೋಟ ಅಮೃತೇಶ್ವರಿ ಜಂಕ್ಷನ್ ನಲ್ಲಿರುವ ಉಡುಪಿ ಕುಂದಾಪುರ  ಕಡೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಬಂದು  ಕೋಟ ಅಮೃತೇಶ್ವರಿ  ಜಂಕ್ಷನ್ ನಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಪಶ್ಚಿಮ ಅಂಚಿನ ಬಳಿ ಬಂದು ರಸ್ತೆ  ದಾಟಲು ನಿಂತು ಕೊಂಡಿರುವಾಗ ಸಮಯ ಸುಮಾರು ರಾತ್ರಿ 8:00 ಗಂಟೆಗೆ ಉಡುಪಿ ಕಡೆಯಿಂದ  ಕುಂದಾಪುರದ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ  KA-20-L-1316 ನೇ ಮೊಟಾರ್ ಸೈಕಲ್ ಸವಾರ ರಜತ ಎಸ್ ಎಂಬಾತನು ತನ್ನ ಮೊಟಾರ್ ಸೈಕಲನ್ನು ಕುಂದಾಪುರದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆ ದಾಟಲು ನಿಂತಿದ್ದ  ರಾಘವೇಂದ್ರ ರವರಿಗೆ ಢಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ಇವರು ರಸ್ತೆಗೆ ಬಿದ್ದಿದ್ದು,  ಈ ಅಪಘಾತದಿಂದ ಇವರ ಎಡ ಕಾಲಿನ ಮೊಣ ಗಂಟಿನ  ಕೆಳಗೆ ಒಳ ಜಖಂ ಆಗಿ ಮೂಳೆ ಮುರಿತದ ಗಾಯ ಆಗಿರುತ್ತದೆ ಪರಿಚಯದ ಅವಿನಾಶ ಎಂಬವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿರುವುದಾಗಿದೆ,  ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 137/2021 ಕಲಂ: 279,  338, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

 • ಪಡುಬಿದ್ರಿ: ಠಾಣಾ ಅಪರಾಧ ವಿಭಾಗದ ಪಿಎಸ್ಐ ಜಯ ಕೆ ರವರು ದಿನಾಂಕ 06/07/2021 ರಂದು ಠಾಣಾ ಸಿಬ್ಬಂಧಿ ಇವವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ  ಹಗಲು  ರೌಂಡ್ಸ್ ನಲ್ಲಿರುವ ಸಮಯ 17:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿರುವ ಸುಬ್ಬಪ್ಪಯ್ಯನ ಕಾಡು ಬಳಿ ಮೂರು ಜನ ಯುವಕರಾದ 1) ಮೊಹಮ್ಮದ್ ಹುಸೈನ್ (29), 2)ನವೀದ್ ಹುಸೈನ್ (31), 3)ಅನ್ವರ್ (36) ಎಂಬುವರು ಯಾವುದೋ ಮಾದಕ ವಸ್ತುವನ್ನು ಸೇವಿಸಿದ ಬಗ್ಗೆ ಅನುಮಾನಗೊಂಡು, ದಿನಾಂಕ 07/07/2021 ರಂದು ಬೆಳಿಗ್ಗೆ ಠಾಣೆಗೆ ಬರಮಾಡಿಕೊಂಡು ವಶಕ್ಕೆ ಪಡೆದು, ನಂತರ ಸದ್ರಿ ಯುವಕರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಮೂರೂ ಜನ ಯುವಕರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 09/07/2021 ರಂದು ವೈದ್ಯರು ದೃಢ ಪತ್ರವನ್ನು ನೀಡಿದಂತೆ ಆರೋಪಿತನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 63/2021 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ  ಭಾಸ್ಕರ ಸಿ,ಕೆ (53) ತಂದೆ : ಚಂದ್ರ ಪೂಜಾರಿ ಎಡಬೆಟ್ಟು ಮನೆ ಕಲ್ಯಾಣಪುರ  ಮೂಡುತೋನ್ಸೆ ಇವರ ತಮ್ಮ ದಿನಕರ ಪೂಜಾರಿ(49) ಎಂಬವರು ಮೂಡುತೋನ್ಸೆಯ ಬಗ್ಗರಬೆಟ್ಟುವಿನಲ್ಲಿ ಆತನ ಪಾಲಿಗೆ ಬಂದ ಜಾಗದಲ್ಲಿ ಮನೆಕಟ್ಟಿಕೊಂಡು ಒಬ್ಬಂಟಿಯಾಗಿ ವಾಸ್ತವ್ಯ ಮಾಡಿಕೊಂಡಿದ್ದು ವೆಲ್ಡಿಂಗ್ ಕೆಲಸ ಮಾಡಿಕೊಂಡಿರುತ್ತಾರೆ . ಆತನಿಗೆ ವಿಪರೀತ ಶರಾಬು ಕುಡಿಯುವ ಚಟವಿದ್ದು  ಸುಮಾರು 19 ವರ್ಷಗಳ ಹಿಂದೆ  ಕುಂಜಾರುಗಿರಿಯ ಶಕುಂತಳ ಎಂಬವರನ್ನು  ಮದುವೆಯಾಗಿದ್ದು  ಅವರಿಗೆ 18 ವರ್ಷದ ಧನುಷ್ ಎಂಬ   ಮಗ ಇರುತ್ತಾನೆ. ಕೌಟುಂಬಿಕ ವೈಮನಸ್ಸಿನಿಂದಾಗಿ ಶಕುಂತಳರವರು ಗರಡಿ ಮಜಲು ಕಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ 9/07/2021 ರಂದು ಮಧ್ಯಾಹ್ನ 12:35 ಗಂಟೆಗೆ  ಭಾಸ್ಕರ ಸಿ,ಕೆ ರವರಿಗೆ ಅವರ ಅಕ್ಕ ಗೀತಾ ಎಂಬವರು ಫೋನ್ ಮಾಡಿ ದಿನಕರನು ತನ್ನ ಮನೆಯ ಶೌಚಾಲಯದಲ್ಲಿ ಬಿದ್ದಿರುವುದಾಗಿ ನೆರೆಕರೆಯವರು ಹೇಳಿರುವುದಾಗಿ ತಿಳಿಸಿದಂತೆ ತಾನು ಕೂಡಲೆ ಹೊರಟು 1:15 ಗಂಟೆಗೆ ತಮ್ಮನ ಹೋಗಿ ನೋಡಿದಾಗ ತಮ್ಮನು ಅವನ ಮನೆಯ ಪಶ್ಚಿಮ ಬದಿಯಲ್ಲಿರುವ ಶೌಚಾಲಯದಲ್ಲಿ  ಕುಳಿತ ಸ್ಥಿತಿಯಲ್ಲಿ ಇದ್ದು ಎದುರಿನಲ್ಲಿ ನೀರು ತುಂಬಿದ ಬಕೇಟ್ ನಲ್ಲಿ ಆತನ ಮುಖ ಮುಳುಗಿದ್ದು, ನಾನು ಆತನನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದು ಅವನು ಅಲ್ಲೇ ಮೃತ ಪಟ್ಟಿರುತ್ತಾನೆ. ದಿನಕರನು ಬೆಳಿಗ್ಗೆ 7:00 ಗಂಟೆಗೆ ಅವನ ಮನೆಯಿಂದ ಹೋಗಿ ಬೆಳಿಗ್ಗೆ 10:30 ಗಂಟೆಗೆ ವಿಪರೀತ ಶರಾಬು ಕುಡಿದು ತೂರಾಡುತ್ತಾ  ವಾಪಾಸು ಅವನ ಮನೆಗೆ ಬಂದಿರುವುದನ್ನು ನೋಡಿರುವುದಾಗಿ ನೆರೆಕರೆಯವರು ತಿಳಿಸಿರುತ್ತಾರೆ. ಮೃತ ದಿನಕರ ಪೂಜಾರಿಯು ವಿಪರೀತ ಶರಾಬು ಸೇವನೆ ಮಾಡಿದ್ದರಿರಿಂದ ನಶೆಯಲ್ಲಿ ನಿಯಂತ್ರಣ ತಪ್ಪಿ  ಎದುರಿನಲ್ಲಿದ್ದ ನೀರು ತುಂಬಿದ ಬಕೆಟಿನಲ್ಲಿ ಮುಖ ಮುಳುಗಿ ಉಸಿರುಕಟ್ಟಿ ಅಥವಾ ಇನ್ನಾವುದೋ  ಕಾರಣದಿಂದ ಮೃತಪಟ್ಟಿರ ಬಹುದು. ಈತನ ಮರಣದ ಬಗ್ಗೆ  ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ, ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ 08/07/2021ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ಗಗನ್‌ ಶೆಟ್ಟಿ, (18) ತಂದೆ:ರತ್ನಾಕರ ಶೆಟ್ಟಿ, ವಾಸ:ಪ್ಲಾಟ್ ನಂ. 402, ಶಾಂಭವಿ ಪ್ಯಾಲೇಸ್‌, ಈಶ್ವರನಗರ, ಮಣಿಪಾಲ, ಇವರು ತನ್ನ ಸ್ನೇಹಿತರೊಂದಿಗೆ ಮಣಿಪಾಲದ ಮಣ್ಣಪಲ್ಲ ವಾಕಿಂಗ್‌ ಟ್ರ್ಯಾಕ್‌ನ್ನಲ್ಲಿರುವ ಕಲ್ಲು ಬೆಂಚಿನ್ನಲ್ಲಿ ಕುಳಿತುಕೊಂಡಿರುವಾಗ ಅಪಾದಿತರಾದ ರಿಶಿತ್‌ ಹೆಗ್ಡೆ ಆತನ ಸ್ನೇಹಿತರಾದ ವಿನ್ಯಾಸ್‌, ನಿಹಾಲ್‌ ಹಾಗೂ ಇತರ 7 ಜನರೊಂದಿಗೆ ಗಗನ್‌ ಶೆಟ್ಟಿ ರವರ ಬಳಿ ಬಂದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ, ರಿಶಿತ್‌ ಹೆಗ್ಡೆ ಇವರ ಕೆನ್ನೆಗೆ ಹೊಡೆದನು. ಆಗ ಗಗನ್‌ ಶೆಟ್ಟಿ ರವರು ಎದ್ದು ನಿಂತಾಗ ಅವರೆಲ್ಲರೂ ಮುತ್ತಿಗೆ ಹಾಕಿ ನೆಲಕ್ಕೆ ಬಿಳಿಸಿದರು. ಓಡಿ ಹೋಗಲು ಯತ್ನಿಸಿದಾಗ ತಡೆದು ನಿಲ್ಲಿಸಿ ಬಾಯಿ ಹಾಗೂ ಮೂಗನ್ನು ಉಸಿರಾಡದಂತೆ ಒತ್ತಿ ಹಿಡಿದಿರುತ್ತಾರೆ. ನಂತರ ಅವರೆಲ್ಲರೂ ಸೇರಿಕೊಂಡು ನೆಲಕ್ಕೆ ಬಿದ್ದಿದ್ದ ಗಗನ್‌ ಶೆಟ್ಟಿ ಇವರಿಗೆ ಕಾಲಿನಿಂದ ಒದ್ದಿರುತ್ತಾರೆ. ಗಗನ್‌ ಶೆಟ್ಟಿ ರವರು ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಹೋದಾಗ ಆರೋಪಿಗಳು ಇನ್ನು ಮುಂದೆ ನಮ್ಮ ಕಣ್ಣಿಗೆ ಕಾಣಿಸಿಕೊಂಡರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಗಗನ್‌ ಶೆಟ್ಟಿ ರವರು ತನಗಾದ ಒಳನೋವಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 90/2021 ಕಲಂ: 143, 147, 323, 341, 504, 506, 120(b) 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 08/07/2021 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ರೀಶಿತ್‌ ಹೆಗ್ಡೆ (17), ತಂದೆ:ಕೆ.ರಾಜರಾಮ್‌ಶೆಟ್ಟಿ, ವಾಸ: ಫ್ಲಾಟ್‌ನಂ. 201, ಪ್ರಗತಿ ಫ್ರೈಡ್‌ ಆಪಾರ್ಟ್‌ಮೆಂಟ್‌, ಮಣಿಪಾಲ, ಅಲೆವೂರು ರಸ್ತೆ, 80 ಬಡಗುಬೆಟ್ಟು ಗ್ರಾಮ, ಉಡುಪಿ ಇವರು ತನ್ನ ಸ್ನೇಹಿತರೊಂದಿಗೆ ಮಣ್ಣಪಲ್ಲದ ವಾಕಿಂಗ್ ಟ್ರ್ಯಾಕ್‌ ಬಳಿ ಇರುವಾಗ ಅಪಾದಿತ ಗಗನ್‌ಶೆಟ್ಟಿ ತನ್ನ ಇತರ 6 ಮಂದಿ ಸ್ನೇಹಿತರೊಂದಿಗೆ ಅಲ್ಲಿಗೆ ಬಂದು ರೀಶಿತ್‌ ಹೆಗ್ಡೆ ಇವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಗಗನ್‌ಶೆಟ್ಟಿ ಕೈಯಿಂದ ರೀಶಿತ್‌ ಹೆಗ್ಡೆ ರವರ ಎಡಕೆನ್ನೆಗೆ ಹೊಡೆದಿರುತ್ತಾನೆ. ಅಲ್ಲದೆ ನೆಲಕ್ಕೆ ದೂಡಿಹಾಕಿ ಗಗನ್‌ ಶೆಟ್ಟಿ ಹಾಗೂ ಕಾಲಿನಿಂದ ತುಳಿದಿರುತ್ತಾರೆ. ರೀಶಿತ್‌ ಹೆಗ್ಡೆ ರವರ ಸ್ನೇಹಿತರು ಬಿಡಿಸಲು ಬಂದಾಗ ಅವರಿಗೂ ಬೆದರಿಕೆ ಹಾಕಿದ್ದು, ನಂತರ ರೀಶಿತ್‌ ಹೆಗ್ಡೆ ರವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ. ರೀಶಿತ್‌ ಹೆಗ್ಡೆ ರವರು ತನಗಾದ ಒಳನೋವಿನ ಬಗ್ಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/2021 ಕಲಂ: 143, 147, 341, 323, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 10-07-2021 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080