ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಸುಧಾಕರ ಆಚಾರ್ಯ (45) ವಾಸ: ದೇವಿಕೃಪಾ, ಇಂದಿರಾನಗರ, ಕಟಪಾಡಿ ಕಾಪು ಇವರು ದಿನಾಂಕ 09/07/2021 ರಂದು ಕಟಪಾಡ ಜಂಕ್ಷನ್ ಬಳಿ ನಿಂತಿರುವಾಗ ಸಮಯ ಸುಮಾರು 20:35 ಗಂಟೆ ಸುಮಾರಿಗೆ ಇವರ ಅಣ್ಣ ಯಶೋಧರ ಆಚಾರ್ಯ ರವರು ತನ್ನ ನಂಬ್ರ KA-20-L-273 ನೇ ಮೋಟಾರ್ ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುವರೇ ಶಿರ್ವಾ ಕಡೆಯಿಂದ ಬಂದು ಉಡುಪಿ ಮಂಗಳೂರು ರಸ್ತೆಯನ್ನು ದಾಟಿ ಮಂಗಳೂರು ಉಡುಪಿ ರಸ್ತೆಯನ್ನು ದಾಟುವರೇ ಕಟಪಾಡಿ ಜಂಕ್ಷನ್ ನಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಈಶ್ವರ ಗೌಡ ರವರು ತನ್ನ KA-57-F-4545 ಬಸ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುವರೇ ಕಟಪಾಡಿ ಜಂಕ್ಷನ್ ನಲ್ಲಿ ನಿಂತಿದ್ದ ಯಶೋಧರ ಆಚಾರ್ಯ ರವರ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದಿದ್ದು ಕೂಡಲೇ ಸುಧಾಕರ ಆಚಾರ್ಯ ರವರು ಹಾಗೂ ಸ್ಥಳೀಯರು ಸ್ಥಳಕ್ಕೆ ಹೋಗಿ ಉಪಚರಿಸಿ ನೋಡಿದ್ದು ಯಶೋಧರ ಆಚಾರ್ಯ ರವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ ಕೂಡಲೇ ಆವರನ್ನು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ 21:00 ಗಂಟೆಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ನವ್ಯ (19), ತಂದೆ:: ಶ್ರೀಧರ್ ಮಯ್ಯ, ವಾಸ: ಕಾಮೇಶ್ವರ ದೇವಸ್ಥಾನ ವಠಾರ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಂದೆಯಾದ ಶ್ರೀಧರ್ ಮಯ್ಯ, (60) ಎಂಬವರಿಗೆ ವಿಪರೀತ ಕಾಲು ನೋವು ಹಾಗೂ ಬಿಕ್ಕಳಿಕೆ ಸಮಸ್ಯೆ ಇದ್ದು. ಈ ಬಗ್ಗೆ ಚಿಕಿತ್ಸೆ ಪಡೆದರೂ ಗುಣವಾಗದೇ ಇರುವುದರಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಜೀವನವೇ ಬೇಡ ಎನ್ನುವ ಮಟ್ಟಕ್ಕೆ ಬಂದು, ನನ್ನ ಸಾವಿಗೆ ನಾನೇ ಕಾರಣ ಎಂದು ವಿವರವಾಗಿ ಬರೆದಿರುವ ರಿಜಿಸ್ಟರ್ ಪತ್ರವನ್ನು ಕಾಮೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಹರೀಶ್ ಹೊಳ್ಳರ ಹೆಸರಿಗೆ ಬರೆದು ದಿನಾಂಕ 08/07/2021 ರಂದು ಸಂಜೆ 5:15 ಗಂಟೆಗೆ ಶ್ರೀಧರ್ ಮಯ್ಯ ರವರು ಮನೆಯಿಂದ ನಾಪತ್ತೆಯಾಗಿದ್ದು, ದಿನಾಂಕ 10/07/2021 ರಂದು ಬೆಳಿಗ್ಗೆ 08:45 ಗಂಟೆಯ ಸಮಯಕ್ಕೆ ಹೇರೂರು ಗ್ರಾಮದ ಸಂತೆ ಕಟ್ಟೆ ಸೇತುವೆ ಕೆಳಗೆ ಹೊಳೆಯಲ್ಲಿ ಶ್ರೀಧರ ಮಯ್ಯ ರವರ ಮೃತ ಶರೀರ ದೊರೆತಿರುವುದಾಗಿದೆ ಶ್ರೀಧರ ಮಯ್ಯ ರವರು ತನಗಿರುವ ಖಾಯಿಲೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅಲ್ಲದೇ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಶ್ರೀಧರ ಮಯ್ಯ ರವರು ನಾಪತ್ತೆ ಆದ ಬಗ್ಗೆ ಈಗಾಗಲೇ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ, ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಶ್ವೇತಾ ಕಾಮತ್ @ ಸಂಜನಾ ಕಾಮತ್ (35) ಗಂಡ, ಸಂಪತ್ ಕಾಮತ್ ವಾಸ,ಶ್ರೀ ಹೊನ್ನಮ್ಮ ನಿಲಯ ಕೆಳಪೇಟೆ ಸಿದ್ದಾಪುರ ಇವರ ಗಂಡ ಸಂಪತ್ ಕಾಮತ್  (45) ಈತನು  ಕುಂದಾಪುರ  ತಾಲೂಕಿನ  ಸಿದ್ದಾಪುರ  ಗ್ರಾಮದ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ   ಸಂಘದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದ್ರಿ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ಆಗಿದೆ, ಎಂದು  ಸಂಬಂಧಪಟ್ಟ ಇಲಾಖೆಯಿಂದ ತನಿಖೆ ಆಗುತ್ತಿದೆ, ಹಾಗೂ ಸಂಪತ್ ಕಾಮತ್ ಇವರು ವಿಪರೀತ ಸಾಲ  ಮಾಡಿಕೊಂಡಿದ್ದು, ಈ ಕಾರಣದಿಂದ ಅಥವಾ ಬೇರೆ ಯಾವುದೋ ಕಾರಣದಿಂದಲೊ ಮನನೊಂದು ದಿನಾಂಕ 09/07/2021 ರಂದು 22:30 ಗಂಟೆಯಿಂದ ದಿನಾಂಕ 10/07/2021 ರಂದು 06:15 ಘಂಟೆಯ ಮಧ್ಯದ ಅವಧಿ ಯಲ್ಲಿ ಅವರ ವಾಸದ ಮನೆಯ ಒಳಗಿನ  ಕೋಣೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆ ಬಳಿಕ  ಮನೆಯ ಹತ್ತಿರದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 26/2021 ಕಲಂ: 174(C) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 10/07/2021 ರಂದು ನಂಜಾನಾಯ್ಕ್ ಎನ್ ಪಿ.ಎಸ್‌.ಐ ಗಂಗೊಳ್ಳಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ಮೇಲ್‌ ಗಂಗೊಳ್ಳಿ ಚೆಕ್‌ಪೋಸ್‌ನಲ್ಲಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಬೆಳಿಗ್ಗಿನ ಜಾವ 6:30 ಗಂಟೆಗೆ ಆಪಾದಿತರಾದ ಸಾಕಿಬ್, ಸುಬಾನ್ ಮತ್ತು ಸೂಫಿಯಾನ್ ಎಂಬುವವರು ಎರಡು ಕೋಣಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು, ಅವುಗಳ ಕಾಲು, ಕುತ್ತಿಗೆಗೆ ಹಗ್ಗವನ್ನು ಬಿಗಿಯಾಗಿ ಕಟ್ಟಿ, KA-20-MB-5492 ನೇ MARUTHI SUZUKI EECO ಕಾರಿನಲ್ಲಿ ಹಿಂಸಾತ್ಮಕವಾಗಿ ಮಲಗಿಸಿಕೊಂಡು, ಕೋಣಗಳನ್ನು ವಧೆ ಮಾಡುವ ಉದ್ದೇಶದಿಂದ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದುದು ಕಂಡು ಬಂದಿದ್ದು, ಈ ಸಮಯ ಇವರು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಆಪಾದಿತರು ಕಾರನ್ನು ನಿಲ್ಲಿಸಿ ಓಡಿ ಹೋಗಿದ್ದು, ಕಾರಿನಲ್ಲಿದ್ದ ಎರಡು ಕೋಣಗಳ ಪೈಕಿ ಒಂದು ಕೋಣ ಉಸಿರುಗಟ್ಟಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಬಳಿಕ ಕೃತ್ಯಕ್ಕೆ ಬಳಸಿದ ವಾಹನದ ಸಮೇತ ಕೋಣಗಳನ್ನು ವಶಕ್ಕೆ ಪಡೆದಿದ್ದು, ಎರಡು ಕೋಣಗಳ ಅಂದಾಜು ಮೌಲ್ಯ 10,000/-ರೂಪಾಯಿ ಹಾಗೂ ಕಾರಿನ ಮೌಲ್ಯ 2 ಲಕ್ಷ  ರೂಪಾಯಿ ಆಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 64/2021 ಕಲಂ: 379, 429 ಐ.ಪಿ.ಸಿ, ಕಲಂ 4, 5, 7, 12 The Karnataka Prevention Of Slaughter And Preseravation Of Cattle Ordiance Act – 2020, ಕಲಂ 11 (1)(D) Prevention Of Cruelity To Animal Act ಮತ್ತು ಕಲಂ 66 ಜೊತೆಗೆ 192(A) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ದಿನಾಂಕ 09/07/2021 ರಂದು 19:20 ಗಂಟೆ ಸುಮಾರಿಗೆ ಮಳೆ ಕಾರಣ ಪಿರ್ಯಾದಿದಾರರಾದ ರತ್ನಾಕರ ಖಾರ್ವಿ, (47), ತಂದೆ: ನಾರಾಯಣ ಖಾರ್ವಿ, ಖಾರ್ವಿ ಮೇಲ್ಕೇರಿ, ಲಕ್ಷ್ಮೀ ನಾರಾಯಣ ನಿಲಯ, ಕುಂದಾಪುರ ಇವರು ಮೋಟಾರ್ ಸೈಕಲನ್ನು ಕಸಬಾ ಗ್ರಾಮದ ಪ್ರೀತಿ ಲೈಮ್ ಇಂಡಸ್ಟ್ರೀಸ್ ಬಳಿ ನಿಲ್ಲಿಸಿದಾಗ ಅಲ್ಲಿದ್ದ ಆಪಾದಿತ ರಾಜೇಶ್ ಖಾರ್ವಿಯು ನನ್ನ ಬಳಿ ಬೈಕ್ ಯಾಕೆ ನಿಲ್ಲಿಸಿದೆ ನೀನು ಬಾರೀ ಹಾರಾಡುತ್ತಾ ಇದ್ದೀಯಾ ಎಂದು ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಪಂಚ್ ನಿಂದ ರತ್ನಾಕರ ಖಾರ್ವಿ ರವರ ಬಲಕಣ್ಣಿನ ಬಳಿ ಹೊಡೆದಿದ್ದು ಆಪಾದಿತರ ಜೊತೆ ಇದ್ದ ಹರೀಶ್ ಖಾರ್ವಿ, ಸಂಪತ್ ಖಾರ್ವಿ ಯವರು ರಾಡ್ ನಿಂದ ರತ್ನಾಕರ ಖಾರ್ವಿ ರವರ ಬೆನ್ನಿಗೆ ಹೊಡೆದಿದ್ದು ಆ ಸಮಯ ಅಲ್ಲಿಗೆ ಇವರ ಅಣ್ಣ ರಾಜ ಖಾರ್ವಿ ಮತ್ತು ತಮ್ಮ ಗಣಪತಿ ಖಾರ್ವಿ ಬರುವುದನ್ನು ನೋಡಿ ಮುಂದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಹಿಂದೆ ಖಾರ್ವಿ ಕೇರಿಯ ಕಿಂಗ್ ಫಿಶರ್ ಸಂಸ್ಥೆಯಲ್ಲಿ ಸತೀಶ್ ಖಾರ್ವಿ ರವರಿಗೆ ಅಧ್ಯಕ್ಷ ಸ್ಥಾನ ನೀಡಲು ರತ್ನಾಕರ ಖಾರ್ವಿ ರವರ ಒಪ್ಪದೇ ಇದ್ದು ಈ ಬಗ್ಗೆ ವೈಮನಸ್ಸು ಇದ್ದು ಹಲ್ಲೆ ಮಾಡಿದ್ದು, ಹಲ್ಲೆ ನಡೆಸಲು ಆಪಾದಿತರಿಗೆ ಸತೀಶ್ ಖಾರ್ವಿ ಎಂಬುವವರೆ ಕುಮ್ಮಕ್ಕು ನೀಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/2021  ಕಲಂ: 324, 504, 506, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂಧಾಪುರ: ದಿನಾಂಕ 09/07/2021 ರಂದು 19:30 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಸಂಪತ್ ಖಾರ್ವಿ, (18) ತಂದೆ: ಶೇಖರ್ ಖಾರ್ವಿ, ದುರ್ಗಾಪರಮೇಶ್ವರಿ ರೈಸ್ ಮಿಲ್ ಬಳಿ, ಖಾರ್ವಿ ಮೇಲ್ಕೇರಿ, ಕುಂದಾಪುರ ಇವರು ಮೋಟಾರ್ ಸೈಕಲನ್ನು ಕಸಬಾ ಗ್ರಾಮದ ಖಾರ್ವಿ ಮೇಲ್ಕೇರಿ ಕೆ.ಬಿ. ಖಾರ್ವಿಯವರ ಚಿಪ್ಪಿ ಸಂಗ್ರಹಣದ ಬಳಿ ಬೈಕ್ ನಿಲ್ಲಿಸಿದಾಗ ಆಪಾದಿತ ರತ್ನಾಕರ ಖಾರ್ವಿಯು ಬೈಕ್ ನಲ್ಲಿ ವೇಗವಾಗಿ ಬಂದು ಇವರ ಬಳಿ ನಿಲ್ಲಿಸಿದ್ದು, ಆಗ ಸಂಪತ್ ಖಾರ್ವಿ ಇವರು ನನ್ನ ಬಳಿ ಬೈಕ್ ಯಾಕೆ ನಿಲ್ಲಿಸಿದೆ ಎಂದು ಕೇಳಿದ್ದಕ್ಕೆ ಆಪಾದಿತ ರತ್ನಾಕರ ಖಾರ್ವಿಯು ನೀನು ಯಾರು ಕೇಳಲು ಎಂದು ಅವಾಚ್ಯವಾಗಿ ಬೈದು ಹೆಲ್ಮೇಟ್ ನಿಂದ ಹೊಡೆದಿದ್ದು ಅಲ್ಲಿ ಹತ್ತಿರದಲ್ಲಿದ್ದ ಗಣಪತಿ ಖಾರ್ವಿಯು ಬೆಲ್ಟ ನಿಂದ ಸಂಪತ್ ಖಾರ್ವಿ ರವರಿಗೆ ಹೊಡೆದ ಪರಿಣಾಮ ಇವರ ಬಲಗಣ್ಣಿಗೆ ಗಾಯವಾಗಿದ್ದು, ಆಪಾದಿತರಾದ ರಾಜ ಖಾರ್ವಿ, ಮತ್ತು ಕರಣ ಖಾರ್ವಿಯು ಕೈಯಿಂದ ಹೊಡೆದು, ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಅಲ್ಲದೇ ಗಲಾಟೆ ಬಿಡಿಸಲು ಬಂದ ರಾಜೇಶ್ ಮತ್ತು ಹರೀಶ್ ಎಂಬುವವರಿಗೂ ಆಪಾದಿತರು ಕೈಯಿಂದ ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 89/2021  ಕಲಂ: 324, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-07-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080