ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಿವರಾಜ್ (32), ತಂದೆ: ದಾರ ಖಾರ್ವಿ, ವಾಸ:ಬಂಡಿಸಾರ್ ಮನೆ, ಅಳಿವೆಕೋಡಿ, ತಾರಾಪತಿ  ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 08/06/2022 ರಂದು ಮಧ್ಯಾಹ್ನ 3:30 ಗಂಟೆಗೆ ಮೀನುಗಾರಿಕೆ ಕೆಲಸ ಮುಗಿಸಿಕೊಂಡು ಅಳಿವೆಕೋಡಿಯಿಂದ ಉಪ್ಪುಂದ ಕಡೆಗೆ ಉಪ್ಪುಂದ ಮಾರ್ಗವಾಗಿ  ಅವರ ಮೋಟಾರು ಸೈಕಲ್ ನಂಬ್ರ  KA-20-EH-3779 ನೇದರಲ್ಲಿ  ಸವಾರಿ ಮಾಡಿಕೊಂಡು ಹೋಗುತ್ತಾ ಪಡುವರಿ ಗ್ರಾಮದ ತಾರಾಪತಿ ಸ.ಹಿ.ಪ್ರಾ ಶಾಲೆಯ ಬಳಿ ತಲುಪಿದಾಗ ಎದುರಿನಿಂದ ಉಪ್ಪುಂದ ಕಡೆಯಿಂದ ಅಳಿವೆಕೋಡಿ ಕಡೆಗೆ KA-20-EH-1651 ನೇ ಮೋಟಾರು ಸೈಕಲ್  ಸವಾರ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿಹೊಡದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಎಡ ಭುಜಕ್ಕೆ ಗುದ್ದಿದ ನೋವು ,ಎಡ ಬೆರೆಳಿಗೆ ತರಚಿದ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರದ ಶ್ರೀದೇವಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  •  ಬೈಂದೂರು: ಪಿರ್ಯಾದಿದಾರರಾದ ಮಹಾಬಲ ಮರಾಠಿ (42), ತಂದೆ: ಬಚ್ಚ ಮರಾಠಿ, ವಾಸ: ಹೊಸೇರಿ, ಯೆಳಜಿತ್  ಗ್ರಾಮ, ಬೈಂದೂರು ತಾಲೂಕು ಇವರ ಅಳಿಯ ನಾಗರಾಜ ಹಾಗೂ ಅವರ ಬಾವ ದೇವು ಮರಾಠಿಯವರು ದಿನಾಂಕ 31/05/2022 ರಂದು ಸಂಜೆ 5:00 ಗಂಟೆಗೆ  ಬಾವ ದೇವು ಮರಾಠಿಯವರ ಮನೆಗೆ ಹೊರಟಿದ್ದು,  ಪಿರ್ಯಾದಿದಾರರು ಅವರ KA-20-ER-1541 ನೇ ಮೋಟಾರ್ ಸೈಕಲ್ ನಲ್ಲಿ  ಹಾಗೂ  ಅವರ ಅಳಿಯ ನಾಗರಾಜ ರವರು ಅವರ KA-20-ED-7548 ನೇ ಮೋಟಾರು ಸೈಕಲ್ ನಲ್ಲಿ ದೇವು ಮರಾಠಿಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಗೋಳಿಹೊಳೆ ಪೇಟೆಯಿಂದ ಮೋಟಾರು ಸೈಕಲ್ ನ್ನು ಗೊಳಿಹೊಳೆ ಗ್ರಾಮದ ಕೊಡಿಯಾಲ್ ಕೇರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಅಣ್ಣಪ್ಪ ಮರಾಠಿಯವರ ಮನೆ ಬಳಿ ತಲುಪಿದಾಗ ಸಂಜೆ 6:30 ಗಂಟೆಗೆ ನಾಗರಾಜ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯಲ್ಲಿದ್ದ  ಹೊಂಡವನ್ನು ತಪ್ಪಿಸುವ ಸಲುವಾಗಿ ಮೋಟಾರು ಸೈಕಲ್ ಗೆ ಒಮ್ಮೆಲೇ ಬ್ರೇಕ್ ಹಾಕಿದ  ಪರಿಣಾಮ ಮೊಟಾರು ಸೈಕಲ್ ನಾಗರಾಜನ ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದುದಾರರು ಬಿದ್ದವರನ್ನು  ಎತ್ತಿ ಉಪಚರಿಸಿದ್ದು   ಅಪಘಾತದ ಪರಿಣಾಮ ನಾಗರಾಜನಿಗೆ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿರುವುದಾಗಿದ್ದು, ಸಹ ಸವಾರರಾದ ದೇವು ಮರಾಠಿಯವರಿಗೆ  ಕುತ್ತಿಗೆಯ ಹಿಂಭಾಗಕ್ಕೆ  ಬಲವಾದ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು  ಪರೀಕ್ಷೀಸಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು ನಂತರ ಪಿರ್ಯಾದಿದಾರರು ಹಾಗೂ ನಾಗರಾಜ ರವರು ಸೇರಿ ದೇವು ಮರಾಠಿಯವರನ್ನು ಮಂಗಳೂರಿನ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 08/06/2022 ರಂದು ಪಿರ್ಯಾದಿದಾರರಾದ ಪ್ರಶಾಂತ ಸಿ (32), ತಂದೆ: ದಿ.ನಂದಿ, ವಾಸ: ಚಗ್ರಿಬೆಟ್ಟು, ಬೈದೆಬೆಟ್ಟು ಅಂಚೆ, 34ನೇ ಕುದಿಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ಅಣ್ಣ ನವೀನ (39) KA-47-H-8204 ನಂಬ್ರದ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ನಲ್ಲಿ ಬೈದೆಬೆಟ್ಟು ಕಡೆಯಿಂದ ತನ್ನ ಹೆಂಡತಿ ಮನೆಯಾದ ಕೊಕ್ಕರ್ಣೆ ಗಾಂಧಿನಗರ ಕಡೆಗೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ 11:30 ಗಂಟೆಗೆ ಬ್ರಹ್ಮಾವರ ತಾಲೂಕು 34ನೇ ಕುದಿಗ್ರಾಮದ ಚೆಗ್ರಿಬೆಟ್ಟು, ಅಚಾರ್‌ಸಾಲಿ ಎಂಬಲ್ಲಿ ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ನ್ನು ನಿರ್ಲಕ್ಷತನದಿಂದ ಸವಾರಿ ಮಾಡಿ ಮೋಟಾರ್‌ ಸೈಕಲ್‌ ಆತನ ಹತೋಟಿ ತಪ್ಪಿ ಸ್ಕಿಡ್‌ ಆಗಿ ಟಾರು ರಸ್ತೆಯಲ್ಲಿ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ರಕ್ತಸ್ರಾವ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ವಿಷಯ ತಿಳಿದು ಅಲ್ಲಿಗೆ ಬಂದ ಅವರ ತಮ್ಮ , ಪಿರ್ಯಾದಿದಾರರು ಹಾಗೂ ಇತರರು 108 ಅಂಬುಲೆನ್ಸ್‌ನ್ನಲ್ಲಿ ಚಿಕಿತ್ಸೆಗಾಗಿ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ : 27̧9,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಗಿರೀಶ್ ನಾಯ್ಕ್ (39), ತಂದೆ: ಯಂಕೂ ನಾಯ್ಕ್, ವಾಸ: ಜಂಬೆ ದರ್ಖಾಸು ಶಿರೂರು  ಮಠದ ಬಳಿ , 41 ಶಿರೂರು ಇವರ ತಂದೆ ಯಂಕೂ ನಾಯ್ಕ್ (85) ರವರು-ವಯೋವೃದ್ದರಾಗಿದ್ದು, ಉಬ್ಬಸ  ಮತ್ತು  ಕಿಡ್ನ ವೈಫಲ್ಯ, ಲಿವರ್  ಸಮಸ್ಯೆಯಿಂದ ಬಳಲುತ್ತಿದ್ದು  ಅಲ್ಲದೆ ಕಾಲುಗಳು ಕೊಕ್ಕೆ ಆಗಿದ್ದು ನಡೆಯಲು ಅಗುವುತ್ತಿರಲಿಲ್ಲ ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ದಿನಾಂಕ  09/06/2022 ರಂದು ಬೆಳಿಗ್ಗೆ 8:00 ಗಂಟೆಯಿಂದ 3:00 ಗಂಟೆಯ ಮಧ್ಯಾವದಿಯಲ್ಲಿ ಮನೆಯ ಬಳಿ ಇರುವ ಪಾಳು ಬಾವಿ ಬಳಿಯ ಮರಕ್ಕೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಯುಡಿಆರ್‌ ಕ್ರಮಾಂಕ 26/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  09/06/2022  ಬೆಳಿಗ್ಗೆ 10:30  ಗಂಟೆಯಿಂದ  ಸಂಜೆ 16:00 ಗಂಟೆಯ ನಡುವೆ ಪಿರ್ಯಾದಿದಾರರಾದ ಸಂತೋಷ ಪೂಜಾರಿ (28), ತಂದೆ: ಕರಿಯ ಪೂಜಾರಿ, ವಾಸ: ಸೂರ್‌ಜೆಡ್ಡು  ಗುಮ್ಮೋಲ ಅಂಚೆ ಬೆಳ್ವೆ ಗ್ರಾಮ  ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರ ಮನೆಯಿಂದ ಪೂರ್ವ ದಿಕ್ಕಿನಲ್ಲಿ ಸುಮಾರು ನೂರು ಮೀಟರ್‌ ದೂರದಲ್ಲಿರುವ ಪಿರ್ಯಾದಿದಾರರ ಕುಟುಂಬದ ಹಾಡಿ ಪ್ರದೇಶದಲ್ಲಿ ಪಿರ್ಯಾದಿದಾರರ ತಂದೆ ಕರಿಯ ಪೂಜಾರಿ (64) ಇವರು ಅಂಗಾತನೆ ಬಿದ್ದು ಮೃತ ಪಟ್ಟಿದ್ದು ಮೃತರಿಗೆ ಹೃದಯ ಸಂಬಂಧಿ ಕಾಯಿಲೆ ಮಧು ಮೇಹ ಮತ್ತು ಅಧಿಕ ರಕ್ತದ ಒತ್ತಡದ ಅನಾರೋಗ್ಯವಿದ್ದು  ಈ ಎಲ್ಲಾ ಖಾಯಿಲೆಯಿಂದ ಬಳಲುತ್ತಿದ್ದವರು ಮನೆಯ ಬಳಿಯ ಹಾಡಿಪ್ರದೇಶಕ್ಕೆ ತಿರುಗಾಡಲು ಹೋಗಿದ್ದಾಗ   ಹೃದಯಾಘಾತವಾಗಿ ಮೃತ ಪಟ್ಟಿರ ಬಹುದಾಗಿ ಸಂಶಯವಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಕೆ. ವಿವೇಕಾನಂದ ಆಚಾರ್ಯ (57), ತಂದೆ: ದಿ. ಕೆ. ಬಾಬು ಆಚಾರ್ಯ,ವಾಸ: ಪೂಜಾ, ಕುತ್ಯಾರು ರಸ್ತೆ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಇವರು  ಉಡುಪಿ ಶಿರ್ವ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್ ಇದರ ಮಾಲಕರಾಗಿದ್ದು, ದಿನಾಂಕ 09/06/2022 ರಂದು ರೂಪಾಯಿ 1,49,000/- ಮೌಲ್ಯದ 28.799 ಗ್ರಾಂ ಚಿನ್ನದ ನೆಕ್ಲೇಸ್‌ ಕಾಣೆಯಾಗಿದ್ದು, ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ದಿನಾಂಕ 06/06/2022 ರಂದು ಮಧ್ಯಾಹ್ನ 13:15 ಗಂಟೆಗೆ ಇಬ್ಬರು ಅಪರಿಚಿತರು ಕೃಪಾ ಜ್ಯುವೆಲ್ಲರಿಗೆ ಚಿನ್ನವನ್ನು ಖರೀದಿ ಮಾಡುವ ನೆಪದಲ್ಲಿ ಬಂದಿದ್ದು, ಮಳಯಾಳ ಮತ್ತು ತಮಿಳು ಭಾಷೆ ಮಾತನಾಡುತ್ತಿದ್ದರು. ಅಂಗಡಿಯ ಕೆಲಸದವರಿಗೆ ತಿಳಿಯದಂತೆ 13:25 ಗಂಟೆಗೆ ಟ್ರೇಯಲ್ಲಿದ್ದ ಚಿನ್ನದ ನೆಕ್ಲೇಸನ್ನು ಕಿಸೆಯೊಳಗೆ ಹಾಕುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿರುತ್ತದೆ.  ರೂಪಾಯಿ 1,49,000/- ಮೌಲ್ಯದ 28.799 ಗ್ರಾಂ ಚಿನ್ನದ ನೆಕ್ಲೇಸ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022, ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಿರ್ವಾ: ಬೆಳ್ಳೆ ಗ್ರಾಮದ ಸರ್ವೇ ನಂಬ್ರ 319/13 ರಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ (54), ಗಂಡ: ದಿ. ಶಂಕರ್‌ ಬಿ., ತೋಕೋಳಿ, ಮೂಡುಬೆಳ್ಳೆ, ಬೆಳ್ಳೆ ಗ್ರಾಮ, ಕಾಪು ತಾ|, ಉಡುಪಿ ಇವರ ಗಂಡನಿಗೆ ವಾರೀಸು ಹಕ್ಕಿನ ಮೂಲಕ  25 ಸೆಂಟ್ಸ್‌ ಜಾಗ ಬಂದಿರುತ್ತದೆ.  ಈ ಆಸ್ತಿಗೆ  ಸೇರಿಕೊಂಡಿರುವ  ಎದುರು  ಪಾರ್ಶ್ವದಲ್ಲಿಯೇ  ಈ ಹಿಂದೆ ಯಾರೋ ಮಾಡಿದ ಕಲ್ಲುಕೋರೆಯ ದೊಡ್ಡ  ಗುಂಡಿ ಹೊಂದಿದ್ದು, ಅದು  ಬಹಳ  ಆಳವಾಗಿರುತ್ತದೆ.  ದಿನಾಂಕ 30/01/2022 ರಂದು  ಪಿರ್ಯಾದಿದಾರರು  ತನ್ನ  ಮಗಳೊಂದಿಗೆ ಜಾಗಕ್ಕೆ ಬಂದಾಗ  ಈ ಗುಂಡಿಯಲ್ಲಿ ಸಂಪೂರ್ಣ ಕೊಳೆತ ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಮುಚ್ಚಿ ಹಾಕಿರುವುದು ಕಂಡು ಬಂದಿದ್ದು, ದಿನಾಂಕ 31/01/2022 ರಂದು ಪಿರ್ಯಾದಿದಾರರ  ಜಾಗಕ್ಕೆ  ಬಂದಾಗ ತ್ಯಾಜ್ಯದ ಮೇಲೆ ಒಂದೆರಡು ಲೋಡು ಮಣ್ಣು ಹಾಕಿ ಮುಚ್ಚಿರುತ್ತಾರೆ.  ತ್ಯಾಜ್ಯ ಹಾಕಿದವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬೆಳ್ಳೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸುಧಾಕರ ಪೂಜಾರಿ ಮತ್ತು ಅವರೊಂದಿಗೆ  ಇದ್ದ ಇನ್ನಿತರರು ಹಾಕಿರುತ್ತಾರೆಂದು ತಿಳಿದು ಬಂದಾಗ , ಪಿರ್ಯಾದಿದಾರರು ಬೆಳ್ಳೆ ಗ್ರಾಮ ಪಂಚಾಯತ್‌ಗೆ ತೆರಳಿ ಲಿಖಿತವಾಗಿ ಮನವಿ ನೀಡಿ ತೆರವುಗೊಳಿಸಬೇಕೆಂದು ತಿಳಿಸಿದ್ದರೂ  ಬೆಳ್ಳೆ  ಗ್ರಾಮ  ಪಂಚಾಯತ್‌ನವರು ಯಾವುದೇ  ಕ್ರಮ ಕೈಗೊಂಡಿರುವುದಿಲ್ಲ. ನಂತರ ಪಂಚಾಯತ್‌ನ ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಇತ್ಯರ್ಥ ಪಡಿಸುವ ಬಗ್ಗೆ ನೋಟಿಸ್‌ ನೀಡಿ ಕರೆಯಿಸಿಕೊಂಡು ಪಿರ್ಯಾದಿದಾರಿಗೆ ಮಾತನಾಡಲು ಅವಕಾಶ ನೀಡದೆ ಅವಮಾನ ಮಾಡಿರುತ್ತಾರೆ. ಇದೀಗ ಲೋಡುಗಟ್ಟಲೆ ತ್ಯಾಜ್ಯ ಸುರಿದಿರುವುದರಿಂದ ಪಿರ್ಯಾದಿದಾರರಿಗೆ ಬಾವಿ ತೋಡಲು ಅಸಾಧ್ಯವಾಗಿದ್ದು, ಸುತ್ತಮುತ್ತಲಿನ ಬಾವಿಯ ನೀರು ಕಲುಷಿತಗೊಂಡಿರುತ್ತದೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಅಧ್ಯಕ್ಷರ ಬಳಿ ಮಾತನಾಡಿದಾಗ ಉಡಾಫೆಯಿಂದ ವರ್ತಿಸಿ, ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಲು ಯತ್ನಿಸಿ  ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2022, ಕಲಂ: 504, 506 IPC & 3(1)(r), 3(1)(s), 3(2)(v-a) SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಸುಬ್ರಹ್ಮಣ್ಯ (30), ತಂದೆ: ಶಿವರಾಮ, ವಾಸ: ತೊಂಡೆಮಕ್ಕಿ , ಬೈಂದೂರು ಗ್ರಾಮ ಮತ್ತು ತಾಲೂಕು ಇವರು ದಿನಾಂಕ 09/06/2022 ರಂದು ನಾಗೂರಿಗೆ ಕೆಲಸಕ್ಕೆ ಹೋಗಲು ಮನೆಯಿಂದ ಹೊರಟು ಬೈಂದೂರಿಗೆ ಬಂದು ಬೈಂದೂರು ಮೆಸ್ಕಾಂ ಕಛೇರಿಯ ಹತ್ತಿರ ಸರ್ವೀಸ್ ರಸ್ತೆಯ ಬದಿಯಲ್ಲಿರುವ ಗೂಡಂಗಡಿಯ ಬಳಿ ಕೆಲಸಕ್ಕೆ ಕರೆದುಕೊಂಡು ಹೋಗುವ ರಾಮಣ್ಣ ಎಂಬುವವರು   ಬರುವುದನ್ನು ಕಾಯುತ್ತಿರುವಾಗ ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರ ಪರಿಚಯದ ಆರೋಪಿ ಮಂಜುನಾಥನು ಮೋಟಾರು ಸೈಕಲ್ ನಲ್ಲಿ ಪಿರ್ಯಾದಿದಾರರ ಬಳಿ ಬಂದು ಅವಾಚ್ಯವಾಗಿ ಬೈದು ಪಿರ್ಯಾದಿದಾರರಿಗೆ ಹಾಗೂ ಆರೋಪಿ ಮಂಜುನಾಥನಿಗೆ ಮಾತಿಗೆ ಮಾತು ಬೆಳೆದು , ಮಂಜುನಾಥನು  ಆತನ ಕೈಯಲ್ಲಿದ್ದ  ಬೀಯರ್ ಬಾಟಲಿಯನ್ನು ಪಕ್ಕದ ಕಂಪೌಂಡ್ ಗೋಡೆಗೆ ಹೊಡೆದು, ಬೀಯರ್ ಬಾಟಲಿಯನ್ನು ಒಡೆದು ಬೀಯರ್ ಬಾಟಲಿಯಿಂದ ಪಿರ್ಯಾದಿದಾರರ ಬಲ ಕೈಯ ಮಣಿಗಂಟಿನ ಬಳಿ,  ಎಡ ಕೋಲು ಕೈಗೆ ಹಾಗೂ ಹೊಟ್ಟೆಯ ಮೇಲ್ಭಾಗಕ್ಕೆ ತಿವಿದು ಗಾಯಗೊಳಿಸಿದ್ದು .  ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಆಸುಪಾಸಿನವರು ಬರುವುದನ್ನು ನೋಡಿ ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ ಹಾಕಿ ಹೋಗಿರುತ್ತಾನೆ. ಪಿರ್ಯಾದಿದಾರರು ಅವರ ತಾಯಿ  ಸುಕ್ರುರವರಿಗೆ ದೂರವಾಣಿ ಕರೆ ಮಾಡಿ, ನಂತರ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ನಂತರ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ  ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 324, 504, 506 ಐಪಿಸಿ &  3 (1) (r) , 3 (2) ( V-a) SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 10-06-2022 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080