ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು  ತಮ್ಮ ಬಾಬ್ತು  KA20MD5086 ನೇ ಕಾರಿನಲ್ಲಿ ತನ್ನ  ಪತ್ನಿ ಸವಿತಾ ದೇವದಾಸ್ ರವರೊಂದಿಗೆ ಕುಕ್ಕಿಕಟ್ಟೆ ಕಡೆಯಿಂದ ಮನೆ ಕಡೆಗೆ ಬೀಡಿನಗುಡ್ಡೆ ಮಾರ್ಗವಾಗಿ  ಹೋಗುತ್ತಿರುವಾಗ  ಸಮಯ ಸುಮಾರು 21:00 ಗಂಟೆಗೆ ಹೆರೆನ್  ವೈನ್ಸ್  ಬಳಿ ತಲುಪುವಾಗ ಬೀಡಿನಗುಡ್ಡೆ ಜಂಕ್ಷನ್ ಕಡೆಯಿಂದ ಡಯಾನದ ಕಡೆಗೆ KA20EH3176 ನೇ ಮೋಟಾರ್ ಸೈಕಲ್ ಸವಾರ ಸಂದೀಪ್ ಮೂಲ್ಯ ಎಂಬಾತ ತನ್ನ ಮೋಟಾರ್ ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಮುಂಭಾಗದ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಬಲಬದಿ ಜಖಂಗೊಂಡಿದ್ದು, ಮೋಟಾರ್ ಸೈಕಲ್ ಸವಾರ ಸಂದೀಪ ಮೂಲ್ಯ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಮೂಳೆ ಮುರಿತ ಹಾಗೂ ತಲೆಗೆ ರಕ್ತ ಗಾಯವಾಗಿದ್ದು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 45/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಚೆನ್ನಯ್ಯ ಪೂಜಾರಿ ಇವರು ದಿನಾಂಕ 09/06/2022 ರಂದು ಸಂಜೆ ಬಾಡಿಗೆಗೆಂದು  ದೇಲಟ್ಟು ಕಡೆಗೆ  ಹೊರಟು ಸಾಗುತ್ತಿರುವಾಗ ಸಂಜೆ ಸುಮಾರು  7.30 ಗಂಟೆಯ ಸಮಯಕ್ಕೆ ಬೇಳೂರು ಗ್ರಾಮದ ದೇಲಟ್ಟು ಕಡೆಯ ಕಮಾನಿನಿಂದ ಸುಮಾರು 100 ಮೀಟರ್ ಮುಂದಕ್ಕೆ ನೀರ್ ಟ್ಯಾಂಕಿನ ಎದುರು ರಸ್ತೆಯ ಬಳಿಯಲ್ಲಿ ಹೋಗುತ್ತಿರುವಾಗ ಟ್ರ್ಯಾಕ್ಟರ್ ನ್ನು ಅದರ ಚಾಲಕ ಪರಶುರಾಮ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿದ್ದು  ಎದುರಿನಿಂದ ಬರುತ್ತಿದ್ದ TVS ಆಪಾಚಿ KA20EP8517 ನೇದಕ್ಕೆ ಢಿಕ್ಕಿ ಹೊಡೆದನು ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ವಾಗಿ ರಸ್ತೆಗೆ ಬಿದ್ದಿದ್ದು ಕೂಡಲೇ ಉಪಚರಿಲಾಗಿ ಆತನ ಹೆಸರು ಪ್ರವೀಣ ಎಂಬುವುದಾಗಿರುತ್ತದೆ ಪ್ರವೀಣರಿಗೆ ಈ ಅಪಘಾತದಿಂದ ಬಲ ಕಾಲಿನ ಮೂಳೆ ಮುರಿತದ ಗಾಯ ಹಾಗೂ ಬಲ ಕೈ ಮೂಳೆಮುರಿತದ ಗಾಯಗಳಾಗಿದ್ದು ಅಲ್ಲಲ್ಲಿ  ದೇಹದಲ್ಲಿ  ರಕ್ತಗಾಯ ಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 87/2022 ಕಲಂ:279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಇತರ ಪ್ರಕರಣ

  • ಬೈಂದೂರು: ದಿನಾಂಕ 09/06/2022 ರಂದು ಪವನ್ ನಾಯಕ ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರಿಗೆ  ಸಂಜೆ 7:00 ಗಂಟೆಗೆ ಬೈಂದೂರು ವೃತ್ತ ನಿರೀಕ್ಷಕರು ಕರೆ ಮಾಡಿ ಬಾತ್ಮೀದಾರರು ಚವರಲೆಟ್ ಕಾರಿನಲ್ಲಿ ಗೋ ಮಾಂಸವನ್ನು ತುಂಬಿಸಿಕೊಂಡು ರಾಹೆ 66 ರಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿರುವುದಾಗಿ ಮಾಹಿತಿ ನೀಡಿದ್ದು ಈ ಬಗ್ಗೆ ಪಡುವರಿ ಗ್ರಾಮದ ಒತ್ತಿನೆಣೆ ಬಳಿ ಬರುವಂತೆ ತಿಳಿಸಿದಂತೆ,  ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ತೆರಳಿ, ಒತ್ತಿನೆಣೆಯಲ್ಲಿದ್ದ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಗಳೊಂದಿಗೆ  ರಲ್ಲಿ ರಾಹೆ 66 ರ ಕಾದುಕೊಂಡಿರುವಾಗ ಸಂಜೆ 7:30 ಗಂಟೆಗೆ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ  ಚವರಲೇಟ್ ಕಂಪೆನಿಯ ENJOY ಕಾರು ಆಗಿದ್ದು, ನೊಂದಣಿ ನಂಬ್ರ KA03AB9735 ನೇಯದನ್ನು ಪರಿಶೀಲಿಸಲಾಗಿ ಕಾರಿನಲ್ಲಿ ಚಾಲಕನ ಜೊತೆಯಲ್ಲಿ 3 ಹೆಂಗಸರು ಇದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಮಹಿಳೆಯರನ್ನು ಹೊರಗೆ ಇಳಿಸಿ ಪರಿಶೀಲಿಸಲಾಗಿ ಕಾರಿನ ಹಿಂಬದಿ ಸೀಟನ್ನು ಮಡಚಿಟ್ಟು ಅದರ ಬಳಿಯಲ್ಲಿ 5 ಬಿಳಿ ಪಾಲಿಥೀನ್ ಚೀಲಗಳಲ್ಲಿ ಅಂದಾಜು 300 ಕೆಜಿಯಷ್ಟು  (ಅಂದಾಜು ಮೌಲ್ಯ 60 ಸಾವಿ ರೂ) ಮಾಂಸ ಇದ್ದು, ಸದ್ರಿ ಮಾಂಸದ ಬಗ್ಗೆ ವಿಚಾರಿಸಿದಲ್ಲಿ ಕುಂದಾಪುರ ಕಡೆಯಿಂದ ತಂದಿರುವುದಾಗಿಯೂ ಭಟ್ಕಳಕ್ಕೆ ತೆಗೆದುಕೊಂಡು ಹೋಗಿ ಭಟ್ಕಳದ ಮುಜಾಫರ್ ಫಕ್ರು ರವರಿಗೆ ಕೊಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಆಪಾದಿತನು ಇತರರೊಂದಿಗೆ ಸೇರಿಕೊಂಡು, ಎಲ್ಲಿಯೋ ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಎಲ್ಲಿಯೋ ವಧೆ ಮಾಡಿ ಮಾಂಸ ಮಾಡಿ ನಂತರ ಅವುಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಚವರಲೇಟ್ ಕಂಪೆನಿಯ ENJOY ಕಾರು ನಂಬ್ರ KA03AB9735 ನೇಯದಕ್ಕೆ ಹಾಕಿಕೊಂಡು ಹೊರಟು, ಬೇರೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಾರಿನಲ್ಲಿ ತನ್ನ ಹೆಂಡತಿ ಹಾಗೂ ಇತರ ಇಬ್ಬರು ಹೆಂಗಸರನ್ನು ಕುಳ್ಳಿರಿಸಿಕೊಂಡು ಭಟ್ಕಳಕ್ಕೆ ಕಾರಿನಲ್ಲಿ ಹೋಗುತ್ತಿದ್ದು, ಆರೋಪಿತನಿಗೆ ಮಾಂಸವನ್ನು ಸಾಗಾಟ ಮಾಡಲು ಉಳಿದ ಮೂವರು ಮಹಿಳೆಯರು ಸಹಕರಿಸಿರುವುದಾಗಿದೆ. ಆ ಬಗ್ಗೆ ಆಪಾದಿತರಾದ 1)ಮಹಮ್ಮದ್ ಅಲ್ತಾಫ್ ಪ್ರಾಯ 38 ವರ್ಷ ತಂದೆ: ಖಾದಿರ್ ಮೀರಾ ವಾಸ:ಜನತಾ ಕಾಲೋನಿ ಮಾವಿನಕಟ್ಟೆ ಕರ್ಕುಂಜೆ ಗ್ರಾಮ ಕುಂದಾಪುರ ತಾಲೂಕು 2)ಮುಜಾಫರ್ ಹುಸೈನ್ ಫಕ್ರು 3) ಅಶ್ಫಿಯಾ ಪ್ರಾಯ 28 ಗ್ರಾಮ ತಂದೆ: ಶಫಿ ಸಾಹೇಬ್ ವಾಸ: ಜೆಎಂ ರೋಡ್ ಕಂಡ್ಲೂರು ಕಾವ್ರಾಡಿ ಗ್ರಾಮ ಕುಂದಾಪುರ ತಾಲೂಕು4) ನಿಕಾತ್ ಪ್ರಾಯ 30 ವರ್ಷ ಗಂಡ: ಮೊಹಮ್ಮದ್ ಅಲ್ತಾಫ್ ವಾಸ:ಜನತಾ ಕಾಲೋನಿ ಮಾವಿನಕಟ್ಟೆ ಕರ್ಕುಂಜೆ ಗ್ರಾಮ ಕುಂದಾಪುರ ತಾಲೂಕು5) ಜರೀನಾ ಪ್ರಾಯ 50 ವರ್ಷ ಗಂಡ: ಶಫಿ ಸಾಹೇಬ್ ವಾಸ: ಜೆಎಂ ರೋಡ್ ಕಂಡ್ಲೂರು ಕಾವ್ರಾಡಿ ಗ್ರಾಮ ಕುಂದಾಪುರ ತಾಲೂಕು ಇವರ ವಿರುದ್ದ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 114/2022 ಕಲಂ 379, 429 ಜೊತೆ 34 ಐಪಿಸಿ ಕಲಂ 4, 12  ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 09/06/2022 ರಂದು ರಾಜಶೇಖರ್ ವಂದಲಿ, ಪಿ.ಎಸ್.ಐ ಮಣಿಪಾಲ ಠಾಣೆ ಇವರು ಠಾಣಾ  ಹೆಚ್.ಸಿ , ಪ್ರಸನ್ನ ಮತ್ತು ಹೆಚ್‌ ಸಿ, ಇಮ್ರಾನ್ ರವರ ಜೊತೆಗೆ ರೌಂಡ್ಸ್  ಕರ್ತವ್ಯದಲ್ಲಿದ್ದಾಗ  ಬೆಳಿಗ್ಗೆ ‌11:30 ಗಂಟೆ ಸಮಯಕ್ಕೆ  ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಮಣಿಪಾಲ ಈಶ್ವರನಗರದಲ್ಲಿನ, ಸಾರ್ವಜನಿಕ  ಸ್ಥಳದಲ್ಲಿ ಆರೋಪಿ ಜಗದೀಶ್‌ ಶೆಟ್ಟಿಗಾರ್‌ ಎಂಬಾತನು  ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಆತನನ್ನು ವಿಚಾರಣೆ ನಡೆಸಿದಾಗ ಆತನು ಮಾತನಾಡಲು ತೊದಲುತ್ತಿದ್ದು  ಆತನ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದ ಕಾರಣ ಆತನನ್ನು  ವಶಕ್ಕೆ  ಪಡೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು  ಸದರಿ ಆರೋಪಿ ಗಾಂಜಾವನ್ನು  ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ಈ ದಿನ ದಿನಾಂಕ: 10.06.2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ .ಕ್ರ 82/2022 ಕಲಂ: 27 (B) NDPS ನಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು, ಮುಡಾರು ಗ್ರಾಮದ ಹಡ್ಯಾಲು ಪೊಸೊಟ್ಟು ನಿವಾಸಿ ಪಿರ್ಯಾದುದಾರರಾದ ಶಾಂತಿ ಇವರ ಅಣ್ಣ ಪುರುಷೋತ್ತಮ ಪ್ರಾಯ 45 ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದುದಾರರ ಜೊತೆಯಲ್ಲಿ ವಾಸವಿದ್ದು, ವಿಪರೀತ ಶರಾಬು ಸೇವನೆ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ಈ ಬಗ್ಗೆ ಈ ಹಿಂದೆ ಚಿಕಿತ್ಸೆ ಕೊಡಿಸಿದ್ದರೂ, ವಿಪರೀತ ಶರಾಬು ಸೇವನೆಯನ್ನು ಮಾಡುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 10/06/2022 ರಂದು ಬೆಳಗ್ಗಿನ ಜಾವ 4:00 ಗಂಟೆಯಿಂದ 6:00 ಗಂಟೆಯ ಮಧ್ಯೆ ತಮ್ಮ ಮನೆಯೊಳಗೆ ಮಾಡಿನ ಪಕ್ಕಸಿಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 10-06-2022 05:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080