ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಹನುಮೇಶ (29) ತಂದೆ: ರಾಮಣ್ಣ ಸಿಂಧನೂರು  ವಾಸ: ವಾರ್ಡ್ ನಂಬ್ರ 31 ಪಿ.ಡಬ್ಲ್ಯು.ಡಿ. ಕ್ಯಾಂಪ್, ಸಿಂಧನೂರು, ರಾಯಚೂರು ಇವರು ದಿನಾಂಕ 08/06/2021 ರಂದು ರಾತ್ರಿ 08:00 ಗಂಟೆ ಸಮಯಕ್ಕೆ ತನ್ನ ಕೆಎ-20-ಬಿ-1295 ಲಾರಿಯನ್ನು, ತನ್ನ ಸ್ನೇಹಿತರಾದ ಮಾರುತಿ ಎಂಬವನು ಅವನ ಕೆಎ-20-ಎಬಿ-1035 ಟಿಪ್ಪರ್ ನ್ನು, ಮರಿಯಪ್ಪನವರ ಕೆಎ-19-ಸಿ-1501 ಟಿಪ್ಪರ್ ನ್ನು, ಮತ್ತು ಆದೇಶ ಎಂಬವನ ಕೆಎ-20-ಎಎ-3090 ಟಿಪ್ಪರ್ ಲಾರಿಯನ್ನು ಕೊಪ್ಪಲಂಗಡಿ ಮಸೀದಿ ಸಮೀಪ ಇಟ್ಟು ರಾತ್ರಿ ಹನುಮೇಶ ರವರು ಮತ್ತು ಇವರ ಸ್ನೇಹಿತರು ಮನೆಯಲ್ಲಿ ಮಲಗಿದ್ದು, ದಿನಾಂಕ 09/06/2021 ರಂದು ಬೆಳಿಗ್ಗೆ 06:00 ಗಂಟೆಗೆ ನಾಲ್ಕು ಜನ ಲೋಡ್ ಬಗ್ಗೆ ಹೋಗಲು ಲಾರಿ ಹತ್ತಿರ ಬಂದು ಲಾರಿಯ ಡೀಸೆಲ್ ಟ್ಯಾಂಕ್ ನೋಡುವಾಗ ನಾಲ್ಕು ಲಾರಿಯಲ್ಲಿ ಡೀಸೆಲ್ ಇರುವುದಿಲ್ಲ.  ಸದ್ರಿ  ನಾಲ್ಕು ಲಾರಿಯ ಡೀಸೆಲ್  ಟ್ಯಾಂಕ್ ನಲ್ಲಿ ಸುಮಾರು 100 ಲೀಟರ್ ಡೀಸೆಲ್ ಇದ್ದು ಅಂದಾಜು ಮೌಲ್ಯ 9000/- ಆಗಬಹುದು. ಯಾರೋ ಕಳ್ಳರೂ ದಿನಾಂಕ 08/06/2021 ರಂದು ರಾತ್ರಿ ನಿಲ್ಲಿಸಿದ ನಾಲ್ಕು ಲಾರಿಗಳ ಡೀಸೆಲ್ ಟ್ಯಾಂಕ್ ನಿಂದ  ಸುಮಾರು 100 ಲೀಟರ್ ಡೀಸೆಲ್ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 101/2021  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಬಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಅನಂತ (29), ತಂದೆ: ಬೊಗ್ಗು, ವಾಸ: ಕಾಫಿ ತೋಟ ಮನೆ, ಪೆರ್ಡೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಬೊಗ್ಗು (63) ಇವರಿಗೆ ಸುಮಾರು 4 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು, ಈ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತಿದ್ದು, ಸಂಪೂರ್ಣ ಗುಣಮುಖವಾಗಿರುವುದಿಲ್ಲ. ದಿನಾಂಕ 09/06/2021 ರಂದು ಬೆಳಿಗ್ಗೆ 6:00 ಗಂಟೆಗೆ ಚಾ ಕುಡಿದು ವಾಕಿಂಗ್ ಗೆ ಹೋದವರು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಹುಡುಕಾಡಿದ್ದು, ಎಲ್ಲಿಯೂ ಕಂಡು ಬಂದಿರುವುದಿಲ್ಲ. ಸಂಜೆ ಸುಮಾರು 5:00 ಗಂಟೆಗೆ ಅನಂತ ರವರ ಊರಿನವರಾದ ಪ್ರಸನ್ನ ಹಾಗೂ ಸುದರ್ಶನ್ ರವರು ಇವರ ಮನೆಗೆ ಬಂದು ಫರ್ವೆಜ್ ರವರ ಬಾವಿಯಲ್ಲಿ ಫಿರ್ಯಾದಿದಾರರ ತಂದೆಯವರ ಮೃತ ದೇಹ ತೇಲುತ್ತಿರುವುದಾಗಿ ತಿಳಿಸಿದಂತೆ ಅಲ್ಲಿ ಹೋಗಿ ನೋಡಲಾಗಿ ಮೃತ ದೇಹ ಅನಂತ ರವರ ತಂದೆಯವರದ್ದೇ ಆಗಿರುತ್ತದೆ. ಅನಂತ ರವರ ತಂದೆಯವರು ತನಗಿದ್ದ ಮಾನಸಿಕ ಕಾಯಿಲೆಯಿಂದ ಮನನೊಂದು ದಿನಾಂಕ 09/06/201 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 5:00 ಗಂಟೆಯ ಮದ್ಯಾವಧಿಯಲ್ಲಿ ಇವರ ಮನೆಯ ಬಳಿ ಇರುವ ಫರ್ವೆಜ್ ರವರ ತೋಟದ ಬಾವಿಗೆ ನೈಲಾನ್ ಹಗ್ಗವನ್ನು ಕೈಗೆ ಸುತ್ತಿಕೊಂಡು ಹಾಗೂ ಅದಕ್ಕೆ ಕಲ್ಲು ಕಟ್ಟಿ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ವಂಚನೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಕೆ. ದೀಪಕ್‌ರಾಜ್ ಶೆಟ್ಟಿ (46) ತಂದೆ : ಕೆ. ಗೋಪಾಲಕೃಷ್ಣ ಶೆಟ್ಟಿ  ವಾಸ : ಶ್ರೀ ವಿಜಯ ವಾಹಿನಿ ನಿವಾಸ ಕೊಟ್ಟಾರ ಚೌಕಿ ಮಂಗಳೂರು ದ.ಕ. ಇವರು ಮೂಳೂರು ಗ್ರಾಮದಲ್ಲಿ ಭಾರತ್ ಪೆಟ್ರೋಲ್ ಬಂಕ್ ಉದ್ದಿಮೆ ನಡೆಸಿಕೊಂಡು ಬರುತ್ತಿದ್ದು, ಸುಮಾರು 4 ತಿಂಗಳಿಂದ ಸುಖೇಶ್‌ ಶೆಟ್ಟಿ ಎಂಬವನು ಕೆ. ದೀಪಕ್‌ರಾಜ್ ಶೆಟ್ಟಿ ಇವರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್‌‌ಆಗಿ ಕೆಲಸ ಮಾಡಿಕೊಂಡಿದ್ದು, ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವನ್ನು ಸುಖೇಶ್‌ ಶೆಟ್ಟಿ ನೋಡಿಕೊಂಡಿದ್ದು, ಕೆ. ದೀಪಕ್‌ರಾಜ್ ಶೆಟ್ಟಿ ರವರ ಪೆಟ್ರೋಲ್ ಬಂಕ್‌ನ ಹಣವನ್ನು  ಕಾರ್ಡ್‌ ಮೂಲಕ ಮತ್ತು  ನಗದು ರೀತಿಯಲ್ಲಿ ಬ್ಯಾಂಕಿಗೆ ಸುಖೇಶ್‌ ಶೆಟ್ಟಿಯು ಜಮಾ ಮಾಡಿಕೊಂಡು ಬರುತ್ತಿದ್ದನು, ಸದ್ರಿ ಜಮಾ ಮಾಡಿದ ಹಣದಲ್ಲಿ  ವ್ಯತ್ಯಾಸ ಬಂದಿರುವುದಾಗಿ ಕಂಪನಿಯವರು ಕೆ. ದೀಪಕ್‌ರಾಜ್ ಶೆಟ್ಟಿ ರವರಿಗೆ ತಿಳಿಸಿದ್ದು, ಈ ಬಗ್ಗೆ ಸುಖೇಶ್‌ ಶೆಟ್ಟಿಯಲ್ಲಿ ವಿಚಾರಿಸಿದ್ದು, ಈ ಬಗ್ಗೆ ಆತನು ಚೆಕ್ ಮಾಡಿ ನಿಮಗೆ ತಿಳಿಸುತ್ತೇನೆ. ಎಂದು ಹೇಳಿ ತನ್ನ  ಮೊಬೈಲ್‌ನ್ನು ಸ್ವಿಚ್‌ ಆಫ್‌ ಮಾಡಿ ದಿನಾಂಕ 27/05/2021 ರಂದು ಸಂಜೆ 4:೦೦ ಗಂಟೆ ಸಮಯಕ್ಕೆ ಪೆಟ್ರೋಲ್  ಬಂಕ್‌ನಿಂದ ತೆರಳಿರುವುದಾಗಿ ಕೆ. ದೀಪಕ್‌ರಾಜ್ ಶೆಟ್ಟಿ ರವರ ಬಂಕ್‌‌ನ ಇತರೆ ಕೆಲಸದವರು ತಿಳಿಸಿರುತ್ತಾರೆ. ದಿನಾಂಕ 28/05/2021 ರಂದು ಕೆ. ದೀಪಕ್‌ರಾಜ್ ಶೆಟ್ಟಿ ರವರು ಪೆಟ್ರೋಲ್ ಬಂಕ್‌ಗೆ  ಬಂದು ನೋಡುವಾಗ ಬ್ಯಾಂಕಿನ ಸ್ಟೇಟ್‌‌ಮೆಂಟ್, ಸೆಲ್ಸ್‌ರಿಪೋರ್ಟ್‌, ಮತ್ತು  ಕಾರ್ಡಿನ ಸ್ಟೇಟ್‌ಮೆಂಟ್‌ಗೆ  ಹಾಗೂ ಸೆಲ್ಸ್ ರಿಪೋರ್ಟ್‌ಗೂ ಸುಮಾರು 18,00,000/- ರೂಪಾಯಿಗಳು ವ್ಯತ್ಯಾಸ ಕಂಡು ಬಂದಿದ್ದು, ಬ್ಯಾಂಕಿಗೆ ಸಂಬಂಧಪಟ್ಟ ಅಕೌಂಟ್ ಪುಸ್ತಕಗಳನ್ನು ತೆಗೆದುಕೊಂಡು ಹೋಗಿರುತ್ತಾನೆ. ಸುಖೇಶ್‌ ಶೆಟ್ಟಿಯು ಪೆಟ್ರೋಲ್ ಬಂಕ್‌ನ ಹಣವನ್ನು ಬ್ಯಾಂಕಿಗೆ ಸರಿಯಾಗಿ ಜಮಾ ಮಾಡದೇ ಮೋಸ ಮಾಡಿ ಪೆಟ್ರೋಲ್ ಬಂಕ್‌ನ ವ್ಯವಹಾರದಲ್ಲಿ ಸುಮಾರು 18 ಲಕ್ಷ ರೂಪಾಯಿಗಳು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 100/2021 ಕಲಂ: 408 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-06-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080