ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

 • ಕಾರ್ಕಳ: ಪಿರ್ಯಾದು ನಿಧಿ ವಿ ಆರ್  ಪ್ರಾಯ: 20 ವರ್ಷ,  ತಂದೆ: ರಾಗೇಶ್ ವಿ. ಎಂ ವಾಸ:  ಗುರುಗೃಹ ಪುಲ್ಕೇರಿ ಕಾರ್ಕಳ ತಾಲೂಕು ರವರು ದಿನಾಂಕ 07.05.2023 ರಂದು ಮದ್ಯಾಹ್ನ KL 08 BL 7218 ನೇ ನೋಂದಣಿ ಸಂಖ್ಯೆಯ ಹೋಂಡಾ ಕಂಪೆನಿಯ ಡಿಯೋ ಮಾದರಿಯ ದ್ವಿಚಕ್ರ ವಾಹನದಲ್ಲಿ ಹಿರಣ್ಮಯಿ ಪ್ರಾಯ 8 ವರ್ಷ ಎಂಬವಳನ್ನು ಹಿಂಬದಿ ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕಾರ್ಕಳ ಪೇಟೆಗೆ ಹೋಗುವರೇ ತನ್ನ ಮನೆಯಿಂದ ಹೊರಟು, ಸಮಯ ಸುಮಾರು ಮದ್ಯಾಹ್ನ 3.45 ಗಂಟೆಗೆ ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ  ಪುಡ್‌ ಬಾಸ್ಕೆಟ್ ಬಳಿ  ಡಿವೈಡರ್‌‌ನ ಯುಟರ್ನ್‌ ಮಾಡುತ್ತಿರುವಾಗ ತನ್ನ ಹಿಂಬದಿಯಿಂದ ಅಂದರೆ ಬಂಗ್ಲೆಗುಡ್ಡೆ ಕಡೆಯಿಂದ  ಪುಲ್ಕೇರಿ ಕಡೆಗೆ KA 19 MD 4015 ನೇ ನಂಬ್ರದ ಕಾರನ್ನು ಚಾಲಕ ದಿಲೀಪ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿರುವ ದ್ವಿಚಕ್ರ  ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರಳು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿನ ಮಣಿಗಂಟಿನ ಮೂಳೆ ಮುರಿತಗೊಂಡಿದ್ದು, ಹಿಂಬದಿ ಸವಾರಳಾದ ಹಿರಣ್ಮಯಿ ಯವರಿಗೆ ಮೈಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 61/2023 ಕಲಂ. 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

 • ಮಣಿಪಾಲ : ದಿನಾಂಕ: 09.05.2023 ರಂದು ಅಪಾದಿತರಾದ ಸುಕೇಶ್‌, ಶರಣ್‌ ಮತ್ತು ನಿಧಿಶ್‌ ರವರು ಪಿರ್ಯಾದಿ ಎಲೆನ್‌ ಪ್ರೀತ್‌ ಜತ್ತನ್‌ ತಂದೆ: ಎಬ್‌ನಜರ್‌ ಜತ್ತನ್‌, ಪದ್ಮನಾಭ ನಗರ ಚಿಟ್‌ಪಾಡಿ, ಉಡುಪಿ ಇವರನ್ನು ಮಣಿಪಾಲದ ಎಕ್ಸ್‌ ಟ್ರೇ  ಕ್ಲಬ್ ಗೆ ಕರೆದುಕೊಂಡು ಬಂದು ಬೆಳಿಗ್ಗೆ 10:30 ಗಂಟೆಯಿಂದ 12:30 ಗಂಟೆಯವರೆಗೆ ಅಕ್ರಮ ದಿಗ್ಬಂದನ ಮಾಡಿ ಕೈಯಿಂದ ಹಲ್ಲೆ ಮಾಡಿದ್ದು ಅಲ್ಲದೇ ಪಿರ್ಯಾದಿದಾರರ ಮಿತ್ರರಿಗೆ ಹೆಲ್ಮೇಟ್‌ ಕಲ್ಲುಗಳಿಂದ ಮುಖಕ್ಕೆ ದೇಹಕ್ಕೆ ಕಣ್ಣಿಗೆ ಹಲ್ಲೆ ಮಾಡಿರುತ್ತಾರೆ ಹಾಗೂ ಪಿರ್ಯಾದಿದಾರರ ವಾಚ್‌ ಮತ್ತು ಮೊಬೈಲ್‌ ಜಖಂಗೊಳಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 107/2023 ಕಲಂ: 342, 323, 324, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಮಣಿಪಾಲ : ದಿನಾಂಕ: 06.05.2023 ರಂದು ಎಲೆನ್‌ ಮತ್ತು ದೀಪಕ್‌ ಎಂಬುವರು ಮಣಿಪಾಲ ಎಕ್ಸ್‌ ಟ್ರೇ ಕ್ಲಬ್‌ಗೆ ಬಂದು ಪಿರ್ಯಾದಿ ಸುಕೇಶ್ (35) ತಂದೆ: ಸಂದೇಶ ಎಸ್ ವಾಸ: ಎಸ್.ಕೆ ಸದನ ಸುಮತಿ ಫಾರಂ ಎದುರು ಚಾಂತಾರ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಳಿಕ ದಿನಾಂಕ: 07.05.2023 ರಂದು ಬೆಳಿಗ್ಗೆನ ಜಾವ 01:59 ಗಂಟೆಗೆ ಪುನಹ ಎಕ್ಸ್‌ ಟ್ರೇ ಕ್ಲಬ್‌ ಬಳಿ ಬಂದು ಬೋರ್ಡಿಗೆ ಕಲ್ಲು ಹಾಗೂ ಕಬ್ಬಿಣದ ರಾಡಿನಿಂದ ಹೊಡೆದು ಸಿಸಿಟಿವಿ ಮತ್ತು ಬಾಗಿಲು ಹಾನಿ ಮಾಡಿದ್ದು ಅಲ್ಲದೆ ದಿನಾಂಕ: 09.05.2023 ರಂದು ಮದ್ಯಾಹ್ನ 01:30 ಗಂಟೆಗೆ ಎಲೆನಾ ದೀಪಕ್‌, ರೆಮಿ, ಹರ್ಷ ಮತ್ತು ಇತರರು ಅಕ್ರಮ ಕೂಟ ಸೇರಿ ಎಕ್ಸ್‌ ಟ್ರೇ ಕ್ಲಬ್‌ಗೆ ಬಂದು ಮಾರಕಾಯುಧಗಳಾದ ಕಲ್ಲು, ಚಾಕು, ಬಾಟಲಿಗಳಿಂದ ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ಮಿತ್ರ ಗೌತಮ್‌ ರವರಿಗೆ ಹಲ್ಲೆ ಮಾಡಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಗೌತಮ್‌ ರವರಿಗೆ ಗಾಯಗಳಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 108/2023 ಕಲಂ: 143, 148, 427, 504, 323, 324, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರತ್ತದೆ.

ಮನುಷ್ಯ ಕಾಣೆ ಪ್ರಕರಣ :

 • ಉಡುಪಿ : ಪಿರ್ಯಾದು ಸಾದಿಕ್ ಇಬ್ರಾಹಿಂ ಸಾಹೇಬ್ (44) ತಂದೆ: ಇಬ್ರಾಹಿಂ ಸಾಹೇಬ್ ವಾಸ: ನಂಬ್ರ: 1-ಪಿ-2-2, ಶಶಿ ಬಾರ್ ಬಳಿ, ಅಮಾಸೆಬೈಲು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಅಕ್ಕನ ಹಿರಿಯ ಮಗನಾದ ಮೊಹಮ್ಮದ್ ಅನಾಸ್ ಹೈದರ್ ಪ್ರಾಯ: 18 ವರ್ಷ ರವರು ಪಿಯುಸಿ ವಿದ್ಯಾಭ್ಯಾಸ ಮುಗಿಸಿ, ಉಡುಪಿಯಲ್ಲಿ ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿದ್ದು, ಈತನು ಇತ್ತಿಚೆಗೆ ಕೆಲವು ದಿನಗಳಿಂದ ಮನೆಯಲ್ಲಿ ಯಾರೊಂದಿಗೂ ಮನಾತನಾಡದೇ ಒಬ್ಬನೇ ಇರುತ್ತಿದ್ದು, ಈ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಈ ಕಾರಣದಿಂದ ದಿನಾಂಕ 08/05/2023 ರಂದು 15:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಮಿತ್ರ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಪರೀಕ್ಷಿಸಲು ಮನೆಯವರು ಕರೆದುಕೊಂಡು ಹೋಗಿದ್ದು, ವೈದ್ಯರ ಬಳಿ ಒಬ್ಬನೇ ಮಾತನಾಡಿ ಹೊರಗೆ ಬಂದಾಗ, ವೈದ್ಯರು ಮನೆಯವರನ್ನು ಒಳಗೆ ಕರೆದಾಗ ಎಲ್ಲರೂ ಒಳಗೆ ಹೋಗಿದ್ದು, ವೈದ್ಯರ ಕೊಠಡಿಯಿಂದ ಹೊರಗಡೆಯಿದ್ದ ಮೊಹಮ್ಮದ್ ಅನಾಸ್ ಹೈದರ್ ರವರು ಮಿತ್ರ ಆಸ್ಪತ್ರೆಯಿಂದ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಈವರೆಗೂ ಪತ್ತೆಯಾಗದೆ ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 65/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

 • ಮಣಿಪಾಲ : ಮೃತ ಸ್ವಾಮಿನಾಥ್ (54) ರವರು ದಿನಾಂಕ 09.05.2023 ರಂದು ಮಧ್ಯಾಹ್ನ 02.00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಹೋಟೇಲ್ ಸೆವೆಂತ್ ಹೆವೆನ್ ಸಮೀಪ ಭವಾನಿ ಶಂಕರ ರಾವ್ ಎಂಬವರ ಬಾವಿಗೆ ಬಿದ್ದ ಬೆಕ್ಕನ್ನು ಮೇಲಕ್ಕೆ ತರಲು ಬಾವಿಗೆ ಇಳಿದು ಬೆಕ್ಕನ್ನು ಮೇಲಕ್ಕೆ ಕೊಟ್ಟು ಬಳಿಕ ಹಗ್ಗದ ಸಹಾಯದಿಂದ ಬಾವಿಯಿಂದ ಮೇಲಕ್ಕೆ ಬರುವಾಗ ಹಗ್ಗದಿಂದ ಆಕಸ್ಮಾತ್ತಾಗಿ ಅವರ ಕೈತಪ್ಪಿ ಅವರು ಬಾವಿಗೆ ಬಿದ್ದುಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶ್ರೀಮತಿ ಶಾರದ ಪ್ರಾಯ:47 ವರ್ಷ, ಗಂಡ: ಸ್ವಾಮಿನಾಥನ್‌, ವಾಸ: ನಂ; 3-297, ಶಿವ ನಗರ, ಮೂಡುಶೆಡ್ಡೆ, ವಾಮಂಜೂರು, ಮಂಗಳೂರು ತಾಲೂಕು ದ.ಕ ಜಿಲ್ಲೆ ಇವರು ನೀಡಿದ ದೂರಿನಂತೆ  ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ಕ್ರಮಾಮಕ 22/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-05-2023 08:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080