ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ :

 • ಕೋಟ : ದಿನಾಂಕ 10.05.2023 ರಂದು ಫಿರ್ಯಾದು ಶ್ರೀಮತಿ. ರೇಖಾ, ಪ್ರಾಯ 40 ವರ್ಷ, ಗಂಡ: ರಘುರಾಮ, ವಾಸ: ದೇಲಟ್ಟು, ದೇವಸ್ಥಾನಬೆಟ್ಟು, ಬೇಳೂರು ಗ್ರಾಮ, ಕುಂದಾಪುರ ತಾಲೂಕು ಇವರು ತಮ್ಮ ಗಂಡ ರಘುರಾಮ ಎಂಬವರೊಂದಿಗೆ ಬೇಳೂರು ಬಡಾಬೆಟ್ಟು ಶಾಲೆಗೆ ಮತದಾನ ಮಾಡಲು ಹೋಗಿ ಬೆಳಿಗ್ಗೆ 11:45 ಗಂಟೆ ಸುಮಾರಿಗೆ ವಾಪಾಸು ಬರುವಾಗ, ವಾಹನ ಪಾರ್ಕ್‌ ಮಾಡಿದ ವಿಚಾರದಲ್ಲಿ ಆರೋಪಿತ ನಾಗೇಶ ಎಂಬಾತನು ಫಿರ್ಯಾದುದಾರರ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈಯುವಾಗ, ಫಿರ್ಯಾದುದಾರರು ಆರೋಪಿತನಲ್ಲಿ, ಯಾಕೆ ಬೈಯುತ್ತೀಯಾ ಎಂದು ಕೇಳಿದಾಗ, ಆರೋಪಿತ ನಾಗೇಶ್‌ನು ಫಿರ್ಯಾದುದಾರರಿಗೆ ಕೆನ್ನೆಗೆ ಹೊಡೆದು, ನಿನ್ನನ್ನು ಕೊಂದು ಹಾಕುತ್ತೇನೆ ಎಂಬುದಾಗಿ ಮುಂದೆ ಬಂದಾಗ, ಫಿರ್ಯಾದುದಾರರು ಭಯದಿಂದ ತಮ್ಮ ಗಂಡನೊಂದಿಗೆ ಬೈಕ್‌ ಹತ್ತಿ ಅಲ್ಲಿಂದ ಬಂದಿರುವುದಾಗಿದೆ. ಈ ಘಟನೆಗೆ ಫಿರ್ಯಾದಿ ಹಾಗೂ ಆರೋಪಿ ಸಂಬಂಧಿಗಳಾಗಿದ್ದು, ಅವರೊಳಗೆ ಈ ಹಿಂದೆ ನಡೆದ ಗಲಾಟೆಯಲ್ಲಿ ಆದ ಮನಸ್ತಾಪವೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 86/2023  ಕಲಂ: 323, 354, 504, 506 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾರ್ಕಳ : ದಿನಾಂಕ 10/05/2023 ರಂದು ಬೆಳಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು, ಈದು ಗ್ರಾಮದ ಮನ್ನಾಪು ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದು ಶೇಖರ ಪೂಜಾರಿ (52) ತಂದೆ: ನಕ್ರ ಪೂಜಾರಿ ವಾಸ:ಮನ್ನಾಪು ಮನೆ, ಈದು ಶಾಲೆಯ ಬಳಿ ಈದು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ, ಇವರು ತಮ್ಮ ಮನೆಯ ಜಾನುವಾರುಗಳನ್ನು ಬಿಡಲು ಹೋಗುವಾಗ, ಅಲ್ಲಿಗೆ ಬಂದ ಪಿರ್ಯಾದುದಾರರ ಅಣ್ಣ ಸಂಜೀವ ಪೂಜಾರಿಯು ಪಿರ್ಯಾದುದಾರರಲ್ಲಿ ದಿನಾಂಕ 09/05/2023 ರಂದು ತನಗೆ ಸಂಬಂದಿಸಿದ ಜಾಗದಲ್ಲಿರುವ ಮರಗಳನ್ನು ಕಡಿದು ಬೇಲಿಗೆ ಹಾಕಿದ್ದೀಯಾ, ಯಾರನ್ನು ಕೇಳಿ ಮರಗಳನ್ನು ಕಡಿದಿದ್ದೀಯಾ ಎಂದು ಏಕಾಏಕಿ ಆತನ ಕೈಯ್ಯಲ್ಲಿದ್ದ ಕತ್ತಿಯಿಂದ ಪಿರ್ಯಾದುದಾರರನ್ನು ಕಡಿಯಲು ಬಂದಾಗ, ಎಡಕೈಯ್ಯನ್ನು ಅಡ್ಡ ಹಿಡಿದಾಗ ಕತ್ತಿಯು ಎಡಕೈಗೆ ತಾಗಿ ಗಾಯವಾಗಿದ್ದು, ಪಿರ್ಯಾದುದಾರರು ಹೆದರಿಕೆಯಿಂದ ಓಡಿ ಹೋಗುವಾಗ ಪುನಃ ಸಂಜೀವ ಪೂಜಾರಿಯು ರಸ್ತೆಯಲ್ಲಿ ಬಿದ್ದಿದ್ದ ಕಲ್ಲೊಂದನ್ನು ಹೆಕ್ಕಿ ಪಿರ್ಯಾದುದಾರರಿಗೆ ಬಿಸಾಡಿದ ಪರಿಣಾಮ ಕಲ್ಲು ತಲೆಗೆ ಮತ್ತು ಎಡಕೈ ಮಣಿಗಂಟಿಗೆ ತಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 62/2023 ಕಲಂ 324  ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ :

 • ಶಂಕರನಾರಾಯಣ : ದಿನಾಂಕ 09/05/2023 ರಂದು 19:30 ಘಂಟೆಗೆ ಆರೋಪಿ ನವೀನ್ ನಾಯ್ಕ ತನ್ನ ಕೆಎ.20  ಯು. 3397 ನೇ ನಂಬ್ರದ ಮೋಟಾರ್ ಸೈಕಲ್‌‌ನ್ನು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಮರೂರು ದೇವಸ್ಥಾನದ ಬಳಿ ತೊಂಬತ್ತು  ಕಡೆಯಿಂದ  ಗಂಟು ಬೀಳು ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿ ಮರೂರು ದೇವಸ್ಥಾನದ   ಕಡೆಗೆ ಸಾಧುನಾಯ್ಕ ಎಂಬುವರು ಚಲಾಯಿಸಿಕೊಂಡು ಹೋಗುತ್ತಿದ್ದ   ಸೈಕಲ್‌‌ಗೆ ಡಿಕ್ಕಿ  ಹೊಡೆದಿದ್ದು, ಇದರ  ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸೈಕಲ್ ಸವಾರ ಸಾಧು  ನಾಯ್ಕ ಎರಡು ಜನರು ರಸ್ತೆಯ ಮೇಲೆ ಬಿದ್ದ ಕಾರಣ ಎರಡು ಜನರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿರುತ್ತದೆ, ಇಬ್ಬರೂ ಸಹ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ  ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೇವಣ್ಣ ನಾಯ್ಕ(37), ತಂದೆ, ಗಾಡು ನಾಯ್ಕ ವಾಸ, ತೋಟದ ಮನೆ, ಮರೂರು ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 47/2023 ಕಲಂ:279,338 .ಐ.ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕೋಟ : ದಿನಾಂಕ: 10.05.2023ರಂದು ಬೆಳಿಗ್ಗೆ 9:55 ಗಂಟೆಗೆ ಪ್ರಭಾಕರ ತಿಂಗಳಾಯ ತಂದೆ: ಗೋವಿಂದ ಮರಕಾಲ ವಾಸ: ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ.ಎಂಬವರು ತಮ್ಮ ಬಾಬ್ತು ಕಪ್ಪು ಬಣ್ಣದ ನಂ. KA 20 W 0563 ನೇ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ ಅನ್ನು ರಾ.ಹೆ.66 ಉಡುಪಿ-ಕುಂದಾಪುರ ಮುಖ್ಯ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕ್ರಮದಂತೆ ಕನ್ನುಕೆರೆ ಪ್ರೆಸಿಡೆಂಟ್‌ ಹಾಲ್‌ ಬಳಿ ಹೋಗುವಾಗ, ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಬಂದ ಆರೋಪಿ ಸವಾರ ವಿಘ್ನೇಶ್‌ ಪೂಜಾರಿ ಎಂಬಾತನು ತನ್ನ ಬಾಬ್ತು ನೀಲಿ ಬಣ್ಣದ KA 20 HA 5793ನೇ ಬಜಾಜ್‌ ಪಲ್ಸರ್‌ ಬೈಕ್‌ ಅನ್ನು ಅತೀವೇಗ & ಅಜಾಗರೂಕತೆಯಿಂದ ಚಲಾಯಿಸಿ, ಮುಂದೆ ಕ್ರಮದಂತೆ ಸಾಗುತ್ತಿದ್ದ ಬೈಕ್‌ ಅನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ ಅನ್ನು ತೀರಾ ಎಡಬದಿಗೆ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್‌ ಸವಾರರು ಬೈಕ್‌ಗಳ ಸಮೇತ ರಸ್ತೆಗೆ ಬಿದ್ದಿದ್ದು, ಪ್ರಭಾಕರ ರವರ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ತೀವ್ರ ಗಾಯ ಮತ್ತು ಬಲಕೈಗೆ ತರಚಿದ ಗಾಯಗಳು ಮತ್ತು ಆರೋಪಿ ಸವಾರ ವಿಘ್ನೇಶ್‌ ಪೂಜಾರಿ ರವರ ಎಡಕಾಲಿನ ಪಾದದ ಮೂಳೆ ಮುರಿತ ತೀವ್ರ ಗಾಯ ಹಾಗೂ ಮೈಕೈಗೆ ತರಚಿದ ಗಾಯಗಳಾಗಿದ್ದು, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ನಂ. KA 20 HA 5793ನೇ ಬಜಾಜ್‌ ಪಲ್ಸರ್‌ ಬೈಕ್‌ ಸವಾರ ವಿಘ್ನೇಶ್‌ ಪೂಜಾರಿ ಎಂಬವರ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣ ಎಂಬುದಾಗಿ  ನಾಗೇಶ್‌ ಮೆಂಡನ್‌ (53), ತಂದೆ: ದಿ. ಅಣ್ಣು ಮೆಂಡನ್‌, ವಾಸ: ಶ್ರೀಕಾರ್ತಿಕೇಯ, ಪಡುಕೆರೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ಎಂಬುವರು ನೀಡಿದ ದೂರಿನಂತೆ ಕೋಟಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 87/2023 ಕಲಂ: 279, 338 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಕಾಪು : ಪಿಯಾ೯ದಿ ಟೆರೆನ್ಸ್ ಪಿರೇರಾ (54), ತಂದೆ:ದಿ! ಬಿದಾ ಕುಸ್ ಪಿರೇರಾ, ವಾಸ:”ಈಡನ್” ಬೋಲ್ಜೆ ಉದ್ಯಾವರ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣ ಜೆರಲ್ಡ್ ಪಿರೇರಾ(65) ರವರು ದಿನಾಂಕ 06/05/2023 ರಂದು ಬೆಳಿಗ್ಗೆ   10:00 ಮನೆಯಿಂದ ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆ.ಎ 20 ಇಎಕ್ಸ್ -5918ನೇದರಲ್ಲಿ ಹೊರಟು  ಪಡುಬಿದ್ರೆಯ ಡಾ. ಅಂಚನ್ ರವರ ಕ್ಲಿನಿಕ್ ಗೆ ತೆರಳಿ ತಮಗೆ ಅಗತ್ಯವಾದ ಔಷಧಿಯನ್ನು ತೆಗೆದುಕೊಂಡು ಮರಳಿ ಮನೆಗೆ ಹೊರಟು ಕಾಪುವಿನ ಮಂಗಳೂರು-ಉಡುಪಿ ಸವಿ೯ಸ್ ರಸ್ತೆಯಲ್ಲಿ ಪಡುಬಿದ್ರೆ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1:20 ಗಂಟೆ ಸುಮಾರಿಗೆ ಕಾಪುವಿನ ಹಳೇ ತಾಲೂಕು ಕಛೇರಿ ಬಳಿ ತಲುಪುವಾಗ ಎದುರಿನಿಂದ ಅದೇ ರಸ್ತೆಯಲ್ಲಿ ಕೆ ಎ 20- ಇ.ಇ-2693  ನೇ ಸ್ಕೂಟರ್‌‌ನ ಸವಾರನು ತನ್ನ ಬಾಬ್ತು ಸ್ಕೂಟರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಜೆರಾಲ್ಡ ರವರ ಸ್ಕೂಟರ್ಗೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ಕೂಟರನ್ನು  ನಿಲ್ಲಿಸದೇ ಹೋಗಿದ್ದು, ಅಪಘಾತದ ಪರಿಣಾಮ ಜೆರಾಲ್ಡ್ ರವರು ಸ್ಕೂಟರ್ ಸಹಿತ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ಗಾಯಗೊಂಡ ಜೆರಾಲ್ಡ್ ರವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಜೆರಾಲ್ಡ್ ರವರನ್ನು ಪರೀಕ್ಷಿಸಿದ ವೈಧ್ಯರು ಅವರ ಎದೆಯ ಮೂಳೆ ಮುರಿತವಾಗಿರುವುದಾಗಿ, ಶ್ವಾಸಕೋಶಕ್ಕೆ ಹಾನಿಯಾಗಿರುವುದಾಗಿ ಹಾಗೂ ಸ್ಪೈನಲ್ ಕಾಡ್೯ ಬಳಿ ಮೂಳೆ ಬಿರುಕು ಬಂದಿರುವುದಾಗಿ ತಿಳಿಸಿದರು ಪಿಯಾ೯ದಿದಾರರು ಅಣ್ಣನ ಆರೈಕೆಯಲ್ಲಿದ್ದು, ಬಳಿಕ ಅಪಘಾತಪಡಿಸಿ ನಿಲ್ಲಿಸದೇ ಪರಾರಿಯಾದ ಸ್ಕೂಟರ್ ನಂಬ್ರವನ್ನು ಪತ್ತೆ ಮಾಡಿ, ಠಾಣೆಗೆ ಬಂದು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2023 ಕಲಂ 279, 338 ಐಪಿಸಿ ಮತ್ತು ಕಲಂ:134(ಎ) (ಬಿ) ಐ.ಎಂ. ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ :

 • ಕೊಲ್ಲೂರು  : ದಿನಾಂಕ 10/05/2023 ರಂದು ಬೆಳಗ್ಗೆ 09:00 ಗಂಟೆಗೆ ಪಿರ್ಯಾಧಿ ಈರಣ್ಣ ಶಿರಗುಂಪಿ ಪೊಲೀಸ್‌ ಉಪನಿರೀಕ್ಷಕರು (L&O), ಕೊಲ್ಲೂರು ಪೊಲೀಸ್‌ ಠಾಣೆ ಇವರು KA 20 G 346 ರಲ್ಲಿ ಹೋಮ್‌ ಗಾರ್ಡ್‌ ಸಿಬ್ಬಂದಿ ಹೆಚ್‌.ಜಿ 317 ಅದಮಪುರಿ ಕೊಲ್ಲಾಪುರ  ಹಾಗೂ ಜೀಪು ಚಾಲಕ ಎಪಿಸಿ 1591 ನಾಗರಾಜ ರವರೊಂದಿಗೆ  ಕರ್ನಾಟಕ ರಾಜ್ಯ ವಿದಾನಸಭೆ ಚುನಾವಣೆ ಮತದಾನದ ಹಿನ್ನಲೆಯಲ್ಲಿ ಸೆಕ್ಟರ್‌ - 8 ರಲ್ಲಿ ರೌಂಡ್ಸ್‌‌ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ  ನಂದ್ರೋಳ್ಳಿ – ಬೆಳ್ಳಾಲ  ರಸ್ತೆಯಲ್ಲಿ ರುವ ಎಸ್‌.ಎಲ್‌.ಆರ್‌.ಎಮ್‌ ತ್ಯಾಜ್ಯ  ಘಟಕ  ಸಮೀಪ ಆರೋಪಿ ವೆಂಕಟೇಶ ಶೆಟ್ಟಿ (62 ವರ್ಷ) ತಂದೆ: ಚಿಕ್ಕಯ್ಯ ಶೆಟ್ಟಿ ವಾಸ: ತೆಂಕೊಡ್ಗಿ ಮನೆ  ವಂಡ್ಸೆ ಗ್ರಾಮ  ಕುಂದಾಪುರ  ತಾಲೂಕು  ಉಡುಪಿ ಜಿಲ್ಲೆ ಇವನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡಿರುತ್ತಾರೆ. ಆರೋಪಿ ವಶದಿಂದ Bindu ಎಂದು ಬರೆದಿರುವ ಶರಾಬಿಗೆ ನೀರು ಮಿಶ್ರಣ ಮಾಡಿರುವ ಪ್ಲಾಸ್ಟಿಕ ಬಾಟಲಿ-1, Original Choice Whicky 180 ml  ನ ಖಾಲಿ  ಸ್ಯಾಚೆಟ್ -1,  ಪ್ಲಾಸ್ಟಿಕ್  ಲೋಟ -1ನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿ ಕೊಂಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :  25/2023 ಕಲಂ:15 (ಎ) ಕರ್ನಾಟಕ ಅಬಕಾರಿ ಕಾಯ್ಡೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬೈಂದೂರು  : ಪಿರ್ಯಾದು ಮಾಲತೇಶ್ ಎಂ ಸಿ ( 33 ವರ್ಷ)  ಎಫ್ ಎಸ್ ಟಿ -2 118 ಬೈಂದೂರು ವಿಧಾನಸಭಾ ಕ್ಷೇತ್ರ ಮತ್ತು  ಸಹಾಯಕ ಇಂಜಿನಿಯರ್ ಸಿದ್ದಾಪುರ ವರಾಹಿ ನೀರಾವರಿ ಯೋಜನೆ ಇವರು 118 - ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಫ್.ಎಸ್.ಟಿ -2 ನೇದರ ಅಧಿಕಾರಿಯಾಗಿದ್ದು, ದಿನಾಂಕ 10/05/2023 ರಂದು ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಬೆಳಿಗ್ಗೆ 06.00 ಗಂಟೆಯಿಂದ ಅರುಣ್ ಎ ಹೆಚ್ ಸಿ 86 ಹಾಗೂ ಕೆಎ 19 ಜಿ 0509ನೇ ಕಾರಿನ ಚಾಲಕ ಮಂಜುನಾಥ ರವರೊಂದಿಗೆ  ಕರ್ತವ್ಯದಲ್ಲಿರುವಾಗ ಸಮಯ ಸುಮಾರು 12.30 ಗಂಟೆಗೆ ಚುನಾವಣಾ ಕಂಟ್ರೋಲ್ ರೂಮ್ ನಿಂದ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಆಶೀರ್ವಾದ ಬಾರ್ ಹಿಂದುಗಡೆ ಹಾಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ನೀಡಿದ ಮೇರೆಗೆ ಸದ್ರಿ ಸ್ಥಳಕ್ಕೆ ತಮ್ಮ ತಂಡದವರೊಂದಿಗೆ ಕಾರಿನಲ್ಲಿ ಸುಮಾರು ಮಧ್ಯಾಹ್ನ 01.00 ಗಂಟೆಗೆ ಸದ್ರಿ ಸ್ಥಳಕ್ಕೆ ತಲುಪಿ ಅಲ್ಲಿ ಹಾಡಿಯೊಳಗೆ ಹೋಗಿ ನೋಡಲಾಗಿ 2 ರಟ್ಟಿನ ಬಾಕ್ಸ್ ನಲ್ಲಿ ಮಧ್ಯವನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿ ನಿಂತಿದ್ದು ಆತನು ಫಿರ್ಯಾದುದಾರರನ್ನು ಹಾಗೂ ತಂಡದವರನ್ನು ದೂರದಿಂದ ನೋಡಿ ಬಾಕ್ಸನ್ನು ಬಿಟ್ಟು ಓಡಿ ಹೋಗಿದ್ದು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಸಿಗದೇ ತಪ್ಪಿಸಿಕೊಂಡಿರುತ್ತಾನೆ. ನಂತರ ಸದ್ರಿ 2 ಬಾಕ್ಸ ಗಳನ್ನು ಪರಿಶೀಲಿಸಲಾಗಿ ಒಂದು ಬಾಕ್ಸನಲ್ಲಿ  TUBORG Premium Strong ಕಂಪನಿಯ 650 ಎಮ್ ಎಲ್ ನ 12 ಬಿಯರ್ ಬಾಟಲಿಗಳು ಇದ್ದು ಅದರ ಅಂದಾಜು ಮೌಲ್ಯ 1920 ರೂಪಾಯಿ ಆಗಬಹುದು ಮತ್ತೊಂದು ರಟ್ಟಿನ ಬಾಕ್ಸ್ ನಲ್ಲಿ Black Fort Super Strong ಕಂಪನಿಯ 650 ಎಮ್ ಎಲ್ ನ 8  ಬಿಯರ್ ಬಾಟಲಿಗಳು ಇದ್ದು, ಅದರ ಅಂದಾಜು ಮೌಲ್ಯ 1080 ರೂಪಾಯಿ ಆಗಬಹುದು. ಒಟ್ಟು 13 ಲೀಟರ್ ಬಿಯರ್ ಇದ್ದು, ಇದರ ಒಟ್ಟು ಅಂದಾಜು ಮೌಲ್ಯ 3000 ರೂಪಾಯಿ ಆಗಬಹುದು. ದಿನಾಂಕ: 10/05/2023 ರಂದು ಕರ್ನಾಟಕ ವಿಧಾನ ಸಭಾ ಕ್ಷೇತ್ರದ ಚುನಾವಣೆ ಇದ್ದು ಈ ದಿನವನ್ನು ಡ್ರೈ ಡೇ ಎಂಬುದಾಗಿ  ಮಾನ್ಯ ಜಿಲ್ಲಾಧಿಕಾರಿ ಉಡುಪಿ ರವರು ಆದೇಶಿಸಿದ್ದು, ಆದ್ದುದರಿಂದ ಯಾವುದೇ ಮಧ್ಯವನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು ಕಾನೂನು ಬಾಹಿರವಾಗಿ ಅರೆಹೊಳೆ ಆಶೀರ್ವಾದ ಬಾರ್ ಹಿಂದುಗಡೆ ಹಾಡಿಯ ಒಳಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 77/2023 ಕಲಂ:32,34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 10-05-2023 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080