ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ದೇವಿ  (27), ಗಂಡ : ಮಹೇಶ್ , ವಾಸ: ಮುಳ್ಳುಗುಜ್ಜಿ  ಮನೆ, ಮದಗ ಅತ್ರಾಡಿ ಗ್ರಾಮ ಮತ್ತು ಅಂಚೆ ,ಉಡುಪಿ ತಾಲೂಕು ಇವರ ಮನೆಯ ಪಕ್ಕದಲ್ಲಿ ಪಿರ್ಯಾದಿದಾರರ ತಾಯಿಯವರ ಮನೆಯಿದ್ದು, ಅಲ್ಲಿ ಪಿರ್ಯಾದಿದಾರರ ಅಣ್ಣ ಪೊನ್ನಯ್ಯ ಮತ್ತು  ಹೆಂಡತಿ ಪಾರ್ವತಿ ವಾಸವಾಗಿದ್ದು, ಇನ್ನೊಂದು ಕಡೆ ಪಿರ್ಯಾದಿದಾರರ ಅಕ್ಕ ಚೆಲುವಿಯ ಮನೆ ಇರುತ್ತದೆ. ಪಿರ್ಯಾದಿದಾರರ ಅಕ್ಕ ಚೆಲುವಿಗೆ 15 ವರ್ಷದ ಹಿಂದೆ ಮಂಚಿಯ ಸಿಗ್ಗಮ ಎಂಬಲ್ಲಿಯ ಸುಬ್ರಹ್ಮಣ್ಯ ಎಂಬುವವರೊಂದಿಗೆ ಮದುವೆ ಮಾಡಿಸಿದ್ದು, ಮದುವೆಯ ಸಮಯದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಗ ಅಲ್ಲಿ ಕೆಲಸ ಮಾಡುವ ರಶೀದು ಎಂಬುವವನ ಪರಿಚಯವಾಗಿರುತ್ತದೆ. ನಂತರ ಸುಬ್ರಹ್ಮಣ್ಯ ಮತ್ತು ಚೆಲುವಿ ಇಬ್ಬರ ಮದ್ಯೆ ಮನಸ್ತಾಪ ಉಂಟಾಗಿ ಚೆಲುವಿ ಗಂಡ ಸುಬ್ರಹ್ಮಣ್ಯನನ್ನು ಬಿಟ್ಟು ರಶೀದುನೊಂದಿಗೆ ಮುಂಬಾಯಿಗೆ ಹೋಗಿ ಅಲ್ಲಿ ಸುಮಾರು 2 ವರ್ಷ ಇದ್ದು, ನಂತರ ಕಾರ್ಕಳಕ್ಕೆ ಬಂದು ಅಲ್ಲಿ ಬಾಡಿಗೆ ಮನೆಯಲ್ಲಿ ರಶೀದುನೊಂದಿಗೆ ಇದ್ದು,  ಆ ಸಮಯ ಆಕೆಗೆ ಪ್ರೀತಮ್  ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳಾಗಿದ್ದು, ನಂತರ ಚೆಲುವಿ ಹಾಗೂ ರಶೀದ್ ರವರಲ್ಲಿ  ಗಲಾಟೆಯಾಗಿ ಚೆಲುವಿ ತನ್ನ ಮಕ್ಕಳೊಂದಿಗೆ  ತಾಯಿ ಮನೆಯಾದ ಆತ್ರಾಡಿ ಮದಗಕ್ಕೆ ವಾಪಾಸ್ಸು ಬಂದಿರುತ್ತಾಳೆ. ಆ ನಂತರ ಕೂಡ ರಶೀದು ಮನೆಗೆ ಬಂದು ಹೋಗಿರುತ್ತಾನೆ. ನಂತರ ಚೆಲುವಿ ತಾಯಿ ಮನೆಯ ಪಕ್ಕದಲ್ಲಿ ಶೆಡ್ ಮಾಡಿಕೊಂಡು ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು. ಒಂದು ವಾರದ ಹಿಂದೆ ಪಿರ್ಯಾದಿದಾರರ ತಾಯಿ ತನ್ನ ಎರಡನೇ ಮಗಳ ಕಾರ್ಯದ ಬಗ್ಗೆ ಹೋಗಿದ್ದು,  ಚೆಲುವಿಯ ಮಗನಾದ ಪ್ರೀತಮ್  ನನ್ನ ಇನ್ನೊಂದು ಅಕ್ಕನ ಮಗನಾದ ಶಿವನೊಂದಿಗೆ ಭದ್ರವತಿಗೆ ಹೋಗಿರುತ್ತಾನೆ.  ಮನೆಯಲ್ಲಿ ಚೆಲುವಿ ಮತ್ತು ಆಕೆಯ ಮಗಳಾದ ಪ್ರಿಯಾ ಮಾತ್ರ ಇದ್ದರು. ದಿನಾಂಕ 08/05/2022 ರಂದು ಬೆಳಿಗ್ಗೆ ಸಮಯ ಚೆಲುವಿಯ ಮಗಳು ಪಿರ್ಯಾದಿದಾರರ ಮನೆಗೆ ಬಂದು ಸಂಜೆ 5:೦೦ ಗಂಟೆಗೆ ವಾಪಾಸ್ಸು ಮನೆಗೆ ಹೋಗಿರುತ್ತಾಳೆ.  ದಿನಾಂಕ 09/05/2022 ರಂದು ಬೆಳಿಗ್ಗೆ  ಪಿರ್ಯಾದಿದಾರರ ತಾಯಿ ಮುನಿಯಮ್ಮ ಪಿರ್ಯಾದಿದಾರರಿಗೆ ಫೋನ್ ಮಾಡಿ ಚೆಲುವಿಯ ಫೋನ್ ಸ್ವಿಚ್ ಆಪ್ ಬರುತ್ತಿದೆ. ಮಗನನ್ನು ಕಳುಹಿಸಿ ನೋಡಿ ಬರುವಂತೆ ತಿಳಿಸಿದ್ದು, ಅದಕ್ಕೆ ಮಗನನ್ನು ಚೆಲುವಿ ಮನೆಗೆ ಕಳುಹಿಸಿದ್ದು. ಪಿರ್ಯಾದಿದಾರರ ಮಗ ವಾಪಾಸ್ಸು ಬಂದು ಅವರು ಮಲಗಿದ್ದು, ಎದ್ದಿರುವುದಿಲ್ಲ ಎಂದು ತಿಳಿಸಿದ್ದು, ಪಿರ್ಯಾದಿದಾರರು ಬೆಳಿಗ್ಗೆ 10:00 ಗಂಟೆಗೆ ಚೆಲುವಿಯ ಮನೆಗೆ ಆಕೆಯ ಅತ್ತೆ ಶಾಂತಿಯವರೊಂದಿಗೆ ಹೋಗಿ ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದು, ಒಳಗೆ ಹೋಗಿ ನೋಡಿದಾಗ ಚೆಲುವಿ ಹಾಗೂ ಪ್ರಿಯಾ ಹಾಲ್ ನಲ್ಲಿ ಅಕ್ಕಪಕ್ಕ ಮಲಗಿದ್ದು, ಎಬ್ಬಿಸಿದರೂ ಏಳದೇ ಇರುವುದನ್ನು ಕಂಡು ಅವರ ಹತ್ತಿರ ಹೋಗಿ ಪ್ರಿಯಾಳನ್ನು ನೋಡಿದಾಗ ಪ್ರಿಯಾಳ ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಮಾರ್ಕ್ ಇದ್ದು, ಚೆಲುವಿ ಯ ಮೂಗು ಹಾಗೂ ಬಾಯಿಯ ಬಳಿ ರಕ್ತ ಸೋರುತ್ತಿರುವುದು ಕಂಡು ಬಂದಿರುತ್ತದೆ. ಕೂಡಲೇ ಮನೆಯ ಹತ್ತಿರ ಇರುವ ಆರೋಗ್ಯ ಕೇಂದ್ರದ ನರ್ಸ್  ಶ್ವೇತಾರವರನ್ನು ಕರೆದುಕೊಂಡು ಬಂದು ತೋರಿಸಿದ್ದು, ಅವರು ಪರಿಶೀಲಿಸಿ ಚೆಲುವಿ ಹಾಗೂ ಪ್ರಿಯಾ ಮೃತಪಟ್ಟಿರುವುದಾಗಿ ತಿಳಿಸಿರುತ್ತಾಳೆ. ಚೆಲುವಿ ಹಾಗೂ ಆಕೆಯ ಮಗಳು  ಪ್ರಿಯಾ ಇಬ್ಬರ ಕುತ್ತಿಗೆಯಲ್ಲಿ ಇರುವ ಗಾಯಗಳನ್ನು ನೋಡಿದಾಗ ಯಾರೋ ದುಷ್ಕರ್ಮಿಗಳು ದಿನಾಂಕ 08/05/2022 ರಂದು ಸಂಜೆ 5:00 ಗಂಟೆಯಿಂದ ದಿನಾಂಕ 09/05/2022 ರ ಬೆಳಿಗ್ಗೆ 9:00 ಗಂಟೆಯ ಮದ್ಯಾವಧೀಯಲ್ಲಿ ಯಾವುದೋ ಉದ್ದೇಶಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ : 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಮಮತಾ ಹಂದೆ (45), ತಂದೆ: ರಾಮ ದೇವ ಕಾರಂತ, ವಾಸ: ಮಣೂರು ಗ್ರಾಮದ ಕಾಸನ ಗುಂದು ಇವರು ಅವರ ಗಂಡ ರಾಮದೇವ ಕಾರಂತ (54) ಹಾಗೂ ಗಂಡನ ತಾಯಿ ಶ್ರೀಮತಿ. ಭಾಗೀರಥಿ ರವರೊಂದಿಗೆ ವಾಸವಾಗಿರುತ್ತಾರೆ.  ದಿನಾಂಕ 08/05/2022 ರಂದು ಅವರ ಮನೆಗೆ ಸಂಬಂಧಿಕರು ಬಂದಿದ್ದು, ಎಂದಿನಂತೆ ಮನೆಯವರೆಲ್ಲರೂ ರಾತ್ರಿ ಊಟ ಮುಗಿಸಿ ರಾತ್ರಿ 10:00 ಗಂಟೆಗೆ ಎಲ್ಲರೂ ಮಲಗಿದ್ದು, ಪಿರ್ಯಾದಿದಾರರು ಅವರ ಗಂಡನೊಂದಿಗೆ ಮಲಗಿರುತ್ತಾರೆ. ಮಧ್ಯರಾತ್ರಿ ಸಮಯ ಮನೆಗೆ ಬಂದ ಸಂಬಂಧಿಕರ ಮಗು ವೀಪರೀತ ಅಳುವುದನ್ನು ಕೇಳಿ ಮನೆಯವರೆಲ್ಲರೂ ಎದ್ದು ಮಗುವನ್ನು ಸಂತೈಸಿದರೂ ಪಿರ್ಯಾದಿದಾರರ ಗಂಡ ಮಾತ್ರ ಎದ್ದು ಬಾರದೇ ಇರುವುದನ್ನು ಗಮನಿಸಿ ಅವರ ಬಳಿ ಹೋಗಿ ಅವರನ್ನು ಉಪಚರಿಸಿ ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವಿಷ ಸೇವನೆಯಿಂದ ಅದಾಗಲೇ ಮೃತಪಟ್ಟಿರುವುದಾಗಿ ದಿನಾಂಕ 09/05/2022 ರಂದು ಮುಂಜಾನೆ 03:30 ಗಂಟೆಗೆ ಖಚಿತಪಡಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಅಮಾಸೆಬೈಲು: ಪಿರ್ಯಾದಿದಾರರಾದ ಪ್ರಶಾಂತ ಆಚಾರಿ (30), ತಂದೆ:ಮಹಾಬಲ ಆಚಾರಿ, ವಾಸ:ಇರಿಜೆಡ್ಡು ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ರವೀಂದ್ರ ಆಚಾರಿ (38) ಇವರು ವಿಪರೀತ ಕುಡಿತದ ಚಟ ಹೊಂದಿದವರಾಗಿದ್ದು, ತನ್ನ ಕುಡಿತದ ಚಟದಿಂದ ಮನನೊಂದು ದಿನಾಂಕ 09/05/2022 ರಂದು ಮದ್ಯಾಹ್ನ 12.00 ಗಂಟೆಯಿಂದ 15:00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮನೆಯಾದ ಮಚ್ಚಟ್ಟು ಗ್ರಾಮದ ಇರಿಜೆಡ್ಡು ಎಂಬಲ್ಲಿ  ಮನೆಯಲ್ಲಿ ಯಾರು ಇಲ್ಲದ ಸಮಯ ತನ್ನ ಮನೆಯ ಹತ್ತಿರವಿರುವ ತೋಟದಲ್ಲಿ  ಗೇರು ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಸುರೇಶ ಲಮಾಣಿ(21), ತಂದೆ: ರಮೇಶ ಲಮಾಣಿ, ವಾಸ: ಕಳಸಾಪುರ ಗ್ರಾಮ, ಕಳಸಾಪುರ ತಾಂಡ,  ಗದಗ ಜಿಲ್ಲೆ ಇವರು ಮಲ್ಪೆ ಬಂದರಿನ SDDK ಮೀನುಪಾರ್ಟಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. SDDK ಮೀನು ಪಾರ್ಟಿಯ ಪಾಲುದಾರರಾಗಿ ವಾಮನ ಕಾಂಚನ್ ರವರಿದ್ದು. ಈ ಪಾರ್ಟಿ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕಚೇರಿಯು ಇರುವುದಿಲ್ಲ, ಆದ ಕಾರಣ ಮೀನು ವ್ಯಾಪಾರದಿಂದ ಬಂದ ಹಣವನ್ನು ಪಿರ್ಯಾದಿದಾರರು ತನ್ನ ರೂಮಿನಲ್ಲಿ ಇಟ್ಟುಕೊಂಡು ನಂತರ ವಾಮನರವರಿಗೆ ನೀಡುವುದಾಗಿದೆ, ದಿನಾಂಕ  07/05/2022 ಮತ್ತು ದಿನಾಂಕ 08/05/2022 ರಂದು ಮೀನು ವ್ಯಾಪಾರದಿಂದ ಬಂದ ಒಟ್ಟು 10 ಲಕ್ಷ 30 ಸಾವಿರ ರೂಪಾಯಿ ಹಣವನ್ನು ಪಿರ್ಯಾದಿದಾರರು ಕೊಳದಲ್ಲಿರುವ ತನ್ನ ರೂಮಿನಲ್ಲಿ  ಬಾಕ್ಸಿನ ಒಳಗೆ ಇಟ್ಟು ರಾತ್ರಿ ರೂಮಿನಲ್ಲಿ ಮಲಗಿ ಬೆಳಿಗ್ಗೆ 4:30 ಗಂಟೆಗೆ ಮೀನುಗಾರಿಕೆ ಬಗ್ಗೆ ರೂಮಿಗೆ ಬೀಗ ಹಾಕಿ ಮಲ್ಪೆ ಬಂದರಿಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಮೀನುಗಾರಿಕೆ ಕೆಲಸ ಮುಗಿಸಿ ವಾಪಾಸು ಬೆಳಿಗ್ಗೆ 9:30 ಗಂಟೆಗೆ ರೂಮಿನ ಬಳಿ ಬಂದು ನೋಡುವಾಗ ಯಾರೋ ಕಳ್ಳರು ರೂಮಿನ ಬೀಗ ಮುರಿದು ಒಳಗೆ ಹೋಗಿ ಬಾಕ್ಸ್ ನಲ್ಲಿ ಇಟ್ಟ 10 ಲಕ್ಷ 30 ಸಾವಿರ ರೂಪಾಯಿಯಲ್ಲಿ 1 ಲಕ್ಷ 40 ಸಾವಿರ ರೂಪಾಯಿಯನ್ನು ಬಾಕ್ಸ್ ನಲ್ಲಿಯೇ ಇಟ್ಟು ಒಟ್ಟು 8 ಲಕ್ಷ 90 ಸಾವಿರ ರೂಪಾಯಿಯನ್ನು ದಿನಾಂಕ 09/05/2022 ರಂದು ಬೆಳಿಗ್ಗೆ 4:30 ಗಂಟೆಯಿಂದ 9:30 ಗಂಟೆ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ,ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಮಹೇಶ(42), ತಂದೆ: ರಾಮ, ವಾಸ: ಸುಜಾತ ಹೋಟೆಲ್ ಹತ್ತಿರ ತೊಟ್ಟಂ ,ಬಡನಿಡಿಯೂರು ಇವರು   ಮಲ್ಪೆ ಬೀಚ್‌ನಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು, ಮಾನ್ಯ ಜಿಲ್ಲಾಧಿಕಾರಿಯವರು 2 ದಿನಗಳಿಂದ ಹವಾಮಾನ ವೈಪರಿತ್ಯದಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ಸೂಚನೆ ನೀಡಿರುತ್ತಾರೆ.  ದಿನಾಂಕ 09/05/2022 ರಂದು 3:30 ಗಂಟೆಗೆ ಸುಮಾರು 5 ರಿಂದ 6 ಜನ ಪ್ರವಾಸಿಗರು ಮಲ್ಪೆ ಬೀಚ್ ಲೈಫ್ ಗಾರ್ಡ್ ಗಳ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿಯುತ್ತಿದ್ದು , ಪ್ರವಾಸಿಗರಿಗೆ ತಿಳಿ ಹೇಳಿದರೂ ಕೂಡ ನಾವು ತುಂಬಾ ದೂರದಿಂದ ಬಂದಿದ್ದೇವೆ ನಾವು ಯಾಕೆ ನೀರಿಗೆ ಇಳಿಯಬಾರದು ಎಂದು ಉಡಾಫೆಯಿಂದ ಹೇಳಿ ನಾವು ನೀರಿಗೆ ಇಳಿಯುತ್ತೇವೆ ನೀವು ಮಾಡುವುದೆಲ್ಲಾ ಮಾಡಿ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಸಹೋದ್ಯೋಗಿ (ಲೈಫ್ ಗಾರ್ಡ್) ಗಳಾದ  ನಾಗರಾಜ, ಅಭಯ್ , ರಾಜೇಶ್, ಇವರಿಗೆ 5-6 ಜನ ಪ್ರವಾಸಿಗರು ಸೇರಿಕೊಂಡು ಕೈಯಿಂದ ಹಿಗ್ಗಾಮುಗ್ಗಾ ತಳಿಸಿ ಕೆಳಗೆ ದೂಡಿ ಹಾಕಿ ಕಾಲಿನಿಂದ ತುಳಿದಿರುತ್ತಾರೆ, ಅಲ್ಲಿ ಸೇರಿದವರು ಈ ಗಲಾಟೆಯನ್ನು ಬಿಡಿಸಿದ್ದು,  ಗಲಾಟೆಯಿಂದ ಪೆಟ್ಟಾದ  ಲೈಫ್ ಗಾರ್ಡ್ ಗಳಾದ ನಾಗರಾಜ, ಅಭಯ್ , ರಾಜೇಶ್ ಇವರುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2022 ,ಕಲಂ: 143 , 147, 323, 504 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ನಡೂರು ಗ್ರಾಮದ ಸರ್ವೇ ನಂ 83 ರಲ್ಲಿ ಪಿರ್ಯಾದಿದಾರರಾದ ಶಾರದಾ ಶೆಟ್ಟಿ (48), ತಾಯಿ: ನೇತ್ರಾವತಿ  ಶೆಡ್ತಿ, ವಾಸ: ನಡೂರು ಬ್ರಹ್ಮಾವರ ತಾಲೂಕು ಇವರು ಸ್ಥಿರಾಸ್ತಿಯನ್ನು ಹೊಂದಿದ್ದು ಅವರ  ಸ್ಥಿರಾಸ್ತಿಯ ಪಶ್ಚಿಮ ದಿಕ್ಕಿನಲ್ಲಿ ಆರೋಪಿಗಳಾದ 1] ಗಂಗೆ ಮರಕಾಲ್ತಿ , ಗಂಡ: ಶೀನ ಮರಕಾಲ, 2] ನಾಗೇಶ ಕುಂದರ, ತಂದೆ: ಶೀನ ಮರಕಾಲ, 3] ಲೊಕೇಶ್ ಕುಂದರ್, ತಂದೆ: ಶೀನ ಮರಕಾಲ,4] ದಯಾನಂದ ಮರಕಾಲ , ತಂದೆ: ಶೀನ ಮರಕಾಲ, 5] ಅಶೋಕ ಮರಕಾಲ, ತಂದೆ: ಶೀನ ಮರಕಾಲ, 6] ಸುಮಿತ್ರ, ಗಂಡ: ನಾಗೇಶ್ ಕುಂದರ್, 7] ಸಬಿತಾ, ಗಂಡ: ಲೊಕೇಶ್ ಕುಂದರ್, 8] ಪ್ರಫುಲ್ಲಾ, ಗಂಡ: ದಯಾನಂದ ಮರಕಾಲ, 9] ಸುಲೋಚನಾ, ಗಂಡ: ಅಶೋಕ ಮರಕಾಲ ಇವರ  ಆಸ್ತಿ ಇರುವುದಾಗಿದೆ. ಆರೋಪಿಗಳು ಪಿರ್ಯಾದಿದಾರರ ಆಸ್ತಿಗೆ ಅತಿಕ್ರಮ ಪ್ರಮೇಶ ಮಾಡುವುದನ್ನು ತಡೆಯುವ ಸಲುವಾಗಿ ಪಿರ್ಯಾದಿದಾರರು ಮಾನ್ಯ ನ್ಯಾಯಾಲಯದ ಮುಂದೆ  ಸಿವಿಲ್‌ ಪ್ರಕರಣವನ್ನು ದಾಖಲಿಸಿರುತ್ತಾರೆ. ಈ ಬಗ್ಗೆ ಮಾನ್ಯ ನ್ಯಾಯಾಲಯ ಆರೋಪಿ 1 ರಿಂದ 5 ನೇ ರವರ ವಿರುದ್ಧ ಆಸ್ತಿಯು ಶಾಂತಿಯುತ ಸ್ವಾಧಿನ ಮತ್ತು ಅನುಭೋಗದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯಾಜ್ಞೆ  ನೀಡಿರುತ್ತದೆ. ಪಿರ್ಯಾದಿದಾರರು ಅವರ  ಸ್ಥಿರಾಸ್ತಿಯಲ್ಲಿ  ಪಂಚಾಯತ್‌ ನಿಂದ ಪರವಾನಿಗೆ ಪಡೆದು ಮನೆಯನ್ನು  ಹಾಗೂ ಕಂಪೌಂಡ್‌ನ್ನು ನಿರ್ಮಿಸುವ ಬಗ್ಗೆ  ದಿನಾಂಕ 03/04/2022 ರಂದು ತನ್ನ ಪತಿ ಹಾಗೂ ಕೆಲಸಗಾರರ ರೊಂದಿಗೆ  ಜಮೀನಿನಲ್ಲಿ ಕೆಲಸಮಾಡಿಸುತ್ತಿರುವ ಸಮಯ  ಆರೋಪಿಗಳಾದ 1 ರಿಂದ 9 ಮತ್ತು 10ನೇ ಆರೋಪಿ ಶಂಕರ ಮರಕಾಲ, ನಡೂರು, ಗೋಳಿಬೆಟ್ಟು, ನಡೂರು ಗ್ರಾಮ ಇವರು  ಕಾನೂನು ಬಾಹಿರವಾಗಿ ಸಮಾನ ಉದ್ದೇಶದಿದ, ಅಕ್ರಮ ಕೂಟ ಸೇರಿ ಕೈಯಲ್ಲಿ ಮರದ ತುಂಡುಗಳು ಮತ್ತು ಕುಡುಗೋಲುಗಳಂತ ಮಾರಾಕಾಯುಧಗಳನ್ನು ಹಿಡಿದು ಪಿರ್ಯಾದಿದಾರರ ಸ್ಥಿರಾಸ್ಥಿಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಹಾಗೂ ಅವರ ಪತಿಗೆ ಕೊಲೆ ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ಪಿರ್ಯಾದಿದಾರರ ಸ್ಥಿರಾಸ್ಥಿಯಲ್ಲಿ ಇರುವಂತಹ ಮರದ ಕಂಬಗಳನ್ನು ಮತ್ತು ಹಗ್ಗಗಳನ್ನು ಕಿತ್ತು ಹಾಕಿ ಪಿರ್ಯಾದಿದಾರರಿಗೆ ನಷ್ಟವುಂಟು ಮಾಡಿರುತ್ತಾರೆ. ಅಲ್ಲದೇ ಪಿರ್ಯಾದಿದಾರರ ಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾದಿದಾರರಿಗೆ ಹಾಗೂ ಅವರ ಪತಿಗೆ ನೀವು ಮನೆಯನ್ನು ನಿರ್ಮಿಸಲು ಉದ್ದೇಶಿಸಿದರೆ ಆಗ ನಿಮ್ಮ ಕೈಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು  ಮನೆಯ ಅಡಿಪಾಯ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ 6 ರಿಂದ 9ನೇ ವರೆಗಿನ ಆರೋಪಿಗಳು ಕುಳಿತುಕೊಂಡು ನೀವು ಮನೆ ನಿರ್ಮಾಣಕ್ಕೆ ಅಡಿಪಾಯವನ್ನು ಅಗೆದರೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಅಕ್ರಮವಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿ. ಪಿರ್ಯಾದಿದಾರರಿಗೆ ಅವರ ಸ್ಥಿರಾಸ್ಥಿಯಲ್ಲಿ ಮನೆ ನಿರ್ಮಾಣ ಮಾಡದಂತೆ ಒತ್ತಡ ಹಾಕಿರುತ್ತಾರೆ, ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದು ಯಾವುದೇ ಹೀನ ಕೃತ್ಯವನ್ನು ಮಾಡಲು ಹಾಗೂ ಬೆದರಿಕೆಯನ್ನು ಕಾರ್ಯರೂಪಕ್ಕೆ ತರಲು ಅವರು ಸಿದ್ದರಾಗಿರುತ್ತಾರೆ ಎಂಬುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 143, 147, 148, 447, 340, 504, 506, 427, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 10-05-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080