ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ಶರತ್ ಇವರು ದಿನಾಂಕ 08/05/2022 ರಂದು 21:00 ಗಂಟೆಗೆ ನಾಗೂರಿನ ಮಹಾಲಸ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಕಿರಿಮಂಜೇಶ್ವರ  ಗ್ರಾಮದ ನಾಗೂರಿನ ಕಳುವಿನ ಬಾಗಿಲು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ಪಿರ್ಯಾದುದಾರರು ಕೆಲಸ ಮಾಡಿಕೊಂಡಿರುವ ಪೆಟ್ರೋಲ್ ಬಂಕ್ ನ ಮೆನೇಜರ್  ಆದ ಆಶೋಕ್ ಶ್ಯಾನುಬೋಗ್ ರವರು ಅವರ ಬಾಬ್ತು KA 20ED 3582 ನೇ ಮೋಟಾರು ಸೈಕಲ್ ನಲ್ಲಿ ಮನೆಗೆ ಹೋಗುವರೇ  ರಾ ಹೆ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ  ಮೋಟಾರು ಸೈಕಲ್ ನ್ನು  ಚಲಾಯಿಸಿಕೊಂಡು ನಾಗೂರಿನ ಕಳುವಿನ ಬಾಗಿಲು ಬಸ್ ನಿಲ್ದಾಣದ ಬಳಿ ಬರುತ್ತಿರುವಾಗ ಕಂಬದಕೋಣೆ ಕಡೆಯಿಂದ  KA 20 EJ 6423 ನೇ ಮೋಟಾರು ಸೈಕಲ್ ಸವಾರನು ರಾ.ಹೆ 66 ನೇದರ ಪಶ್ಚಿಮ ಬದಿಯ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಮೋಟಾರು ಸೈಕಲ್  ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಶೋಕ್ ಶ್ಯಾನುಬೋಗ್ ರವರ ಮೊಟಾರು ಸೈಕಲ್ ಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಅಶೋಕ್ ಶ್ಯಾನುಬೋಗ್ ರವರು ಮೊಟಾರು ಸೈಕಲ್  ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಪಿರ್ಯಾದುದಾರರು ಪೆಟ್ರೋಲ್ ಬಂಕ್ ನ  ದಣಿಯವರಿಗೆ ವಿಷಯ ತಿಳಿಸಿ  ಅವರೊಂದಿಗೆ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2022 ಕಲಂ. 279, 338 ಐಪಿಸಿ ಮತ್ತು Rule 218 ಜೊತೆಗೆ 177 ಮೋ.ವಾ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಫಿರ್ಯಾದಿದಾರರಾದ ಶ್ರೀಮತಿ ವನಜಾ ಹೆಗ್ಡೆ ರವರು ದಿನಾಂಕ 08/05/2022 ರಂದು ಸೊಮೇಶ್ವರ ಪೇಟೆಯಿಂದ ಹೊರಟು ಅಂಗಡಿಬೆಟ್ಟು ಕಡೆಯಿಂದ ತನ್ನ ಮನೆಯಾದ ಹಳೇ ಸೊಮೇಶ್ವರ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರು ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ನಾಡ್ಪಾಲು ಗ್ರಾಮದ ಗಾಳಿತೋಪು ಎಂಬಲ್ಲಿನ ಕ್ರಾಸ್ ಬಳಿ ತಲುಪುವಾಗ ಅವರ ಹಿಂದುಗಡೆಯಿಂದ KA 19 Z 0344 ನೇ ಕಾರನ್ನು ಅದರ ಚಾಲಕ ದಿನೇಶ್ ಹೆಗ್ಡೆ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ವನಜಾ ಹೆಗ್ಡೆ ರವರಿಗೆ ಹಿಂದುಗಡೆಯಿಂದ ಢಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದಿರುತ್ತಾರೆ. ಈ ಘಟನೆಯಿಂದ ಶ್ರೀಮತಿ ವನಜಾ ಹೆಗ್ಡೆ ರವರಿಗೆ ಎಡಕಾಲಿನ ಬಳಿ ಮೂಳೆ ಮುರಿತವಾಗಿರುತ್ತದೆ ಹಾಗೂ  ಎಡಕೈ ಮತ್ತು ಬಲಕಾಲಿನ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ:,279,337,338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 10/05/2022 ರಂದುಬೆಳಿಗ್ಗೆ ಸುಮಾರು 09:10 ಗಂಟೆಗೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಇಂಗ್ಲೀಷ್‌‌ ಮಾದ್ಯಮ ಶಾಲೆಯ ಬಳಿ ತಿರುವಿನ ರಸ್ತೆಯಲ್ಲಿ, ಆಪಾದಿತ  ಚೆನ್ನಯ್ಯ ಪೂಜಾರಿ  ಎಂಬವರು, KA20EC-7333ನೇ ಬೈಕನ್ನು ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷತನದಿಂದ ಸವಾರಿ  ಮಾಡಿಕೊಂಡು  ಬಂದು,  ಗುಲ್ವಾಡಿ ಕಡೆಯಿಂದ ತಲ್ಲೂರು ಕಡೆಗೆ ಪಿರ್ಯಾದಿದಾರರಾದ ಸುರೇಶ ಎಂಬವರು KA20-EE-0074ನೇ ಬೈಕಿನಲ್ಲಿ ಚಂದ್ರ ಎಂಬವರನ್ನುಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸದ್ರಿ ಬೈಕಿಗೆ ಎದುರುಗಡೆಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ ಬಲಕಾಲಿಗೆ ಒಳಜಖಂ &ರಕ್ತಗಾಯ ಎಡಕೈ, ಎಡಕಾಲಿಗೆ  ತರಚಿದ ಗಾಯ, ಮತ್ತು ಚೆನ್ನಯ್ಯ  ಪೂಜಾರಿ ಹಾಗೂ ಚಂದ್ರ ರವರಿಗೆ ಕೈ ಕಾಲುಗಳಿಗೆ  ತರಚಿದ ಗಾಯಗಳಾಗಿದ್ದು,  ಪಿರ್ಯಾದಿದಾರರಾದ  ಸುರೇಶ ರವರು ಕುಂದಾಪುರ  ಆದರ್ಶ ಆಸ್ಪತ್ರೆಗೆ  ಒಳ ರೋಗಿಯಾಗಿ ದಾಖಲಾಗಿದ್ದು, ಚೆನ್ನಯ್ಯ  ಪೂಜಾರಿ   ಹಾಗೂ ಚಂದ್ರ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ:,279,337 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 ಇತರ ಪ್ರಕರಣ

  • ಕಾರ್ಕಳ: ದಿನಾಂಕ 09/05/2022 ರಂದು 17:00 ಗಂಟೆಗೆ ಕಾರ್ಕಳ ತಾಲೂಕು ಸೂಡಾ ಗ್ರಾಮದ ಸೂಡಾ ಎಂಬಲ್ಲಿ ಸಂಕಪ್ಪ ರೈರವರ ಹೋಟೆಲಿನ ಮುಂಭಾಗದಲ್ಲಿ ಮೊಟ್ಟೆ ಸಪ್ಲೆಯ್ ಮಾಡುವ ವಾಹನವೊಂದನ್ನು ರಸ್ತೆಯಲ್ಲಿ ನಿಲ್ಲಿಸಿದ ಬಗ್ಗೆ ಪಿರ್ಯಾದಿ ಕೆ ಹರೀಶ್ ಶೆಟ್ಟಿ ಇವರು ಮೊಟ್ಟೆ ವಾಹನದವರಲ್ಲಿ ವಿಚಾರಿಸಿದ ಬಗ್ಗೆ ಆರೋಪಿ ಸಂಕಪ್ಪ ರೈ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ನೀನ್ಯಾಕೆ ನನ್ನ ಹೋಟೆಲ್ ನ ಬಳಿ ಬಂದು ಬೊಬ್ಬೆ ಹೊಡೆದು ಗಲಾಟೆ ಮಾಡುತ್ತೀಯಾ ಎಂದು ಹೇಳಿ ಪಿರ್ಯಾದಿದಾರರು ಮನೆಗೆ ಹೋಗದಂತೆ ತಡೆದು ನಿಲ್ಲಿಸಿದ್ದು, ನಂತರ ಅಲ್ಲಿಗೆ ಬಂದ ಸಂಕಪ್ಪ ರೈಯ ಪತ್ನಿ ಭಾರತಿ ಮತ್ತು ಮಗ ಸುಶಾಂತ್ ನು ಸ್ಥಳಕ್ಕೆ ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ ನೀನು ಬಾರಿ ಗಲಾಟೆ ಮಾಡುತ್ತೀಯಾ” ಎಂದು ಬೈದು, ಮೂರು ಜನ ಆಪಾದಿತರು ಪಿರ್ಯಾದುದಾರರ ಕೆನ್ನೆಗೆ  ಕೈಗಳಿಂದ ಕೆನ್ನೆಗೆ ಹೊಡೆದಿದ್ದು, ಅಲ್ಲದೇ ಪಿರ್ಯಾದಿದಾರರಿಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 504,341,323,506  ಮತ್ತು 34  ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-05-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080