ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ದಿನಾಂಕ 09/05/2021 ರಂದು  ಮಂಗಳೂರನ  ಕಾವೂರಿನ  ಶ್ರೀ  ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ  ಪಿರ್ಯಾದಿದಾರರಾದ ದೇವೇಂದ್ರನ್‌ ಆರ್‌ (35), ತಂದೆ:  ರಂಗನಾಥನ್‌, ವಾಸ:  ಜನತಾ ಕಾಲೋನಿ, ಪ್ರತಾಪ ನಗರ, ಕೇದೂರು  ಗ್ರಾಮ, ಕುಂದಾಪುರ  ತಾಲೂಕು,  ಉಡುಪಿ ಜಿಲ್ಲೆ ಮದುವೆ ಕಾರ್ಯಕ್ರಮ ಇದ್ದು  ಕುಟುಂಬಸ್ಥರೊಂದಿಗೆ  ಅವರ ಕಾರ್‌ ನಂಬ್ರ KA-20-MC-6795 ನೇದರಲ್ಲಿ ಮನೆಯಿಂದ  ಮಂಗಳೂರಗೆ  ಹೋಗಿ  ಮದುವೆ  ಕಾರ್ಯಕ್ರಮ  ಮುಗಿಸಿ ವಾಪಸ  ಅದೇ ಕಾರನಲ್ಲಿ ರಾಷ್ಟ್ರೀಯ ಹೆದ್ದಾರಿ.66  ರಲ್ಲಿ  ಹೊರಟಿದ್ದು ಕಾರನ್ನು ಮೋಹನರಾಜ್‌ ರವರು  ಚಾಲನೆ ಮಾಡಿಕೊಂಡಿದ್ದು ಅವರ ಪಕ್ಕದಲ್ಲಿ  ಪಿರ್ಯಾದಿದಾರರ  ಅತ್ತೆ ಶ್ರೀಮತಿ  ಕಲಾವತಿ (49) ರವರಿದ್ದು ಹಿಂಬದಿ ಸೀಟಿನಲ್ಲಿ ಪಿರ್ಯಾದಿದಾರರು  ಹಾಗೂ ಅವರ ಹೆಂಡತಿ  ದೇವಕಿ  ರವರು ಕುಳಿತುಕೊಂಡಿದ್ದು ಸಮಯ  ಸಂಜೆ 4:00 ಗಂಟೆಗೆ  ರಾಷ್ಟ್ರೀಯ ಹೆದ್ದಾರಿ  66  ರ  ಉಡುಪಿ-ಕುಂದಾಪುರ  ಏಕಮುಖ ಡಾಮಾರು  ರಸ್ತೆಯ  ಮಾಬುಕಳ  ಸೇತುವೆಯಿಂದ ಸ್ವಲ್ಪ  ಮುಂದಕ್ಕೆ JW ORG  ಹೆಸರಿನ  ಕಟ್ಟಡದ ಎದುರು  ತಲುಪುಷ್ಟರಲ್ಲಿ ಕಾರನ್ನು ಚಾಲಕ  ಮೋಹನರಾಜ್‌ಅತೀ  ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ರಸ್ತೆಯ  ಎಡಬದಿ ಇದ್ದು Crash Barierಗೆ ಹಾಗೂ ಸಿಗ್ನಲ್‌ಕಂಬಕ್ಕೆ ಡಿಕ್ಕಿ  ಹೊಡೆದು  ಸುಮಾರು 25 ಮೀಟರ್‌ ಮುಂದಕ್ಕೆ ಹೋಗಿ ರಸ್ತೆ ಬದಿಯ ಮತ್ತೊಂದು Crash Barierಗೆ ಡಿಕ್ಕಿ ಹೊಡೆದಿದ್ದು ಪರಿಣಾಮ  ಕಾರನಲ್ಲಿದ್ದ  ಪಿರ್ಯಾದಿದಾರರ ಅತ್ತೆ ಶ್ರೀಮತಿ ಕಲಾವತಿ  ರವರಿಗೆ ಎಡಕೈಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಮೂಗಿಗೆ ರಕ್ತಗಾಯವಾಗಿದ್ದು ರಕ್ತ ಸುರಿದಿದ್ದು, ಎಡಗೈ ಬೆರಳುಗಳಿಗೆ ಸಾಮಾನ್ಯ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಹಣೆಗೆ ಸಾಮಾನ್ಯ ಸ್ವರೂಪದ ರಕ್ತ ಗಾಯವಾಗಿರುತ್ತದೆ. ಕಾರ್‌ ಚಾಲಕ ಮೋಹನ ರಾಜ್‌ಹಾಗೂ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ದೇವಕಿ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಗೊಂಡಿದ್ದ ಶ್ರೀಮತಿ ಕಲಾವತಿ (49) ರವರಿಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕೆ.ಎಮ್‌.ಸಿ.ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಕೆ.ಎಸ್.ರವಿ (49), ತಂದೆ: ಶಿವಯ್ಯ, ವಾಸ: 2ನೇ ಮಹಡಿ, ಈಶ್ವರ ಟವರ್, ಕಸಬ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಜೊತೆ ವಾಸವಿದ್ದ ಪಿರ್ಯಾದಿದಾರರ ಪತ್ನಿಯ ತಮ್ಮ ವಿರೂಪಾಕ್ಷ (38) ರವರು ದಿನಾಂಕ 09/05/2021 ರಂದು ಮಧ್ಯಾಹ್ನ 1:30 ಗಂಟೆಗೆ ತಾನು ವಾಸವಿದ್ದ 2 ನೇ ಮಹಡಿಗೆ ಅಮಲು ಪದಾರ್ಥ ಸೇವನೆ ಮಾಡಿ ಬಂದವರು ಸಿಟ್ ಔಟ್‌ನಲ್ಲಿ ನಿಂತು ಕೆಳಗಡೆ ಮುಖ ಮಾಡಿ ವಾಂತಿ ಮಾಡುತ್ತಿದ್ದವರು ವಾಂತಿ ಮಾಡುತ್ತಾ ಆಯ ತಪ್ಪಿ ಮಹಡಿಯಿಂದ ಕೆಳಗಡೆ  ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಮಧ್ಯಾಹ್ನ 2:10 ಗಂಟೆಗೆ ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಜುಗಾರಿ ಪ್ರಕರಣ

 • ಮಣಿಪಾಲ: ದಿನಾಂಕ 09/05/2021 ರಂದು ಸುಧಾಕರ್ ತೋನ್ಸೆ, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ಹಿರೇಬೆಟ್ಟು ಗ್ರಾಮದ, ಬಾಳ್ಕಟ್ಟ ಎಂಬಲ್ಲಿನ ಸಾರ್ವಜನಿಕ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂದು ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳಾದ 1)ಕುತುಬುದ್ದೀನ್, ಪ್ರಾಯ: 45 ವರ್ಷ, ತಂದೆ: ಮೀರಾಸಾಬ್‌, ವಾಸ: ವಾಸುರವರ  ಬಾಡಿಗೆ ಮನೆ, ಎಂ.ಜಿ.ಎಂ ಹತ್ತಿರ, ಉಡುಪಿ, 2) ವಿನಾಯಕ , ಪ್ರಾಯ: 26 ವರ್ಷ, ತಂದೆ: ಶರಣಪ್ಪ, ವಿಳಾಸ: ಕುಕ್ಕುದ ಕಟ್ಟೆ, 80 ಬಡಗುಬೆಟ್ಟು ಗ್ರಾಮ, 3) ಸಂತೋಷ್, ಪ್ರಾಯ: 39 ವರ್ಷ, ತಂದೆ: ಜಾನ್ ಮೆಸ್ಕರೇನಸ್, ವಿಳಾಸ: ಹೆರ್ಗಾ, ರೈಸ್ ಮಿಲ್ ಹತ್ತಿರ, ಹೆರ್ಗಾ, 4) ಪ್ರಾಣೇಶ್, ಪ್ರಾಯ: 28 ವರ್ಷ, ತಂದೆ: ಶ್ರೀಧರ್ ಆಚಾರ್ಯ, ವಿಳಾಸ: ಶ್ರೀ ಕೃಷ್ಣ ನಿಲಯ, ಕೆಳ ಪರ್ಕಳ, ಹೆರ್ಗಾ ,5) ಹಾಲೇಶ್, ಪ್ರಾಯ: 30 ವರ್ಷ, ತಂದೆ: ರಾಮಪ್ಪ, ಹಾಲಿ ವಾಸ: ರಾಜೀವನಗರ, 5ನೇ ಕ್ರಾಸ್, 80 ಬಡಗುಬೆಟ್ಟು , 6) ನಿತೇಶ್, ಪ್ರಾಯ: 30 ವರ್ಷ,ತಂದೆ: ಭಾಸ್ಕರ್ ಶೆಟ್ಟಿ, ವಿಳಾಸ: ಮತ್ತೂರು, ಕಾಜರಗುತ್ತು, ಅಂಜಾರು ಗ್ರಾಮ ಇವರನ್ನು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಆರೋಪಿಗಳಾದ  ಸುಧಾಕರ @ಚಿಂಕು ಶೆಟ್ಟಿ ಮತ್ತು ಇತರ 4-5  ಜನರು  ತಪ್ಪಿಸಿಕೊಂಡು ಪರಾರಿಯಾಗಿರುತ್ತಾರೆ. ಆರೋಪಿಗಳು ಅಂದರ್ ಬಾಹರ್ ಆಟಕ್ಕೆ ಬಳಸಿದ್ದ 21,120/- ರೂಪಾಯಿ ನಗದು ಹಣ, ಚಾಪೆ,  ಇಸ್ಪೀಟ್‌‌ಎಲೆ , 7 ದ್ವಿ- ಚಕ್ರವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಸದರಿ ಆರೋಪಿಗಳು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ  ನಿರ್ಲಕ್ಷ್ಯ ವಹಿಸಿ ಹಣವನ್ನು ಪಣವನ್ನಾಗಿ ಇಟ್ಟು ಇಸ್ಪೀಟ್ ಜುಗಾರಿ ಆಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ : 269 ಐಪಿಸಿ ಮತ್ತು ಕಲಂ: 87 ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ     

 • ಕಾರ್ಕಳ: ದಿನಾಂಕ 08/05/2021 ರಂದು ತೇಜಸ್ವಿ ಟಿ.ಐ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇದ್ದು,  ದಿನಾಂಕ 09/05/2021 ರಂದು ಬೆಳಗಿನ ಜಾವ 02:00 ಗಂಟೆಗೆ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಮಲೆಬೆಟ್ಟು ಎಂಬಲ್ಲಿ ಆರೋಪಿತರುಗಳಾದ  1)ಶೇಖರ ಮೇರ (40), ತಂದೆ: ದಿ: ಕೂಕ್ರ ಮೇರ, ವಾಸ: ಬದನೆಹಿತ್ಲು ಹೌಸ್, ಮಲೆಬೆಟ್ಟು ದುರ್ಗಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು, 2) ನಾಗೇಶ್ ಮೇರ (30), ತಂದೆ:ನಂದಿ ಮೇರ, ವಾಸ: ಬದನೆಹಿತ್ಲು ಹೌಸ್, ಮಲೆಬೆಟ್ಟು ದುರ್ಗಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರುಗಳು ಮಾನ್ಯ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ಅಲ್ಲದೇ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಕೋವಿಡ್ ನಿಯಮ ಉಲ್ಲಂಘಿಸಿದ್ದು ಅಲ್ಲದೇ ಅನಧಿಕ್ರತವಾಗಿ ಆರೋಪಿ 3) ಈಚು ಪಿರೇರಾ ಇವರ ಕೋವಿಯೊಂದಿಗೆ ಶಿಕಾರಿಗೆ ಹೋಗುತ್ತಿದ್ದು ಆರೋಪಿತರುಗಳನ್ನು, ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 269 ಜೊತೆಗೆ 34 ಐಪಿಸಿ ಮತ್ತು ಕಲಂ: 3,25 ಆರ್ಮ್ಸ್ ಆ್ಯಕ್ಟ್ 1959 ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಂಕರನಾರಾಯಣ: ದಿನಾಂಕ  09/05/2021 ರಂದು  13:15 ಗಂಟೆಗೆ ಕುಂದಾಪುರ ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಬಸ್ಸು  ನಿಲ್ದಾಣದ ಎದುರುಗಡೆ  ಕುಂದಾಪುರ- ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ  1. KA 20 EV 5984, 2. KA20EC 7683, 3 .KA 20 EU 8648 , 4. KA 20 C 8049 , 5. KA 20AA 7799 ಮೇಲ್ಕಂಡ ವಾಹನ ಚಾಲಕರು ಸೇರಿ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ  ಕಾರಣದಿಂದ ಕರೋನಾ ಸೊಂಕನ್ನು ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಡಳಿತ   ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ  ಸರಕಾರದ ಆದೇಶವನ್ನು  ಉಲ್ಲಂಘಿಸಿ  ಯಾವುದೇ  ಮುನ್ನೆಚ್ಚರಿಕೆ   ಕ್ರಮ ಕೈಗೊಳ್ಳದೆ, ಸಾಮಾಜಿಕ ಅಂತರ ಪಾಲಿಸದೇ ಸಾರ್ವಜನಿಕ  ರಸ್ತೆಯಲ್ಲಿ  ಗುಂಪುಗೂಡಿ ಕೊಂಡು ನಿಂತುಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021  ಕಲಂ: 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 27/04/2021 ರಿಂದ ದಿನಾಂಕ 12/05/2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 09/05/2021 ರಂದು ಜನಾರ್ಧನ ಜೋಗಿ, ಎಎಸ್ಐ, ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ  ಸರಹದ್ದಿನ ಯಡ್ತರೆ ಗ್ರಾಮದ ಯೆಡ್ತರೆ ಜಂಕ್ಷನ್  ಎಂಬಲ್ಲಿ  ವಾಹನ ತಪಾಸಣಾ ಕರ್ತವ್ಯದಲ್ಲಿರುವಾಗ ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡಿದ್ದ 1) ಹೀರೋ ಹೊಂಡ ಮೋಟಾರ್ ಸೈಕಲ್  ನಂಬ್ರ KA20U684, 2) ಹಿರೋ ಹೊಂಡಾ ಸ್ಪ್ಲೆಂಡರ್  ಮೋಟಾರು ಸೈಕಲ್ ನಂಬ್ರ KA20ET4254, 3) ಹೀರೋ ಹೊಂಡ ಮೋಟಾರ್ ಸೈಕಲ್  ನಂಬ್ರ KA20L4009, 4) ಹೀರೋ ಹೊಂಡ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂಬ್ರ KA20V2338 ಮೇಲ್ಕಂಡ ದ್ವಿ-ಚಕ್ರ ವಾಹನದ ಸವಾರರು ಕೋವಿಡ್-19 ಕೊರೋನ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ:.269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 09/05/2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ರವೀಶ್ ಹೊಳ್ಳ  ಇವರು ಕೋವಿಡ್‌ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ ಕರ್ತವ್ಯದಲ್ಲಿರುವ ವೇಳೆ ಕುಂದಾಪುರ ತಾಲೂಕು  ಕಾವ್ರಾಡಿ ಗ್ರಾಮದ  ದೂಪದಕಟ್ಟೆ ಬಳಿ  KA 20 Q 2986 ನೇ ವಾಹನದ ಚಾಲಕನು ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಪೊಲೀಸ್‌ರನ್ನು ನೋಡಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ವಾಹನ ಚಾಲಕನು  ಕೋವಿಡ್‌ ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಗಂಗೊಳ್ಳಿ: ದಿನಾಂಕ 09/05/2021 ರಂದು ಸಂತೋಷ ಖಾರ್ವಿ, ಹೆಡ್ ಕಾನ್ಸಟೇಬಲ್ ಗಂಗೊಳ್ಳಿ ಪೊಲೀಸ್ ಠಾಣೆ ಇವರು ಗುಜ್ಜಾಡಿ ಗ್ರಾಮದ ಗುಜ್ಜಾಡಿ ಜಂಕ್ಷನ್‌ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ  (1) KA-20-EM-0742 TVS JUPITER ಸವಾರ ರಾಜೇಶ್, (2) KA-20-EF-6032 HEERO HF DELUX ಸವಾರ ವಿಶ್ವನಾಥ, (3) KA-20-EN-9077 HONDA ACTIVA ಸವಾರ ಗಣೇಶ, (4) KA-20-J-5291 HEERO HONDA SPLENDAR ಸವಾರ ಗೋಪಾಲ ನಾಯ್ಕ್ ಎಂಬುವವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
   

ಇತ್ತೀಚಿನ ನವೀಕರಣ​ : 10-05-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080