ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಶ್ರೀಮತಿ ರೇಖಾ ಇವರು ದಿನಾಂಕ 08/05/2021 ರಂದು ತನ್ನ ಗಂಡ ಸಂತೋಷ ರವರೊಂದಿಗೆ ಸಂತೋಷ ರವರ ಬಾಬ್ತು TVS ಜುಪಿಟರ್ ಸ್ಕೂಟಿ ನಂಬ್ರ KA20EV6139 ನೇದರಲ್ಲಿ ಸಹ ಸವಾರಳಾಗಿ ಹಿಂದೆ ಕುಳಿತುಕೊಂಡು  ಸಾಲಿಗ್ರಾಮಕ್ಕೆ ಹೋಗಿದ್ದು, ಸಾಲಿಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಕೋಟ ಮೆಡಿಕಲ್ ಗೆ ಹೊರಟು ಸಾಗುತ್ತಾ ರಾ ಹೆ 66 ರ ರಸ್ತೆಯಲ್ಲಿ ಸಾಗುತ್ತಾ ಕೋಟ ಜಂಕ್ಷನ್ ಬಳಿಯಲ್ಲಿ ಬೆಳಿಗ್ಗೆ ಸುಮಾರು 07.30 ಗಂಟೆಯ ಸಮಯಕ್ಕೆ ತಲುಪುವಾಗ ಪಿರ್ಯಾದಿದಾರರ ಗಂಡ ಸಂತೋಷರವರು  ಸ್ಕೂಟಿಯನ್ನು ನಿಧಾನ ಗೊಳಿಸಿ ಎಡಕ್ಕೆ ಸರ್ವಿಸ್ ರಸ್ತೆಯ ಕಡೆಗೆ ತಿರುಗಿಸುತ್ತಿರುವಾಗ  ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  KA 20EA 9744 ನೇ ಮೋಟಾರ್ ಸೈಕಲ್ ಸವಾರನು ತನ್ನ ಬಾಬ್ತು ಮೊಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂತೋಷರವರು  ಚಲಾಯಿಸಿಕೊಂಡಿದ್ದ ಸ್ಕೂಟಿಯ ಬಲ ಭಾಗಕ್ಕೆ ಢಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಗಂಡ ಸಂತೋಷ ರಸ್ತೆಗೆ ಬಿದ್ದಿದ್ದು, ಸಂತೋಷರ ತಲೆಯು ರಸ್ತೆಯ ಎಡಭಾಗದ ಡಿವೈಡರ್ ಗೆ ಬಡಿದಿರುತ್ತದೆ,ಪಿರ್ಯಾದಿದಾರರಿಗೆ ತಲೆಗೆ ಗುದ್ದಿದ ನೋವು ಉಂಟಾಗಿ ಒಳಗಾಯವಾಗಿದ್ದು, ಮತ್ತು ಸಂತೋಷರವರಿಗೆ ಬಲ ಕೈಗೆ ಒಳ ಗಾಯ ಹಾಗೂ ಎಡ ಕೆನ್ನೆಗೆ ಮತ್ತು ಮುಖದ ಗಲ್ಲಕ್ಕೆ ಗಾಯ ಉಂಟಾಗಿರುತ್ತದೆ.ಗಾಯ ಗೊಂಡವರನ್ನು ಅಲ್ಲಿ ಸೇರಿದ ಜನರು ಹಾಗೂ ಅಪಘಾತವನ್ನುಂಟು ಮಾಡಿದ ಬೈಕ್ ಸವಾರ ಗಣೇಶ ದೇವಾಡಿಗ ಸೇರಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಒಳ ರೋಗಿಯಾಗಿ.ದಾಖಲಿಸಿದ್ದಾಗಿದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಶಿರ್ವ: ಶ್ರೀಮತಿ ವೇದಾವತಿ ಪಿ.ಎಸ್‌.ಐ (ಕ್ರೈಂ) ಶಿರ್ವ ಠಾಣೆ ಇವರು ದಿನಾಂಕ 10.05.2021 ರಂದು ಬೆಳಿಗ್ಗೆ 6:00 ಗಂಟೆಯಿಂದ 12:00  ಗಂಟೆಯವರೆಗೆ ಶಿರ್ವ ಗ್ರಾಮದ ಶಿರ್ವ ಪೇಟೆಯಲ್ಲಿರುವ ಚೆಕ್‌ ಪೋಸ್ಟ್‌ ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅನಗತ್ಯವಾಗಿ  ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1.ಕೆಎ20ವೈ 5091ನೇ ದ್ವಿಚಕ್ರ ವಾಹನದ ಸವಾರ ಮಂಜುನಾಥ (34) ತಂದೆ: ಚಂದಪ್ಪ, ವಾಸ: ನಾಯ್ಕರ್‌, ದುರ್ಗಾ ಪರಮೇಶ್ವರಿದೇವಸ್ಥಾನದ ರೋಡ್‌, ಬೆಳ್ಮಣ್‌, ಕುಂಟಲ್ಪಾಡಿ ಗ್ರಾಮ, ಕಾರ್ಕಳ ತಾಲೂಕು  8971247636  2. ಕೆಎ20ಇವಿ 6282 ನೇ ಹೀರೋ ಇಲೆಕ್ಟ್ರಿಕ್‌ ಸ್ಕೂಟರ್‌ ಸವಾರ ಸ್ಯಾಮ್‌ಸನ್‌ ಕೆವಿನ್‌ ಮಿನೇಜಸ್‌ (22) ತಂದೆ: ಐಸಾಕ್‌ ಮಿನೇಜಸ್‌, ವಾಸ: 4-125(4), ದಿವೈನ್‌ ಗ್ರೆಸ್‌, ನ್ಯೂ ಹೌಸ್‌,  ಪಡುಬೆಳ್ಳೆ ಅಂಚೆ, ಬೆಳ್ಳೆ ಗ್ರಾಮ, ಉಡುಪಿ 3. ಕೆಎ20ಇಕ್ಯೂ 6110 ಕೆ.ಟಿ.ಎಂ. ದ್ವಿಚಕ್ರ ವಾಹನ ಸವಾರ ಜೇಸನ್‌ ವಿಕ್ಕಿ ಡಿ ಮೆಲ್ಲೋ (27) ತಂದೆ: ಜೋನ್‌ ಡಿ ಮೆಲ್ಲೋ, ವಾಸ: ಜೊಸ್ವಿಟಾ ವಿಲ್ಲಾ, ಮನೆ ನಂ. 3-32 ಕಟ್ಟಿಂಗೇರಿ  ಗ್ರಾಮ, ಮೂಡುಬೆಳ್ಳೆ  ಅಂಚೆ  ಎಂದು ತಿಳಿಸಿರುವುದಾಗಿದೆ. ಮೇಲಿನ ಆರೋಪಿಗಳು ಸಮಂಜಸ ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುತ್ತಿರುವುದಾಗಿದೆ.  ಸದ್ರಿ ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿದ್ದು ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 10/05/2021 ಶ್ರೀ ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ ಇವರು ಠಾಣಾ ಸಿಬ್ಬಂದಿಯವ ರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10-05-2021  ರಿಂದ 24-05-2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಬೆಳಿಗ್ಗೆ 07:00 ಗಂಟೆಯಿಂದ 09:00  ಗಂಟೆ ಮಧ್ಯೆ  ಅಮಾಸೆಬೈಲು ಗ್ರಾಮದ ಅಮಾಸೆಬೈಲು ಪೇಟೆಯ ಸರ್ಕಲ್ ಬಳಿ 1} ಆದರ್ಶ ಪ್ರಾಯ 18 ವರ್ಷ ತಂದೆ: ಗೋವಿಂದ ಕೆರೆಮನೆ ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು 2}  ರಾಮ ಪ್ರಾಯ 29 ವರ್ಷ ತಂದೆ: ನಾರಾಯಣ ಕೆರೆಮನೆ ರಟ್ಟಾಡಿ ಗ್ರಾಮ ಕುಂದಾಪುರ  ತಾಲೂಕು 3} ಫಿರೋಜ್ ಪ್ರಾಯ 41 ವರ್ಷ ತಂದೆ:ಅಹಮದ್ ಕುಟ್ಟಿ ಕುಟ್ಟಿಯನ್ ವೀಟಲ್ ಅರಸಮ್ಮಕಾನು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರುಗಳು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ,  ಸದ್ರಿ  ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ: 10/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ  ಸಂಚರಿಸುವವರ ವಿರುದ್ದ  ಕ್ರಮ ಕೈಗೊಳ್ಳುವ ಬಗ್ಗೆ  ಠಾಣಾ ಪಿ.ಎಸ್.ಐ ರಾಜಶೇಖರ್ ವಂದಲಿ ಮತ್ತು ಸಿಬ್ಬಂದಿ ಮಣಿಪಾಲ ಸಿಂಡಿಕೇಟ್ ಸರ್ಕಲ್‌ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 9:00 ಗಂಟೆಯಿಂದ 9:30 ಗಂಟೆಯ ಮಧ್ಯಾವಧಿಯಲ್ಲಿ ಆಪಾದಿತರಾದ ಅನಿಲ್ ಮೂಲ್ಯ, ಪ್ರಾಯ: 50 ವರ್ಷ, ತಂದೆ: ಚೋನ್ಲ ಮೂಲ್ಯ, ವಿಳಾಸ:ಮನೆ ನಂಬರ್: 7-144, ಸಗ್ರಿ , ಕುಂಜಿಬೆಟ್ಟು, ಉಡುಪಿ,ಎಂಬಾತನು KA 20MB 4551 ನೇ ನೊಂದಣಿ ನಂಬರ್‌ ನ  ಬಿಳಿ ಬಣ್ಣದ ಕಾರ್‌ನಲ್ಲಿ  ಮತ್ತು  ರಿಶಬ್ ಪೈ, ಪ್ರಾಯ: 26 ವರ್ಷ,ತಂದೆ: ರಘುವೀರ್ ಪೈ, ವಿಳಾಸ: 16-109 ಬಿ, ಶ್ರೀ ಮಹಾಲಸ, 6 ನೇ ಕ್ರಾಸ್, ಎ.ಎಲ್.ಎನ್ ಲೇ ಔಟ್, ಮಣಿಪಾಲ ಎಂಬಾತನು KA 20 MC 4671 ನೇ ನೋಂದಣಿ ನಂಬರ್‌‌ನ  ಬಿಳಿಬಣ್ಣದ TATA TIAGO  ಕಾರ್‌‌ನಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು ,ಸದರಿ ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ  ನಿರ್ಲಕ್ಷ್ಯ ವಹಿಸಿ  ತಿರುಗಾಡುತ್ತಿದ್ದರಿಂದ  ಸದರಿ ಆರೋಪಿಗಳನ್ನು  ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ  ಕಾರುಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ: 10/05/2021 ರಂದು ಕರೋನಾ ವೈರಸ್ ಕಾಯಿಲೆ ಸೊಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಮಣಿಪಾಲ ಠಾಣಾ ಸಿಬ್ಬಂದಿ ವಿಶ್ಜಜಿತ್ ಮತ್ತು ಸಿಬ್ಬಂದಿ ಯವರು ಮಣಿಪಾಲ ಅಲೆವೂರು ರಸ್ತೆಯ ಪೋಸ್ಟ್ ಆಫೀಸ್ ಜಂಕ್ಷನ್ ಬಳಿಯಲ್ಲಿ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸುಮಾರು 10:00 ಗಂಟೆಯಿಂದ 10:15  ಗಂಟೆಯ ಮಧ್ಯಾವಧಿಯಲ್ಲಿ ಆರೋಪಿತರಾದ 1) ಕೃಷ್ಣ ಕುಮಾರ್ ಪ್ರಾಯ :33 ವರ್ಷ, ತಂದೆ:ಹನುಮಂತ ವಾಸ: ವಿಷ್ಣುಮೂರ್ತಿ ನಗರ, ಬುಡ್ನಾರು, ಕುಂಜಿಬೆಟ್ಟು, ಉಡುಪಿ ಎಂಬಾತನು KA20V4936 ನೇ ದ್ವಿ ಚಕ್ರ ವಾಹನ, 2) ಮೊಹಮ್ಮದ್ ಜಾಕೀರ್ ಪ್ರಾಯ: 33 ವರ್ಷ, ತಂದೆ: ಮೊಹಮ್ಮದ್ ಕಲಾಂ ವಾಸ: ಎಲ್.ಐ.ಜಿ ಜಿ-25, ಹುಡ್ಕೂ ಕಾಲನಿ, ಮಣಿಪಾಲ, ಉಡುಪಿ ತಾಲೂಕು ಎಂಬಾತನು KA20EQ8065 ನೇ ದ್ವಿಚಕ್ರ ವಾಹನ, 3) ಆಜಾದ್ ಅಹಮದ್ ಪ್ರಾಯ:26 ವರ್ಷ, ತಂದೆ:ನಯಿಮ್ ಅಹಮ್ಮದ್ ವಾಸ: ಎಂ.ಜಿ.ಎಂ ಕಾಲೇಜು ಬಳಿ, ಉಡುಪಿ ಖಾಯಂ ವಿಳಾಸ: ಗುಲಾರಸೊಹಾಸ, ಮುಂಗ್ರಾಬಾದ್ ಶಹಾಪುರ್,ಜಾನ್ ಪುರ್, ಉತ್ತರಪ್ರದೇಶ ಎಂಬಾತನು KA20W7719 ನೇ ದ್ವಿಚಕ್ರ ವಾಹನ 4) ಸಾಮ್ರಾಟ್ ಕುಮಾರ್ ಪ್ರಾಯ: 20 ವರ್ಷ, ತಂದೆ: ಬಹಾದ್ದೂರ್ ವಾಸ: ಪಿ.ಪಿ.ಸಿ ಕಾಲೇಜು ಬಳಿ, ಉಡುಪಿ ತಾಲೂಕು. ಖಾಯಂ ವಿಳಾಸ : ಭಜಂಗ್, ನೇಪಾಳ ಎಂಬಾತನು KA20EF8827 ನೇ ದ್ವಿಚಕ್ರ ವಾಹನದಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದು, ಅವರಲ್ಲಿ ಲಾಕ್‌‌ಡೌನ್‌ ಸಮಯದಲ್ಲಿ ಸಂಚರಿಸುತ್ತಿದ್ದ  ಬಗ್ಗೆ ವಿಚಾರ ಮಾಡಿದಾಗ ಸಮರ್ಪಕವಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಆರೋಪಿತರು ಕೋವಿಡ್ ಸೋಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಬಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿರುವ ಬಗ್ಗೆ  ನಿರ್ಲಕ್ಷ್ಯ ವಹಿಸಿ  ತಿರುಗಾಡುತ್ತಿದ್ದರಿಂದ  ಸದರಿ ಆರೋಪಿಗಳನ್ನು  ಹಾಗೂ ಆರೋಪಿಗಳು ಸವಾರಿ ಮಾಡುತ್ತಿದ್ದ  ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಆರೋಪಿತ ಕೆಎ.04ಇಆರ್ , 2494, ಕೆಎ.20 ಇಎಸ್.5676 , ಕೆಎ.20.ಇಎಸ್.1106. ಕೆಎ.20 ಇವಿ 4006   ನೇ ನಂಬ್ರದ  ಮೋಟಾರ್  ಸೈಕಲ್  ಸವಾರರು  ದಿನಾಂಕ  10.05.2021 ರಂದು  08:45   ಘಂಟೆಗೆ  ಕುಂದಾಪುರ ತಾಲೂಕಿನ  ಸಿದ್ದಾಪುರ  ಗ್ರಾಮದ   ಸಿದ್ದಾಪುರ   ಬಸ್ಸು  ನಿಲ್ದಾಣದ ಎದುರುಗಡೆ  ಕುಂದಾಪುರ-ಶಿವಮೊಗ್ಗ ರಾಜ್ಯ ರಸ್ತೆಯಲ್ಲಿ  ಆರೋಪಿಗಳು ಸೇರಿ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ  ಕಾರಣದಿಂದ ಕರೋನಾ ಸೊಂಕನ್ನು ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಡಳಿತ ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ  ಸರಕಾರದ ಆದೇಶವನ್ನು ಉಲ್ಲಂಘಿಸಿ  ಯಾವುದೇ ಮುನ್ನೆಚ್ಚರಿಕೆ   ಕ್ರಮ ಕೈಗೊಳ್ಳದೆ, ಸಾಮಾಜಿಕ ಅಂತರ ಪಾಲಿಸದೇ ಸಾರ್ವಜನಿಕ  ರಸ್ತೆಯಲ್ಲಿ ಮೋಟಾರ್  ಸೈಕಲ್  ನಿಲ್ಲಿಸಿಕೊಂಡು ಗುಂಪು ಗೂಡಿ ಕೊಂಡು ನಿಂತುಕೊಂಡಿ ರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಅಕ್ರ 50/2021  ಕಲಂ: 269, ಜೊತೆಗೆ  34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಅಬ್ದುಲ್ ಖಾದರ್ ಪಿ ಎಸ್ ಐ ಉಡುಪಿ ಟ್ರಾಫಿಕ್ ಪೊಲೀಸ್ ಠಾಣೆ ಉಡುಪಿ ಇವರು ದಿನಾಂಕ: 10/05/2021 ರಂದು ಬೆಳ್ಳಿಗ್ಗೆ 09:00 ಗಂಟೆಗೆ ಸಿಬ್ಬಂದಿಯವರೊಂದಿಗೆ ಲಾಕ್ ಡೌನ್ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ಶಿರಿಬೀಡು ಜಂಕ್ಷನ್ ಬಳಿ ಆರೋಪಿ ಕೆಎ-20 ಇಪಿ-4628 ನೇ ಸ್ಕೂಟರನಲ್ಲಿ ಮುಖಕ್ಕೆ ಮಾಸ್ಕ್ ಧರಿಸದೇ ವಾಹನ ಚಲಾಯಿಸಿಕೊಂಡು ಬಂದಿದ್ದು, ಸದ್ರಿ ಆರೋಪಿಯನ್ನು ನಿಲ್ಲಿಸಿ ತಪಾಸಣೆ ಮಾಡಿ ಸ್ಕೂಟರನಲ್ಲಿ ತಿರುಗಾಡುವ ಬಗ್ಗೆ ಪ್ರಶ್ನೆ ಮಾಡಿದಾಗ ಆತನ್ನು ಸಮರ್ಪಕ ಉತ್ತರ ನೀಡಿರುವುದಿಲ್ಲ. ಪ್ರಸ್ತುತ ಕೋವಿಡ್ -19 ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಅದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ದಿನಾಂಕ;10/05/21021 ರಿಂದ ದಿನಾಂಕ: 24/05/2021 ರವರೆಗೆ ವಿಧಿಸಿದ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಸಾಂಕ್ರಾಮಿಕ ಕೊರೊನಾ ಕಾಯಿಲೆ ತಡೆಗಟ್ಟಲು ಸದ್ರಿ ವ್ಯಕ್ತಿಯು ನಿರ್ಲಕ್ಷ್ಯ ವಹಿಸಿದ್ದು, ಸದ್ರಿ ಸ್ಕೂಟರ ಸವಾರ ಜೋಯ್ ಹಾಗೂ ಕೆಎ-20 ಇಪಿ-4628 ವಾಹನದ ಮೇಲೆ  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಅಕ್ರ 80/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದುಆ ಬಗ್ಗೆ ಮೇಲಾಧಿಕಾರಿಯವರ ಆದೇಶದಂತೆ ಪ್ರಕಾಶ ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು ಇವರು  ದಿನಾಂಕ 10.05.2021  ರಂದು  ಸಿಬ್ಬಂದಿಯವರೊಂದಿಗೆ  ರೌಂಡ್ಸ್‌‌ ನಲ್ಲಿದ್ದಾಗ ಸಮಯ 11.00 ಗಂಟೆಯಿಂದ 13.00 ಗಂಟೆಯವರೆಗೆ ಉಡುಪಿ ತಾಲ್ಲೂಕಿನ ಉದ್ಯಾವರ ಗ್ರಾಮದ ಸಂಪಿಗೆನಗರ ಜಂಕ್ಷನ್‌ನಲ್ಲಿ  ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ  ವಾಹನಗಳಲ್ಲಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1. ಹೋಂಡಾ ಡಿಯೋ ದ್ವಿಚಕ್ರ ವಾಹನ   ನಂಬ್ರ ಕೆ. ಎ. 20 ಇ. ವಿ. 5487 ನೇದರ ಸವಾರ ಹನೀಫ್   2) ಮಾರುತಿ ಅಲ್ಟೋ ಕಾರು ನಂಬ್ರ: ಕೆ.ಎ. 03 ಎನ್. ಬಿ. 3136 ನೇದರ ಚಾಲಕ ಶಾನ್‌ವಾಜ್ ಎಂದು ತಿಳಿಸಿದ್ದು, ಸದ್ರಿಯವರಲ್ಲಿ ವಿಚಾರಿಸಿಲಾಗಿ ಯಾವುದೇ ತುರ್ತು ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸುತ್ತಿರುವುದಾಗಿ ತಿಳಿದು ಬಂದಿರುವುದಾಗಿದೆ. ಸದ್ರಿ ಆರೋಪಿಗಳು   ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಪು ಅಪರಾಧ ಕ್ರಮಾಂಕ 68/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಹಿರಿಯಡ್ಕ:  ದಿನಾಂಕ 10/05/2021 ರಂದು ಮಧ್ಯಾಹ್ನ ಸುಮಾರು 1:00 ಗಂಟೆಯ ವೇಳೆಗೆ ಪಿರ್ಯಾದಿ ಜಗದೀಶ ಪೂಜಾರಿ ಇವರು ರಿಪೇರಿಗೆ ತಂದಿರಿಸಿದ ಸುಮಾರು 20 ಎಲ್‌ಸಿಡಿ ಟಿವಿಯನ್ನು ತನ್ನ ಮನೆಯ ಬಳಿಯ ದಾಸ್ತಾನು ಕೊಠಡಿಯಲ್ಲಿ ಇರಿಸಿದ್ದು ಅಲ್ಲದೆ ದಸ್ತಾನು ಕೊಠಡಿಯ ಇನ್ನೊಂದು ಪಾರ್ಶ್ವದಲ್ಲಿ ಕಟ್ಟಿಗೆಯನ್ನು ಶೇಖರಿಸದ್ದು, ಪಿರ್ಯದುದಾರರ ಮೇಲಿನ ದ್ವೇಷದಿಂದ ಅವರ ತಂದೆ ಆಪಾದಿತ ಭಾಸ್ಕರ ಪೂಜಾರಿ, ವಾಸ: ಇಂದಿರ ನಿಲಯ ದರ್ಖಾಸು ಕುಕ್ಕಿಕಟ್ಟೆ , ಬೆಳ್ಳಂಪಳ್ಳಿ ಗ್ರಾಮ ಉಡುಪಿ, ಉದ್ದೇಶ ಪೂರ್ವಕವಾಗಿ  ತಾನು ವ್ಯಾಪಾರ ಮಾಡುವ ಅಂಗಡಿಯಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಸೀಮೆ ಎಣ್ಣೆಯನ್ನು ತಂದು ಬೆಂಕಿ ಹಚ್ಚಿರುವುದಾಗಿದೆ. ಘಟನೆಯಿಂದ ಸುಮಾರು 20 ಎಲ್‌ಸಿಡಿ ಟಿವಿ ಕರಕಲಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 28/2021 ಕಲಂ: 436 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

     

 ಮನುಷ್ಯ ಕಾಣೆ ಪ್ರಕರಣ

  • ಶಿರ್ವ: ವಿಠಲ ಪೂಜಾರಿ ಪ್ರಾಯ 63 ವರ್ಷ ರವರು ದಿನಾಂಕ 08/05/2021 ರಂದು ಬೆಳಿಗ್ಗೆ 10:00 ಗಂಟೆಗೆ ಕುತ್ಯಾರು ಗ್ರಾಮದ ಕೆಳಗಿನ ಮನೆಯಿಂದ ಹೋದವರು ಈವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಅಕ್ರ 24/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ 

  • ಅಮಾಸೆಬೈಲು: ಸತೀಶ್ ಕೊಠಾರಿ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/05/2021 ರಂದು ಬೆಳಿಗ್ಗೆ 07:30 ಗಂಟೆಗೆ ಮನೆಯಿಂದ ಕೆಲ ದೇವಸ್ಥಾನದ ಹಂಚಿಗೆ ಪೈಂಟಿಂಗ್ ಕೆಲಸಕ್ಕೆಂದು ಮನೆಯಿಂದ ಹೋಗಿದ್ದು, ಕೆಲ ಕನಕಮ್ಮ ಶೆಡ್ತಿಯವರ ಜಾಗದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 07:30 ಗಂಟೆಯಿಂದ 10:30 ಗಂಟೆಯ ನಡುವೆ ಪಕ್ಕದಲ್ಲೆ ಇರುವ ಕೆರೆಗೆ ಕಾಲು ಜಾರಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ರಮೇಶ್ ಕುಲಾಲ್ (48 ವರ್ಷ) ಇವರು ದಿನಾಂಕ:  09/05/2021 ರಂದು ಸಂಜೆ 6-00 ಗಂಟೆಯಿಂದ ಮರುದಿನ ದಿನಾಂಕ: 10/05/2021 ರಂದು ಬೆಳಿಗ್ಗೆ 06-00 ಗಂಟೆಯ ಮದ್ಯಾವಧಿಯಲ್ಲಿ ಶಿವಪುರ ಗ್ರಾಮದ ಕುಬ್ರಿ ಎಂಬಲ್ಲಿರುವ ಹೊಳೆಯನ್ನು ದಾಟುತ್ತಿರುವಾಗ ಅಕಸ್ಮಿಕವಾಗಿ ಅವರ ಕಾಲು ಜಾರಿದ ಪರಿಣಾಮ ಅವರು ಹೊಳೆಯಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಉಡುಪಿ ತಾಲೂಕು  76 ನೇ ಬಡಗುಬೆಟ್ಟು ಗ್ರಾಮದ ಬೈಲೂರು ಎಂಬಲ್ಲಿ ಯತಿರಾಜ್ (ಪ್ರಾಯ 42 ವರ್ಷ) ಎಂಬುವರು ಮದ್ಯ ವ್ಯಸನಿಯಾಗಿದ್ದು, ಸುಮಾರು 01  ವರ್ಷದಿಂದ ಲಿವರ್ ಸಂಬಂದಿ ಖಾಯಿಲೆಯಿಂದ  ಬಳಲುತ್ತಿದ್ದು, ಈ ಬಗ್ಗೆ  ಮಿತ್ರ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆ ಪಡೆದರೂ  ಗುಣಮುಖನಾಗದ  ಚಿಂತೆಯಿಂದ ಜೀವನದಲ್ಲಿ  ಜಿಗುಪ್ಸೆ  ಹೊಂದಿದ್ದು, ದಿನಾಂಕ: 10/05/2021 ರಂದು  ಬೆಳಿಗ್ಗೆ  8:30  ಗಂಟೆಯಿಂದ  11:45  ಗಂಟೆಯ  ಮಧ್ಯಾವಧಿಯಲ್ಲಿ ನೇಣು  ಬಿಗಿದುಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 10-05-2021 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080