ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸಾವಿತ್ರಿ (35), ಗಂಡ: ದಿ. ಸಂತೋಷ ಭೀರನ್ನವರ್,  ವಾಸ: ಗೋನಾಳ, ಮಂಗಳೂರು ಗ್ರಾಮ ಬಾದಾಮಿ ತಾಲೂಕು ಇವರ ಜೊತೆ ವಾಸವಾಗಿರುವ ಅವರ ಅತ್ತೆಯ ಮಗಳ ಗಂಡ ಹನುಮಂತಪ್ಪ ಚೌಡಪ್ಪನವರ್ (45) ಎಂಬುವವರು ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ.  ಪಿರ್ಯಾದಿದಾರರು ಅವರ ಮಗಳು ಹಾಗೂ ಹನುಮಂತಪ್ಪ  ಚೌಡಪ್ಪನವರ್‌ ರೋಂದಿಗೆ ಹತ್ತಿರದ ಪ್ರಭಾಶಂಕರರವರ ಹಾಡಿಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿ ಹನುಮಂತಪ್ಪ  ಚೌಡಪ್ಪನವರಿಗೆ ಸುಸ್ತಾಗುತ್ತಿರುವುದಾಗಿ ಹೇಳಿದ್ದು, ಕೂಡಲೇ ಮನೆಗೆ ವಾಪಸ್ಸು ಕರೆದುಕೊಂಡು ಬಂದು ತಲೆ ಚಕ್ಕರ್‌ ಬಂದಂತಾಗಿರುತ್ತದೆ ನೀರು ಕೊಡಿ ಎಂದು ತಿಳಿಸಿದ್ದು, ಪಿರ್ಯಾದಿದಾರರು ಹಾಗೂ ಅವರ ಮನೆ ಪಕ್ಕದ ಬೀರಪ್ಪ ಸೇರಿ ಹನುಮಂತಪ್ಪ  ಚೌಡಪ್ಪನವರ ಹತ್ತಿರ ಹೋದಾಗ ಅವರು ವಾಂತಿ ಮಾಡಿಕೊಳ್ಳುತ್ತಿದ್ದರು. ಕೂಡಲೇ ಅವರನ್ನುಒಂದು ವಾಹನದಲ್ಲಿ ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷೀಸಿ ಹನುಮಂತಪ್ಪ ಚೌಡನ್ನನವರು ಈಗಾಗಲೇ ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 28/2023 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ಕೃಷ್ಣ (53),  ತಂದೆ:ಅಪ್ಪು ಹಾಂಡ,  ವಾಸ: ನಿಲ್ಸಕಲ್ ಕೊಟ್ಟಕ್ಕಿ  ರಟ್ಟಾಡಿ  ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ತಮ್ಮ ಗಿರೀಶ್ ಕುಲಾಲ್(50) ಎಂಬುವವರು  ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಟ್ರಾಕ್ಟರ್ ಇಟ್ಟುಕೊಂಡು ಜೀವನ ನಡೆಸಿಕೊಂಡಿರುತ್ತಾರೆ. ದಿನಾಂಕ 08/04/2023 ರಂದು ಬೆಳಿಗ್ಗೆ 10:00 ಗಂಟೆಯ ಸಮಯಕ್ಕೆ ಗಿರೀಶ್ ರವರು ತೋಟಕ್ಕೆ ನೀರು ಬಿಡುವುದಾಗಿ ತಿಳಿಸಿ ತೋಟದ ಕಡೆಗೆ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಗಿರೀಶ ರವರ ಪತ್ನಿ ಸುಮಂಗಲ ದಿನಾಂಕ 09/04/2023 ರಂದು 15:30 ಗಂಟೆಗೆ ಠಾಣೆಗೆ ಬಂದು ಕಾಣೆಯಾದ ಬಗ್ಗೆ  ದೂರು ನೀಡಿ  ನಂತರ ವಾಪಾಸು ಮನೆಗೆ ಹೋಗಿ ಮನೆಯವರೊಂದಿಗೆ  ತೋಟದಲ್ಲಿ ಹುಡುಕಾಡುತ್ತಿರುವಾಗ ಸಂಜೆ 05:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ತಾಯಿಯ ಜಾಗದಲ್ಲಿ ರುವ ತೋಟದ ಬಳಿಯ ಕೆರೆಯಲ್ಲಿ ಗಿರೀಶ ರವರ ಮೃತ ದೇಹ ದೊರೆತಿರುತ್ತದೆ. ಗಿರೀಶ ರವರು ತೋಟಕ್ಕೆ ನೀರು ಬಿಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ  ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಅರ್ ಕ್ರಮಾಂಕ 03/2023‌ 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕಾಪು: ದಿನಾಂಕ 09/04/2023 ರಂದು ಭರತೇಶ್ , ಪೊಲೀಸ್‌ ಉಪನಿರೀಕ್ಷಕರು (ತನಿಖೆ),  ಕಾಪು ಪೊಲೀಸ್ ಠಾಣೆ ಇವರು  ಕಟಪಾಡಿಯಲ್ಲಿ ರೌಂಡ್ಸ್‌ ಕತ೯ವ್ಯದಲ್ಲಿರುವಾಗ ಕಾಪು ತಾಲೂಕು, ಏಣಗುಡ್ಡೆ ಗ್ರಾಮದ ಕಟಪಾಡಿಯ  ನಯನ ಬೇಕರಿಯ ಪಕ್ಕದಲ್ಲಿನ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿದಾ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು  ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಅಮೀರ್‌ (26), ತಂದೆ: ಅಬ್ದುಲ್‌ ಖಾದರ್‌, ವಾಸ: ಅಂಬಾಗಿಲು, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂದು ತಿಳಿಸಿದ್ದು,  ಆತನು ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1, ಮಟ್ಕಾ ಚೀಟಿ-01, ನಗದು ರೂಪಾಯಿ 1340/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2023 ಕಲಂ: 78(I)(III)  ಕೆ. ಪಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಪ್ರಗತಿ (33),  ಗಂಡ: ಶಿವಪ್ರಸಾದ, ವಾಸ: ಕೆಳಬೆಟ್ಟು ಹಲ್ತೂರು ಉಳ್ತೂರು  ಗ್ರಾಮ  ಕುಂದಾಪುರ ತಾಲೂಕು  ಇವರ ಗಂಡ ಶಿವಪ್ರಸಾದ್ (41) ಇವರು ದಿನಾಂಕ 21/03/2023 ರಂದು ಬೆಳ್ಳಿಗೆ 9:30 ಗಂಟೆಗೆ ಪಿರ್ಯಾದಿದಾರನ್ನು ಕೆಲಸಕ್ಕೆ ಬಿಟ್ಟು ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ನೆರೆಕೆರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಎಲ್ಲಿಯೂ ಪತ್ತೆಯಾಗದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023 ಕಲಂ: ಮನುಷ್ಯ ಕಾಣೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹೆಬ್ರಿ : ದಿನಾಂಕ 09/04/2023 ರಂದು ನಿರಂಜನ.ಕೆ.ಹೆಗಡೆ, ಪೊಲೀಸ್‌ ಉಪನಿರೀಕ್ಷಕರು(ತನಿಖೆ), ಹೆಬ್ರಿ ಪೊಲೀಸ್‌ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಬಂದ ಮಾಹಿತಿಯಂತೆ ಮುದ್ರಾಡಿ ಗ್ರಾಮದ ನೆಲ್ಲಿಕಟ್ಟೆ ಬಸ್ಸು ನಿಲ್ಧಾಣದ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ ನೈಲಾನ್ ಕೈ ಚೀಲದಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ಸ್ವಾದೀನದಲ್ಲಿ ಇಟ್ಟುಕೊಂಡು ಬಂದ ಗಿರಾಕಿಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಉದಯ ಭಂಡಾರಿ ((55 , ತಂದೆ: ದಿ. ಶೀನ ಭಂಡಾರಿ, ವಾಸ: ಮಾತೃಕೃಪಾ ನಿಲಯ, ನೆಲ್ಲಿಕಟ್ಟೆ ಮುದ್ರಾಡಿ ಗ್ರಾಮ, ಹೆಬ್ರಿ ತಾಲೂಕು ಇವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಅವರ ವಶದಲ್ಲಿದ್ದ 1965/- ರೂಪಾಯಿ ಮೌಲ್ಯದ  ವಿವಿಧ ರೀತಿಯ 1) 180 ML ನ Mysore Lancer Whisky ಎಂದು ಬರೆದಿರುವ ಮದ್ಯ ತುಂಬಿರುವ ಪ್ಯಾಕೆಟ್ ಒಟ್ಟು 20, ಮತ್ತು 2) 180 ML ನ DK DOUBLE KICK FINE WHISKY ಎಂದು ಬರೆದಿರುವ ಮದ್ಯ ತುಂಬಿರುವ ಪ್ಯಾಕೆಟ್ ಒಟ್ಟು-10  ಒಟ್ಟು 5ಲೀ 400 ಎಂ.ಎಲ್‌ ಹಾಗೂ ಮದ್ಯ ಮಾರಾಟದಿಂದ ಸಂಗ್ರಹವಾದ ನಗದು 610/- ರೂಪಾಯಿ ಮತ್ತು ನೈಲಾನ್ ಕೈ ಚೀಲ-1  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023 ಕಲಂ: 32, 34 KE ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು:  ದಿನಾಂಕ  09/04/2023 ರಂದು ಸುಮ.ಬಿ , ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು  ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಕಾಪು ತಾಲೂಕು, ಮೂಡಬೆಟ್ಟು ಗ್ರಾಮದ, ಕಟಪಾಡಿ ವೈನ್‌ಗೇಟ್‌ ಹಿಂಬದಿಯ ಸಾರ್ವಜನಿಕ ಗೂಡಂಗಡಿಯ ಎದುರಿನಲ್ಲಿ ಓರ್ವ ವ್ಯಕ್ತಿ ಮಧ್ಯಸೇವನೆ ಮಾಡುತ್ತಾ ಇತರರಿಗೂ ಮಧ್ಯ ಸೇವಿಸುವಂತೆ ಪ್ರಲೋಭನೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ  ನೋಡಿದಾಗ ಓವ೯ ವ್ಯಕ್ತಿಯು ಸಾವ೯ಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದು,  ಇತರರಿಗೂ ಮಧ್ಯ ಸೇವನೆ ಮಾಡಲು ಪ್ರಲೋಭನೆ ಮಾಡುತ್ತಿದ್ದು ಅಲ್ಲಿಗೆ ದಾಳಿ ನೆಡೆಸಿ ಆತನನ್ನು ವಶಕ್ಕೆ ಪಡೆದು ಹೆಸರು, ವಿಳಾಸ ವಿಚಾರಿಸಲಾಗಿ 1) ಸುರೇಶ ಪೂಜಾರಿ ಪ್ರಾಯ 58 ವರ್ಷ, ತಂದೆ: ದಿ.ಪಾರು ಪೂಜಾರಿ, ವಾಸ: ಕುಪ್ಪ ಹೌಸ್‌ಎರ್ಮಾಳ ಪೊಸ್ಟ ಕಾಪು ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ್ದು ಆತನ ಬಳಿ ಮದ್ಯ ತುಂಬಿದ ತಲಾ 90 ಎಮ್.ಎಲ್ ನ dk (double kick fine whisky)  ಮಧ್ಯದ ಟೆಟ್ರಾ ಪ್ಯಾಕೇಟ್-4, 180 ಎಮ್.ಎಲ್ ನ (bangalore whisky)  ಮಧ್ಯದ ಟೆಟ್ರಾ ಪ್ಯಾಕೇಟ್-2, 90 ಎಮ್.ಎಲ್ ನ prestige  ಖಾಲಿ ಟೆಟ್ರಾ ಪ್ಯಾಕೇಟ್-1ಮದ್ಯ ಕುಡಿಯಲು ಬಳಸಿದ ಖಾಲಿ ಪ್ಲಾಸ್ಟಿಕ್ ಗ್ಲಾಸ್ -4  ಅಧ೯ ಲೀಟರ್‌ನ ನೀರಿನ ಬಾಟಲಿಗಳು 2, ಅಧ೯ ಖಾಲಿಯಾಗಿರುವ ಅರ್ಧ ಲೀಟರ್‌ ನ  ನೀರಿನ  ಬಾಟಲಿ-1  ಇವುಗಳ  ಮೌಲ್ಯ 500/- ರೂಪಾಯಿ ಆಗಿದ್ದು ಮತ್ತು ಆರೋಪಿತನ ವಶದಲ್ಲಿದ್ದ ಮಧ್ಯ ಮಾರಾಟ ಮಾಡಿ ಸಂಗ್ರಹಿಸಿದ 1450/-ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023 ಕಲಂ: 15(A), 36(ಹೆಚ್) ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 09/04/2023 ರಂದು ಪುರುಷೋತ್ತಮ ಎ, ಪೊಲೀಸ್ ಉಪನಿರೀಕ್ಷಕರು(ಕಾ.ಸು & ಸಂಚಾರ), ಪಡುಬಿದ್ರಿ ಪೊಲೀಸ್ ಠಾಣೆ ಇವರು ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿರುವಾಗ ಕಾರ್ಕಳ ತಾಲೂಕು, ಇನ್ನಾ ಗ್ರಾಮದ, ಕಾಂಜರಕಟ್ಟೆ,  ಗ್ರಾಮ ಪಂಚಾಯತ್ ಗೆ  ಸಂಬಂಧಿಸಿದ ಹಳೆ ಮಾರುಕಟ್ಟೆ ಕಟ್ಟಡದ ಬಳಿ ತೆಂಗಿನ ಗರಿಯ ಮಾಡಿನ ಶೆಡ್‌ನ ಒಳಗಡೆ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಲ್ಲಿ ಇದ್ದ ವ್ಯಕ್ತಿಗಳಿಗೆ ಮದ್ಯವನ್ನು ತಂದು ನೀಡುತ್ತಿರುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಪ್ರಕಾಶ್ (65), ತಂದೆ: ದಿ. ಚಲ್ಲಪ್ಪ, ಮನೆ ನಂಬ್ರ 4-209, ಕಾಂಜರಕಟ್ಟೆ, ಇನ್ನಾ ಗ್ರಾಮ ಕಾರ್ಕಳ ತಾಲೂಕು ಎಂಬಾತನ ಬಳಿ ಇದ್ದ 1) ಒರಿಜಿನಲ್ ಚಾಯ್ಸ್ ಎಂದು ಪ್ರಿಂಟ್ ಇರುವ 90 ಮಿ. ಲೀ  ಮದ್ಯ ತುಂಬಿರುವ  ಟೆಟ್ರಾ ಪ್ಯಾಕ್ -11 , 2] 375 ಮಿ.ಲೀ. ನ ಒರಿಜಿನಲ್ ಚಾಯ್ಸ್ ಎಂಬ ಲೇಬಲ್ ಇರುವ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಮತ್ತು ಮದ್ಯ ಮಿಶ್ರಿತ ಅರ್ದದಷ್ಟು ತುಂಬಿರುವ ಮದ್ಯದ ಬಾಟಲಿ-1, 3] ಗಾಜಿನ ಗ್ಲಾಸ್ ಗಳು-2, 4] ಕುಡಿದು ಬಿಸಾಡಿದ  ಒರಿಜಿನಲ್ ಚಾಯ್ಸ್ ಎಂದು ಪ್ರಿಂಟ್ ಇರುವ 90 ಮಿ. ಲೀ  ಮದ್ಯ ತುಂಬಲ್ಪಡುವ ಖಾಲಿ ಟೆಟ್ರಾ ಪ್ಯಾಕ್ -15, 5] ಹಳೆ ಪ್ಲಾಸ್ಟಿಕ್ ಕೈ ಚೀಲ -1, 6] 630/- ರೂಪಾಯಿ ನಗದು ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ: 15(A), 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶೋಭ ಗಾಣಿಗ  (63), ಗಂಡ: ಶ್ರೀನಿವಾಸ ಗಾಣಿಗ, ವಾಸ: ಮನೆ ನಂಬ್ರ:1/32 ಎ , ಕುಕ್ಕಿನ ಬೈಲು  ಗುಂಡ್ಮಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಗಂಡ ಶ್ರೀನಿವಾಸ ಗಾಣಿಗ ರವರು ಸರ್ವೆ ನಂಬ್ರ 11/10 ರಲ್ಲಿ 00.39 ಸೆಂಟ್ಸ್ ಜಾಗವನ್ನು ಹೊಂದಿದ್ದು, ದಿನಾಂಕ 09/04/2023 ರಂದು ಬೆಳಿಗ್ಗೆ 09:30 ಗಂಟೆಗೆ ಗುಂಡ್ಮಿ ಗ್ರಾಮ ಕುಕ್ಕಿನ ಬೈಲು  ಎಂಬಲ್ಲಿಗೆ ಆರೋಪಿಗಳಾದ ಶಿವಾನಂದ ಕರ್ಕೇರಾ, ರಾಜು, ಗಣೇಶ್, ರಾಘವೇಂದ್ರ, ದೇವೇಂದ್ರ,  ಮಾಧವ ಹಾಗೂ ಇತರ 5 ರಿಂದ 10 ಜನ ಸೇರಿ ಅಕ್ರಮ ಪ್ರವೇಶ ಮಾಡಿ  ಮನೆಯ ಸುತ್ತಾ ಹಾಕಿದ್ದ ಕಾಂಪೌಡ್ ಗೋಡೆ ಒಡೆದು ರೂಪಾಯಿ 5,000/- ದಷ್ಟು ನಷ್ಟ ಉಂಟು ಮಾಡಿರುತ್ತಾರೆ.  ಅಲ್ಲದೇ ಪಿರ್ಯಾದಿದಾರರಿಗೆ ಆರೋಪಿಯಾದ ಶಿವಾನಂದ ಕರ್ಕೇರಾ ದು  ಹಲ್ಲೆ ಮಾಡಿರುವುದಲ್ಲದೇ ಆರೋಪಿಗಳಾದ ರಾಜು, ಗಣೇಶ್, ರಾಘವೇಂದ್ರ ರವರು ಪಿರ್ಯಾದಿದಾರರ ಸೊಸೆಯಾದ ಪೂರ್ಣಿಮ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅಲ್ಲದೇ ಆರೋಪಿಗಳೆಲ್ಲಾ ಸೇರಿ  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023  ಕಲಂ: 143, 147, 447, 323, 354, 427, 504, 506 R/w 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 09/04/2023 ರಂದು ಸಂಜೆ 5:00 ಗಂಟೆಗೆ ಹೇರೂರು ಗ್ರಾಮದ ದೂಪದಕಟ್ಟೆ ಬಳಿಯ ಮಂಜುನಾಥ ಪೆಟ್ರೋಲ್ ಬಂಕ್ ಬಂಕ್ ಬಳಿಯಲ್ಲಿ ಪಿರ್ಯಾದಿದಾರರಾದ ಅಶೋಕ ಚಂದ್ರಶೇಖರ ಲಾಯದ ಗುಂದಿ (33), ತಂದೆ:ಚಂದ್ರಶೇಕರ ಲಾಯದ ಗುಂದಿ, ವಾಸ:ಬಾಗಲಕೋಟೆ ನವನಗರ ಎಲ್ ಐ ಸಿ ಸರ್ಕಲ್ ಹತ್ತಿರ, ಹಾಲಿವಾಸ: ಎಸ್ ಎಮ್ ಎಸ್ ಶಾಲೆ ಹತ್ತಿರ  ಸಂತೋಷ ರವರ ಬಾಡಿಗೆ ಮನೆ ವಾರಂಬಳ್ಳಿ ಗ್ರಾಮ ಇವರು ತನ್ನ ಗೆಳೆಯರಾದ ಗ್ಯಾನಪ್ಪ ಶರಣಪ್ಪ , ರಾಜು ರವರೊಂದಿಗೆ ಕುಳಿತು ಮಾತನಾಡುತ್ತಿದ್ದಾಗ ಈ ಹಿಂದಿನಿಂದ ಸಹ ತನ್ನ ಮೇಲೆ ದ್ವೇಷದಿಂದ ಇದ್ದ ಆರೋಪಿಗಳಾದ ವಿನಯ ಮತ್ತು ಜೀವನ ಮತ್ತು ಇಬ್ಬರು ಹಣಕಾಸಿನ ವಿಷಯಕ್ಕೆ ಸಿಟ್ಟಿನಿಂದ  ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಏಕೆ ಈ ರೀತಿ ಬೈಯುತ್ತೀರಿ ಎಂದು ಕೇಳಿದಾಗ ಏಕಾಏಕಿ ಸಿಟ್ಟಾದ ಆರೋಪಿಗಳು ಸೇರಿ ಅಲ್ಲಿಯೇ ಇದ್ದ ಕಬ್ಬಿಣದ ರಾಡ್ ನಿಂದ ಬೆನ್ನಿಗೆ ಮತ್ತು ಬೆನ್ನಿನ ಕೆಳಗೆ ಹೊಡೆದು  ಕಾಲಿನಿಂದ ಒದ್ದಿರುತ್ತಾರೆ. ಈ ಗಲಾಟೆಯಲ್ಲಿ ಪಿರ್ಯಾದಿದಾರರ  ಮೊಣಕಾಲಿಗೆ ರಕ್ತಗಾಯ ವಾಗಿರುತ್ತದೆ. ಅಲ್ಲಿಯೇ ಇದ್ದ ಗ್ಯಾನಪ್ಪ ಶರಣಪ್ಪ ಸೇರಿ ಪಿರ್ಯಾದಿದಾರರನ್ನು  ತಪ್ಪಿಸಿರುತ್ತಾರೆ.ನಂತರ ಆರೋಪಿಗಳು ಅಲ್ಲಿಂದ ಹೋಗುವಾಗ   ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2023 ಕಲಂ: 143,147, 324,504,506,ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 10-04-2023 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080