ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಶುಭಲಕ್ಷ್ಮೀ ಇವರ ಅಕ್ಕ ನಾಗರತ್ನ ರವರು ದಿನಾಂಕ: 09.04.2023 ರಂದು ವಾರಂಬಳ್ಳಿ ಗ್ರಾಮದ ಬಸ್‌ ನಿಲ್ದಾಣದ ಬಳಿ ಇರುವ ವಾರಂಬಳ್ಳಿ ಗ್ರಾಮ ಪಂಚಾಯತ್‌ ಕಂಪೌಂಡ್‌ ನಲ್ಲಿ  ಪಿರ್ಯಾದಿದಾರರ ಬಾಬ್ತು KA.50.EE.4679  ನೇ ನಂಬ್ರದ ಕೆಂಪು ಬಣ್ಣದ ಸ್ಕೂಟಿಯನ್ನು ಬೆಳಿಗ್ಗೆ 9.05 ಗಂಟೆಗೆ ನಿಲ್ಲಿಸಿ ಹೋಗಿದ್ದು ಮಧ್ಯಾಹ್ನ 12.45  ಗಂಟೆಗೆ  ಬಂದು ನೋಡಿದಾಗ ಸ್ಕೂಟಿಯು ಇಲ್ಲದೇ ಇದ್ದು, ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ಕೂಟರ್‌ ನ ಅಂದಾಜು ಮೌಲ್ಯ ರೂ 75000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2023 : ಕಲಂ: 379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿ ಹರೀಶ್‌   ಇವರ  ತಾಯಿಯ ಅಣ್ಣನಾದ ಸುಧಾಕರ ಶೆಣೈ ಪ್ರಾಯ:55 ವರ್ಷ ಮದುವೆಯಾಗದೇ ಪಿರ್ಯಾದಿದಾರ ಮನೆಯವರೊಂದಿಗೆ  ವಾಸ ಮಾಡಿಕೊಂಡಿದ್ದು, ಕೂಲಿ ಕೆಲಸ ಮಾಡಿ ಕೊಂಡಿರುತ್ತಾರೆ. ಸುಧಾಕರ ಶೆಣೈ ರವರು ಇತ್ತೀಚೆಗೆ ಕೆಲವು ವರ್ಷಗಳಿಂದ ವಿಪರೀತ ಶರಾಬು ಕುಡಿದುಕೊಂಡು ಕುಂದಾಪುರ ತಾಲೂಕಿನ ಕಸಬಾ ಗ್ರಾಮದ  ಚರ್ಚ ರಸ್ತೆಯ ರವಿ ಎಂಬುವವರ ಮನೆಯ ಸ್ಲ್ಯಾಬಿನಲ್ಲಿ ಮಲಗುತ್ತಿದ್ದು, ದಿನಾಂಕ 09/04/2023 ರಂದು ರಾತ್ರಿ ಸದ್ರಿ ಸ್ಥಳದಲ್ಲಿ ಮಲಗಿದವರನ್ನು ದಿನಾಂಕ 10/04/2023 ರಂದು ಬೆಳಿಗ್ಗೆ 09:30 ಗಂಟೆಗೆ ರವಿ ಅವರು ನೋಡಿದ್ದು ಯಾವುದೇ ಪ್ರತಿಕ್ರಿಯೆ ತೋರದೆ ಈ ಮಾಹಿತಿಯನ್ನು  ರವಿಯವರು  ಪಿರ್ಯಾದಿದಾರರಿಗೆ ತಿಳಿಸಿದ್ದು ಸದ್ರಿ ಸ್ಥಳಕ್ಕೆ ಪಿರ್ಯಾದಿದಾರರು ಬಂದು ನೋಡಿದಾಗ ಮೃತ ಪಟ್ಟಿರುವುದು  ಕಂಡು ಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2023  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ: 09/04/2023 ರಂದು ವಿನಯ್‌ ಎಮ್‌ ಕೊರ್ಲಹಳ್ಳಿ, ಪಿಎಸ್‌ಐ, ಗಂಗೊಳ್ಳಿ ಪೊಲೀಸ್ ಠಾಣೆ ಇವರು ಮರವಂತೆ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ  ಬೀಚ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮದ್ಯಪಾನ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 23:30 ಹೋಗಿ ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಆಪಾದಿತ ಸಂತೋಷ ಈತನನ್ನು ವಶಕ್ಕೆ ಪಡೆದು ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ: 15 (A) K E Act ನಂತೆ ಪ್ರಕರಣ ದಾಖಲಾಗಿರುತ್ತದೆ.

  • ಶಂಕರನಾರಾಯಣ: ಫಿರ್ಯಾದಿ ಸರೋಜಾ  ಇವರ ತಂಗಿ ಶ್ರೀಮತಿ ಸವಿತಾ ಇವರು ಫಿರ್ಯಾಧುದಾರರಿಗೆ  ಮದುವೆ  ಆಗಲು  ಹುಡುಗನನ್ನು   ಹುಡುಕಿ ಕೊಡುವುದಾಗಿ ಹೇಳಿದ್ದು,  ಆ  ಬಳಿಕ   ಆರೋಪಿತ 1.ಶ್ರೀಮತಿ ಸವಿತಾ 2) ಕಿರಣ್ 3.ಶ್ರೀನಿವಾಸ ಇವರುಗಳು ಸೇರಿ  ಸಮಾನ  ಉದ್ದೇಶದಿಂದ   ಫಿರ್ಯಾದುದಾರರನ್ನು ನಂಬಿಸಿ ಹುಡುಗನ  ಕಡೆಯವರು  ಎಂದು ಪದೇ ಪದೇ  ಮೆಸೇಜ್   ಮಾಡಿ  ನಂಬಿಸಿ  ಅವರಿಂದ  ಹಣದ ಸಹಾಯ  ಕೇಳಿದ್ದು, ಈ  ಸಮಯ   ಫಿರ್ಯಾದುದಾರರು ಅವರ ಮಾತನ್ನು  ನಂಬಿ   ಬ್ಯಾಂಕ್  ಖಾತೆ ಯಿಂದ 1 ನೇ  ಆರೋಪಿಯ ಬ್ಯಾಂಕ್  ಖಾತೆ ಗೆ 2018 ರಿಂದ  ಈ ವರಗೆ ಒಟ್ಟು  13,59.500/-  ರೂ   ಹಣ  ಹಾಕಿಸಿಕೊಂಡಿರುತ್ತಾರೆ, ಹಾಗೂ  ಮದುವೆ  ಸಮಯ  ಧರಿಸಿ  ವಾಪಾಸು ನೀಡುವುದಾಗಿ  ಹೇಳಿ  ಸುಮಾರು 3,00,000/- ರೂ  ಮೌಲ್ಯದ  ಚಿನ್ನದ   ಬಳೆ   ಹಾಗೂ ನೆಕ್ಲೇಸ್  ಸರವನ್ನು  ಫಿರ್ಯಾದುದಾರರ  ವಾಸದ  ಮನೆಯಾದ  ಹೆಬ್ರಿ  ತಾಲೂಕಿನ  ಬೆಳ್ವೆ  ಗ್ರಾಮದ   ಗುಮ್ಮಲ  ಎಂಬಲ್ಲಿಗೆ ಬಂದು  ತೆಗೆದುಕೊಂಡು ಹೋಗಿದ್ದು,  ಆ ಬಳಿಕ   ಸದ್ರಿ ಚಿನ್ನವನ್ನು   ವಾಪಾಸು ನೀಡದೇ   ಮೂಲ್ಕಿಯ  ವಿಜಯ ಬ್ಯಾಂಕ್‌‌ನಲ್ಲಿಅಡವು ಇರಿಸಿರುತ್ತಾರೆ, ಹಣ ಹಾಗೂ   ಚಿನ್ನವನ್ನು  ವಾಪಾಸು   ಕೇಳಿದಕ್ಕೆ   1 ಮತ್ತು 2  ನೇ  ಆರೋಪಿಗಳು ಹಣ ಹಾಗೂ ಚಿನ್ನವನ್ನು  ವಾಪಾಸು  ನೀಡುವುದಿಲ್ಲ  ಹಣ ಹಾಗೂ  ಚಿನ್ನವನ್ನು ವಾಪಾಸು ಕೇಳಿದರೇ ಒಂದು  ಗತಿ ಕಾಣಿಸುವುದಾಗಿ   ಬೆದರಿಕೆ  ಹಾಕಿರುತ್ತಾರೆ, ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023  ಕಲಂ:,   406,420 ,506  ಜೊತೆಗೆ  34   ಐ.ಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-04-2023 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080