ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರಾಘವೇಂದ್ರ (24),  ತಂದೆ: ಶಿವಾಜಿಯಪ್ಪ, ವಾಸ: ಕೊಟ್ಟಿಗೆರೆ, ಶಿಕಾರಿಪುರ  ಶಿವಮೊಗ್ಗ ಜಿಲ್ಲೆ ಇವರು ಭತ್ತ ಕಟಾವು  ಮೆಷಿನ್‌‌‌‌‌‌‌‌ನ  ಚಾಲಕನಾಗಿ  ಕೆಲಸ  ಮಾಡಿಕೊಂಡಿದ್ದು  ಮಾಲಕರು ಭತ್ತ ‌‌ ಕಟಾವಿಗೆ ಚಾಲಕನಾಗಿ ಕೋಟಕ್ಕೆ ಹೋಗಲು ತಿಳಿಸಿದ್ದು   ಆದರೆ ತಂಗಿಯ  ಮದುವೆ  ಕೊರಟೆಗೆರೆಯಲ್ಲಿರುವುದರಿಂದ ಪಿರ್ಯಾದಿದಾರರು ತನ್ನ ಪರಿಚಯದ  ಪ್ರವೀಣ್‌‌‌‌‌‌‌ ಎಂಬುವವರನ್ನು ಕೋಟದಲ್ಲಿ ಭತ್ತ ಕಟಾವಿಗೆ  ಕಳುಹಿಸಿದ್ದು ,  ಪ್ರವೀಣ ರವರು ದಾವಣಗೆರೆಗೆ  ಹೋಗಬೇಕೆಂದು  ಪಿರ್ಯಾದಿದಾರರಿಗೆ ಕೋಟಕ್ಕೆ  ಬರಲು  ಹೇಳಿದ್ದರಿಂದ ಪಿರ್ಯಾದಿದಾರರು ದಿನಾಂಕ  09/04/2022  ರಂದು  ಬೆಳಿಗ್ಗೆ ಮನೆಯಿಂದ  ಹೊರಟು ಕೋಟ ಮೂರುಕೈ ಬಳಿ ಇಳಿದು ಪ್ರವೀಣ್‌‌‌‌ ಹೇಳಿದಂತೆ  ಕೋಟ ಕಡೆಗೆ  ನಡೆದುಕೊಂಡು  ಬರುತ್ತಿರುವಾಗ ಪ್ರವೀಣ್‌‌ ಕೋಟ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66  ರಲ್ಲಿ KA-17-EG-2428 ನೇ ಮೋಟಾರ್ ಸೈಕಿಲಿನಲ್ಲಿ ಬರುತ್ತಿದ್ದು,  ಪಿರ್ಯಾದಿದಾರರು ನೋಡುತ್ತಿದ್ದಂತೆಯೇ  KA-02-MN‌‌‌‌‌-0684 ನೇ ಕಾರು ಚಾಲಕ ಕೃಷ್ಣ ಮೂರ್ತಿ ತನ್ನ ಕಾರನ್ನು ಕುಂದಾಪುರ  ಕಡೆಯಿಂದ ಉಡುಪಿ ಕಡೆಗೆ ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ನಟರಾಜ್‌‌‌‌‌‌‌‌‌‌‌ ಬಾರ್‌‌‌‌ನ  ಎದುರು ಪ್ರವೀಣ್‌ ರವರ  ಮೋಟಾರ್ ಸೈಕಲಿಗೆ  ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ  ಮೋಟಾರು  ಸೈಕಲ್‌‌‌‌‌‌‌ ಹಾಗೂ  ಪ್ರವೀಣ್‌‌ ಸುಮಾರು  15  ಅಡಿ  ದೂರಕ್ಕೆ  ಎಸೆಯಲ್ಪಟ್ಟು  ಬಿದ್ದಿದ್ದು,  ಕೂಡಲೇ  ಅಲ್ಲಿಗೆ  ಓಡಿ  ಬಂದು  ನೋಡಲಾಗಿ ಪ್ರವೀಣ್‌‌ ರವರ ತಲೆಗೆ  ಪೆಟ್ಟಾಗಿ  ಮೂಗಲ್ಲಿ,  ಬಾಯಲ್ಲಿ  ರಕ್ತ  ಬರುತ್ತಿದ್ದು,  ಕೈ,  ಕಾಲಿಗೆ  ಗಾಯವಾಗಿದ್ದು, ಮಾತನಾಡುತ್ತಿರಲಿಲ್ಲ.   ಅಪಘಾತವಾಗುವಾಗ ಮಧ್ಯಾಹ್ನ    1:15  ಗಂಟೆಯಾಗಿದ್ದು  ಕಾರು ಜಖಂಗೊಂಡಿರುತ್ತದೆ ,  ಅಲ್ಲಿ  ಸೇರಿದವರು ಅಂಬುಲೆನ್ಸ್‌‌‌‌‌‌ ತರಿಸಿ  ಅದರಲ್ಲಿ  ಹಾಕಿ ಬ್ರಹ್ಮಾವರ ಮಹೇಶ್‌‌‌‌‌‌‌‌‌ ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು ಅಲ್ಲಿ ವೈದ್ಯರು  ಪರೀಕ್ಷಿಸಿ ಪ್ರವೀಣ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022  ಕಲಂ: 279. 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: , ಪಿರ್ಯಾದಿದಾರರಾದ ಯಲ್ಲಪ್ಪ ಡಿ ಗಿರಡ್ಡಿ (47), ತಂದೆ: ದಿ. ದೇವಪ್ಪ, ವಾಸ:ವಾರ್ಡ್‌ ನಂಬ್ರ-06, ಶಿವಗಂಗಾ ನಗರ, ಧಾರವಾಡ, ಧಾರವಾಡ ಜಿಲ್ಲೆ ಇವರು ವಿ.ಆರ್.ಎಲ್. ಕಂಪನಿಯ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 07/04/2022 ರಂದು ಅಹಮದಾಬಾದ್ ನಿಂದ KA-63-5116 ನೇ ನಂಬ್ರದ  ವಿ.ಆರ್.ಎಲ್ ಕಂಪನಿಯ ಲಾರಿಯಲ್ಲಿ ಸರಕನ್ನು ತುಂಬಿಸಿಕೊಂಡು ಮಂಗಳೂರಿಗೆ ಇನ್ನೊಬ್ಬ ಚಾಲಕ ಅಶೋಕ್ ಗದಗ (47) ಎಂಬುವವರ ಜೊತೆ ಹೊರಟು ದಿನಾಂಕ 09/04/2022 ರಂದು ಬೆಳಿಗ್ಗೆ 04:20 ಗಂಟೆಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಲಾರಿಯನ್ನು ನಿಲ್ಲಿಸಿ, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ರಸ್ತೆಯ ಬದಿಯಲ್ಲಿದ್ದ ಕ್ಯಾಂಟೀನ್ ನಲ್ಲಿ ಚಹಾ ಕುಡಿದು ಇಬ್ಬರೂ ಉಡುಪಿ-ಮಂಗಳೂರು ರಸ್ತೆಯ ಕಡೆಗೆ ಬರುತ್ತಾ ಟೋಲ್ಗೇಟ್ ಹತ್ತಿರ ತಲುಪುತ್ತಿದ್ದಂತೆ KA-51-C-0741 ನೇ ನಂಬ್ರದ ದುರ್ಗಾಂಬಾ ಬಸ್ಸು ಚಾಲಕ ತನ್ವೀರ್  ತನ್ನ ಬಸ್ಸನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾರೂಕತೆಯಿಂದ ಒಮ್ಮೆಲೇ ನಿರ್ಲಕ್ಷತನದಿಂದ ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಅಶೋಕ್ ಗದಗ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಶೋಕ್ ಗದಗ ರವರು ರಸ್ತೆಗೆ ಬಿದ್ದಿದ್ದು, ಇದರಿಂದ ಅವರ ಮುಖಕ್ಕೆ, ಹಣೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ  09/04/2022 ರಂದು ಪಿರ್ಯಾದಿದಾರರಾದ ಪೀಟರ್ ಮೆಂಡೋನ್ಸಾ (62), ತಂದೆ: ದಿ, ಜೋಸೆಫ್ ಮೆಂಡೋನ್ಸಾ,ವಾಸ: ಬಂಟ್ವಾಡಿ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ KA-20-N-6851ನೇ ಕಾರಿನಲ್ಲಿ ಆರೋಪಿ ಪ್ರಥ್ವಿ ಮಲ್ಯ ಚಾಲಕರಾಗಿ, ಪಿರ್ಯಾದಿದಾರರು ಹಾಗೂ ಅವರ ಮಗಳಾದ ಜಾನೆಟ್‌ ನಜರತ್‌ ಹಾಗೂ ಮೊಮ್ಮಕ್ಕಳಾದ ಜ್ಯೋಯಿಲಿನ್‌ ಮತ್ತು ಜೊಯಿಟ್ನಾ ರವರನ್ನು ಕರೆದುಕೊಂಡು ಮಂಗಳೂರು ಏರ್‌ಪೋರ್ಟ್ ನಿಂದ ಕುಂದಾಫುರ ಕಡೆಗೆ ಹೊರಟು ಆರೋಪಿಯು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೆಳಿಗ್ಗೆ 05:30 ಗಂಟೆ ಸಮಯಕ್ಕೆ‌ ವಾರಂಬಳ್ಳಿ  ಬ್ರಹ್ಮಾವರ ಎಸ್‌ಎಮ್‌ಎಸ್‌ ಕಾಲೇಜ್‌ ಬಳಿ ಬರುವಾಗ ಒಂದು ನಾಯಿ ಕಾರಿಗೆ ಅಡ್ಡ ಬಂದಿದ್ದು ಆರೋಪಿಯು ಒಮ್ಮೇಲೇ ಬ್ರೇಕ್‌ ಹಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಗೆ ಬಿದ್ದಿತು, ಅಪಘಾತದ ಪರಿಣಾಮ ಪಿರ್ಯಾದಿದಾರ ಎಡಕೈ ಮೊಣಗಂಟಿಗೆ ಮತ್ತು ಮಣಿಗಂಟಿಗೆ ರಕ್ತಗಾಯ ಹಾಗೂ ಕಾರಿನಲ್ಲಿದ್ದ ಅವರ ಮಗಳಾದ ಜಾನೆಟ್‌ ನಜರತ್‌ಗೆ ಬಲಕೈ ಅಂಗೈನ ನಾಲ್ಕು ಬೆರಳುಗಳು ತೀವೃ ತರಹದ ಒಳ ಜಖಂ ಆಗಿ ರಕ್ತಗಾಯವಾಗಿರುತ್ತದೆ. ಕಾರಿನಲ್ಲಿರುವ ಮಕ್ಕಳಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಈ ಬಗ್ಗೆ ಪಿರ್ಯಾದಿದಾರರು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ಹಾಗೂ ಜಾನೆಟ್‌ರವರು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ  02/03/2022 ರಂದು   ಸಂಜೆ 6:00 ಗಂಟೆಗೆ  ಪಿರ್ಯಾದಿದಾರರಾದ ನಿರ್ಮಲ (42), ತಂದೆ:  ಸಂಜೀವ  ಪೂಜಾರಿ,  ವಾಸ:  ಕೇದಗೆಜಿಡ್ಡ ಉಗ್ಗೆಲ್  ಬೆಟ್ಟು  ಉಪ್ಪೂರು  ಗ್ರಾಮ ಕೊಳಲಗಿರಿ  ಅಂಚೆ  ಉಡುಪಿ ಜಿಲ್ಲೆ ಇವರ ಗಂಡ ಸಂಜೀವ  ಪೂಜಾರಿ (56) ಎಂಬುವವರು   ಅಂಬಲಪಾಡಿ  ಬಸ್ಸ ನಿಲ್ದಾಣದಲ್ಲಿ  ಬ್ರಹ್ಮಾವರ  ಕಡೆಗೆ  ಹೋಗುವ  ಬಸ್ಸಿಗಾಗಿ  ಕಾಯುತಿದ್ದು  ಆ ಸಮಯದಲ್ಲಿ   KA-20-AA-1557  ನೇ  ಬಸ್ಸಿನ  ಚಾಲಕ  ತನ್ನ  ಬಸ್ಸನ್ನು ಚಲಾಯಿಸಿಕೊಂಡು ಬಂದಿದ್ದು  ಆ ಬಸ್ಸಿಗೆ   ಸಂಜೀವ  ಪೂಜಾರಿಯವರು ಹತ್ತಿದಾಗ  ತಕ್ಷಣ  ಬಸ್ಸಿನ  ಚಾಲಕ   ತನ್ನ  ಬಸ್ಸನ್ನು  ಓಮ್ಮೇಲೆ ಚಲಾಯಿಸಿದ  ಪರಿಣಾಮ  ಸಂಜೀವ  ಪೂಜಾರಿಯವರು  ಬಸ್ಸಿನಿಂದ  ಕೆಳೆಗೆ  ಬಿದ್ದು  ಅವರ  ತಲೆಗೆ, ಬೆನ್ನಿಗೆ  ಮತ್ತು  ಮೂಗಿಗೆ  ತೀವ್ರವಾದ  ಗಾಯವಾಗಿದ್ದು  ಮತ್ತು  ದೇಹದ  ಇತರ  ಭಾಗಗಳಿಗೆ  ತರಚಿದ  ಗಾಯವಾಗಿದ್ದು   ತಕ್ಷಣ  ಬಸ್ಸಿನ  ಚಾಲಕ  ಮತ್ತು   ನಿರ್ವಾಹಕ   ಸೇರಿ  ಅಲ್ಲಿಯೇ  ಪಕ್ಕದಲ್ಲಿದ್ದ  ಹೈಟೆಕ್  ಆಸ್ಪತ್ರೆಗೆ  ದಾಖಲು ಮಾಡಿ  ಬಸ್ಸಿನ ಚಾಲಕ  ಮತ್ತು  ನಿರ್ವಾಹಕ  ವೈದ್ಯಕೀಯ  ವೆಚ್ಚವನ್ನು  ತಾವೇ  ಭರಿಸುತ್ತೆವೆ  ಎಂದು  ಭರವಸೆ ನೀಡಿದ್ದು  ಇದುವೆರೆಗೆ  ಯಾವುದೇ  ಖರ್ಚು ವೆಚ್ಚವನ್ನು  ನೀಡದೇ  ಇದ್ದು ಪಿರ್ಯಾದಿದಾರರು  ದೂರನ್ನು  ವಿಳಂಬವಾಗಿ  ದಾಖಲು  ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು  ಗ್ರಾಮದ ಜಾರಿಗೆಕಟ್ಟೆ ಹರೀಶ್ ರವರ ಮನೆಯ ಎದುರು ದಿನಾಂಕ 09/04/2022 ರಂದು ರಾತ್ರಿ 09:45 ಗಂಟೆಗೆ ಪಿರ್ಯಾದಿದಾರರಾದ ಸುಕೇಶ್ (35), ತಂದೆ: ವಾಸು ನಲ್ಕೆ, ವಾಸ: ಗಾಂದಟ್ಟು ಮನೆ ಸಚ್ಚರೀಪೇಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ಅಣ್ಣ ಗೋಪಾಲಕೃಷ್ಣ (38) ರವರು ಅವರ KA-19-HC-6570 Dio ದ್ವಿಚಕ್ರ ವಾಹನದಲ್ಲಿ ಸಚ್ಚರೀಪೇಟೆಯಿಂದ ಜಾರಿಗೆಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಜಾರಿಗೆಕಟ್ಟೆ ಕಡಯಿಂದ ಸಚ್ಚರೀಪೇಟೆ ಕಡೆಗೆ KA-19-AB-1199 ನೇ ಗೂಡ್ಸ್ ಟೆಂಪೋ ಚಾಲಕ ಅಬೂಬಕ್ಕರ್ ಸಿದ್ದಿಕ್ ಆತನ ವಾಹನವನ್ನು ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ಗೋಪಾಲಕೃಷ್ಣ ರವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೋಪಾಲಕೃಷ್ಣ ರವರು ವಾಹನ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ರೀತಿಯಲ್ಲಿ ಪೆಟ್ಟಾದವರನ್ನು ಪಿರ್ಯಾದಿದಾರರು, ನಂದೀಶ್ ಹಾಗೂ ಅಪಘಾತ ಉಂಟು ಮಾಡಿದ ಗೂಡ್ಸ್ ಟೆಂಪೋ ಚಾಲಕನೊಂದಿಗೆ ಸೇರಿ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಗೆ  ರಾತ್ರಿ 11:30 ಗಂಟೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿದ್ದು, ವೈದ್ಯರಲ್ಲಿ ತೋರಿಸಿದಾಗ ಗೋಪಾಲಕೃಷ್ಣರವರು ದಾರಿ ಮದ್ಯ ಪಟ್ಟಿರುವುದಾಗಿ ತಿಳಿಸಿದ್ದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಿ. ವಾಸುದೇವ ಭಟ್‌ (62), ತಂದೆ: ಬಿ. ನಾರಾಯಣ ಭಟ್, ವಾಸ: ವಾದಿರಾಜ  1ನೇ `ಅಡ್ಡರಸ್ತೆಯ  ಮನೆನಂಬ್ರ  7-3-40 ' ಲಕ್ಷ್ಮೀ  ನಿವಾಸ ' ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರೊಂದಿಗೆ ವಾಸವಿದ್ದ ಅವರ ಕಿರಿಯ  ಮಗ  ಬಿ. ಮಹೇಶ್‌ ಭಟ್‌ (23) ರವರು ನಾಲ್ಕೈದು  ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ  ಚಿಕಿತ್ಸೆ  ಪಡೆದರೂ ಗುಣಮುಖನಾಗದ  ಚಿಂತೆಯಿಂದ  ಜೀವನದಲ್ಲಿ  ಜಿಗುಪ್ಸೆ ಹೊಂದಿ ದಿನಾಂಕ 08/04/2022 ರಂದು  ಸಂಜೆ  4: 10  ಗಂಟೆಯಿಂದ  ರಾತ್ರಿ 7:30  ಗಂಟೆಯ  ಮಧ್ಯಾವಧಿಯಲ್ಲಿ  ತಾನು ವಾಸವಿದ್ದ ಮನೆಯ  ಹಾಲ್‌ನ  ಸೀಲಿಂಗ್‌  ಫ್ಯಾನಿಗೆ  ಬಿಳಿ  ಧೋತಿಯಿಂದ  ಕುತ್ತಿಗೆಗೆ ನೇಣು  ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2022 ಕಲಂ: 174  ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಲ್ಪೆ: ದಿನಾಂಕ 09/04/2022 ರಂದು ಪಿರ್ಯಾದಿದಾರರಾದ ಗೋಡ್ವಿನ್ ಮಾಬೆನ್ (30), ತಂದೆ: ರಾಬರ್ಟ್ ಮಾಬೆನ್, ವಾಸ: ಶಾರಳ ಮುದೂರು, ಮುದೂರು ಅಂಚೆ, ಬೈಂದೂರು, ಉಡುಪಿ ತಾಲೂಕು ಇವರು ಕುಟುಂಬದೊಂದಿಗೆ ಪ್ರವಾಸದ ಬಗ್ಗೆ ಬೈಂದೂರಿನಿಂದ ಹೊರಟು ಮಲ್ಪೆ ಬೀಚ್‌ ಗೆ ಬಂದಿದ್ದು ಮಲ್ಪೆ ಬೀಚ್‌ನಲ್ಲಿ ಸಂಜೆ 4:00 ಗಂಟೆಗೆ ಸಂಬಂಧಿಕರು ಸಮುದ್ರದ ನೀರಿನಲ್ಲಿ ಆಟ ಆಡುತ್ತಿದ್ದು ಪಿರ್ಯಾದಿದಾರರು ಅವರ ಕಪ್ಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್ ಹಾಗೂ ಸಂಬಂಧಿಕರ ಇತರ ಮೂರು ಬ್ಯಾಗ್‌ಗಳನ್ನು ಬೀಚ್‌ ನಲ್ಲಿ ಇಟ್ಟು ನಿಂತುಕೊಂಡಿದ್ದು 5:00 ಗಂಟೆಗೆ ಒಂದು ಬ್ಯಾಗ್‌ ಅನ್ನು ಬಟ್ಟೆ ಬದಲಿಸಲು ಬಾತ್‌ ರೂಮ್‌ನಲ್ಲಿದ್ದ ಚಿಕ್ಕಮ್ಮನಿಗೆ  ಕೊಟ್ಟು ವಾಪಾಸು ಬ್ಯಾಗ್‌ ಇಟ್ಟಿದ್ದ ಜಾಗಕ್ಕೆ ಬಂದಾಗ ಪಿರ್ಯಾದಿದಾರರ ಕಪ್ಪು ಬಣ್ಣದ ಬೆನ್ನಿಗೆ ಹಾಕುವ ಬ್ಯಾಗ್‌ ಕಳವಾಗಿದ್ದು ಬ್ಯಾಗಿನಲ್ಲಿ ವಿವೋ ಕಂಪೆನಿಯ  ಮೊಬೈಲ್‌ ಫೋನ್-2, ರೆಡ್ಮಿ ಕಂಪೆನಿಯ ಮೊಬೈಲ್ ಫೋನ್-1, ಬಂಗಾರದ ಬ್ರಾಸ್‌ಲೆಟ್ -1, ಚಿನ್ನದ ಚೈನ್-1, ಚಿನ್ನದ ಉಂಗುರ-1, ಹಾಗೂ ವೋಟರ್ ಐಡಿ,  ಆಧಾರ್ ಕಾರ್ಡ್, ಎಟಿಎಮ್‌ ಹಾಗೂ ಪಾನ್ ಕಾರ್ಡ್ ಇದ್ದು ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 77,500/- ರೂಪಾಯಿ ಆಗಿರುತ್ತದೆ. ಈ ಎಲ್ಲಾ ಸ್ವತ್ತುಗಳನ್ನು ಯಾರೋ ಕಳ್ಳರು  ಕಳವು ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 09/04/2022 ರಂದು ಉಮೇಶ್ ಜೋಗಿ, ಸಹಾಯಕ ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಠಾಣೆ ಇವರು  ರೌಂಡ್ಸ್  ಕರ್ತವ್ಯದಲ್ಲಿದ್ದಾಗ  ಬೆಳಿಗ್ಗೆ  ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನನಗರದಲ್ಲಿನ, ಕಾಯಿನ್ ಸರ್ಕಲ್ ಬಳಿ ಸಾರ್ವಜನಿಕ  ಸ್ಥಳದಲ್ಲಿ ಈ ಇಬ್ಬರು ವ್ಯಕ್ತಿಗಳು ಅಮಲಿನಲ್ಲಿರುವುದು ಕಂಡು ಬಂದಿದ್ದು, ಅವರು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಅವರ ಹೆಸರು ವಿಳಾಸ ಕೇಳಲಾಗಿ ಮೇಘರಾಜು (30), ತಂದೆ: ಶಿವಣ್ಣ, ಹಾಲಿವಾಸ: ಲಕ್ಷ್ಯ ನಿಲಯ, ಹೋಂಡಾ  ಸರ್ವಿಸ್ ಸೆಂಟರ್ ಬಳಿ, ಹಯಗ್ರಿವ ನಗರ, 7 ನೇ ಕ್ರಾಸ್, ಇಂದ್ರಾಳಿ, ಉಡುಪಿ, ಖಾಯಂ ವಿಳಾಸ: ಬಿಸಲಹಳ್ಳಿ, ಹಂಡರಂಗಿ, ಕೊಣನೂರು ಹೋಬಳಿ, ಅರಕಲಗೂಡು ತಾಲೂಕು, ಹಾಸನ ಮತ್ತು ಆಕಾಶ್ ಬಿ.ಎಸ್‌ (25), ತಂದೆ: ಸ್ವಾಮಿ , ವಿಳಾಸ: ಬಿಸಲಹಳ್ಳಿ, ಹಂಡರಂಗಿ, ಕೊಣನೂರು ಹೋಬಳಿ, ಅರಕಲಗೂಡು ತಾಲೂಕು, ಹಾಸನ ಎಂದು ತಿಳಿಸಿದ್ದು ಅವರು ಮಾತನಾಡಲು ತೊದಲುತ್ತಿದ್ದು  ಅವರ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದ ಕಾರಣ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆರೋಪಿಗಳು ಗಾಂಜಾವನ್ನು  ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 27 (B) NDPS ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 10-04-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080