ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕುಂದಾಪುರ : ದಿನಾಂಕ 09/04/2021 ರಂದು ಮಧ್ಯಾಹ್ನ 2:45 ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ಟಿ.ಟಿ ರಸ್ತೆ ಕ್ರಾಸ್‌ ಬಳಿ, ಪಶ್ಚಿಮ ಬದಿಯ NH 66 ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ ಸತೀಶ್ ಎಂಬುವವರು KA-02-HD-8348ನೇ ಬೈಕನ್ನು ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಟಿ.ಟಿ ರಸ್ತೆಯಿಂದ ತಿರುಗಿಸಿಕೊಂಡು ಕುಂದಾಪುರ ಕಡೆಗೆ ಅದೇ ದಿಕ್ಕಿನಲ್ಲಿ ರಸ್ತೆಯ ಎಡಬದಿಯಲ್ಲಿ ಪಿರ್ಯಾದಿದಾರರಾದ ಸ್ಟೀವನ್‌ ಡಿಸೋಜಾ(37), ತಂದೆ:ಜೇಮ್ಸ್‌‌‌‌‌ ಲೂವಿಸ್‌‌‌ ಡಿಸೋಜಾ , ವಾಸ: ಟಿ.ಟಿ ರಸ್ತೆ, ವಡೇರಹೋಬಳಿ ಗ್ರಾಮ,ಕುಂದಾಪುರ ತಾಲೂಕು ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EA-9333 TVS Star City ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಟೀವನ್‌ ಡಿಸೋಜಾ ರವರ ಬಲಕಾಲಿನ ಮುಂಗಾಲು ಗಂಟಿನ ಹತ್ತಿರ ಮೂಳೆ ಮುರಿತವಾದ ಗಾಯ ಹಾಗೂ ಮೈ ಕೈಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ವಿವೇಕ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ದಿನಾಂಕ 10/04/2021 ರಂದು ಬೆಳಿಗ್ಗೆ 05:45 ಗಂಟೆಗೆ ಶ್ರೀಶೈಲ್‌ ಡಿ.ಎಂ, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್ ಠಾಣೆ ಇವರಿಗೆ ದೊರೆತ ಮಾಹಿತಿಯಂತೆ ಪಡುಬೆಳ್ಳೆ ಎಂಬಲ್ಲಿಗೆ 06:20 ಗಂಟೆಗೆ ತಲುಪಿ ಅಲ್ಲಿ ಇರುವಾಗ 2 ವಾಹನಗಳು ಬೆಳ್ಳೆ ಕಡೆಯಿಂದ ಸುಭಾಸ್ ನಗರ ಕಡೆಗೆ ವೇಗವಾಗಿ ಹೋಗಿರುತ್ತದೆ. ಕೂಡಲೇ ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಕುರ್ಕಾಲು ಗ್ರಾಮದ ಸುಭಾಸ್ ನಗರ ಕುಂಜಾರುಗಿರಿ ಕ್ರಾಸ್ ನಲ್ಲಿ 2 ವಾಹನಗಳನ್ನು ಅಡ್ಡ ಹಾಕಿದ್ದು, ಆವಾಗ 7:00 ಗಂಟೆ ಆಗಿರುತ್ತದೆ. ಆ ಸಮಯ 2 ವಾಹನದಲ್ಲಿದ್ದ ವ್ಯಕ್ತಿಗಳು ಓಡಲು ಪ್ರಯತ್ನಿಸಿದ್ದು ಅವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ವಲೇರಿಯನ್ ಕ್ಯಾಸ್ತಲಿನೋ ಪ್ರಾಯ 54 ವರ್ಷ ತಂದೆ: ಮರಿಯನ್ ಕ್ಯಾಸ್ತಲಿನೋ ವಾಸ: ಪಡುಮನೆ, ಶಂಕರಪುರ ಅಂಚೆ, ಮೂಡುಬೆಟ್ಟು ಗ್ರಾಮ ಚಾಲಕ ಅಮಿತ್ ಕೋಟ್ಯಾನ್ ಪ್ರಾಯ 40 ವರ್ಷ ತಂದೆ: ಆಸನಂದ ಎಸ್ ಕೋಟ್ಯಾನ್ ವಾಸ: ಕೋಟ್ಯಾನ್ ನಿವಾಸ , ಸರ್ಕಾರಿಗುಡ್ಡೆ, ಮೂಡುಬೆಟ್ಟು ಗ್ರಾಮ ಎಂಬುದಾಗಿ ತಿಳಿಸಿದ್ದು. ಇನ್ನೊಂದು ವಾಹನದಲ್ಲಿ ಶೇಕ್ ಅಬ್ದುಲ್ಲಾ ಪ್ರಾಯ 33 ವರ್ಷ ತಂದೆ: ಮೊಹಮ್ಮದ್ ಶೆರೀಫ್ ವಾಸ: ಸುಭಾಸ್ ನಗರ ಅಂಚೆ, ಕುರ್ಕಾಲು ಗ್ರಾಮ ಚಾಲಕ ಸಂದೇಶ್ ಜತ್ತನ್ನ (40) ತಂದೆ: ಬೆರ್ನಾಡ್ ಜತ್ತನ್ನ ವಾಸ: ತಂಬದಗುಂಡಿ ಹೌಸ್, ಸುಭಾಸ್ ನಗರ ಅಂಚೆ ಕುರ್ಕಾಲು ಗ್ರಾಮ ಎಂಬುದಾಗಿ ತಿಳಿಸಿರುತ್ತಾರೆ. ನಂತರ KA-20-C-1396 ನೇ ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ ಕಂದು ಬಣ್ಣದ 2 ಜೆರ್ಸಿ ದನಗಳು ಮತ್ತು ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ 2 ಕರು ಇರುತ್ತದೆ. ಸದ್ರಿ ಜಾನುವಾರುಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ. ಇನೊಂದು ವಾಹನ ನಂಬ್ರ KA- 20-C-3920 ನೇದರಲ್ಲಿ ಕಪ್ಪು ಬಣ್ಣದ ದನ-1, ಕಂದು ಬಣ್ಣದ 2 ದನಗಳು ಮತ್ತು ಕಪ್ಪು ಬಣ್ಣದ ಕರು-1, ಕಂದು ಹಾಗೂ ಬಿಳಿ ಬಣ್ಣ ಮಿಶ್ರಿತ ಕರು-1 ಇರುತ್ತದೆ ಜಾನುವಾರಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ. ನಂತರ ಜಾನುವಾರುಗಳನ್ನು ಪರಿಶೀಲಿಸಲಾಗಿ ಕಂದು ಬಣ್ಣದ ಜೆರ್ಸಿ ದನಗಳು-2, ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ 2 ಕರು, ಕಪ್ಪು ಬಣ್ಣದ ದನ-1, ಕಂದು ಬಣ್ಣದ ದನ-2 ಮತ್ತು ಕಪ್ಪು ಬಣ್ಣದ ಕರು-1, ಕಂದು ಹಾಗೂ ಬಿಳಿ ಬಣ್ಣ ಮಿಶ್ರಿತ ಕರು-1 ಒಟ್ಟು 5 ದನ ಮತ್ತು 4 ಕರುಗಳು ಇರುತ್ತದೆ. ಎಲ್ಲಾ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆಪಾದಿತರು ಜಾನುವಾರುಗಳನ್ನು ಕ್ರಯಕ್ಕೆ ತೆಗೆದುಕೊಂಡು ಅದನ್ನು ಹಿಂಸಾತ್ಮಕ ರೀತಿಯಲ್ಲಿ ಕಾಲುಗಳಿಗೆ ಹಗ್ಗ ಕಟ್ಟಿ ವಧೇ ಮಾಡಿ ಅದರ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ವಾಹನದಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಸಾಗಾಟ ಮಾಡಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2021, ಕಲಂ ಕಲಂ 279 ಐ.ಪಿ.ಸಿ ಮತ್ತು ಕಲಂ 8, 9, 11 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964 , ಕಲಂ. 11 (1) (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ-1960 ಹಾಗೂ ಕಲಂ 192 (ಎ) ಐ.ಎಮ್.ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 10-04-2021 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ