ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುಂದರ ಪೂಜಾರಿ (38) ತಂದೆ: ಮಾಧವ ಪೂಜಾರಿ ವಾಸ: ಚಳ್ಳಿ ಮನೆ, ಕರಾವಳಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 08/03/2023 ರಂದು  ಮಧ್ಯಾಹ್ನ  2:30 ಗಂಟೆಗೆ  ಅವರ KA-31 EE-1217 ನೇ ಮೋಟಾರು ಸೈಕಲ್ ನ್ನು ದೊಂಬೆಯಿಂದ  ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಪಡುವರಿ ಗ್ರಾಮದ ಸೋಮೇಶ್ವರ ಈಶ್ವರ ದೇವಸ್ಥಾನದ ಬಳಿ ಬರುತ್ತಿರುವಾಗ ಸುಂದರ ಪೂಜಾರಿ ಇವರ ಎದುರಿನಿಂದ KA-12 P-3977 ನೇ ಕಾರು ಚಾಲಕನು ಆತನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ರಸ್ತೆಯ ತೀರಾ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಸುಂದರ ಪೂಜಾರಿ ರವರ  ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಮೋಟಾರು ಸೈಕಲ್ ಸಮೇತ ರಸ್ತೆಗೆ  ಬಿದ್ದು  ಅವರ ಬಲಕಾಲಿನ ಗಂಟಿನ ಕೆಳಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿತವಾಗಿದ್ದು  ಅಲ್ಲಿದ್ದ  ಸ್ಥಳೀಯರು ಹಾಗೂ ಕೃಷ್ಣ ಪೂಜಾರಿಯವರು ಉಪಚರಿಸಿ ಚಿಕಿತ್ಸೆ  ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು  ಪರೀಕ್ಷಿಸಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಕ್ಕೆ ಕರೆದುಕೊಂಡು ಹೋಗಲು   ತಿಳಿಸಿದ ಮೇರೆಗೆ  ಮೋಹನ ರವರು ಸುಂದರ ಪೂಜಾರಿ ರವರನ್ನು ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ  ಕರೆದು ಕೊಂಡು ಬಂದಲ್ಲಿ ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 40/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ನಾರಾಯಣ ಆಚಾರ್ಯ (68) ತಂದೆ: ದಿ. ಶೇಷಗಿರಿ ಆಚಾರ್ಯ ವಾಸ: ಅಕ್ಕಸಾಲಿಗರ ಮನೆ, ಶೇಷಾದ್ರಿ  ನಿಲಯ ,ಹೆರಂಜಾಲು ಗ್ರಾಮ, ಬೈಂದೂರು ಇವರು ತನ್ನ  ಮಗ ಪ್ರಭಾಕರ ಆಚಾರ್ಯ (36) ರವರೊಂದಿಗೆ ಹೆರಂಜಾಲು ಗ್ರಾಮದ  ಅಕ್ಕಸಾಲಿಗರ ಮನೆ ಶೇಷಾದ್ರಿ  ನಿಲಯ ಎಂಬಲ್ಲಿ  ವಾಸ ಮಾಡಿಕೊಂಡಿರುತ್ತಾರೆ.    ಪ್ರಭಾಕರ ಆಚಾರ್ಯ ರವರು   ದಿನಾಂಕ 08/03/2023 ರಂದು ತಮ್ಮನಾದ ರವೀಂದ್ರ ಆಚಾರ್ಯನೊಂದಿಗೆ ಕೋಟೇಶ್ವರಕ್ಕೆ  ಮರದ ಕೆಲಸದ ಬಗ್ಗೆ  ಹೋಗಿ  ರಾತ್ರಿ 9:30 ಕ್ಕೆ ಮನೆಗೆ ವಾಪಾಸ್ಸು ಬಂದು ಊಟ ಮಾಡಿ ರಾತ್ರಿ 11:00 ಗಂಟೆಗೆ ಮಲಗಿದ್ದವರು ರಾತ್ರಿ 12:00 ಗಂಟೆಗೆ ಎದ್ದು ಪ್ರಿಡ್ಜ್ ನಲ್ಲಿದ್ದ  ನೀರು ಕುಡಿದು ಮಲಗಿದ್ದವರು ಬೆಳಿಗ್ಗೆ  07:00 ಗಂಟೆಯವೆರೆಗೆ ಏಳದೇ ಇದ್ದುದನ್ನು ಕಂಡು ನಾರಾಯಣ ಆಚಾರ್ಯ ರವರು ಎಬ್ಬಿಸಲು ಹೋದಾಗ  ಮೈ ತಣ್ಣಗಾಗಿದ್ದು ಮೃತಪಟ್ಟಿರುವುದು ಕಂಡು ಬಂದಿದ್ದು,ಪ್ರಭಾಕರ ಆಚಾರ್ಯ   ರವರು ದಿನಾಂಕ 08/03/2023 ರಂದು ರಾತ್ರಿ  12:00 ಗಂಟೆಯಿಂದ ದಿನಾಂಕ 09/03/2023 ರ  ಬೆಳಿಗ್ಗೆ  07:00 ಗಂಟೆಯ ಮಧ್ಯಾವದಿಯಲ್ಲಿ ಮನೆಯಲ್ಲಿ ಮಲಗಿದ್ದವರು ಹೃದಯಾಘಾತದಿಂದ ಅಥವಾ ಇನ್ಯಾವುದೋ  ಕಾರಣದಿಂದ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 14/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಫು: ಪಿರ್ಯಾದಿದಾರರಾದ ದಾಮೋದರ  (66) ಗಂಡ: ನಕ್ಕುರ ಪೂಜಾರಿ ವಾಸ: ಸೈಟ್ ನಂಬ್ರ 95, ಕುಲಾಯಿ ಪೋಸ್ಟ್, ಮಂಗಳೂರು ಇವರ ಚಿಕ್ಕಮ್ಮನ ಮಗನಾದ ಸಂತೋಷ  (48) ಉಳಿಯಾರಗೋಳಿ ಗ್ರಾಮ ಎಂಬಾತನು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 08/03/2023 ರಂದು ಮಧ್ಯಾಹ್ನ 4:00 ಗಂಟೆಗೆ ಮೀನುಗಾರಿಕೆಗೆಂದು ತನ್ನ  ಗೆಳೆಯ  ಕಿಶೋರ್ ರವರೊಂದಿಗೆ ತೆರಳಿ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಮೀನುಗಾರಿಕೆ ಮಾಡುತ್ತಿದ್ದ ಸಮಯ ನೀರಿನ ಸೆಳತಕ್ಕೆ ಸಿಲುಕಿ ಸಂತೋಷನು ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿರುತ್ತಾನೆ. ಆ ಸಮಯದಲ್ಲಿ ಕೀಶೋರನು ರಕ್ಷಣೆಗೆ ಧಾವಿಸಿದರು ಕೈಗೆ ಸಿಗದೆ ನೀರಿನ ಒಳಗೆ ಮುಳುಗಿ ಮೃತ ಪಟ್ಟಿರುತ್ತಾನೆ. ನಂತರ ಊರಿನವರೆಲ್ಲಾ ಸೇರಿ ಸಮುದ್ರದ ನೀರಿನಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 09/03/2023 ರಂದು ಸಂಜೆ 3:30 ಗಂಟೆ ಹೊತ್ತಿಗೆ ಯಾರ್ಡ್ ಬೀಚ್ ಗಿಂತ 500 ಮೀಟರ್ ದೂರದಲ್ಲಿ ಚಂದುರವರ ಮನೆಯ ಸಮೀಪ ಸಮುದ್ರದ ದಡದಲ್ಲಿ ಸಂತೋಷ್ ನ ಮೃತ ದೇಹ ಪತ್ತೆಯಾಗಿರುತ್ತದೆ. ಸಂತೋಷನು ದಿನಾಂಕ 08/03/2023 ರಂದು ಸಾಯಂಕಾಲ 4:00 ಗಂಟೆಗೆ  ಮೀನುಗಾರಿಕೆ ಮಾಡುತ್ತಿದ್ದಾಗ ಸಮುದ್ರದ ನೀರಿನ ಸೆಳತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿ  ಸಮುದ್ರದ ನೀರಿನಲ್ಲಿ ಮುಳುಗಿ ದಿನಾಂಕ 08/03/2023 ರಂದು ಸಾಯಂಕಾಲ 4:00 ಗಂಟೆಗೆಯಿಂದ   ದಿನಾಂಕ 09/03/2023 ಸಂಜೆ 3:30 ಗಂಟೆಯ ಮಧ್ಯಾವದಿಯಲ್ಲಿ ಮೃತಪಟ್ಟಿರುವುದಾಗಿದೆ. ಆತನ ಮರಣದಲ್ಲಿ ಬೇರೆ ಯಾವುದೇ ಕಾರಣವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು  ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ರಾಜು ಪೂಜಾರಿ (65) ತಂದೆ: ದಿ/ ಸೋಮಪ್ಪ ಪೂಜಾರಿ  ವಾಸ: ಭಮುರಾಂಬ, ನಿಲಯ ಗರಡಿಗುಡ್ಡೆ ಬಜಗೋಳಿ ಅಂಚೆ ಮುಡಾರು ಗ್ರಾಮ  ಕಾರ್ಕಳ ಇವರ ಮಗ ಪ್ರದೀಪ, (32) ಇವರು ಎಲೆಕ್ಟ್ರೀಷಿಯನ್ ವೃತ್ತಿ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ತನ್ನ ತಾಯಿ ಅಮಣಿ ರವರು 6 ವರ್ಷಗಳ ಹಿಂದೆ ಅನಾರೋಗ್ಯದಿಂದ ಮತ್ತು ತಮ್ಮ ಪ್ರಶಾಂತನು ಕಳೆದ 8 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದು ದಿನಾಂಕ 08/03/2023 ರಂದು ಮಧ್ಯಾಹ್ನ 2:00 ಗಂಟೆಯಿಂದ ಈ ದಿನ ದಿನಾಂಕ 09/03/2023 ರಂದು ಬೆಳಗ್ಗೆ 7:30 ಗಂಟೆಯ ಮಧ್ಯೆ ತಮ್ಮ ವಾಸವ್ತವ್ಯದ ಮನೆಯೊಳಗೆ ಅಡುಗೆ ಕೋಣೆಯ ಮಾಡಿಗೆ ಅಳವಡಿಸಿದ ಕಬ್ಬಿಣದ ಅಡ್ಡಕ್ಕೆ ಬೈರಾಸಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 15/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ   ಗಣೇಶ್‌‌‌‌‌‌ ಪೂಜಾರಿ  (35) ತಂದೆ  ದಿ: ಬಚ್ಚ  ಪೂಜಾರಿ ಗಾವಳಿ  ಮನೆ,  ಕೊರವಡಿ,  ಕುಂಭಾಶಿ  ಗ್ರಾಮ, ಕುಂದಾಪುರ  ರವರು ದಿನಾಂಕ  09/03/2023  ರಂದು  ಬೆಳಿಗ್ಗೆ  07:00  ಗಂಟೆ  ಸಮಯಕ್ಕೆ  ಕೆಲಸಕ್ಕೆ  ಹೊರಡುವಾಗ  ನೆರೆಮನೆಯ  ವಾಸಿ ಹಾಗೂ ದೂರದ  ಸಂಬಂಧಿ  ಸೋಮ ರವರ  ಮಗ  ಸಂತೋಷ್‌‌‌‌‌‌ನು  ಸಂಜೆ  7:00 ಗಂಟೆ ವೇಳೆಗೆ  ಸಾಸ್ತಾನಕ್ಕೆ   ಯಕ್ಷಗಾನ ನೋಡಲು  ಅವನ  ಸ್ಕೂಟಿಯಲ್ಲಿ  ಹೋದವನು  ವಾಪಾಸು  ಮನೆಗೆ  ಬಂದಿರುವುದಿಲ್ಲವಾಗಿ  ಸಂತೋಷ್‌‌‌ನ   ಬಾವ  ದಯಾನಂದ ಎಂಬವರು ತಿಳಿಸಿದ್ದು, ನಂತರ  ಗಣೇಶ್‌‌‌‌‌‌ ಪೂಜಾರಿ  ರವರು ಮತ್ತು  ದಯಾನಂದ  ಸೇರಿ  ಸಂತೋಷ್‌‌‌‌‌‌ನನ್ನು  ಹುಡುಕಲು ಯಕ್ಷಗಾನ ನಡೆಯುವ ಸ್ಥಳಕ್ಕೆ ಹಾಗೂ ಸಾಲಿಗ್ರಾಮಕ್ಕೆ ಹೋಗಿ  ಪರಿಚಯದವರಲ್ಲಿ  ವಿಚಾರ  ತಿಳಿಸಿ ಹುಡುಕುತ್ತಿದ್ದಾಗ  ಸಾಲಿಗ್ರಾಮದ  ಹಾಳುಕೋಟೆ  ಎಂಬಲ್ಲಿ  ಒಬ್ಬ  ಬಿದ್ದುಕೊಂಡಿರುವುದಾಗಿಯೂ ಹಾಗೂ ಒಂದು  ಬೈಕು ವಿಶ್ವಕರ್ಮ  ಸಭಾ ಭವನದ  ಬಳಿ  ಇರುವುದಾಗಿ  ತಿಳಿಸಿದ್ದು,  ಅದರಂತೆ  ದಿನಾಂಕ  09/03/2023  ರಂದು ಬೆಳಿಗ್ಗೆ  ಸುಮಾರು  08:15  ಗಂಟೆ  ಸಮಯಕ್ಕೆ  ಸಾಲಿಗ್ರಾಮ ಹಾಳುಕೋಟೆ  ಎಂಬಲ್ಲಿಗೆ  ಹೋಗಿ  ನೋಡಿದಾಗ   ಯಕ್ಷಗಾನ ಕೇಂದ್ರದ ಎದುರು  ಸಂತೋಷ್‌‌‌‌ನು  ಬಿದ್ದುಕೊಂಡಿದ್ದು,  ಆತನ  ಗಲ್ಲ,  ಕುತ್ತಿಗೆ,  ಕಾಲಿಗೆ  ಯಾವುದೋ  ಆಯುಧದಿಂದ  ಗೀರಿದಂತಹ  ತೀವ್ರ  ತರದ  ರಕ್ತಗಾಯವಾಗಿದ್ದು, ರಕ್ತ ಸೋರುತ್ತಿತ್ತು. ಏನಾಯಿತೆಂದು  ಕೇಳಿದಾಗ  ಮಾತನಾಡುತ್ತಿರಲಿಲ್ಲ. ಮೋಟಾರು  ಸೈಕಲ್‌‌‌‌‌‌‌ ಕೆಎ-20-ಇಎಸ್‌‌‌‌‌ವಿಶ್ವಕರ್ಮ  ಸಭಾ  ಭವನದಿಂದ  ಸ್ವಲ್ಪ  ಮುಂದೆ  ರಾ.ಹೆ .  66  ರ  ಬಳಿ  ನಿಂತಿರುತ್ತದೆ.   ಕೂಡಲೇ ಒಂದು ವಾಹನದಲ್ಲಿ ಕೋಟೇಶ್ವರ  ಎನ್‌‌‌‌‌.ಆರ್‌‌‌‌. ಆಚಾರ್ಯ  ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ.  ಆಸ್ಪತ್ರೆಗೆ ಕರೆದುಕೊಂಡು  ಹೋಗಿರುವುದಾಗಿದೆ . ಸಂತೋಷ್‌‌‌‌‌‌‌ನಿಗೆ  ಯಾರೋ  ದುಷ್ಕರ್ಮಿಗಳು  ಯಾವುದೋ  ಆಯುಧದಿಂದ  ಹಲ್ಲೆ  ಮಾಡಿ ತೀವ್ರ  ತರದ ಗಾಯಗೊಳಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 39/2023 ಕಲಂ: 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಹೈಡಸ್‌ ಸಪ್ಬೆ ನೆವುಮೇ, (24), ವಾಸ:-36 , ನ್ಯೂ ಬಿಸುಂಪು ಗ್ರಾಮ, ಪೆರೆನ್‌ ಜಿಲ್ಲೆ , ನಾಗಲ್ಯಾಂಡ್ ರಾಜ್ಯ ಇವರ ಸೋದರತ್ತೆಯ ಮಗನಾದ ದಿತಲಕ್‌(24) ನು ಕಳೆದ ಎರಡೂವರೆ ವರ್ಷಗಳಿಂದ ಉಡುಪಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಬೈಲಕೆರೆ ಗೋಕುಲಧಾಮ ಅಪಾರ್ಟ್‌ಮೆಂಟಿನ ಹಿಂಭಾಗದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಾಯಿರಾಧಾ ನಿತ್ಯಧಾಮದ ಕಾರ್ಮಿಕರ ಷೆಡ್‌ನಲ್ಲಿ ವಾಸಮಾಡಿಕೊಂಡಿರುತ್ತಾನೆ.ಈ ದಿನ ದಿನಾಂಕ 09/03/2023 ರಂದು ರಾತ್ರಿ 09:30 ಗಂಟೆಯ ಸುಮಾರಿಗೆ ನಾವು ಷೆಡ್‌ನಲ್ಲಿರುವಾಗ ರಾಜ್‌ಕುಮಾರ್‌ ಷಾ ಎಂಬಾತನು ನಮ್ಮಲ್ಲಿಗೆ ಬಂದು ದಿತಲಕ್‌ನಲ್ಲಿ ಬೀಡಿ ಸೇದುವ ಸಲುವಾಗಿ ಲೈಟರ್‌ ಕೇಳಿದಾಗ, ದಿತಲಕ್‌ನು ತನ್ನಲ್ಲಿ ಲೈಟರ್‌ ಇಲ್ಲವೆಂದು ತಿಳಿಸಿದಾಗ ಆತನು ಸಿಟ್ಟುಗೊಂಡು ʼನಿನಗೆ ನಾನ್ಯಾರೆಂದು ಗೊತ್ತಲ್ಲವಾ? ಎಂದು ಅವಾಚ್ಯವಾಗಿ ಬೈದು, ದಿತಲಕ್‌ ನ್ನು ಷೆಡ್ ನಿಂದ ಹೊರಗೆಳೆದು ,ಕೈಯಿಂದ ಹೊಡೆದು, ಕಾಲಿನಿಂದ ತುಳಿದಿರುತ್ತಾನೆ.ಆ ಸಮಯದಲ್ಲಿ ನಾನು ಹಾಗೂ ಅಸ್ಸಾಂ ರಾಜ್ಯದ ಪ್ರಖಾಂತೋರವರು ಬಿಡಿಸಲು ಹೋದಾಗ ರಾಜ್‌ಕುಮಾರ್‌ ಷಾ ನ ಕಡೆಯವರಾದ ತರುಣ್‌ ಘೋಷ್‌, ಉತ್ತಮದಾಸ್‌, ನಿರ್ಮಲ್‌ ರಜತ್‌, ನೇತಾಯಿ ಎಂಬವರು ಬಂದು ಒಟ್ಟಿಗೆ ಸೇರಿ ನಮಗೆ ಕೈಯಿಂದ ಹೊಡೆದಿದ್ದಲ್ಲದೇ,ರಾಜ್‌ಕುಮಾರ್‌ ಷಾ ನು ದಿತಲಕ್‌ ನಿಗೆ ʼನಿನ್ನನ್ನು ನಾನು ಕೊಂದು ಹಾಕುತ್ತೇನೆʼಎಂದು ಹೇಳಿ ,ಅಲ್ಲೇ ಬಿದ್ದದ್ದ ಕಬ್ಬಿಣದ ಪೈಪಿನಿಂದ ದಿತಲಕ್‌ ನ ತಲೆಗೆ ಮತ್ತು ಹೊಟ್ಟೆಗೆ ಹೊಡೆದಿದ್ದು ತದನಂತರ ತರುಣ್‌ ಘೋಷ್‌ನು ಅಲ್ಲೇ ಬಿದ್ದಿದ್ದ ಮರದ ಪ್ಲೈವುಡ್‌ ನಿಂದ ದಿತಲಕ್‌ ನ ಹೊಟ್ಟೆಗೆ ಹೊಡೆದ ಪರಿಣಾಮ ದಿತಲಕ್‌ ನು ಅರೆಪ್ರಙ್ಞಾವಸ್ಥೆಗೊಳಗಾಗಿದ್ದು ನಂತರ ಫಿರ್ಯಾದುದಾರರು ಮತ್ತು ಪ್ರಖಾಂತೋ ಹಾಗೂ ಇತರರು ಸೇರಿ ದಿತಲಕ್‌ನನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿನ ವೈದ್ಯರು ದಿತಲಕ್‌ನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.ನನ್ನ ಸೋದರತ್ತೆಯ ಮಗನಾದ ದಿತಲಕ್‌ ನು ಬೀಡಿ ಸೇದಲು ಲೈಟರ್‌ ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆತನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ , ಕೊಲೆ ಮಾಡಲು ಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2023 ಕಲಂ: 143,147,504,506,307 r/w 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 10-03-2023 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080