ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿ ಗಣೇಶ್‌ (31) ತಂದೆ:ದಿ ಕುಟ್ಟಿ ಆಚಾರ್ಯ    ವಾಸ:4-25 ಪಡು ಮಡುಂಬು ಇನ್ನಂಜೆ ಗ್ರಾಮ   ಇವರು ದಿನಾಂಕ 09.03.2023 ರಂದು ತನ್ನ KA-20-AB-3218 ನೇದರ ರಿಕ್ಷಾದಲ್ಲಿ ಇನ್ನಂಜೆಯಿಂದ ಮಣಿಪಾಲ ಪೆರಂಪಳ್ಳಿಗೆ ಬಾಡಿಗೆಗೆ ಹೋಗುತ್ತಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ  ಪೆರಂಪಳ್ಳಿಯ 7ನೇ ಮುಖ್ಯ ರಸ್ತೆಯ ಬಾಳಿಗ ಆಸ್ಪತ್ರೆಯ ಸಮೀಪ ಸಂಜೆ 04.00 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಎಡ ಭಾಗದ ಅಡ್ಡ ರಸ್ತೆಯಿಂದ KA-20-Z-6745‌ನೇದರ ಕಾರಿನ ಚಾಲಕ  ನಾರಾಯಣ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾ ಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಎಡ ಕಣ್ಣಿ ಬಳಿ ತೆರೆಚಿದ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 50/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 10/03/2023 ರಂದು ಬೆಳಿಗ್ಗೆ 8:20  ಗಂಟೆ , ಕುಂದಾಪುರ  ತಾಲೂಕಿನ, ಕಾಳಾವರ ಗ್ರಾಮದ ರೈಲ್ವೇ ಸೇತುವೆಯ ಬಳಿ ರಸ್ತೆಯಲ್ಲಿ, ಆಪಾದಿತ ಚಂದ್ರಶೇಖರ ಶೆಟ್ಟಿ  ಎಂಬವರು KA20-MB-3873 ನೇ ಇನ್ನೋವಾ ಕಾರನ್ನು  ಕೊಟೇಶ್ವರ  ಕಡೆಯಿಂದ ಬಿದ್ಕಲ್‌‌ಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಬಿದ್ಕಲ್‌‌ಕಟ್ಟೆ ಕಡೆಯಿಂದ ಸುನಿಲ್‌ಎಂಬವರು ಪಿರ್ಯಾದಿ ಶಿವ ಕುಮಾರ್‌ ಪ್ರಾಯ 23 ವರ್ಷ ತಂದೆ ನಿಂಗಪ್ಪ ವಾಸ: ಸರಳಿಕಲ್‌‌‌‌‌‌‌‌.  ರಕ್ಕಸಗಿ ಗ್ರಾಮ ಎಂಬವರನ್ನು KA29-EL-7414ನೇ ಪಲ್ಸರ್‌ಬೈಕಿನಲ್ಲಿ  ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸದ್ರಿ ಬೈಕ್‌‌ಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ  ಪರಿಣಾಮ, ಶಿವ ಕುಮಾರ್‌ರವರಿಗೆ ಹಣೆಗೆ, ತುಟಿ ಹಾಗೂ ಬಲಕಾಲಿನ  ಹೆಬ್ಬೆರಳಿಗೆ ಗಾಯವಾಗಿದ್ದು, ಸುನಿಲ್‌ನಿಗೆ ಹೊಟ್ಟೆ, ತಲೆಗೆ ಒಳಜಖಂ ಗಾಯ ಹಾಗೂ ಮುಖ ಹಾಗೂ ಕೈ ಕಾಲುಗಳಿಗೆ ರಕ್ತಗಾಯವಾಗಿ ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು,  ಗಂಭೀರ ಗಾಯಗೊಂಡ ಸುನಿಲ್‌ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 28/2023 ಕಲಂ:279, 337, 338  IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ದಿನಾಂಕ: 10.03.2023 ರಂದು ಆರೋಪಿತ ಈರಯ್ಯ ಕಡರಿಮತ ಕೆಎ 31 8449 ನೇ ಅಶೋಕ ಲೈಲಾಂಡ್ ಗೂಡ್ಸ್ ಲಾರಿ ಚಾಲಕ ನು ತನ್ನ ಕೆಎ-31-8449 ನೇ ಅಶೋಕ ಲೈಲಾಂಡ್ ಗೂಡ್ಸ್ ಲಾರಿಯನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಬೆಳಿಗ್ಗಿನ ಜಾವ 2.00 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಕ್ರಾಸ್ ರಾ. ಹೆ 66 ರ ಡಿವೈಡರ್ ಮೇಲೆ ಹೋಗಿ ಡಿವೈಡರ್‌ಗೆ ಅಳವಡಿಸಿದ ಸೋಲಾರ್ ಬ್ಲಿಂಕರ್ MBCB Sign Board  ಜಖಂಗೊಂಡು ನವಯುವ ಹೈವೆ ಪ್ರಾಧಿಕಾರ ಕಂಪನಿಗೆ ರೂ. 1,27,281/- ಹಣ ನಷ್ಟ ಉಂಟಾಗಿರುತ್ತದೆ . ಈ  ಬಗ್ಗೆ ಕೆ. ರವಿಕುಮಾರ್ (30) ತಂದೆ: ಇಸ್ರಾಯಿಲ್ ವಾಸ: ಕುಂದ, 16ಬಿ,16-40, ಟೈಟಾಸ್ ನಗರ, ಕಂಡ್ರಿಕ ಗೂಡೆಮ್, ತಂಗೆಲಮೂಡಿ, ಏಲೂರು, ವೆಸ್ಟ್ ಗೋದಾವರಿ, ಆಂಧ್ರಪ್ರದೇಶ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  37/2023 : ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಪಿರ್ಯಾದಿ : ಕೃಷ್ಣ ಪೂಜಾರಿ (51), ತಂದೆ: ದಿ. ಪದ್ದ ಪೂಜಾರಿ, ವಾಸ: ಗುಡ್ಡಿಮನೆ, ಗರಡಿ ಬಳಿ, ಬಾರ್ಕೂರು ಅಂಚೆ, ಹೊಸಾಳ ಗ್ರಾಮ ರವರು ದಿನಾಂಕ 09.03.2023 ರಂದು ಕೆಲಸ ಮುಗಿಸಿ ಮನೆಯಿಂದ ಬಾರ್ಕೂರು ಪೇಟೆ ಕಡೆಗೆ ಸಾಯಿಬ್ರಕಟ್ಟೆ-ಬ್ರಹ್ಮಾವರ ಮುಖ್ಯ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಹೊಸಾಳ ಗ್ರಾಮದ ಬಾರ್ಕೂರು ಮಂದಾರ್ತಿ ಕ್ರಾಸ್‌ಸಮೀಪ ಇರುವ ಅರುಣ ಎಂಬವರ ಸೆಲೂನ್‌ಬಳಿ ಸಂಜೆ 7:30 ಗಂಟೆಗೆ ತಲುಪುವಾಗ ಅವರ ಎದುರಿನಿಂದ ಅಂದರೆ ಬ್ರಹ್ಮಾವರ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಆರೋಪಿ ಮೀಲಾಕ್ಷ ರವರು ಅವರ ಬಾಬ್ತು KA-20-EF-2459 ನೇ ಹೊಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ ಸಂದೀಪ ಎಂಬವರನ್ನು ಸಹಸವಾರರನ್ನಾಗಿ ಕೂರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರ ಎಡಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಫಿರ್ಯಾದಿದಾರರು ಹಾಗೂ ಆರೋಪಿ ಮತ್ತು ಸಹ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಎಡ ಕಾಲಿಗೆ ತೀವೃ ತರಹದ  ಒಳ ಜಖಂ  ಆಗಿರುತ್ತದೆ.  ಅಲ್ಲದೇ ಆರೋಪಿಗೆ ತರಚಿದ ಗಾಯವಾಗಿದ್ದು, ಸಹಸವಾರ ಸಂದೀಪನಿಗೆ ಯಾವುದೇ ಗಾಯವಾಗಿರುವುದಿಲ್ಲ ಈ ಬಗ್ಗೆ ಬ್ರಹ್ಮಾವರ ಠಾಣೆ   ಅಪರಾಧ ಕ್ರಮಾಂಕ 38/2023 : ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತರ ಪ್ರಕರಣ

  • ಮಲ್ಪೆ:  ಪಿರ್ಯಾದಿ: ಸುರೇಶ ಕೆ ಪ್ರಾಯ: 43ತಂದೆ: ಸೋಮ ವಾಸ: ಒಳಮಾಡುಬೆಟ್ಟು, ಕೋಟತಟ್ಟು,ಕೋಟ  ಇವರ ಅಣ್ಣ ಸುಬ್ಬಣ್ಣ ಪ್ರಾಯ:50 ವರ್ಷ ಇವರು ಪರಿಶಿಷ್ಠ ಜಾತಿಯವರಾಗಿದ್ದು ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸಿಕೊಂಡಿರುತ್ತಾರೆ, ದಿನಾಂಕ;08-03-2023 ರಂದು ಸಮಯ ಸುಮಾರು ರಾತ್ರಿ 08:00 ರಿಂದ 08:30 ಗಂಟೆಯ ವೇಳೆಯಲ್ಲಿ ಮಲ್ಪೆಯ ರಾಜ್‌ ಮಹಲ್‌ ಲಾಡ್ಜ್‌ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪಿರ್ಯಾದಿದಾರರ ಅಣ್ಣನ ಮೃತದೇಹ ಕಂಡುಬಂದಿದ್ದು ಸ್ಥಳದಲ್ಲಿ ಡೆತ್‌ ನೋಟ್‌ ದೊರಕಿದ್ದು ಅದು ಪಿರ್ಯಾದಿದಾರರ ಅಣ್ಣನ ಕೈ ಬರಹ ಎಂದು ಮನವರಿಕೆಯಾಗಿರುತ್ತದೆ, ಪಿರ್ಯಾದಿದಾರರ ಅಣ್ಣನ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯವರ ಅಸಹಕಾರ ಮತ್ತು ರಿಯಾಜ್‌  ಎಂಬ ವ್ಯಕ್ತಿಯ ಮೋಸದ ನಡವಳಿಕೆ ಕಾರಣ  ವಾಗಿರುತ್ತದೆ, ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್‌ ಎ  ಸುವರ್ಣ, ಎಂ ಡಿ ಜಗದೀಶ್‌ ಮೊಗವೀರ , Ex ಎಂಡಿ ಜೆ ಕೆ ಸೀನ ಗಂಗೊಳ್ಳಿ , ಮ್ಯಾನೇಜರ್‌ ಸಾರಿಕಾ, ಸಾಲಗಾರ ರಿಯಾಜ್‌ ಇವರುಗಳು ನೀಡಿದ ಮಾನಸಿಕ ಒತ್ತಡ ಕಿರುಕುಳ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬಬೇಕೆಂದು ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಸಿರುತ್ತಾರೆ, ಪಿರ್ಯಾದಿದಾರರ ಅಣ್ಣನ ಸಾವಿನಲ್ಲಿ ಸಂಶಯವಿದ್ದು ಆದ್ದರಿಂದ ಆಡಳಿತ ಮಂಡಳಿ  ಮತ್ತು ಸಾಲಗಾರ ರಿಯಾಜ್‌ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ದೂರು ನೀಡಿದ್ದು ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 23/2022 ಕಲಂ:306 ಐ.ಪಿ.ಸಿ 3(2)(v) sc/st act ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿ: ಶ್ರೀ ದಿನೇಶ (48) ತಂದೆ: ಕಿನ್ನಿಗ ಹರಿಜನ ವಾಸ:  ಬಂಡಸಾಲೆ , ದರ್ಖಾಸು, ಕುಂಟಾಡಿ ಕಲ್ಯಾ ಗ್ರಾಮ, ಕಾರ್ಕಳ  ಇವರು ಆದಿ ದ್ರಾವಿಡ ಜಾತಿಯವರಾಗಿದ್ದು  ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಸ ,ನಂ 159/1 ರಲ್ಲಿ 0.38 ಎಕ್ರೆ ಸ್ಥಿರಾಸ್ತಿ ಸರಕಾರದಿಂದ ಮಂಜೂರಾಗಿದ್ದು ಅದರಲ್ಲಿ ಮನೆಕಟ್ಟಿ ಕೃಷಿ ಅಭಿವೃದ್ದಿ ಮಾಡಿಕೊಂಡಿರುತ್ತಾರೆ,  ಈ ಸ್ಥಿರಾಸ್ತಿಗೆ ಮತ್ತು ಇತರರ ಸ್ಥಿರಾಸ್ತಿಗಳಿಗೆ ಬಂಡಸಾಲೆ –ಅರ್ಬಿ-ಪಾರಬೆಟ್ಟು ಪಂಚಾಯತ್ ರಸ್ತೆಯಿಂದ ಸ.ನಂಬ್ರ 286/5ರ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆ ಹಲವಾರು ವರ್ಷಗಳಿಂದ ಊರ್ಜಿತ ಇದ್ದು ಸ.ನಂ , 286/5ರ ಪಹಣಿಯ ಕಾಲಂ ನಂಬ್ರ 11 ರಲ್ಲಿ ಕೂಡ ದಾರಿ ಹಕ್ಕು ನಮೂದಾಗಿರುತ್ತದೆ,  ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಬಂಡಸಾಲೆ-ಅರ್ಬಿ- ಪಾರಬೆಟ್ಟು ಪಂಚಾಯತ್ ರಸ್ತೆಯನ್ನು ಆರೋಪಿಯಗಳು  ಇತ್ತೀಚಿಗೆ ಜೆಸಿಬಿ ಯಂತ್ರದ ಮೂಲಕ ಅಗೆದು ಹಾಕಿ ಸದ್ರಿ ರಸ್ತೆಗೆ ಅಡ್ಡಲಾಗಿ ಮರಗಳನ್ನು ಕಡೆದು ಹಾಕಿ ವಾಹನ ಸಂಚಾರಕ್ಕೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಓಡಾಡಲು ಅಸಾದ್ಯವಾಗಿರುವುದಲ್ಲದೆ ಪಿರ್ಯಾದುದಾರರ ಮತ್ತು ಆಸುಪಾಸಿನ ಮನೆಗಳಿಗೆ ಗ್ರಾಮ ಪಂಚಾಯತಿಯಿಂದ ಒದಗಿಸಿದ ನಳ್ಳಿ ನೀರಿನ ಸಂರ್ಪಕದ ಪೈಪ್ ಲೈನ್ ಅನ್ನು ತುಂಡರಿಸಿ ತೊಂದರೆ ನೀಡಿದ್ದು ದಿನಾಂಕ: 05/03/2023 ರಂದು ಬೆಳಿಗ್ಗೆ ಸುಮಾರು 08:30 ಗಂಟೆಗೆ ಪಿರ್ಯಾದುದಾರರು ಬಂಡಸಾಲೆ –ಅರ್ಬಿ-ಪಾರಬೆಟ್ಟು ಪಂಚಾಯತ್ ರಸ್ತೆಯಲ್ಲಿ ಮರದ ತಡೆಯನ್ನು ದಾಟಿಕೊಂಡು ಬರುತ್ತಿದ್ದಾಗ ಎದ್ರಿಯವರು ಪಿರ್ಯಾದುದಾರರನ್ನು ಉದ್ದೇಶಿಸಿ ಜೋರಾಗಿ ಬೊಬ್ಬೆ ಹೋಡೆಯುತ್ತಾ “ಸಾರ್ವಜನಿಕ ರಸ್ತೆಯಲ್ಲಿ ನಿಂತು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದುಕೊಂಡು ಹಲ್ಲೆ ನಡೆಸಲು ಅಟ್ಟಿಸಿಕೊಂಡು ಬಂದಾಗ ಪಿರ್ಯಾದುದಾರರು ಸ್ಥಳದಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದು ಆರೋಪಿಗಳ ಜೀವ ಬೇದರಿಕೆಯಿಂದ ಮನೆಯಿಂದ ಹೊರ ಬರಲು ಹೆದರಿ ಪಿರ್ಯಾದುದಾರರು  ತಡವಾಗಿ ಈ ದಿನ ಪ್ರಕರಣ ದಾಖಲಿಸಲು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 32/2023 ಕಲಂ: 431,506 ಜೊತೆಗೆ 34  ಭಾದಸಂ ಮತ್ತು 3(1)(S),3(1)(r),3(2) (v-a) ಎಸ್ ಸಿ/ಎಸ್ ಟಿ ತಿದ್ದುಪಡಿ ಆದ್ಯಾದೇಶ- 2014ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು, ಮಾಳ  ಗ್ರಾಮದ ದರ್ಖಾಸು ಮನೆಯ ನಿವಾಸಿ ಪಿರ್ಯಾದಿ : ಪ್ರಶಾಂತ್ ಪೂಜಾರಿ ರವರ ಅಣ್ಣ ಉಮೇಶ್ ಪೂಜಾರಿ, ಪ್ರಾಯ 40 ವರ್ಷ, ಇವರಿಗೆ 12 ವರ್ಷದ ಹಿಂದೆ ಮದುವೆಯಾಗಿದ್ದು ಮಕ್ಕಳಿರುವುದಿಲ್ಲ.ಆದ್ದರಿಂದ  ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ದಿನಾಂಕ 09/03/2023 ರಂದು 21:00 ಗಂಟೆಗೆ ಮನೆಯ ತೋಟಕ್ಕೆ ಹೋಗಿ ಯಾವುದೋ ವಿಷ ಪದಾರ್ಥ ಸೇವಿಸಿ ಬಿದ್ದವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ರಾತ್ರಿ 11:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 16/2023 ಕಲಂ: 174 ಸಿ,ಆರ್,ಪಿ,ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 10-03-2023 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080