ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 09/03/2022  ರಂದು 18:30 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಹುಕ್ರಟ್ಟೆ ಗಾಂಧಿನಗರದ ಬಳಿ ಹಾದು ಹೋಗುವ ಕಾರ್ಕಳ-ನೆಲ್ಲಿಕಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಿರ್ಯಾದಿದಾರರಾದ ಅಸಿಫ್ ಸಾಹೇಬ್ (30), ತಂದೆ ಅಕ್ಬರ್ ಸಾಹೇಬ್ ಬಜಗೋಳಿ ಹೌಸ್ ನಲ್ಲೂರು ಗ್ರಾಮ ನೆಲ್ಲಿಕಾರು ಪೊಸ್ಟ್  ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ ಇವರು KA-19-ET-4818 ನೇ ನಂಬ್ರದ ಸ್ಕೂಟಿಯಲ್ಲಿ  ಬಶೀರ್ ಸಾಹೇಬ್ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಾರ್ಕಳ  ಕಡೆಯಿಂದ ನೆಲ್ಲಿಕಾರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಅದೇ ದಿಕ್ಕಿನಲ್ಲಿ KA-04-MC-7600 ನೇ ನಂಬ್ರದ ಇನ್ನೊವ ಕಾರಿನ ಚಾಲಕ ಕೃಷ್ಣೆ ಗೌಡ ಎಂಬುವವರು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸಹಾಸವಾರನೊಂದಿಗೆ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಹಿಂಬದಿ ಮೂಳೆ ಮುರಿತದ ಗಾಯ ಹಾಗೂ ಬಲಕೈಗೆ ತರಚಿದ ಗಾಯ ಮತ್ತು ಸಹ ಸವಾರನ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ರುದ್ರ ಆಚಾರಿ (50), ತಂದೆ: ದಿ.ನರಸಿಂಹ ಆಚಾರಿ, ವಾಸ:: 2/187 ಜನತ ಕಾಲೋನಿ ಜಪ್ತಿ ಕಾಲೋನಿ ತಾಲೂಕು ಇವರು ದಿನಾಂಕ 08/03/2022 ರಂದು ಮದ್ಯಾಹ್ನ 14:00 ಗಂಟೆ ಸಮಯಕ್ಕೆ ಗುಳ್ಳಾಡಿಯಿಂದ –ಜಪ್ತಿಯ ಮನೆಗೆ ಹೋಗಲು ತನ್ನ ಮೋಟಾರು ಸೈಕಲ್ KA-06-U-1492 ನಲ್ಲಿ ಉಳ್ತೂರಿನಿಂದ ಬೇಳೂರು ಕಡೆಗೆ ಹೋಗುತ್ತಾ ಇರುವಾಗ ಬೇಳೂರು ಪಟೇಲರಮನೆ ಎದುರು ತಿರುವಿನಲ್ಲಿ ಕೆಂಪು ಬಣ್ಣದ ಟಿಪ್ಪರ್ ಲಾರಿಯನ್ನು ಅದರ  ಚಾಲಕ ಅತೀವೇಗ  ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡು ತೀರ ಬಲ ಬದಿಗೆ ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ  ಕೆಳಗೆ ಬಿದ್ದು ಬಲ ಕಾಲ ಗಂಟಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಟಿಪ್ಪರ್ ಚಾಲಕ ಟಿಪ್ಪರನ್ನು ನಿಲ್ಲಿಸದೇ ಬೇಳೂರು ಕಡೆಗೆ ಟಿಪ್ಪರನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ  ವಿಷಯ ತಿಳಿದ ಪಿರ್ಯಾದಿದಾರರ ತಮ್ಮ ಗಣೇಶ ಆಚಾರಿ ಸ್ಥಳಕ್ಕೆ ಬಂದು ಪಿರ್ಯಾದಿದಾರರನ್ನು ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ  ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ  ದಾಖಲಿಸಿರುತ್ತಾರೆ. ಈ ಬಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2022  ಕಲಂ:  279, 338 ಐಪಿಸಿ ಮತ್ತು 134 (a)(b) IMV act     ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಗಣೇಶ ಪೂಜಾರಿ (29), ತಂದೆ: ಶಿವ ಪೂಜಾರಿ, ವಾಸ: ನಂದೀಕೇಶ್ವರ ನಿಲಯ ಕೊಡುಬೈಲು ಶಿರಿಯಾರ ಬ್ರಹ್ಮಾವರ ತಾಲೂಕು ಇವರ  ಅಣ್ಣ ಸುಧಾಕರ ಪೂಜಾರಿ ಎಂಬುವವರು ದಿನಾಂಕ 07/03/2022 ರಂದು ಸಂಜೆ ಸಮಯ ಕೆಲಸ ಮುಗಿಸಿ ಉಡುಪಿಯಿಂದ ತಮ್ಮ ಮನೆಯಾದ ಶಿರಿಯಾರ ಗ್ರಾಮದ ಕೊಡ್ಲಬೈಲು ಎಂಬಲ್ಲಿಗೆ ಬರುತ್ತಿದ್ದು ದಾರಿ ಮಧ್ಯೆ ಅವರು ಯಕ್ಷಗಾನ ಕಾರ್ಯಕ್ರಮ ವೀಕ್ಷಿಸಲು ಹೋದವರು ರಾತ್ರಿ ವೇಳೆ ತಮ್ಮ ನಂಬ್ರ. KA-20-EY-1109 ನೇ ಸ್ಕೂಟಿಯಲ್ಲಿ ಶಿರಿಯಾರ-ಸೈಬ್ರಕಟ್ಟೆ ರಸ್ತೆಯಲ್ಲಿ ಸೈಬ್ರಕಟ್ಟೆ ಕಡೆಯಿಂದ ಶಿರಿಯಾರ ಕಡೆಗೆ ಹೋಗುತ್ತಿದ್ದವರು ಕಳ್ಳಾಡಿ ಎಂಬಲ್ಲಿಗೆ ತಲುಪಿದಾಗ ಸುಧಾಕರ ರವರು ಸವಾರಿ ಮಾಡಿಕೊಂಡಿದ್ದ ಸ್ಕೂಟಿಯು ಆಕಸ್ಮಿಕವಾಗಿ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಸ್ಕೂಟಿ ಸವಾರ ಸುಧಾಕರ ಪೂಜಾರಿ ರವರ ತಲೆಗೆ ತೀವ್ರ ಸ್ವರೂಪದ ಒಳನೋವು ಹಾಗೂ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಸುಧಾಕರ ರವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ ಸಮಯ ನೋವು ಹೆಚ್ಚಾದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೊದಲಿಗೆ ಕುಂದಾಪುರ ಸರಕಾರಿ ಆಸ್ಪತ್ರೆಗೂ ಆ ಬಳಿಕ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಫಕೀರಪ್ಪ ಹನುಮಂತಪ್ಪ ಮಲ್ಲುರ (53), ತಂದೆ: ದಿ.ಹನುಮಂತಪ್ಪ, ವಾಸ: ಮಂತೋಡಿ ಅಂಚೆ ಮತ್ತು ಗ್ರಾಮ ಸವಣೂರು ತಾಲೂಕು  ಹಾವೇರಿ ಜಿಲ್ಲೆ ಇವರ  ತಮ್ಮನಾದ ಯಲ್ಲಪ್ಪ ಹನುಮಂತಪ್ಪ ಮಲ್ಲೂರ(35) ರವರಿಗೆ ವಿಪರೀತ ಮಧ್ಯಪಾನದ ಚಟವಿದ್ದು,  ದಿನಾಂಕ 06/03/2022 ರಂದು ಕುಂದಾಪುರದ ಶಾಲೋಮ್ ಹೊಟೆಲ್ ಬಳಿ ಇರುವ ಫ್ಲೈ ಓವರ್ ಕೆಳಗೆ ಬಿದ್ದುಕೊಂಡಿದ್ದವರನ್ನು ಆಟೋರಿಕ್ಷಾದವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ  ವೈಧ್ಯಾಧಿಕಾರಿವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ 108ನೇ ಆಂಬುಲೆನ್ಸ್ ವಾಹನದಲ್ಲಿ ಕಳುಹಿಸಿದ್ದು ನಂತರ ದಿನಾಂಕ 08/03/2022 ರಂದು ಯಲ್ಲಪ್ಪ ಹನುಮಂತಪ್ಪ ಮಲ್ಲೂರ  ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಶಿವಪುತ್ರಪ್ಪ(59), ತಂದೆ: ಲಕ್ಷ್ಮಣ ಲಮಾಣಿ  , ವಾಸ:  ಹೊಳೆ ಆಲೂರು ರೊಣ -ತಾಲೂಕು ಗದಗ ಜಿಲ್ಲೆ ಇವರ  ಪರಿಚಯದ  ಬಾದಾಮಿ ತಾಲೂಕಿನ ನಾಗರಾಳ  ಗ್ರಾಮದ ನಿವಾಸಿ ಪರಸಪ್ಪ ಹಿರೇಣ್ಣ (65)  ಇವರು ಮಲ್ಪೆ ಬಂದರಿನಲ್ಲಿ ಕೂಲಿ ಕೆಲಸ  ಮಾಡಿಕೊಂಡಿದ್ದು ರಾತ್ರಿ ಸಮಯ ಮಲ್ಪೆ ಮೀನಾಕ್ಷಿ ಹೋಟೆಲ್ ಎದುರುಗಡೆ  ಇರುವ  ಹಳೇಶಾಲಾ ಕಟ್ಟಡದಲ್ಲಿ ಮಲಗುತ್ತಿದ್ದು ಪರಸಪ್ಪ ಹಿರೇಣ್ಣ  ನವರು ವಿಪರೀತ ಮಧ್ಯಪಾನ ಮಾಡುತ್ತಿದ್ದರು.  ದಿನಾಂಕ 27/02/2022 ರಂದು ಬೆಳಿಗ್ಗೆ 7:00 ಗಂಟೆಗೆ  ಮಲ್ಪೆ ಅಯ್ಯಪ್ಪ ಗುಡಿ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಕುಸಿದು ಬಿದ್ದಿದ್ದು ಅವರನ್ನು ಪಿರ್ಯಾದಿದಾರರು ಮತ್ತು ಮೋಹನ್ ರವರು ಉಪಚರಿಸಿ  ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾಸ್ಪತ್ರೆ ಅಜ್ಜರಕಾಡುವಿಗೆ ಕರೆದುಕೊಂಡು ಹೋಗಿ , ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ   ಕರೆದುಕೊಂಡು ಹೋಗಿ ಸೇರಿಸಿರುತ್ತಾರೆ . ದಿನಾಂಕ 07/03/2022 ರಂದು 11:45 ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 10-03-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080