ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 09/03/2021 ರಂದು ಬೆಳಿಗ್ಗೆ 08:30 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ದೊಡ್ಡಮನೆ  ದ್ವಾರದ ಬಳಿ ಸಂಕಲಕರಿಯ ಮುಂಡ್ಕೂರು ರಸ್ತೆಯಲ್ಲಿ ಪಿರ್ಯಾದಿದಾರರಾದ ಅಶೋಕ ಪೂಜಾರಿ (49), ತಂದೆ:  ದಿ. ಬೋಜ ಪೂಜಾರಿ , ವಾಸ: ಸುಂದರಿ ನಿವಾಸ, ಸಂಕಲ ಕರಿಯ ಮುಂಡ್ಕೂರು  ಅಂಚೆ ಮತ್ತು ಗ್ರಾಮ ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ನಿಂತುಕೊಂಡಿರುವಾಗ ಸಂಕಲಕರಿಯದಿಂದ ಮುಂಡ್ಕೂರು ಕಡೆಗೆ  KA-19-MC- 6286  ನೇ ನಂಬ್ರದ  ಕ್ರೇನ್ ಚಾಲಕ ತನ್ನ ಕ್ರೇನ್ ನ್ನು ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದಿದ್ದು, ಆ ಸಮಯ ಕ್ರೇನ್ ನ ಹಿಂಭಾಗದ ಶೇಪ್ ಸಂಕಲಕರಿಯದಿಂದ ಮುಂಡ್ಕೂರು ಕಡೆಗೆ ಹೋಗುತ್ತಿದ್ದ KA-20-EU-0522 ಸ್ಕೂಟಿಗೆ ತಾಗಿಸಿದ  ಪರಿಣಾಮ ಸ್ಕೂಟಿ ಸವಾರೆ ಪ್ರಮೀಳಾ ಸುರೇಶ್  ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು,  ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ  ಮಾತನಾಡುತ್ತಿರಲಿಲ್ಲ,  ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಬ್ರಹ್ಮಾವರ: ದಿನಾಂಕ 08/03/2021 ರಂದು ಬೆಳಿಗ್ಗೆ  ಪಿರ್ಯಾದಿದಾರರಾದ ಕುಮಾರ್ ಸೇರಿಗಾರ್ (57), ತಂದೆ: ಬಾಬು ದೇವಾಡಿಗ, ವಾಸ: ಸೂರಾಲು ಜಂಗಾರು ಬೆಟ್ಟು, ಕೊಕ್ಕರ್ಣೆ ಅಂಚೆ, ಪೆಜಮಂಗೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಸೈಕಲ್‌ನಲ್ಲಿ ಕೊಕ್ಕರ್ಣೆ ಪೇಟೆಯಿಂದ ಸೂರಾಲು ಜಂಗಾರು ಬೆಟ್ಟು ನಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಕುದಿ ಗ್ರಾಮದ ಸೂರಲು ಕ್ರಾಸ್ ಬಳಿ ಮನೆ ಕಡೆಗೆ ಹೋಗಲು ರಸ್ತೆಯ ಎಡ ಬದಿಯಲ್ಲಿ ತನ್ನ ಸೈಕಲ್‌ನ್ನು ನಿಲ್ಲಿಸಿ ಹಿಂದಿನಿಂದ ಬರುವ ವಾಹನಗಳನ್ನು ಗಮನಿಸುತ್ತಿದ್ದಾಗ ಬೆಳಿಗ್ಗೆ 10:45 ಗಂಟೆಗೆ ಕೊಕ್ಕರ್ಣೆ ಕಡೆಯಿಂದ ಹೆಬ್ರಿ ಕಡೆಗೆ ಆರೋಪಿ ಮಂಜುನಾಥ ತನ್ನ KA-20-ET-6747ನೇ ಹೊಂಡಾ ಆ್ಯಕ್ಟೀವಾ 5 ಜಿ ಮೋಟಾರ್  ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಪಾದದ ಬಳಿ ಹಾಗೂ ಎಡಕೈಯ ಮುಂಗೈ ಬಳಿ ತೀವ್ರ ಮೂಳೆ ಮುರಿತದ ಗಾಯ ಅಲ್ಲದೇ ಎಡಕಾಲಿನ ಮಣಿಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ.  ಗಾಯಾಳು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 09/03/2021 ರಂದು ಪಿರ್ಯಾದಿದಾರರಾದ ಬೇಬಿ (48), ಗಂಡ: ಸುನೀಲ್, ವಾಸ: ಅತಿಥಿ ನಿಲಯ, ನೀರ್‌ಜೆಡ್ಡು, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರು  ಮಗಳು ಸುಷ್ಮಾ ಹಾಗೂ ಮಗ ಕಿರಣನೊಂದಿಗೆ ಅವರ ಪರಿಚಯದ ಶರತ್‌ ರವರ KA-20-AB-1345 ನೇ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ಕುಳಿತು ಚೇರ್ಕಾಡಿಯಿಂದ ನೀರ್‌ಜೆಡ್ಡುನಲ್ಲಿರುವ ಮನೆಗೆ ಬೆಣಗಲ್ – ಕೊಕ್ಕರ್ಣೆ ರಸ್ತೆಯಲ್ಲಿ ಕೊಕ್ಕರ್ಣೆ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಪೆಜಮಂಗೂರು ಗ್ರಾಮದ, ಮೊಗವೀರಪೇಟೆ ರಾಮಣ್ಣ ಎಂಬುವವರ ಮನೆಯ ಸಮೀಪ ರಸ್ತೆಯಲ್ಲಿ  ಎದುರಿನಿಂದ ಕೊಕ್ಕರ್ಣೆ ಕಡೆಯಿಂದ ಆರೋಪಿ ಸುನೀಲ್ ತನ್ನ KA-20-ET-9629 ನೇ  ಹೊಂಡಾ ಶೈನ್ ಮೋಟಾರ್  ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ಆತನ ತೀರಾ ಬಲ ಭಾಗಕ್ಕೆ ಸವಾರಿ ಮಾಡಿ ರಸ್ತೆಯ ಎಡ ಭಾಗದಲ್ಲಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಆರೋಪಿ ಹಾಗೂ ಸಹಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಆಟೋರಿಕ್ಷಾದ ಒಳಗೆ ಇದ್ದ ಪಿರ್ಯಾದಿದಾರರ ಬಲಕೈ ಬೆರಳುಗಳ ಬುಡಕ್ಕೆ ಮೂಳೆ ಮುರಿತದ ಒಳ ಜಖಂ ಉಂಟಾಗಿದ್ದು ಹಾಗೂ ಪಿರ್ಯಾದಿದಾರರ ಮಗಳು ಸುಷ್ಮಾ ರವರ ಬಲಕೈ ಮುಂಗೈ ಗಂಟಿನ ಬಳಿ ರಕ್ತ ಗಾಯ ಉಂಟಾಗಿರುತ್ತದೆ. ಅಲ್ಲದೇ ಆರೋಪಿ ಸುನಿಲ್‌ರವರ ಬಲಕಾಲಿಗೆ, ಬಲ ಮುಂಗೈ ಗಂಟಿಗೆ  ರಕ್ತಗಾಯವಾಗಿದ್ದು, ಸಹಸವಾರ ಹಿಮಕರ ರವರಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದಿದಾರರು ಮತ್ತು ಸುಷ್ಮಾ ರವರವನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಹಾಗೂ ಆರೋಪಿ ಸುನಿಲ್ ನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ಶ್ರೀಮತಿ ನಸೀಮಾ (50), ಗಂಡ: ಶೇಖ್ ರಿಯಾಜ್, ವಾಸ: ನಸೀಮಾ ಮಂಜಿಲ್, ಮಥುರಾ ಪಟ್ಟಣ ಬಸದಿ ರಸ್ತೆ, ಕೈಕಂಬ, ಅಜೆಕಾರು, ಮರ್ಣೆ ಗ್ರಾಮ ಕಾರ್ಕಳ ತಾಲೂಕು ಕಾರ್ಕಳ ತಾಲೂಕು ಇವರು ದಿನಾಂಕ 08/03/2021 ರಂದು ಮದ್ಯಾಹ್ನ 11:00 ಗಂಟೆಗೆ ಗಂಡನೊಂದಿಗೆ ಕಾರ್ಕಳದ ಶಾದಿ ಮಹಲ್ ಎಂಬಲ್ಲಿ ತನ್ನ ಗಂಡನ ಅಣ್ಣನ ಮಗಳ ಮದುವೆಗೆ ಹೋಗಿದ್ದು, ಕಿರಿಯ ಮಗ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿರುತ್ತಾನೆ.  ಹೋಗುವ ಸಂದರ್ಭದಲ್ಲಿ ಮನೆಯ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಬೀಗ ಹಾಕಿ ಹೋಗಿದ್ದು, ಮದುವೆ ಕಾರ್ಯಕ್ರಮ ಮುಗಿಸಿ ಸಂಜೆ 4:30 ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗವನ್ನು ಜಜ್ಜಿದ್ದು, ಬೀಗ ತೆರೆಯಲು ಬಾರದ ಕಾರಣ ಮನೆಯ ಮುಂಭಾಗದಲ್ಲಿರುವ ಇನ್ನೊಂದು ಬಾಗಿಲ ಬಳಿ ಹೋಗಿ ನೋಡಿದಾಗ ಬಾಗಿಲು ತೆರೆದಿರುವುದು ಕಂಡು ಬಂದಿರುವುದರಿಂದ ಬಾಗಿಲಿನ ಮೂಲಕ ಒಳಗೆ ಹೋಗಿ ಅಲ್ಲಿಂದಲೇ ಹಿಂಬದಿಯ ಬಾಗಿಲು ನೋಡಿದಾಗ ಆ ಬಾಗಿಲು ಕೂಡ ತೆರೆದಿರುವುದು ಕಂಡು ಬಂದಿರುತ್ತದೆ, ನಂತರ ಮಲಗುವ ಕೋಣೆಗೆ ಹೋಗಿ ನೋಡಿದಾಗ ಕೋಣೆಯಲ್ಲಿ ಕಬ್ಬಿಣದ ಕಪಾಟಿನಲ್ಲಿರಿಸಿದ್ದ 1) ಚಿನ್ನದ ನೆಕ್ಲೆಸ್ 1 ಪವನ್ ಮೌಲ್ಯ ರೂಪಾಯಿ 32,000/-, 2) ಚಿನ್ನದ ಬ್ರಾಸ್ಲೆಟ್ 1 ಪವನ್ ಮೌಲ್ಯ ರೂಪಾಯಿ 32,000/-, 3) ಚಿನ್ನದ ಬೆಂಡೋಲೆ ಜುಮ್ಕಿ 2 ಪವನ್  ಮೌಲ್ಯ ರೂಪಾಯಿ 64,000/-, 4) ನಗದು 2 ಲಕ್ಷ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ನಗದು ಮತ್ತು ಸೊತ್ತಿನ ಒಟ್ಟು ಮೌಲ್ಯ ರೂಪಾಯಿ 3,28,000/- ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2021  ಕಲಂ :454 ,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 07/03/2021 ರಂದು 15:00 ಗಂಟೆಯಿಂದ ದಿನಾಂಕ 09/03/2021 ರಂದು 21:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿದಾರರಾದ ವಿವೇಕ್‌ (51) ತಂದೆ: ಜಿ.ಎಸ್‌.ಪೂಂಜ, ವಾಸ: ಓಂ ಗಣೇಶ ನಿಲಯ, ಕುಕ್ಕುದಕಟ್ಟೆ, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು ಇವರ  ಮನೆಯ ಮುಖ್ಯ ದ್ವಾರದ ಬಾಗಿಲನ್ನು  ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಮನೆಯ ಒಳಗಡೆ ಬೆಡರೂಂ ನಲ್ಲಿದ್ದ  ಕಪಾಟಿನ ಬೀಗವನ್ನು ಮುರಿದು ಕಪಾಟಿನ ಒಳಗಡೆ ಇದ್ದ ವಜ್ರ ಹಾಗೂ  ಬಂಗಾರದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ಮೌಲ್ಯ 7,80,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021  ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ದಿನಾಂಕ 07/03/2021 ರಂದು ಪಾಂಡು (47),ತಂದೆ: ಮಾಚ, ವಾಸ: 1/101 ಯಕ್ಷೇಶ್ವರಿ ಕೃಪಾ, ಸಿದ್ದಮನೆ, ಗಣೇಶ ನಗರ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರು ಇತರರೊಂದಿಗೆ IND-KA-03-MM-35 ನೇ ನಂಬರಿನ “ಸಾಗರದೀಪ” ಎಂಬ ಪರ್ಶಿಯನ್ ಬೋಟ್‌ನಲ್ಲಿ ಗಂಗೊಳ್ಳಿ ಬಂದರಿನಿಂದ 5 ಕಿ.ಮೀ ದೂರ ಆಳ ಸಮುದ್ರದಲ್ಲಿ ಬೆಳಿಗ್ಗಿನ ಜಾವ 2:00 ಗಂಟೆಗೆ ಮೀನುಗಾರಿಕೆ ಕೆಲಸ ಮಾಡುತ್ತಿರುವಾಗ ಸಮುದ್ರದಲ್ಲಿ ಒಮ್ಮೆಲೆ ಅಬ್ಬರದ ಅಲೆ ಬಂದ ಪರಿಣಾಮ ಬೋಟ್‌ ತೇಲಿದಾಗ ಪಾಂಡು ರವರು ಆಕಸ್ಮಿಕವಾಗಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದು. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಪಾಂಡು ರವರ ಮೃತ ದೇಹವು ದಿನಾಂಕ 09/03/2021 ರಂದು ಸಂಜೆ 5:30 ಗಂಟೆಗೆ ಗಂಗೊಳ್ಳಿ ಬಂದರಿನಿಂದ ಸುಮಾರು 4 ಕಿ.ಮೀ ದೂರ ಸಮುದ್ರದಲ್ಲಿ ಪತ್ತೆಯಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಟ್ಕಾ ಜುಗಾರಿ ಪ್ರಕರಣಗಳು

 • ಕಾಪು: ದಿನಾಂಕ 09/03/2021  ರಂದು ಐ. ಆರ್. ಗಡ್ಡೇಕರ್, ಪೊಲೀಸ್ ಉಪನಿರೀಕ್ಷಕರು,  ಕಾಪು ಪೊಲೀಸ್ ಠಾಣೆ  ಇವರು ರೌಂಡ್ಸ ನಲ್ಲಿ ಇರುವಾಗ ಮೂಡಬೆಟ್ಟು  ಗ್ರಾಮದ ಲತಾ ವೈನ್ಸ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು  ಹಿಡಿದು ವಿಚಾರಸಲಾಗಿ ತನ್ನ ಹೆಸರು  ರಾಕೇಶ (27),  ತಂದೆ:  ಜಯಂತ,  ವಾಸ : ಹನುಮಂತ ನಗರ  ಪುತ್ತೂರು ಉಡುಪಿ ಎಂದು ತಿಳಿಸಿರುವುದಾಗಿದೆ. ಆತನು ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು  ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು ರೂಪಾಯಿ 1380/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 78(1)(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ದಿನಾಂಕ 09/03/2021  ರಂದು ಐ. ಆರ್. ಗಡ್ಡೇಕರ್, ಪೊಲೀಸ್ ಉಪನಿರೀಕ್ಷಕರು,  ಕಾಪು ಪೊಲೀಸ್ ಠಾಣೆ  ಇವರು  ರೌಂಡ್ಸ ನಲ್ಲಿ ಇರುವಾಗ  ಏಣಗುಡ್ಡೆ  ಗ್ರಾಮದ ಕಟಪಾಡಿ ಬಸ್‌ನಿಲ್ದಾಣದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ  ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು   ಹಿಡಿದು ವಿಚಾರಸಲಾಗಿ ತನ್ನ ಹೆಸರು ಮನೀಷ್ (22), ತಂದೆ : ವಿನೋದ, ವಾಸ : ಶಾರದಾ ನಿಲಯ, ಅಡಕದಕಟ್ಟೆ ನಿಟ್ಟೂರು ಗ್ರಾಮ ಉಡುಪಿ ಎಂದು ತಿಳಿಸಿರುವುದಾಗಿದೆ. ಆತನು ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು ರೂಪಾಯಿ 1210/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021  ಕಲಂ: 78(1)(111) KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 09/03/2021 ರಂದು ಸಂಗೀತಾ, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು ಉಪ್ಪುಂದ ಅಂಬಾಗಿಲು ಬಳಿ ರೌಂಡ್ಸ ಕರ್ತವ್ಯದಲ್ಲಿರುವಾಗ ಉಪ್ಪುಂದ ಗ್ರಾಮದ ಪೂರ್ಣಿಮಾ ಬಾರ್ ಆಂಡ್ ರೆಸ್ಟೊರೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ ಆಪಾದಿತರಾದ 1)ಮಣಿಕಂಠ ಮೊಗವೀರ (29), ತಂದೆ:ನಾರಾಯಣ ಮೊಗವೀರ, ವಾಸ: ಮುಕುಂದನ ಹಿತ್ಲು ನಂದನವನ ಗ್ರಾಮ ಬೈಂದೂರು ತಾಲೂಕು, 2)ನಾಗರಾಜ ಖಾರ್ವಿ (28), ತಂದೆ:ಮುತ್ತಯ್ಯ ಖಾರ್ವಿ, ವಾಸ:ವೆಂಕಟಿಮನೆ, ಕರ್ಕಿಕಳಿ,ಉಪ್ಪುಂದ ಗ್ರಾಮ ಬೈಂದೂರು ತಾಲೂಕು,  3)ಶ್ರೀಧರ ಖಾರ್ವಿ (42), ತಂದೆ:ಸುಕ್ರ ಖಾರ್ವಿ, ವಾಸ:ಕುರಿಮನೆ ಕರ್ಕಿಕಳಿ,ಉಪ್ಪುಂದ ಗ್ರಾಮ ಬೈಂದೂರು ತಾಲೂಕು , 4)ಸತೀಶ ಖಾರ್ವಿ, ತಂದೆ:ಸುಬ್ಬ ಖಾರ್ವಿ, ವಾಸ:ಬಬ್ರಿಮನೆ ಮಡಿಕಲ್,ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರನ್ನು ಹಿಡಿದು ಆಟಕ್ಕೆ ಬಳಸಿದ 1) ಹಳೆಯ ದಿನಪತ್ರಿಕೆ-01, 2) 52 ಇಸ್ವೀಟ್ ಎಲೆಗಳು, 3)ನಗದು ರೂಪಾಯಿ 615/-ನ್ನು  ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 87 KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶಮೀಲಾ ನೈನಾ(40), ಗಂಡ: ರವೀಂದ್ರ ಸಿರಿ, ವಾಸ: ಬಿ ಬಿ ಎಂ ಶಾಲೆಯ ಹತ್ತಿರ, ಬೈಲೂರು 76 ಬಡಗುಬೆಟ್ಟು ಉಡುಪಿ ಇವರಿಗೆ ಸಿಕ್ಕ ಅಸ್ತಿಯಲ್ಲಿ ಮೂರು ಅಂಗಡಿ ಕೋಣೆ, ವಾಸದ ಮನೆ  ಇದ್ದು, ಅಂಗಡಿ ಕೋಣೆಗಳಲ್ಲಿ ಒಂದು ದೇವಿಕಾ ಚಿಕನ್ಸ್ ಮತ್ತು ವೆಲ್ಡಿಂಗ್ ಶಾಪ್ ಇರುತ್ತದೆ. ಪಿರ್ಯಾದಿದಾರರ ಅಸ್ತಿಯಲ್ಲಿ ಅರೋಪಿ 1)ಗೀತಾ ಹೈಡಿ ಶಿರಿ (47), ಗಂಡ: ಅನಿಲ್ ಅರ್ಮನ್, 2) ಜಾಯ್ಸ್ ಪುಷ್ಪಲತಾ ಕರ್ಕಡ(68), ಗಂಡ:ಜೋಸೆಫ್ ಸುದರ್ಶನ್ ಶಿರಿ, ವಾಸ: ಹಿಂದೂಸ್ಥಾನ್ ಸೋಮಿಲ್ ಹತ್ತಿರ 76 ಬಡಗುಬೆಟ್ಟು ಉಡುಪಿ ಇವರು ತಮಗೆ ಸೇರಿದ ಹಿಂದೂಸ್ಥಾನ್ ಸೋ ಮಿಲ್ ಗೆ ಪಿರ್ಯಾದಿದಾರರಿಗೆ ಸೇರಿದ ಖಾಸಗಿ ರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಮಿಲ್ಲಿಗೆ ಸಾಗಾಟ ಮಾಡುವುದಲ್ಲದೆ ಪಿರ್ಯಾದಿದಾರರ ಜಾಗದಲ್ಲಿ ಮಿಲ್ಲಿಗೆ ಸಂಬಂಧಪಟ್ಟ ಮರಗಳನ್ನುದಾಸ್ತಾನು ಮಾಡಿರುತ್ತಾರೆ. ಅಲ್ಲದೆ ಪಿರ್ಯಾದಿದಾರರು ತನ್ನ ಜಾಗದಲ್ಲಿರುವಾಗ ಅರೋಪಿಗಳು ಅವಾಚ್ಯ ಶಬ್ದಗಳಿಂದ  ಬೈದು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 268, 448, 504,  506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಅಶ್ವಿನ್ ಕುಂದರ್ (37), ಗಂಡ:  ದಿ|| ಎಡ್ವಿನ್ ಕುಂದರ್, ವಾಸ: ಇಮ್ಯಾನುವೆಲ್ ವಿಲ್ಲಾ, ವೈಷ್ಣವಿ ಲೇಔಟ್, ಕೊರಂಗ್ರಪಾಡಿ ಇವರು ಸಮಿಲಾ ನೈನಾ ಎಂಬುವವರಿಗೆ ಸೇರಿದ ಅಂಗಡಿ ಕೋಣೆಯಲ್ಲಿ ದೇವಿಕಾ ಚಿಕನ್ಸ್  ಎನ್ನುವ ವ್ಯವಹಾರ ನಡೆಸಿಕೊಂಡಿದ್ದು ದಿನಾಂಕ 30/08/20220 ರಂದು ಅರೋಪಿ 1)ಗೀತಾ ಹೈಡಿ ಶಿರಿ (47), ಗಂಡ: ಅನಿಲ್ ಅರ್ಮನ್, 2) ಫೇಡಲಿಯೋ (21), ತಂದೆ:ಜೋಸೆಫ್ ಸುದರ್ಶನ್ ಶಿರಿ, ವಾಸ: ಹಿಂದೂಸ್ಥಾನ್ ಸೋಮಿಲ್ ಹತ್ತಿರ 76 ಬಡಗುಬೆಟ್ಟು ಉಡುಪಿ ಇವರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅಂಗಡಿ ಕೆಲಸಗಾರರಾದ ಲಕ್ಷ್ಮಿ , ದಿನೇಶ್ ಮತ್ತು ಪಿರ್ಯಾದಿದಾರರ ಅಣ್ಣ ಅಜಿತ್ ಕುಂದರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ  ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ:  447, 504,506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಉಡುಪಿ: ದಿನಾಂಕ 09/03/2021 ರಂದು 2:50 ಗಂಟೆಗೆ ಪಿರ್ಯಾದಿದಾರರಾದ ಸುಧಾಕರ  ಕಲ್ಮಾಡಿ, ಮಾಲಕರು ಅಂಬಾ ಮೋಟರ್ಸ್ ಕಲ್ಮಾಡಿ ಮಲ್ಪೆ ಉಡುಪಿ ಇವರು KA-20-B-4488 ನೇ ಬಸ್‌‌‌ನ್ನು ಎಂಜಿಎಂ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದಾಗ 2 ನೇ ಅರೋಪಿ ಸಂತೋಷ್  ಮ್ಯಾನೇಜರ್  ಸೀಮಾ ಟ್ರವೆಲ್ಸ್ ಗುಂಡಿ ಬೈಲ್  ಉಡುಪಿ ಇವರು  ಬಸ್ ನಂಬ್ರ KA-19-D-3209 ನೇ ಸೀಮಾ ಬಸ್‌‌‌ನ್ನು ಅಡ್ಡವಾಗಿ ನಿಲ್ಲಿಸಿ ಪಿರ್ಯಾದಿದಾರರ ಬಸ್ಸಿನ ಸಿಬ್ಬಂದಿಯವರೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಬೆದರಿಕೆ ಒಡ್ಡಿರುತ್ತಾರೆ. ಅಲ್ಲದೆ 1 ನೇ ಅರೋಪಿ ತೇಜಸ್ ಪಾಲನ್, ತಂದೆ: ಭಾಸ್ಕರ ಪಾಲನ್, ವಾಸ: ಸೀಮಾ ಟ್ರಾವೆಲ್ಸ್ ಗುಂಡಿಬೈಲ್ ಉಡುಪಿ ಇವರು KA-20-MC-3355 ನೇ ಇನ್ನೋವಾ ಕಾರನ್ನು ಬಸ್ಸಿಗೆ ಅಡ್ಡ ನಿಲ್ಲಿಸಿ ಬಸ್‌‌ನ್ನು ರಿವರ್ಸ ತೆಗೆಯಲು ಹೇಳಿದಾಗ 2 ನೇ ಅರೋಪಿ ಬಸ್‌ನ್ನು ರಿವರ್ಸ್ ತೆಗೆದು ಪಿರ್ಯಾದಿದಾರರ ಬಸ್‌‌ನ್ನು ಜಖಂ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ:  341, 427, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 10-03-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ