ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ : ದಿನಾಂಕ 09/03/2021 ರಂದು ಸಂಜೆ 7:15 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ  ರತ್ನ ಫಾರೆವರ್ ಬಳಿ, ಪಿರ್ಯಾದಿದಾರರಾದ ರಮ್ಜಾನ್ (35), ತಂದೆ:  ಡೋಂಗ್ರಿ ಸಾಹೇಬ್, ವಾಸ: ಲೆಮಿನಾಕ್ರಾಸ್ ಬಳಿ ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಹೋಟೇಲ್ ಆದ ಫಿಶ್ ಲ್ಯಾಂಡ್ ನಲ್ಲಿ ಕುಳಿತುಕೊಂಡಿರುವಾಗ ಪಿರ್ಯಾದಿದಾರರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಅಶೋಕರಾಯ ಎಂಬುವವರು ದಿನಸಿ ಸಾಮಾನು ತೆಗೆದುಕೊಂಡು ಮಣ್ಣು ರಸ್ತೆಯಲ್ಲಿ  ನಿಂತುಕೊಂಡಿರುವಾಗ ಬೆಳ್ಮಣ್ ಕಡೆಯಿಂದ  ಕಾರ್ಕಳ ಕಡೆಗೆ  KA-14-EM–2759   ನೇ ನಂಬ್ರದ  ಬೈಕ್ ಸವಾರ ತನ್ನ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕ ಸವಾರಿ ಮಾಡಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಅಶೋಕರಾಯರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಹಾಗೂ ಆರೋಪಿ ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ಅಶೋಕರಾಯರಿಗೆ ಬಲಕಾಲು ಮೂಳೆ ಮುರಿತ ಹಾಗೂ ಹಣೆಯಲ್ಲಿ ರಕ್ತಗಾಯವಾಗಿದ್ದು, ಆರೋಪಿಗೂ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾದ ಕೋಟಿ ಪೂಜಾರಿ (50), ತಂದೆ: ಚಂದು ಪೂಜಾರಿ, ವಾಸ: ಅಕ್ಷಯ ನಿಲಯ ಮಾರಿಕಾಂಬ ದೇವಸ್ಥಾನದ ಬಳಿ ಕೋಟ ತಟ್ಟು ಪಡುಕೆರೆ ಬ್ರಹ್ಮಾವರ ತಾಲೂಕು ಹಾಗೂ ಚೆನ್ನಯ್ಯ (50) ಇವರು  ಅವಳಿ ಜವಳಿ ಮಕ್ಕಳಾಗಿ ಹುಟ್ಟಿದ್ದು, ಚೆನ್ನಯ್ಯ ರವರು ವಿಪರೀತ ಕುಡಿತದ ಚಟ  ಹಾಗೂ ಹೃದಯ ಸಂಬಂಧಿ ಖಾಯಿಲೆ ಮತ್ತು ಎಡಕಾಲಿಗೆ ಗಾಯವಾಗಿ ಕೊಳೆತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಖಾಯಿಲೆ ಗುಣಮುಖವಾಗದ ಕಾರಣ ಮಾನಸಿಕನಂತೆ ವರ್ತಿಸುತ್ತಿದ್ದು,  ಚೆನ್ನಯ್ಯರು ಎಂದಿನಂತೆ ರಾತ್ರಿ ಊಟ ಮುಗಿಸಿ ದಿನಾಂಕ 10/03/2021 ರಂದು ಬೆಳಗ್ಗಿನ ಜಾವ 01:00 ಗಂಟೆಯ ವರೆಗೆ ಟಿ.ವಿ ನೋಡಿ ನಂತರ  ಮಲಗಿದ್ದವರು ಬೆಳಿಗ್ಗೆ 05:00 ಗಂಟೆಗೆ ಎದ್ದು ನೋಡಿದಾಗ ಚೆನ್ನಯ್ಯ ರವರು ಮನೆಯಲ್ಲಿ ಇಲ್ಲದೇ ಇದ್ದುದನ್ನು ಕಂಡು ಸುತ್ತ ಮುತ್ತ ಹುಡುಕಿದಾಗ ಮನೆಯ ಹತ್ತಿರದ ಮಾರಿಕಾಂಬ ದೇವಸ್ಥಾನದ ಹೊರಗೆ ಇರುವ ಬಾವಿಗೆ ರಾಟಿ ಹಾಕಿದ ಕಬ್ಬಿಣದ ಸಲಾಕೆಗೆ ಬಾವಿಯ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಟೋನಿ ರೋಶನ್ ಡಿಸಿಲ್ವಾ (41), ತಂದೆ: ದಿ| ಮಾರ್ಕ್‌ಡಿಸಿಲ್ವಾ, ವಾಸ: ಶನೋನ್ ಮಾರ್ಕ್‌, ಮನೆ ನಂ 4-10/1, ಕರ್ನಿಕರ ಹಿತ್ಲು, ಉಪ್ಪಿನಕೋಟೆ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿ ಮಿಲ್ಲಿ ಡಿಸಿಲ್ವಾ (67) ಎಂಬುವವರು ದಿನಾಂಕ 06/03/2021 ರಂದು ಬೆಳಿಗ್ಗೆ 11:15 ಗಂಟೆಗೆ ಮನೆಯ ಒಲೆಯಲ್ಲಿ ಅನ್ನ ಬೇಯಿಸುತ್ತಿರುವಾಗ ಒಲೆಯ ಬೆಂಕಿ ಆಕಸ್ಮಿಕವಾಗಿ ಅವರು ಉಟ್ಟ ಸೀರೆಗೆ ತಾಗಿ ಬೆಂಕಿ ಹತ್ತಿಕೊಂಡು ತೀವ್ರವಾಗಿ ಸುಟ್ಟ ಗಾಯಗಳಿಂದ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 10/03/2021 ರಂದು ಬೆಳಿಗ್ಗೆ 07:30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ವಿಜಯ ಕುಲಾಲ್ (39), ತಂದೆ: ಮಂಜುನಾಥ ಕುಲಾಲ್, ವಾಸ: ಮಂಜುಶ್ರೀ ನಿವಾಸ ಬಲ್ಲಾಡಿ ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರ ತಂದೆ ಮಂಜುನಾಥ ಕುಲಾಲ್ (60) ಇವರು 5-6 ವರ್ಷಗಳಿಂದ ಶಿವಮೊಗ್ಗದಲ್ಲಿರುವ ಹೋಟೇಲ್ ನಲ್ಲಿ ಕುಕ್ ಅಗಿ ಕೆಲಸ ಮಾಡಿಕೊಂಡು ತಿಂಗಳಿಗೊಮ್ಮೆ ತನ್ನ ಮನೆಯಾದ ಮುದ್ರಾಡಿ ಗ್ರಾಮದ ಬಲ್ಲಾಡಿಗೆ ಬರುತ್ತಿರುವುದಾಗಿದೆ.  ದಿನಾಂಕ 09/03/2021 ರಂದು ಮಂಜುನಾಥ ಕುಲಾಲ್ ಇವರು ಶಿವಮೊಗ್ಗದಲ್ಲಿರುವಾಗ ಅವರಿಗೆ ಎದೆ ನೋವು ಉಂಟಾಗಿದ್ದು. ಈ ಬಗ್ಗೆ ಅವರು ಶಿವಮೊಗ್ಗ ಅಸ್ಪತ್ರೆಯಲ್ಲಿ ಔಷಧಿಯನ್ನು ಪಡೆದು ಸಂಜೆ 4:00 ಗಂಟೆಗೆ ತನ್ನ ಮನೆಯಾದ ಮುದ್ರಾಡಿ ಗ್ರಾಮದ ಬಲ್ಲಾಡಿಗೆ ಬಂದಿದ್ದು.  ದಿನಾಂಕ 10/03/2021 ರಂದು  ಮಂಜುನಾಥ ಕುಲಾಲ್ ರವರು ಬೆಳಗ್ಗಿನ ಉಪಾಹಾರ ಸೇವಿಸಿ ಸುಮಾರು ಬೆಳಿಗ್ಗೆ 09:30 ಗಂಟೆಗೆ ಮನೆಯ ಹೊರಗೆ ಅಂಗಳಕ್ಕೆ ಬಂದವರು ಅಲ್ಲಿಯೇ ಕುಸಿದು ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಬೆಳಿಗ್ಗೆ 09:50 ಗಂಟೆಗೆ ಹೆಬ್ರಿ ಸರಕಾರಿ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ  ಪ್ರಕರಣ

 • ಕುಂದಾಪುರ: ದಿನಾಂಕ 10/03/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು,  ಕುಂದಾಪುರ ಪೊಲೀಸ್ ಠಾಣೆ ಇವರಿಗೆ  ಕುಂದಾಪುರ  ತಾಲೂಕು ಕೋಣಿ ಗ್ರಾಮದ ಪೂರ್ಣಿಮಾ ಬಾರ್  ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿತ  ಅಶೋಕ ಪೂಜಾರಿ (43), ತಂದೆ: ದಿವಂಗತ ಕೃಷ್ಣ ಪೂಜಾರಿ , ಹೆಚ್‌ಎಮ್‌ಟಿ ರೋಡ್ ಕೋಣಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಮಟ್ಕಾ-ಜುಗಾರಿ ಆಟಕ್ಕೆ ಬಳಸುತ್ತಿದ್ದ ನಗದು ರೂಪಾಯಿ 560/-, ಮಟ್ಕಾ ನಂಬರ್‌ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 78 (i) (iii) KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-03-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080