ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅನಿಲ್ ಕುಮಾರ್ ಸಹಾನಿ(24), ತಂದೆ: ರೂಪಲಾಲ್ ಸಹಾನಿ, ವಾಸ:ಭವಾನ ದವಾಯಿ ವಾರ್ಡ್ ನಂ:19ಭವನ ದವಾಯಿಗ್ರಾಮ ಮತ್ತುಅಂಚೆ, ದುದಾಯಿ ಬಜಾರ್ ಪೊರ್ವಿ ಚಂಪರಣಾ ಜಿಲ್ಲೆ ಬಿಹಾರ ರಾಜ್ಯ ಇವರು ದಿನಾಂಕ 09/02/2022 ರಂದು ಬಲಾಯಿಪಾದೆ ರಿಕ್ಷಾ ನಿಲ್ದಾಣದ ಬಳಿ ಮನೆಯ ಕಡೆಗೆ ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿರುವಾಗ 18:45 ಗಂಟೆಗೆ ಉಡುಪಿ ಕಡೆಯಿಂದ ಉದ್ಯಾವರದ ಧರ್ಮಸ್ದಳ ಆರ್ಯುವೇದ ಆಸ್ಪತ್ರೆಯ ಕಡೆಗೆ KA-20-MB-1860ನೇ ಕಾರಿನ ಚಾಲಕ ಯಜ್ಞೇಶ್ ಭಟ್ ಎಂಬುವವರು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಬಲಕೈ ಮತ್ತು ಬಲ ಕಾಲಿಗೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನವೀನ (30), ತಂದೆ:ನಾರಾಯಣ ನಾಯರಿ, ವಾಸ: ಕಾರ್ತಟ್ಟು  ಚಿತ್ರಪಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 08/02/2022 ರಂದು ಕೆಲಸದ ನಿಮಿತ್ತ  ಕೋಟದಿಂದ ಸಾಲಿಗ್ರಾಮದ ಕಡೆಗೆ ತನ್ನ  ಮೋಟಾರ್ ಸೈಕಲಿನಲ್ಲಿ ಹೋಗುತ್ತಿರುವಾಗ ಚಿತ್ರಪಾಡಿ ಗ್ರಾಮದ ಹೆಚ್ ಪಿ ಗ್ಯಾಸ್ ಏಜೆನ್ಸಿ ಎದುರು ಕೋಟದಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಸಮಯ ಸಂಜೆ 07:45 ಗಂಟೆಗೆ KA-20-EW-9540 ನಂಬ್ರದ ಮೋಟಾರ್ ಸೈಕಲ್ ಸವಾರ ರವಿರಾಜ್ ತನ್ನ ಮೊಟಾರ್ ಸೈಕಲನ್ನು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಭಾಗಕ್ಕೆ  ಹೋಗಿ ರಸ್ತೆಯ ಪೂರ್ವ ಅಂಚಿನಲ್ಲಿ ರಸ್ತೆ ದಾಟಲು ನಿಂತುಕೊಂಡ ಪ್ರಸಾದ ಕುರೂಪ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ರವಿರಾಜ ಹಾಗೂ ಪ್ರಸಾದ ಕುರೂಪ ರವರು ರಸ್ತೆಗೆ ಬಿದ್ದಿರುತ್ತಾರೆ . ಮೋಟಾರ್ ಸೈಕಲ್ ಸವಾರ ರವಿರಾಜ ರವರಿಗೆ  ಎಡ ಕಣ್ಣ ಬಳಿ  ಹಾಗೂ ಬಲ ಕೈ ಬೆರಳಿಗೆ ರಕ್ತ ಗಾಯವಾಗಿರುತ್ತದೆ, ಪ್ರಸಾದ ಕುರೂಪರವರಿಗೆ ಹಣೆಗೆ ಹಾಗೂ ಎಡ ತಲೆಗೆ ರಕ್ತಗಾಯವಾಗಿರುತ್ತದೆ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022  ಕಲಂ: 279. 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ 09/02/2022 ರಂದು ಪ್ರಮೋದ್‌ ಕುಮಾರ್‌ ಪಿ,  ಪೊಲೀಸ್‌ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಜಂಕ್ಷನ್‌ನ ಲಿಯೋ ಕಂಪೌಂಡಿನ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ  ಬಗ್ಗೆ ದೊರೆತ ಮಾಹಿತಿಯ ಮೇರೆಗೆ  ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಚೇತನ್ ವಿಠ್ಠಲ್‌ (37), ತಂದೆ: ವಿಠ್ಠಲ ಪೂಜಾರಿ, ವಾಸ:1-55 ಎ, ಬೈದಶ್ರೀ ಹೌಸ್‌, ಕುದಿ-82 ಗ್ರಾಮ, ಹಿರಿಯಡ್ಕ ಅಂಚೆ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು ಅಂಬಾಗಿಲಿನ ಆದರ್ಶ ಬೇಕರಿಯ ಲಿಯೋ  ಪರವಾಗಿ ಅವರ  ಹೆಂಡತಿ ಶ್ರೀಮತಿ  ಗ್ರೆಟ್ಟಾ ಬಾಯಿಯವರಲ್ಲಿ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ. ಆಪಾದಿತನ ಬಳಿ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 5,230/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌ ಒಂದು ಮತ್ತು ಆತನ ವಶದಲ್ಲಿದ್ದ ಅಂದಾಜು 10,000/- ರೂಪಾಯಿ ಮೌಲ್ಯದ ಗೋಲ್ಡನ್‌ ಕಲರಿನ ಐಫೋನ್‌  ಮೊಬೈಲ್ ಫೋನ್‌-1, 500 ರೂಪಾಯಿ ಮೌಲ್ಯದ ಹಸಿರು ಬಣ್ಣದ iAir ಮೊಬೈಲ್‌ ಫೋನನ್ನುಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022, ಕಲಂ: 78(1)(3) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಮಣಿಪಾಲ : ದಿನಾಂಕ 09/02/2022 ರಂದು ಬೆಳಗ್ಗೆ 11:30 ಗಂಟೆಗೆ  ಪಿರ್ಯಾದಿದಾರರಾದ ದೀಪಾ ನಾಯಕ್ (28), ಗಂಡ: ಯಮನೂರಿ, ವಾಸ: ೧- ಗರಡಿ ಬಳಿ, ಕೆಳಪರ್ಕಳ P.O ಪರ್ಕಳ ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರು ಮನೆಯ ಹೊರಗೆ ನಿಂತು ಪಕ್ಕದ ಮನೆಯವರು ನಡೆಸುತ್ತಿದ್ದ ಸರ್ವೆಯನ್ನು ನೋಡುತ್ತಿದ್ದಾಗ, ಆಪಾದಿತ ಜಗದೀಶ್‌ ನಾಯಕ್‌ ಆಸ್ತಿ ವಿಚಾರದ ಪೂರ್ವ ದ್ವೇಷದಿಂದ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪಿರ್ಯಾದಿದಾರರ ಹಿಂದಿನಿಂದ ಏಕಾಏಕಿ ಬಂದು ಕೂದಲು ಹಿಡಿದು ನೆಲಕ್ಕೆ ಬಗ್ಗಿಸಿದಾಗ ಪಿರ್ಯಾದಿದಾರರು ಚೀರವುದನ್ನು ಕಂಡು ತನ್ನ ಕೈಯಲ್ಲಿದ್ದ ಕತ್ತಿಯಿಂದ ತಲೆಯ ಹಿಂಬದಿಗೆ  ಹೊಡೆದು ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2022  ಕಲಂ: 354, 504, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-02-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080