ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ರಾಮಕೃಷ್ಣ ಕೋಟ್ಯಾನ್‌ (59), ತಂದೆ: ದಿ. ಶೀನ ಸಾಲ್ಯಾನ್‌, ವಾಸ: ಶ್ರೀ ಬ್ರಾಮರಿ, ಬ್ರಹ್ಮಸ್ಥಾನ ರಸ್ತೆ, ಪಡುಬಿದ್ರಿ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಮಗಳು ಸೌಜನ್ಯ (22 ವರ್ಷ) ಎಂಬುವವರು ಹೈದರಬಾದ್‌ನ ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದು,  10 ತಿಂಗಳಿನಿಂದ ಮನೆಯಿಂದಲೇ ಕೆಲಸ ನಿರ್ವಹಿಸಿಕೊಂಡಿರುತ್ತಾರೆ.  ದಿನಾಂಕ 10/02/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಪ್ರೇಮ್‌ ಕಿರಣ್‌ ಎಸ್‌ (33), ತಂದೆ: ಬಿ ಶಂಕರ್‌ ಪೂಜಾರಿ, ವಾಸ: ಪ್ರೇಮಲತಾ ಹೋಮಿಯೋ ಕೇರ್‌ , # 874, 28 ನೇ ಮೈನ್‌, 9 ನೇ ಬ್ಲಾಕ್‌, ಜಯನಗರ, ಬೆಂಗಳೂರು 69 ಇವರ ತಂದೆ ಬಿ ಶಂಕರ್‌ ಪೂಜಾರಿ (67) ರವರು 80 ಬಡಗುಬೆಟ್ಟು ಗ್ರಾಮದ ಕುಕ್ಕುದಕಟ್ಟೆಯ ಪ್ರೇಮ್‌ಕಿರಣ್‌ ಎಂಬ ಹೆಸರಿನ ಸ್ವಂತ ಮನೆಯಲ್ಲಿ ವಾಸವಿದ್ದು ದಿನಾಂಕ 07/02/2022 ರಂದು 3:00 ಗಂಟೆಯಿಂದ ದಿನಾಂಕ 10/02/2022 ರಂದು 8:00 ಗಂಟೆಯ ಮಧ್ಯಾವಧಿಯಲ್ಲಿ ತಾನು ಮಲಗಿಕೊಂಡಿದ್ದ ಬೆಡ್‌ ರೂಮ್‌ನಲ್ಲಿ ಮೃತಪಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀ ನರೇಂದ್ರ ಗಣಪತಿ ಗೌಡ (22), ತಂದೆ: ದಿ.ಗಣಪತಿ ಗೌಡ, ಖಾಯಂ ವಾಸ:ಸೊಪ್ಪಿನಹೊಸಳ್ಳಿ, ಮೇದಿನಿ, ಸಂತೆಗೂಳಿ, ಕುಮಟಾ ತಾಲೂಕು ಉ.ಕ ಜಿಲ್ಲೆ, ಹಾಲಿ ವಾಸ: ಬಾಡಿಗೆ ಮನೆ ಜುಬೇದಾ, ಶಾಂತಿನಗರ, 1ನೇ ಅಡ್ಡರಸ್ತೆ, 76 ಬಡಗುಬೆಟ್ಟು ಗ್ರಾಮ,ಉಡುಪಿ  ಜಿಲ್ಲೆ ಇವರು ಮಣಿಪಾಲದ ಅಮೆಝಾನ್‌ನ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/02/2022 ರಂದು ಬೆಳಿಗ್ಗೆ 10:45 ಗಂಟೆಗೆ ತನ್ನ KA-20-V-9482ನೇ ಬಜಾಜ್‌ ಪಲ್ಸರ್‌ 150 ಮೋಟಾರ್‌ ಸೈಕಲ್‌ನಲ್ಲಿ ವೆಂಕಟ್ರಮಣ ದೇವಸ್ಥಾನ ಮಾರ್ಗವಾಗಿ ಹೋಗುತ್ತಿರುವಾಗ AACE ಬಿಲ್ಡಿಂಗ್‌ನ ವಿ ಆರ್‌ಎಲ್‌ ಗೋಡೌನ್ ಬಳಿ ನಿಲ್ಲಿಸಿದ್ದ  KL-07-AW-4558 ಲಾರಿಯ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಲಾರಿಯ ಹಗ್ಗವನ್ನು ಬಿಚ್ಚಿದ ಪರಿಣಾಮ ಹಗ್ಗವು ಬೈಕಿನಲ್ಲಿ ಹೋಗುತ್ತಿದ್ದ ಪಿರ್ಯಾದುದಾರರ  ಕುತ್ತಿಗೆಗೆ ಸಿಲುಕಿ ನೆಲಕ್ಕೆ ಬಿದ್ದು, ಎಡಬದಿ ತಲೆಗೆ, ಎಡ ಹಸ್ತಕ್ಕೆ ಹಾಗೂ ಕುತ್ತಿಗೆಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022, ಕಲಂ: 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 09/02/2022 ರಂದು ಅರುಣ್‌ ಎಚ್‌. ಎಎಸ್‌ಐ ಉಡುಪಿ ನಗರ ಪೊಲೀಸ್‌ ಠಾಣೆ ಉಡುಪಿ ಇವರು ಇಲಾಖಾ ಹೊಯ್ಸಳ ವಾಹನದಲ್ಲಿ ಅಪರಾಧ  ವಿಭಾಗದ  ಸಿಬ್ಬಂದಿಯವರೊಂದಿಗೆ  ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ: 10/02/2022 ರಂದು ಮುಂಜಾನೆ 4:30 ಗಂಟೆಗೆ ಉಡುಪಿ ನಗರ ಠಾಣಾ ಸರಹದ್ದಿನ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದ ಎದುರಿನ ಪಾಳುಬಿದ್ದ ಕಟ್ಟಡದ ಬಳಿಯಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಯಾವುದೋ ಬೇವಾರಂಟು ತಕ್ಷೀರು ಎಸಗುವ ಇರಾದೆಯುಳ್ಳವನಾಗಿ ಕಂಡುಬಂದ ಉದಯ ಪೂಜಾರಿ (39  ವರ್ಷ) ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನು ಸಮರ್ಪಕವಾದ ಉತ್ತರ ನೀಡದೆ ಇದ್ದು, ಆರೋಪಿತನು  ಯಾವುದೋ ಬೇವಾರಂಟು ತಕ್ಷೀರು ಎಸಗುವ ಸಂಶಯ ಬಂದಿರುವುದರಿಂದ ಈ ಬಗ್ಗೆ ಆತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022, ಕಲಂ: 96(B) KP Act ನಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-02-2022 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080