ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ದಿನಾಂಕ 08/02/2021 ರಂದು KA-19-J-7749 ನೇ ಮೋಟಾರು ಸೈಕಲ್ ಸವಾರ ಶೇಖ್  ಅಲ್ಪಾಜ್  ಎಂಬುವವರು ತನ್ನ ಮೋಟಾರ್ ಸೈಕಲ್ ನ್ನು ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ರಾಷ್ಟೀಯ ಹೆದ್ದಾರಿ-169(ಎ) ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ 9:45 ಗಂಟೆಗೆ ಆದಿ ಉಡುಪಿಯ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯ ಮುಂಭಾಗ ತಲುಪುವಾಗ ದುಡುಕುತನ ಮತ್ತು ನಿರ್ಲಕ್ಷತನದಿಂದ ಒಮ್ಮೆಲೆ ಹಿಂತಿರುಗಿ ನೋಡಿರುವುದರಿಂದ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ತೀರಾ ಬಲಬದಿಗೆ ಹೋಗಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶೇಖ್ ಅಲ್ಪಾಜ್ ರವರು  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೋಟ: ಪಿರ್ಯಾದಿದಾರರಾದ ಶರತ್‌ (28), ತಂದೆ: ದಿ.ರಾಜು, ವಾಸ: ಕಾಜ್ರಳ್ಳಿ, 5 ಸೆಂಟ್ಸ್‌ಕಾಲೋನಿ, ಶಿರಿಯಾರ ಗ್ರಾಮ,  ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 09/02/2021 ರಂದು ಬೆಳಿಗ್ಗೆ 08:30 ಗಂಟೆಗೆ ಕೆಲಸಕ್ಕೆ ಹೋಗಲು ಸ್ಯಾಬ್ರಕಟ್ಟೆ ರುಚಿ ಚಿಕನ್‌ ಸೆಂಟರ್‌ಎದುರುಗಡೆ ನಿಂತುಕೊಂಡಿರುವಾಗ 08:30 ಗಂಟೆಗೆ ಕಾಜ್ರಳ್ಳಿ ಕಡೆಯಿಂದ ಸ್ಯಾಬ್ರಕಟ್ಟೆ ಕಡೆಗೆ ಹೋಗಲು KA-20 -EJ-6108 Yamaha FZ ಬೈಕನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ಅದೇ ವೇಳೆಗೆ ಕಾಜ್ರಳ್ಳಿ ಕಡೆಯಿಂದ KA-20-EQ-6746 ನಂಬ್ರದ ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ಕ್ರಮದಂತೆ ಚಲಾಯಿಸಿಕೊಂಡು ಬರುತ್ತಿರುವಾಗ KA-20-EJ-6108 Yamaha FZ ಬೈಕ್‌ನ್ನು ಅದರ ಚಾಲಕನು ರಸ್ತೆಯ ಬಲಬದಿಗೆ ಚಲಾಯಿಸಲು ಯಾವುದೇ ಸೂಚನೆಯನ್ನು ನೀಡದೇ ಬೈಕನ್ನು ಏಕಾಏಕಿ ಬಲಬದಿಗೆ ಚಲಾಯಿಸಿದ ಪರಿಣಾಮ KA-20-EQ-6746 ನಂಬ್ರದ ಹೊಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದುದರಿಂದ ದ್ವಿಚಕ್ರ ವಾಹನವು ರಸ್ತೆಯು ಮೇಲೆ ಎಡಮಗ್ಗಲಾಗಿ ಬಿದ್ದಿದ್ದರಿಂದ ದ್ವಿ ಚಕ್ರ ವಾಹನದ ಸವಾರ ಉಮೇಶ್‌ ನಾಯ್ಕ ರವರ ಎಡ ಕೈಗೆ ಮೂಳೆ ಮುರಿತದ ಗಾಯ ಹಾಗೂ ಕೈ ಕಾಲುಗಳಿಗೆ ರಕ್ತ ಗಾಯವಾಗಿದ್ದು ಚಿಕಿತ್ಸೆಗೆ ಒಂದು ಅಂಬುಲೆನ್ಸ್‌ವಾಹನದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ: ಪಿರ್ಯಾದಿದಾರರಾದ ಲಕ್ಷ್ಮೀಶ್ ಭಟ್ (40), ತಂದೆ:  ಶ್ರೀ ಕೃಷ್ಣ ಭಟ್,  ವಾಸ:  ರಾಜ್ ಕಮಲ್  ತೆಂಕನಿಡಿಯೂರು  ತೊಟ್ಟಂ ಉಡುಪಿ ಇವರ ಚಿಕ್ಕಮ್ಮ ಸುಮತಿ ಭಟ್ (56) ರವರು ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು, ಅವರಿಗೆ 30 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, 20 ವರ್ಷಗಳ ಹಿಂದೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಸ್ತುತ ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಸುಮತಿ ಭಟ್ ರವರು ದಿನಾಂಕ 09/02/2021 ರಂದು ಬೆಳಿಗ್ಗೆ 7:00 ಗಂಟೆಗೆ ಎಂದಿನಂತೆ ಎದ್ದು, ಅವರ ಹಾಸಿಗೆಯನ್ನು ಮನೆಯ ಮಹಡಿಯ ಮೇಲೆ ಇಡಲು ಮೆಟ್ಟಿಲು ಹತ್ತುವಾಗ ಆಕಸ್ಮಿಕವಾಗಿ ಜಾರಿ ಹಾಸಿಗೆ ಸಮೇತ ಕೆಳಗೆ ಬಿದ್ದು, ಅವರ ತಲೆಯ ಹಿಂಭಾಗಗಕ್ಕೆ ಪೆಟ್ಟಾಗಿ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆ ತಂದಾಗ 10:40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಮಲ್ಲಿಕಾ(44), ಗಂಡ: ಸುರೇಶ್ ದೇವಾಡಿಗ, ವಾಸ: ನಂದಗೋಕುಲ,5-50/4 ,ಬೆಳ್ಳಿಬೆಟ್ಟು,ಎಲ್ಲೂರು ಗ್ರಾಮ,ಕಾಪು ತಾಲೂಕು,ಉಡುಪಿ ಜಿಲ್ಲೆ ಇವರ ಗಂಡ ಸುರೇಶ್ ದೇವಾಡಿಗ (47) ರವರು  ಮೀನುಗಾರಿಕೆ  ಕೆಲಸ ಮಾಡಿಕೊಂಡಿದ್ದು, ವಿಪರೀತ  ಮಧ್ಯಪಾನ ಚಟ ಹೊಂದಿದವರಾಗಿದ್ದು ಪಿರ್ಯಾದಿದಾರರು  ಕೆಲಸಕ್ಕೆ  ಹೋಗುತ್ತಿದ್ದು, 3 ದಿನಗಳಿಂದ ಮನೆಗೆ ಕೆಲಸ ಮಾಡುವ ಮನೆಯಲ್ಲಿಯೇ ತನ್ನ  ಮಕ್ಕಳೊಂದಿಗೆ  ಇದ್ದು,  ದಿನಾಂಕ 09/02/2021 ರಂದು  ಪಿರ್ಯಾದಿದಾರರು  ತನ್ನ ಮನೆಯಿಂದ ಬಟ್ಟೆ ತೆಗೆದುಕೊಂಡು ಹೋಗಲು ತನ್ನ ಮನೆಗೆ ಬಂದು  ಮನೆಗೆ ಹಾಕಿದ  ಬೀಗವನ್ನು  ತೆರೆದು ಒಳಗೆ ಹೋಗಿ ನೋಡಿದಾಗ  ಪಿರ್ಯಾದಿದಾರರ ಗಂಡ  ಸುರೇಶ ದೇವಾಡಿಗರವರು ಮನೆಯ ಒಳಗೆ ಮಲಗುವ ಕೋಣೆಯ ಫ್ಯಾನಿಗೆ ಚೂಡಿದಾರದ ಶಾಲನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಸ್ತೀತಿಯಲ್ಲಿ ಕಂಡುಬಂದಿದ್ದು,  ಮೃತರು  ವಿಪರೀತ  ಕುಡಿತದ ಚಟವನ್ನು  ಹೊಂದಿ  ಅದೇ ನಶೆಯಲ್ಲಿ ಅಥವಾ ಇನ್ನಾವುದೋ  ಕಾರಣಕ್ಕೆ   ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 ವಂಚನೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಜಯಮ್ಮ (64), ಗಂಡ:ಮಹಾಬಲ, ವಾಸ: ಹೊಸಮನೆ, ಮಾಳಚೌಕಿ, ಮಾಳ  ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ನಿವೃತ್ತ  ಕಿರಿಯ ಆರೋಗ್ಯ ಸಹಾಯಕಿಯಾಗಿದ್ದು ಅವರಿಗೆ 2019 ನೇ ರಲ್ಲಿ ಬೆಳ್ತಂಗಡಿ ಮದುವೆ ಬ್ರೋಕರ್ ಲಕ್ಷ್ಮಿ ಹೊಳ್ಳ ಎಂಬುವವರ ಮುಖಾಂತರ ಮಂಗಳೂರು ಕೊಟೆಕ್ಯಾರ್ ವಾಸಿ ಆರೋಪಿತ ಅಬ್ದುಲ್ ಖಾದರ್  ಪರಿಚಯವಾಗಿದ್ದು , ಪಿರ್ಯಾದಿದಾರರ ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರನ್ನು ಮೋಸ ಮಾಡುವ ಉದ್ದೇಶಿದಿಂದ 9,60,000/- ರೂಪಾಯಿ ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮುಖಾಂತರ ಹಾಗೂ 5,00,000/- ರೂಪಾಯಿ ಹಣವನ್ನು ನೇರವಾಗಿ ಪಡೆದು ಅವರ ಇಬ್ಬರು ಮಕ್ಕಳಿಗೆ ಸರಕಾರಿ ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸ್ಸು ಕೊಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 406,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-02-2021 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080