ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ: 09.01.2023 ರಂದು ಸಂಜೆ.5:10 ಗಂಟೆಗೆ ಪಿರ್ಯಾದಿ ಮಡಿವಾಳ ಮಾಲತೇಶ ಇವರು ನಜೀಮ್ ಎಂಬವರ ಜೊತೆ KA20EJ5202 ನೇ FZ ಮೋಟಾರ್ ಸೈಕಲಿನಲ್ಲಿ ಹಿಂದುಗಡೆ ಕುಳಿತುಕೊಂಡು ಫಲಿಮಾರಿನಿಂದ ಕರ್ನಿರೆ ಕಡೆಗೆ ಹೋಗುತ್ತಾ ಫಲಿಮಾರು ಕೋಟೆ ಮಹಾಗಣಪತಿ ತಂತಿ ಕಾರ್ಖಾನೆಯ ಬಳಿ ತಲುಪಿದಾಗ ಕರ್ನಿರೆ ಕಡೆಯಿಂದ ಫಲಿಮಾರು ಕಡೆಗೆ ಆರೋಪಿ KA20D9616 ನೇ ಶಾಲಾ ಬಸ್ಸ್ ಚಾಲಕ ರಘುನಾಥ ಶೇರಿಗಾರ ಎಂಬವರು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ರಿಕ್ಷಾ ಒಂದನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ನಜೀಮ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನೊಂದಿಗೆ ಪಿರ್ಯಾದುದಾರು ಹಾಗೂ ನಜೀಮ್ ಕೆಳಗೆ ಬಿದ್ದು ಪಿರ್ಯಾದುದಾರರ ಮೂಗಿಗೆ ತರಚಿದ ಗಾಯವಾಗಿದ್ದಲ್ಲದೇ, ನಜೀಮ್ ರವರ ಎಡಕೈ ಬೆರಳಿಗೆ ತರಚಿದ ಗಾಯವಾಗಿ ಮೂಗಿಗೆ ತೀವ್ರ ತರಹದ ಗಾಯ ಉಂಟಾಗಿದ್ದು, ಗಾಯಾಳು ನಜೀಮ್ ರವರನ್ನು ಉಡುಪಿ ಆದರ್ಶ ಆಸ್ಫತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2023, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಪವಡೇಪ್ಪ ಪೂಜಾರಿ ಇವರ ಮಗ ಕೃಷ್ಣ ಪ್ರಾಯ 12 ವರ್ಷರವರು ದಿನಾಂಕ: 09-01-2023 ರಂದು ಮೂಡನಿಡಂಬೂರು ಗ್ರಾಮದ ಬನ್ನಂಜೆ ಸಾರಥೀ ಹೋಟೆಲ್ ನ ಬಳಿ ಹಾದುಹೋಗಿರುವ ಸಾರ್ವಜನಿಕ ಕಾಂಕ್ರೀಟ್  ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು ಸಂಜೆ 4-45 ಗಂಟೆಗೆ ಬನ್ನಂಜೆ ರಾಧ ಅಪಾರ್ಟ ಮೆಂಟ್ ಕಡೆಯಿಂದ ಬನ್ನಂಜೆ ಮುಖ್ಯ ರಸ್ತೆ ಕಡೆಗೆ KA20MA2165ನೇ ಕಾರಿನ ಚಾಲಕ ರಾಮಚಂದ್ರ ಭಟ್ ಎಂಬಾತನು ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ  ಎಡ ಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ಮಗ ಕೃಷ್ಣನಿಗೆ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣನು ರಸ್ತೆಗೆ ಬಿದ್ದು ಬಲಕಾಲಿಗೆ ಗಂಭೀರ ಸ್ವರೂಪದ ಮೂಳೆಮುರಿತದ ಜಖಂ ಆದವರನ್ನು ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಫಿರ್ಯಾದಿ ರಮೇಶ ಪೂಜಾರಿ ಇವರು ಕಾರ್ಕಳ ತಾಲೂಕು ಸಾಣೂರು ಗ್ರಾಮದಲ್ಲಿರುವ  ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಇದರ ಮುಖ್ಯ  ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು  ದಿನಾಂಕ 09-01-2023 ರಂದು ಎಂದಿನಂತೆ  ಸಂಜೆ 5-15 ಗಂಟೆಗೆ  ಸಂಘಕ್ಕೆ  ಬೀಗ ಹಾಕಿ  ಹೋಗಿದ್ದು  ದಿನಾಂಕ 10-01-2023  ರಂದು ಬೆಳಿಗ್ಗೆ  09-15 ಗಂಟೆಗೆ ಸಿಬ್ಬಂಧಿಯವರೊಂದಿಗೆ  ಬಂದು ನೋಡಿದಾಗ   ಯಾರೋ  ಕಳ್ಳರು ಸಂಘದ ಕಿಟಿಕಿಯ ಕಬ್ಬಿಣದ ಗ್ರಿಲ್ಸ್ ಗಳನ್ನು  ಕತ್ತರಿಸಿ ತೆಗೆದು ಒಳಪ್ರವೇಶಿಸಿ ಸಿಸಿ  ಕೆಮರಾಗಳಿಗೆ  ಕಪ್ಪು ಬಣ್ಣ  ಸ್ಪ್ರೇ ಮಾಡಿ ಒಳಗೆ ಇದ್ದ ವಸ್ತುಗಳನ್ನು ಹುಡುಕಾಡಿ ಕಳವು ಮಾಡಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ 454,457,380,511  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಅನುಷ ಶ್ಯಾಂ ಎಂಬವರು ಯತೀಶ್ ನಾಯ್ಕ ಎಂಬವರನ್ನು ದಿನಾಂಕ 29.11.2015ರಂದು ವಿವಾಹವಾಗಿರುತ್ತಾರೆ. ವಿವಾಹವಾದ ಬಳಿಕ  ಪಿರ್ಯಾದಿದಾರರು  ಗಂಡನ ಮನೆಯಾದ ಎಂ.ಜಿ.ಎಂ. ಅರ್ಚನಾ ಆರ್ಕೆಡ್ ಕುಂಜಿಬೆಟ್ಟು ಎಂಬಲ್ಲಿ  ವಾಸ್ತವ್ಯವಿರುತ್ತಾರೆ.  ಮದುವೆ ಸಮಯ ಪಿರ್ಯಾದಿದಾರರಿಗೆ ಅವರ ತಂದೆ  ಸುಮಾರು 20 ಪವನ್ ಬಂಗಾರವನ್ನು ಉಡುಗೊರೆಯಾಗಿ ನೀಡಿರುತ್ತಾರೆ. ಮದುವೆಯಾಗಿ ಗಂಡನ ಮನೆಯಲ್ಲಿದ್ದ ಸಮಯ ವಿನಾಕಾರಣ  ಪಿರ್ಯಾದಿದಾರರರಲ್ಲಿ ಆರೋಪಿ 1 ನೇ ಯತೀಶ್ ನಾಯ್ಕ ಮತ್ತು ಆರೋಪಿ 2ನೇ ಭಾರತೀರವರು ಜಗಳಮಾಡಿ  ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ  ಬೈದು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವುದಾಗಿದೆ, ಆ ಬಳಿಕ ಪಿರ್ಯಾದಿದಾರರು ಗಂಡನ ಮನೆಯಲ್ಲಿ ಉಪಟಳ ತಾಳಲಾರದೇ ದಿನಾಂಕ 17.04.2016 ರಂದು ತಾಯಿ ಮನೆಗೆ ಬಂದವರು ವಾಪಾಸು ದಿನಾಂಕ 15.05.2016 ರಂದು ಗಂಡನ ಮನೆಗೆ ಹೋದಾಗ ನಿನ್ನನ್ನು ಈ ಮನೆಯೊಳಗೆ ಸೇರಬೇಕಾದರೆ, ಹಾಗೂ ನಿನಗೆ ಸೀಮಂತ ಮಾಡಬೇಕಾದರೆ  ರೂ 4 ಲಕ್ಷ ಹಣ ನೀಡಬೇಕೆಂದು , ಇಲ್ಲದಿದ್ದರೆ ಮನೆಗೆ ಬರಬಾರದು ಎಂದು ವರದಕ್ಷಿಣೆ ಬೇಡಿಕೆ ಇಟ್ಟಿರುತ್ತಾರೆ. ಪಿರ್ಯದಿದಾರರು ದಿನಾಂಕ 26.09.2016ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ನಂತರ 09.12.2016  ರಂದು  ಪಿರ್ಯಾದಿದಾರರು ಗಂಡನ ಮನೆಯಲ್ಲಿರುವಾಗ ಆರೋಪಿಗಳಾದ   ಯತೀಶ್ ನಾಯ್ಕ, ಭಾರತಿ, ಸುಶೀಲ, ಸುರೇಶ್ ಗೀತಾ, ಶೋಭ ಎಂಬವರುಗಳು  ಸೇರಿಕೊಂಡು ಪಿರ್ಯಾದಿದಾರರಲ್ಲಿ ಗಲಾಟೆ ಮಾಡಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ವಿನಾಕಾರಣ ಬೈದು ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ವರದಕ್ಷಿಣೆ ಬೇಡಿಕೆ ಇಟ್ಟು ಅವಾಚ್ಯಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2023  ಕಲಂ: 498(ಎ),323,504,506ಜೊತೆಗೆ 34  ಐ.ಪಿ.ಸಿ ಮತ್ತು ಕಲಂ: 4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಫಿರ್ಯಾದಿ ಪ್ರಿಯಾ  ಡಿಸೋಜಾ  ಇವರು ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ಗುಮ್ಮಹೊಲ  ಸಂತ ಜೊಸೇಪರ್  ಚರ್ಚನ ಭಕ್ತಾದಿಯಾಗಿದ್ದು, ಈ  ಚರ್ಚನ  ಫಾದರ   ಅಲೆಕ್ಸಾಂಡರ್  ಲೂಯಿಸ್  ಹಾಗೂ  ಚರ್ಚನ  ಭಕ್ತಾಧಿಗಳಲ್ಲಿ ಚರ್ಚನ ಪೂಜೆ ಮಾಡುವ  ಬಗ್ಗೆ  ವಿವಾದವಿದ್ದು,ಈ  ವಿಷಯದಲ್ಲಿ ಹಲವು ಸಲ   ಗಲಾಟೆ  ಆಗಿರುತ್ತದೆ, ಹಾಗೂ ಚರ್ಚನ ಫಾದರ್ ರವರನ್ನು ಬದಲಿಸುವಂತೆ ಜಾತಿಯ   ಗಣ್ಯರಲ್ಲಿ  ಹಾಗೂ  ಬಿಷಪ್  ರಲ್ಲಿ  ಮನವಿ  ಮಾಡಿರುತ್ತಾರೆ,ಅದರಂತೆ ಈ  ದಿನ  ದಿನಾಂಕ  08.01.2023 ರಂದು ಬೆಳಿಗ್ಗೆ ಎಂದಿನಂತ  ಬಲಿಪೂಜೆಗೆ  ಎಂದು    ಫಿರ್ಯಾದುದಾರರು  ಹಾಗೂ  ಇತರರು ಬಂದಿದ್ದು,  ಪೂಜೆಯನ್ನು   ಅತಿಥಿ  ಗುರುಗಳು ನಡೆಯಿಸಿದ  ಬಳಿಕ  ಚರ್ಚನಲ್ಲಿ  ಕ್ರಿಸ್ಮಸ್ ಹಬ್ಬಕ್ಕೆ  ಎಂದು ಹಾಕಿದ  ನಕ್ಷತ್ರಗಳನ್ನು   ತೆಗೆಯುತ್ತಿರುವಾಗ ಸುಮಾರು 10:30  ಘಂಟೆಗೆ  ಆರೋಪಿ ಫಾ. ಅಲೆಕ್ಸಾಂಡರ್  ಲೂಯಿಸ್   ಕೈಯಲ್ಲಿ ಬಂದೂರು ಹಿಡಿದುಕೊಂಡು ಬಂದು   ಕೆಟ್ಟ ಶಬ್ದಗಳಿಂದ ಬೈದು   ನೀವು ನಾನು  ಹೇಳೀದಂತೆ  ಕೇಳಬೇಕು ಇಲ್ಲದಿದ್ದರೆ ನಿಮ್ಮನ್ನು   ಬಂದೂಕಿನಿಂದ ಹೊಡೆದು  ಸಾಯಿಸುತ್ತೇನೆ, ಎಂದು   ಜೀವಬೆದರಿಕೆ  ಹಾಕಿ  ಚರ್ಚನ  ಹೊರಗಡೆ ಆರೋಪಿತ ಆರೋಪಿ ಫಾ. ಅಲೆಕ್ಸಾಂಡರ್  ಲೂಯಿಸ್   ಮತ್ತು ಚರ್ಚನ ಅಡುಗೆ  ಕೆಲಸದವ  ಸಮಾನ  ಉದ್ದೇಶದಿಂದ   ಅಕ್ರಮವಾಗಿ   ತಡೆದು  ನಿಲ್ಲಿಸಿ   ಫಿರ್ಯಾದುದಾರರಿಗೆ ಹಾಗೂ ಇತರ  ಮಹಿಳೆಯರ  ಮೇಲೆ  ಕೈ ಹಾಕಿ ಅವರ  ಮಾನಹಾನಿ ಮಾಡಿ   ಜೀವ ಬೆದರಿಕೆ   ಹಾಕಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 05/2023 ಕಲಂ:341,504,506, 354 ಜೊತೆಗೆ  34     ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಫಿರ್ಯಾದಿ ಫಾ.ಅಲೆಕ್ಸಾಂಡ ರ್  ಲೂವಿಸ್  ಇವರು ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ಗುಮ್ಮಹೊಲ  ಸಂತ ಜೊಸೇಪರ್  ಪ್ರಾರ್ಥನ ಮಂದಿರದ  ನಿರ್ದೇಶಕರು ಚಾಫೆಲ್ ಆಗಿ ಸುಮಾರು 1 ½  ವರ್ಷದಿಂದ  ಕರ್ತವ್ಯ  ನಿರ್ವಹಿಸಿ ಕೊಂಡಿರುತ್ತಾರೆ  ಸದ್ರಿ  ಪ್ರಾರ್ಥನ ಮಂದಿರದ   ಭಕ್ತಾಧಿಗಳು  ಚರ್ಚನ ಪೂಜಾ  ವಿಧಾನಗಳನ್ನು   ಮಾಡಲು    ಬಿಡುತ್ತಿರಲಿಲ್ಲ. ಈ ವಿಷಯ   ಮಾತುಕತೆ  ಮಾಡಿದರು ಸಹ ಸರಿಯಾಗಿರಲಿಲ್ಲ ಪದೇ  ಪದೇ  ತೊಂದರೆ  ಮಾಡುತ್ತಿದ್ದು, ಈ  ಕಾರಣದಿಂದ ಫಿರ್ಯಾದುದಾರರು  ಆರೋಪಿಗಳಾದ  ಪ್ರವೀಣ ಲೋಬೊ, ಡಿಚರ್ಡ,ಸ್ಯಾಮಸನ್ ,ಸ್ಯಾಂಡ್ರ ಸ್ಯಾಮಸನ್  ಹಾಗೂ  ಶಾಂತಿ ಡೇಸಾ  ಹಾಗೂ ಅವರ  ಅನುಯಾಯಿಗಳು  ಚರ್ಚನ  ಜಾಗಕ್ಕೆ ಬಂದು  ತೊಂದರೆ  ಮಾಡದಂತೆ  ಮಾನ್ಯ  ಕುಂದಾಪುರ  ಸಿವಿಲ್   ನ್ಯಾಯಾಲಯದಲ್ಲಿ ಇಂಜೆಕ್ಷನ್  ಆದೇಶ  ತಂದಿರುತ್ತಾರೆ,  ಹಾಗೂ  ಮಾನ್ಯ  ನ್ಯಾಯಾಲಯದಲ್ಲಿ ಓ ಎಸ್. ನಂ. 434/2022  ರಂತೆ ವಿಚಾರಣೆ   ನಡೆಯುತ್ತಿದೆ. ಅದರೂ  ಸಹ   ಆರೋಪಿತ 1.ಪ್ರವೀಣ ಲೋಬೊ ಗುಮ್ಮಹೊಲ  ಬೆಳ್ವೆ  ಗ್ರಾಮ 2. ಜನಾರಿ ಜೋಸ್ 3.ಗಿಲ್ಬರ್ಟ ಡಿ’ಸೋಜಾ4.   ವಿಲ್ಸನ್ ಪ್ಲೊರೇಸ್ 5.ಐವನ್  ಪ್ಲೊರೇಸ್6. ಶಾಂತಿ  ಡೇಸಾ 7.  ಪ್ರಿಯಾ ಡಿಸೋಜಾ 8.       ಸಿಲ್ವಿಯ ರೇಸ್9.  ನಿಶಾ ಪ್ಲೊರೇಸ್10.         ರೀಟಾ ಡಿಸೋಜಾ 11.ಅಲಿಟಾ  ಡೇಸಾ 12.    ಜೊಸೇಪ್ ಸ್ಕರಿಯ 13.     ವಿನಿಸ್ಸ  ಸ್ಕ್ರೀಯಾ14.            ಸ್ಯಾಂಡ್ರ  ಸ್ಯಾಮಸನ್ 15.  ರಿಜರ್ಡ ಸ್ಯಾಮಸನ್  ಹಾಗೂ ಇತರರು ಗಳು   ಮಾನ್ಯ ನ್ಯಾಯಾಲಯದ  ಆದೇಶವನ್ನು ಉಲ್ಲಂಘನೆ ಮಾಡಿ  ಆರೋಪಿ ರಿಜರ್ಡ ಸ್ಯಾಮಸನ್      ಪ್ರೇರಣೆಯಿಂದ  ದಿನಾಂಕ   08.01.2023   ಬೆಳಿಗ್ಗೆ  ಪ್ರಾರ್ಥನ ಮಂದರಿದ  ಪೂಜೆಗೆ ಬಂದವರು.  ಪೂಜೆ ಮುಗಿದ  ಬಳಿಕ   ಆರೋಪಿಗಳು  ಸಮಾನ ಉದ್ದೇಶದಿಂದ  ಅಕ್ರಮ ಕೂಟ  ಕೂಡಿಕೊಂಡು  ಫಿರ್ಯಾಧುದಾರರು   ವಾಸವಾಗಿರುವ   ರೂಂನ   ಬಾಗಿಲುಗಳನ್ನು   ಒಡೆದು  ಒಳಗಡೆ  ಅಕ್ರಮವಾಗಿ ಪ್ರವೇಶ  ಮಾಡಿ  ಫಿರ್ಯಾಧುದಾರರ  ರೂಂನ ಎಲ್ಲಾ  ಕಡೆ  ಹುಡುಕಾಡಿ ಅವರ  ಟೇಬಲ್‌ನ   ಡ್ರವರ್‌ಗಳನ್ನು  ಎಳೆದಾಡಿ  ಅವರ ಕುತ್ತಿಗೆಯನ್ನು ಒತ್ತಿ ಹಿಡಿದು  ಹೊಟ್ಟೆಗೆ   ಬೆನ್ನಿಗೆ,  ಕೈ , ಭುಜಗಳಿಗೆ  ಹಲ್ಲೆ  ಕೈಯಿಂದ  ಸಾಯಿಸುವ ರೀತಿಯಲ್ಲಿ  ಹಲ್ಲೆ  ಮಾಡಿರುತ್ತಾರೆ, ಅಲ್ಲದೆ ಈ ಸಮಯ  ಹಲ್ಲೆ  ತಪ್ಪಿಸಲು ಬಂದಿದ್ದ ಅಡುಗೆ  ಸಹಾಯಕ  ಮಾರ್ಕ ಮಿನೇಜಸ್ ಇವರಿಗೆ  ಸಹ  ಕೈಯಿಂದ   ಹಲ್ಲೆ  ಮಾಡಿರುತ್ತಾರೆ ಅಲ್ಲದೆ   ಅವರ  ರೂಂನಲ್ಲಿ ಇದ್ದ ಗನ್‌ ಅನ್ನು   ತೆಗದುಕೊಂಡು  ಅವರನ್ನು  ಹಾಗೂ  ಮಾರ್ಕ ಮಿನೇಜಸ್  ಇವರನ್ನು  ಒಂದು  ಟೆಂಪೊದಲ್ಲಿ ಕರೆದುಕೊಂಡು   ಉಡುಪಿಯ        ಮದರ್  ಆಪ್  ಚರ್ಚಗೆ ಕರೆದುಕೊಂಡು ಬಂದು   ಬಿಟ್ಟು ಹೋಗಿರುತ್ತಾರೆ,  ಟೆಂಪೊದಲ್ಲಿ  ಬರುವಾಗ   ಸಹ  ಹಲ್ಲೆ ಮಾಡಿ   ಇನ್ನು   ಮುಂದಕ್ಕೆ   ಚರ್ಚಗೆ  ಬಂದರೆ  ಕೊಂದು ಹಾಕುತ್ತೇನೆ  ಎಂಧು   ಜೀವ  ಬೆದರಿಕೆ  ಹಾಕಿರುತ್ತಾರೆ,  ಈ  ಘಟನಯಿಂದ  ಫಿರ್ಯಾಧುದಾರರಿಗೆ  ಹಾಗೂ  ಮಾರ್ಕ  ಮಿನೇಜಸ್ ಇವರಿಗೆ  ದೈಹಿಕ ಹಾಗೂ ಮಾನಸಿಕವಾಗಿ ನಿತ್ರಾಣವಾಗಿದ್ದು,ಚಿಕಿತ್ಸೆಯ ಬಗ್ಗೆ   ಉಡುಪಿ  ಜಿಲ್ಲಾ  ಸರಕಾರಿ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ , ಘಟನೆ  ನಡೆದ  ಫಿರ್ಯಾದುದಾರರ  ರೂಂನಲ್ಲಿ ಹಂದಿ ಮಾರಾಟದಿಂದ  ಬಂದ   ನಗದು ಹಣ  4,85,000/- ರೂ ಹಾಗೂ  ಮನೆಯಿಂದ ತಂದ  ನಗದು ಹಣ 50000/- ರೂ  ಇತ್ತು ಎಂಬಿತ್ಯಾದಿ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ:143,147,448,323,109,506,341 ಜೊತೆಗೆ  149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ಪಿರ್ಯಾದಿ ಶ್ರೀಮತಿ ಶೋಭಾ ಇವರು ತನ್ನ ಗಂಡ ರವಿ ಕುಲಾಲ್‌, ಮಗ  ಶರತ್‌ನೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರಿಗೆ ಮದುವೆಯಾಗಿ 22 ಕಳೆದಿದ್ದು ಇಬ್ಬರು  ಮಕ್ಕಳಿರುತ್ತಾರೆ.  ಪಿಯಾದಿದಾರರು ಶಂಕರಪುರದ ಬ್ಲಾಕ್ ಫ್ಯಾಕ್ಟರಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಗಂಡ ರವಿ ಕುಲಾಲ್ (55)ರೊಂದಿಗೆ ಮದುವೆಯಾದ ನಂತರ ಒಂದು ವರ್ಷ ಅನ್ಯೋನ್ಯತೆಯಿಂದ ಇದ್ದು  ತದನಂತರ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಯುತ್ತಿದ್ದರು. ಪಿರ್ಯಾದಿದಾರರಿಗೆ  ಮತ್ತು ಮಕ್ಕಳಿಗೆ ಖರ್ಚಿಗೆ ಹಣವನ್ನು ನೀಡುತ್ತಿರಲಿಲ್ಲ. ಆದರೂ ಪಿರ್ಯಾದಿದಾರರು ಮಕ್ಕಳಿಗೋಸ್ಕರ  ಕಷ್ಟಗಳನ್ನು ಸಹಿಸಿಕೊಂಡು ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದರು. ಪಿರ್ಯಾದಿದಾರರ ಗಂಡ ಆತನ  ಹೆಸರಿನಲ್ಲಿದ್ದ 10 ಸೆಂಟ್ಸ್ ಜಾಗದಲ್ಲಿ  5 ಸೆಂಟ್ಸ್ ಜಾಗವನ್ನು ಪಿರ್ಯಾದಿದಾರರ ಮತ್ತು ಪಿರ್ಯಾದಿದಾರರ ಮಕ್ಕಳ ಹೆಸರಿಗೆ ಮಾಡಿಕೊಟ್ಟಿದ್ದು ಆ  ಸ್ಥಳದಲ್ಲಿ ಪಿರ್ಯಾದಿದಾರರು ಮನೆ ಕಟ್ಟಲು ಪ್ರಾರಂಬಿಸಿರುತ್ತಾರೆ.ದಿನಾಂಕ: 09/1/2023 ರಂದು ಪಿರ್ಯಾದಿದಾರರು ಸಂಜೆ ಕೆಲಸ ಬಿಟ್ಟು ಮನೆಗೆ ಬಂದಿದ್ದು  ಆ ಸಮಯ ಮನೆ ಕೆಲಸಕ್ಕೆ  ಟೆಂಪೋದವರು ಟೆಂಫೊದಲ್ಲಿ  ಜೆಲ್ಲಿಯನ್ನು ಅನ್ ಲೋಡ್ ಮಾಡಿ ಹೋದರು.ಇದನ್ನು ಪಿರ್ಯಾದಿದಾರರ ಗಂಡ ನೋಡುತ್ತಿದ್ದರು. ನಂತರ ಪಿರ್ಯಾದಿದಾರರು ಮನೆಯೊಳಗೆ ಅಡುಗೆ ಮಾಡುತ್ತಿದ್ದ  ಸಮಯ ಪಿರ್ಯಾದಿದಾರರ  ಗಂಡ ಹೊರಗಡೆ ಹೋಗಿ ಕಬ್ಬಿಣದ ರಾಡ್ ನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರರ ಕೈಗಳಿಗೆ ಮತ್ತು ತಲೆಗೆ ಹೊಡೆದರು.ಪರಿಣಾಮ ಪಿರ್ಯಾದಿದಾರರ ಎಡಕೈ ಮುರಿತವಾಗಿದ್ದು, ತಲೆ ಮತ್ತು ಬಲಕೈಗೆ ರಕ್ತಗಾಯವಾಗಿ ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಮಗ ಶರತನು ಬಂದು ನಂತರ ಹೊಡೆಯದಂತೆ ತಡೆದು ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಉಡುಪಿ  ಜಿಲ್ಲಾಸ್ಪತ್ರೆಗೆ  ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು  ಪರೀಕ್ಷಿಸಿ   ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2022  ಕಲಂ 498(A),   323,504, 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು  ಗ್ರಾಮದ  ನಿತ್ಯಾನಂದ ನಿಲಯದಲ್ಲಿ ವಾಸವಾಗಿರುವ  ಪಿರ್ಯಾದಿ ಪವನ್ ಪೂಜಾರಿ ಇವರ ತಾಯಿ ಶ್ರೀಮತಿ ಸುಮತಿ (56) ಇವರು ಸುಮಾರು 10 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಎ ವಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖ ಆಗದ ಕಾರಣ ಮನನೊಂದು ದಿನಾಂಕ 09/01/2023 ರಂದು 14:00 ಗಂಟೆಯಿಂದ 15:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.   ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯು.ಡಿ.ಆರ್ 06/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 10-01-2023 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080