ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 09/01/2022 ರಂದು ಪಿರ್ಯಾದಿದಾರರಾದ ಸಂತೋಷ್‌ ಪೂಜಾರಿ(33), ತಂದೆ: ಶ್ಯಾಮಪೂಜಾರಿ, ವಾಸ: ನಿಸರ್ಗ ಬಿರ್ತಿ,ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಬ್ರಹ್ಮಾವರದಿಂದ ಹಾರಾಡಿ ಉಪ್ಪಿನಕೋಟೆ ಮುಖ್ಯ ರಸ್ತೆಯಲ್ಲಿ ಉಪ್ಪಿನಕೋಟೆ ಕಡೆಗೆ ಹೋಗುತ್ತಿರುವಾಗ ವಾರಂಬಳ್ಳಿ ಗ್ರಾಮದ ಬಿರ್ತಿ ನೀರಿನ ಟ್ಯಾಂಕ್‌‌‌ ಸಮೀಪ ತಲುಪುವಾಗ ಮುಖ್ಯರಸ್ತೆಯ ಪೂರ್ವ ಭಾಗದಲ್ಲಿರುವ ಪನ್ನ ಪದ್ಮ  ಮನೆಯ ಕಡೆಯಿಂದ ಬೆಳಿಗ್ಗೆ 11:00 ಗಂಟೆಗೆ KA-20-MB-3151 ನೇ ಕ್ರೇಟಾ ಕಾರಿನ ಚಾಲಕ ಶಶಿಧರ ಶೆಟ್ಟಿ ತನ್ನ ಕಾರನ್ನು ನಿರ್ಲಕ್ಷತನದಿಂದ ಹಿಮ್ಮುಖವಾಗಿ ರಸ್ತೆ ಕಡೆಗೆ ಚಲಾಯಿಸಿ, ಉಪ್ಪಿನಕೋಟೆ ಕಡೆಯಿಂದ ಓಜೋನ್‌‌ ಬಾರ್‌‌‌ ಹಾರಾಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EV-6748 ನೇ ಸ್ಕೂಟರ್‌ ಸವಾರ ಪ್ರಕಾಶ್‌ ಆಚಾರ್ಯ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಕಾಶ್‌ ಆಚಾರ್ಯರವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಮಂಡಿಗೆ ಮೂಳೆ ಮುರಿತ, ಎಡಕಣ್ಣಿನ ಬಳಿ ರಕ್ತಗಾಯವಾಗಿರುತ್ತದೆ. ಸ್ಕೂಟರ್‌ನ ಮುಂಭಾಗ ಹಾಗೂ ಕಾರಿನ ಹಿಂಭಾಗ ಸ್ವಲ್ಪ ಜಖಂಗೊಂಡಿರುತ್ತದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆ ಉಡುಪಿ ಹೈಟೆಕ್‌‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಉದಯ ಪೂಜಾರಿ (46), ತಂದೆ: ನಾರಾಯಣ ಪೂಜಾರಿ, ವಾಸ: ಬಂಗೇರ ನಿಲಯ, ನಿಟ್ಟೂರು ಪೋಸ್ಟ್, ನಿಟ್ಟೂರು ಉಡುಪಿ ಇವರ ತಂದೆ ನಾರಾಯಣ ಪೂಜಾರಿ (78) ರವರು ದಿನಾಂಕ 09/01/2022 ರಂದು ಮನೆಯಿಂದ ಅಂಗಡಿ ಕಡೆಗೆ ಹೋದವರು ವಾಪಾಸ್ಸು ನಿಟ್ಟೂರಿನಲ್ಲಿರುವ ತಮ್ಮ ಮನೆಯ ಕಡೆಗೆ ಬರಲು ಪುತ್ತೂರು ಗ್ರಾಮದ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಡಿವೈಡರ್ ಬಳಿ ನಿಂತಿರುವಾಗ ಬೆಳಿಗ್ಗೆ 09:30 ಗಂಟೆಗೆ KA-20-MC-2440 ನೇ ಓಮಿನಿ ಕಾರಿನ ಚಾಲಕ ಸುಧಾಕರ ತನ್ನ ಓಮಿನಿ ಕಾರನ್ನು ಅಂಬಾಗಿಲು ಜಂಕ್ಷನ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಟ್ಟೂರು ಜಂಕ್ಷರ್ ಬಳಿ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಡಿವೈಡರ್ ಬಳಿ ನಿಂತಿದ್ದ ನಾರಾಯಣ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ನಾರಾಯಣ ಪೂಜಾರಿಯವರು ರಸ್ತೆಗೆ ಬಿದ್ದು ತಲೆಗೆ ಮತ್ತು ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶಿವರಾಮ ಆಚಾರ್ಯ (50), ತಂದೆ: ವಾಸು ಆಚಾರ್ಯ, ವಾಸ: ಬಾರೆಜಡ್ಡು ಮನೆ, ನೀರೆ ಗ್ರಾಮ, ಕಾರ್ಕಳ ತಾಲೂಕು ಇವರ ಮಗಳು ಶರಣ್ಯ (18) ರವರು 12 ದಿನಗಳ ಹಿಂದೆ ತಲೆನೋವು ಎಂದು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದಿದ್ದು, ದಿನಾಂಕ 09/01/2022 ರಂದು ಮದ್ಯಾಹ್ನ ಸಮಯಕ್ಕೆ ತಲೆನೋವು ಆಗುತ್ತಿರುವುದಾಗಿ ತಿಳಿಸಿದ್ದು ಮದ್ಯಾಹ್ನ 04:00 ಗಂಟೆಗೆ ವಾಂತಿ ಮಾಡಿಕೊಂಡು ಅಸ್ವಸ್ತರಾಗಿದ್ದವರನ್ನು ಪಿರ್ಯಾದಿದಾರರು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಪಿರ್ಯಾದಿದಾರರು ಶರಣ್ಯರವರನ್ನು  07:00 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-01-2022 09:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080