ಅಭಿಪ್ರಾಯ / ಸಲಹೆಗಳು

 

ನಾಗರಿಕ ಬಂದೂಕು ತರಬೇತಿ ಶಿಬಿರ 2020-2021 ಸಾಲಿನ ಪ್ರಮಾಣ ಪತ್ರ ವಿತರಣಾ ಸಮಾರಂಭ ತಾರೀಕು 12.4.2021 ಚಂದು ಮೈದಾನ ಉಡುಪಿ ಇಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಐಪಿಎಸ್ ಇವರು  ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ DYSP DAR ಶ್ರೀ ರಾಘವೇಂದ್ರ ಹಾಗೂ ತಂಡದ ನಾಯಕ ಶ್ರೀ ನಂದ ಕಿಶೋರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀ ಕೃಷ್ಣ ಪ್ರಸಾದ ಶೆಟ್ಟಿ ಇವರು ನೆರವೇರಿಸಿದರು, ತದನಂತರ ಪ್ರಮಾಣ ಪತ್ರವನ್ನು ವಿತರಿಸಲಾಯಿತು, ತಂಡದ ವತಿಯಿಂದ ನಿರ್ಮಿಸಿದ ಸುಮಾರು ಹನ್ನೆರಡು ಸಾವಿರ ಲೀಟರ್ ನ ಅಂಡರ್ ಗ್ರೌಂಡ್ ವಾಟರ್ ಟ್ಯಾಂಕನ್ನು ಶ್ರೀ ವಿಷ್ಣು ವರ್ಧನ್ ಅವರು ಉದ್ಘಾಟಿಸಿದರು , ತದನಂತರ ತಂಡದ ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಕಾರ್ಯಕ್ರಮದ ಕೊನೆಗೆ ತಂಡದ ನಾಯಕರಾದ ನಂದಕಿಶೋರ್ ಅವರು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಲೋರೆನ್ಸ್ ಫುರ್ಟಾಡೋ ಇವರು ನೆರವೇರಿಸಿದರು.

ತಂಡದ ವತಿಯಿಂದ ಕೃತಜ್ಞತಾ ಪತ್ರವನ್ನು DYSP DAR ರಾಘವೇಂದ್ರ ಅವರಿಗೆ ಹಸ್ತಾಂತರಿಸಲಾಯಿತು, ಅತಿಥಿ ಅಭ್ಯಾಗತರಿಗೆ ನೆನಪಿನ ಕಾಣಿಕೆಯನ್ನು ನೀಡಿದರು, ಸಭೆಯಲ್ಲಿ ಇಂಜಿನಿಯರ್ ಶ್ರೀ ಪಾಂಡುರಂಗ ಆಚಾರ್ ಅವರಿಗೆ ಸನ್ಮಾನಿಸಲಾಯಿತು.

ಇತ್ತೀಚಿನ ನವೀಕರಣ​ : 13-04-2021 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ