ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಅಮಾಸೆಬೈಲು: ಫಿರ್ಯಾದಿ: ಜಯಲಕ್ಷ್ಮೀ ಶೆಡ್ತಿ ಪ್ರಾಯ 60 ವರ್ಷ ಗಂಡ ದಿ ಶಿವರಾಮ ಶೆಟ್ಟಿ  ವಾಸ: ದ್ಯಾಸ ಕೊರ್ತುಗುಂಡಿ ಮಚ್ಚಟ್ಟು ಗ್ರಾಮ  ಇವರ ತಂಗಿಯ ಗಂಡ ಚಂದ್ರಶೇಖರ ಶೆಟ್ಟಿ ಯು ಪಿರ್ಯಾದಿದಾರರು ಮೊದಲಿನಿಂದಲೂ ಉತ್ತಮ ಜೀವನ ನಡೆಸುತ್ತಿರುವುದನ್ನು ಕಂಡು  ದ್ವೇಷದಿಂದ ಬೈಯುತ್ತಿದ್ದು ದಿನಾಂಕ 08/12/2022 ರಂದು 13:30 ಗಂಟೆ ಸಮಯಕ್ಕೆ ಮಚ್ಚಟ್ಟು ಗ್ರಾಮದ ದ್ಯಾಸ ಕೊರ್ತಗುಂಡಿ ಎಂಬಲ್ಲಿ ಪಿರ್ಯಾದಿದಾರರು ಮನೆಯ ಅಂಗಳದಲ್ಲಿರುವಾಗ ಚಂದ್ರಶೇಖರ ಶೆಟ್ಟಿ ಪೇಟೆಗೆ ಹೋದವನು ವಾಪಾಸು ಮನೆಯ ಕಡೆಗೆ ಬರುವಾಗ ಶಾಪ ಹಾಕುತ್ತಾ ಬೈಯುತ್ತಿದ್ದು, ಆಗ ಪಿರ್ಯಾದಿದಾರರು ನೀನು ಯಾರಿಗೆ ಶಾಪ ಹಾಕುತ್ತಿಯಾ ಎಂದು ಕೇಳಿದಾಗ, ಚಂದ್ರಶೇಖರ ಶೆಟ್ಟಿಯು ನಿಮಗೆ ಶಾಪಹಾಕಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಒಂದು ಮರದ ರೀಪಿನಿಂದ ಪಿರ್ಯಾದಿದಾರರ  ಬಲಕೈಗೆ ಹೊಡೆದಿರುತ್ತಾನೆ.  ಆಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಮಗ ಹಾಗೂ ಸೊಸೆ ಓಡಿಬಂದಿರುತ್ತಾರೆ ಆ ಸಮಯ ಚಂದ್ರಶೇಖರ ಶೆಟ್ಟಿ ರೀಪನ್ನು ಅಲ್ಲಿಯೇ ಬಿಸಾಕಿ ಮನೆಯ ಕಡೆ ಹೋಗಿರುತ್ತಾನೆ. ಚಂದ್ರಶೇಖರಶೆಟ್ಟಿ ನಡೆಸಿದ ಹಲ್ಲೆಯ ಪರಿಣಾಮ ಪಿರ್ಯಾದಿದಾರರ ಬಲಕೈಗೆ ರಕ್ತಗಾಯವಾಗಿರುತ್ತದೆ . ಈ ಬಗ್ಗೆ ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  31/2022 ಕಲಂ: ,324,504, ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 09-12-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080