ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ : ದಿನಾಂಕ: 08.12.2021 ರಂದು KA19HH7333 ನೇ ನಂಬ್ರದ ಮೋಟಾರ್‌ ಸೈಕಲ್‌ಲ್ಲಿ ಪಿರ್ಯಾದಿ ಸಂಪತ್‌, ಪ್ರಾಯ: 24 ವರ್ಷ, ತಂದೆ: ಮುದ್ದು, ವಾಸ: ಜೋಡುಕಟ್ಟೆ, ಕಜೆ, ಮಿಯ್ಯಾರು  ಗ್ರಾಮ, ಕಾರ್ಕಳ ಇವರು  ಸಹ ಸವಾರನಾಗಿ ಸಂಕೇತನು ಸವಾರಿ ಮಾಡಿಕೊಂಡು ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಸಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ಮರ್‌ಕಟ್ಟಯಿಂದ ಕಾರ್ಕಳ ಕಡಗೆ ಸವಾರಿ ಮಾಡಿಕೊಂಡು ಸಮಯ ಸುಮಾರು ಮದ್ಯಾಹ್ನ 12:30 ಗಂಟೆಗೆ ಮಿಯ್ಯಾರು ಗ್ರಾಮದ ಕಾಜರಬೈಲು ಎಂಬಲ್ಲಿ ತಲುಪಿದಾಗ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ KA20N 7850 ನೇ ನಂಬ್ರದ ಕಾರನ್ನು ರಮೇಶ ಶೆಣೈ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೇ ನೀಡದೇ ಒಮ್ಮಲ್ಲೆ ಬಲಕ್ಕೆ ತಿರುಗಿಸಿ  ಸಂಕೇತರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸಂಕೇತರವರ ಎಡಕೈ ಮೂಳೆ ಮುರಿತಗೊಂಡಿರುವುದಲ್ಲದೇ ತುಟಿಗೆ, ಮೂಗಿಗೆ ತರಚಿದ ಗಾಯವಾಗಿದ್ದು ಪಿರ್ಯಾದಿದಾರರ ಎರಡು ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಗಾಯಾಳು ಸಂಕೇತರವರ ಆರೈಕೆಯಲ್ಲಿದ್ದರಿಂದ ದೂರನ್ನು ನೀಡಲು ತಡವಾಗಿರುತ್ತದೆ.ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 159/2021 ಕಲಂ 279, 337, 338  ಐಪಿಸಿ  .ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ:

  • ಕಾಪು: ಪಿರ್ಯಾದಿ ಜೋಸ್ ಫಿನ್ ಲೋಬೋ (75) ತಂದೆ: ದಿ ಮೈಕಲ್ ಲೋಬೋ ವಾಸ: ಅಚ್ಚಡ ಹೌಸ್ ಏಣಗುಡ್ಡೆ ಗ್ರಾಮ ಇವರು ಏಣಗುಡ್ಡೆ ಗ್ರಾಮ ಅಚ್ಚಡ ಎಂಬಲ್ಲಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು ಮನೆ ವಾರ್ತೆ ಕೆಲದಸ ಮಾಡಿಕೊಂಡಿದ್ದು ದಿನಾಂಕ 08/09/2021 ರಿಂದ ದಿನಾಂಕ 25.10.2021 ರಬೆಳಿಗ್ಗೆ 10.00 ಗಂಟೆಯ ಅವದಿಯಲ್ಲಿ ಪಿರ್ಯಾದಿದಾರರು ಮನೆಯ ಕಪಾಟಿನಲ್ಲಿ ಇಟ್ಟಿದ್ದ1) ಅಂದಾಜು 16 ಗ್ರಾಂ  ರೋಪ್  ಚೈನ್ -1 ಅಂದಾಜು ಮೌಲ್ಯ -64.000. 2) ಅಂದಾಜು 25 ಗ್ರಾಂ ಹವಳದ ಚೈನ್ -1 ಅಂದಾಜು ಮೌಲ್ಯ – 10,000.   3)ಅಂದಾಜು 20 ಗ್ರಾಂ  ಸಾದಾರಣ ಚೈನ್ -1- ಅಂದಾಜು ಮೌಲ್ಯ – 80,000.  4) ಅಂದಾಜು  20 ಗ್ರಾಂ  ಬಳೆ – 1 ಜೊತೆ ಅಂದಾಜು ಮೌಲ್ಯ –80,000. 5)ಅಂದಾಜು 12 ಗ್ರಾಂ ಉಂಗುರ - 4 ಅಂದಾಜು ಮೌಲ್ಯ – 48,000.  6)ಅಂದಾಜು10 ಗ್ರಾಂ ಕಿವಿಯ ಓಲೆ -3  ಜೊತೆ, ಅಂದಾಜು ಮೌಲ್ಯ – 40,000.  ಒಟ್ಟು  ಅಂದಾಜು 103 ಗ್ರಾಂ  ಅಂದಾಜು ಮೌಲ್ಯ ಅಂದಾಜು 4,12,000/- ರೂ ಮೌಲ್ಯದ ಚಿನ್ನಾಭರಣಗಳನ್ನು   ಯಾರೋ ಕಳ್ಳರು  ಮನೆಯ ಕಪಾಟಿನ ಬೀಗ ತೆಗೆದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರು ಹೊರಗಡೆ ಇರುವ  ತನ್ನ ಮಕ್ಕಳಿಗೆ ವಿಷಯ ತಿಳಿಸಿ ಮನೆಯಲ್ಲೆಲ್ಲಾ ಹುಡುಕಾಡಿ ದೂರು ನೀಡುವುದು ತಡಲಾಗಿರುತ್ತದೆ.ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2021  ಕಲಂ: 380 ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಹಿರಿಯಡ್ಕ :ಪಿರ್ಯಾದಿ ನವೀನ ಪ್ರಭು (31), ತಂದೆ; ವಿಶ್ವನಾಥ ಪ್ರಭು  ವಾಸ; ಪಂಜಡ್ಕ ಮನೆ, ಅಂಜಾರು ಗ್ರಾಮ, ಇವರ ತಾಯಿ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ:08/12/2021 ರಂದು ವಾಸ್ತವ್ಯದ ಮನೆಯಲ್ಲಿ ಸಂಜೆ ವೇಳೆ ಮಲಗಿದ್ದು, ರಾತ್ರಿ 8:30 ಗಂಟೆ ವೇಳೆಗೆ ಪಿರ್ಯಾದಿದಾರರ ತಂದೆಯವರು ಮನೆಗೆ ಬಂದು ಎಬ್ಬಿಸಿದಾಗ ಎದ್ದಿರುವುದಿಲ್ಲ. ನಂತರ ಪಿರ್ಯಾದಿದಾರರು ಕೆಲಸದಿಂದ ಮನೆಗೆ ಬಂದು ತಾಯಿಯವರನ್ನು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ 9:45 ಗಂಟೆಗೆ ಪರಿಕ್ಷೀಸಿದ ವೈದ್ಯರು ಸುಮಾ @ ಸುಶೀಲ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ:26/2021 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-12-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080