ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 07/11/2021ರಂದು ಪಿರ್ಯಾದಿದಾರರಾದ ಶ್ರೀಮತಿ ಮಂಗಳಾ(32), ಗಂಡ: ನಾಗರಾಜ, ವಾಸ:ವಿನೋದ ವಿಹಾರ ಸರಸ್ವತಿ ಶಾಲೆಯ ಹಿಂಭಾಗ ಬನ್ನಂಜೆ ಶೀರಿಬೀಡು ಉಡುಪಿ ಜಿಲ್ಲೆ ಇವರ ಮಗ ಅಕ್ಷಯ (3) ಮನೆಯ ಎದುರು ಮಠದಬೆಟ್ಟು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಮಧ್ಯಾಹ್ನ 1:15 ಗಂಟೆಯ ಸಮಯಕ್ಕೆ ಮಠದ ಬೆಟ್ಟು ರಸ್ತೆಯ ಕಡೆಯಿಂದ ಶಿರೀಬೀಡು ರಸ್ತೆಯ ಕಡೆಗೆ KA-20-EJ-6376ನೇ ಸ್ಕೂಟರ್ ಸವಾರ ತನ್ನ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಮಗ ಅಕ್ಷಯನಿಗೆ ಡಿಕ್ಕಿ ಹೊಡೆದ ಪರಿಣಾಮ ಅಕ್ಷಯ ರಸ್ತೆಗೆ ಬಿದ್ದು, ಎಡಕಾಲಿನ ಮೂಳೆ ಮುರಿತದ ಹಾಗೂ ಬಲಕಾಲು ಮತ್ತು ಮುಖಕ್ಕೆ ತರಚಿದ ಗಾಯವಾಗಿ ಉಡುಪಿ ಗಾಂದೀ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 07/11/2021 ರಂದು  ಮಧ್ಯಾಹ್ಮ 2:00 ಗಂಟೆಗೆ ಪಿರ್ಯಾದಿದಾರರಾದ ಕಿರಣ್ ಕುಮಾರ್ ಎಸ್ (25), ತಂದೆ: ಎಸ್ ಎಮ್ ಆರಾಧ್ಯ, ವಾಸ: ಬಾಸ್ ಬೈಲ್ ಮಠ ಮನೆ ನಂಬ್ರ 3-26 A ಮೊಳಹಳ್ಳಿ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ತನ್ನ KA-20-EW-4315 ನೇ ನಂಬ್ರದ  ಯಮಾಹಾ ಬೈಕಿನಲ್ಲಿ ತನ್ನ ಸ್ನೇಹಿತ ಪ್ರವೀಣ ರವರನ್ನು ಕರೆದುಕೊಂಡು ಬರಲು ಹೋಗುತ್ತಿರುವಾಗ ಹಾರ್ದಳ್ಳಿ ಮಂಡಳ್ಳಿ ಗ್ರಾಮದ  ಜನ್ನಾಡಿ ಸರ್ಕಲ್ ಬಳಿ ತಲುಪುವಾಗ ಎದುರುಗಡೆಯಿಂದ ಅಂದರೆ ಹಾಲಾಡಿ ಕಡೆಯಿಂದ ಬಿದ್ಕಲ್ ಕಟ್ಟೆ ಕಡೆಗೆ ದುರ್ಗಾಂಬಾ ಬಸ್ ಬರುತ್ತಿದ್ದು ಅದರ ಹಿಂಬದಿಯಲ್ಲಿ  KA-20-AA-4078 ನೇ ಆಟೋ ರಿಕ್ಷಾ  ಚಾಲಕ ರಾಜು ತನ್ನ ರಿಕ್ಷಾವನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಆತನ ಬಲಭಾಗದಲ್ಲಿ ಇರುವ  ಮಾಲಾಡಿ ರಸ್ತೆಗೆ ಹೋಗಲು ಕ್ರಮದಂತೆ ಬರುತ್ತಿದ್ದ ಪಿರ್ಯಾದಿದಾರರ ಬೈಕನ್ನು ಲೆಕ್ಕಿಸದೇ  ಒಮ್ಮೆಲೆ ಬಲಭಾಗಕ್ಕೆ ರಿಕ್ಷಾವನ್ನು ತಿರುಗಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರಿಂದ  ಪಿರ್ಯಾದಿದಾರರಿಗೆ ಬಲ ಕೈಯ ಮಣಿಗಂಟಿನ ಬಳಿ ಮೂಳೆ ಮುರಿತದ ಗಾಯ ಮತ್ತು ಬಲ ಕಾಲಿನ ಕೋಲು ಕಾಲಿನ ಹಿಂಬದಿಯಲ್ಲಿ ರಕ್ತ ಗಾಯ ಉಂಟಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ವಸಂತ ಬಂಗೇರಾ  ( 48),  ವಾಸ : 3-91 ತೆಂಕಕೊಪ್ಪ  ಮಟ್ಟು ಗ್ರಾಮ ಕಾಪು ತಾಲೂಕು.ಉಡುಪಿ ಜಿಲ್ಲೆ ಇವರು ದಿನಾಂಕ 07/11/2021 ರಂದು ಮನೆಯ  ಅಗತ್ಯ ಸಾಮಗ್ರಿಗಳನ್ನು ಖರೀದಿಸಿಕೊಂಡು  ಕಟಪಾಡಿ ಪೇಟೆಯಿಂದ ಮನೆ ಕಡೆಗೆ ಕಟಪಾಡಿ ಮಟ್ಟು ರಸ್ತೆಯ ಎಡಭಾಗದ ಮಣ್ಣಿನ ದಾರಿಯಲ್ಲಿ ನಡೆದುಕೊಂಡು ಹೊಗುತ್ತಿರುವಾಗ ಸಂಜೆ 17:20 ಗಂಟೆಗೆ ಕಟಪಾಡಿಯ ಎಸ್.ವಿ.ಎಸ್ ಇಂಗ್ಲೀಷ್ ಮೀಡಿಯಂ ಶಾಲೆ ಸಮೀಪ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಓರ್ವ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ಹಂಪನ್ನು ಹಾರಿ  ರಸ್ತೆಯ ಎಡಭಾಗದ ಮಣ್ಣಿನ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು  ಕಾರಿನ ಎಡಭಾಗದ ಮುಂದಿನ ಚಕ್ರವು ಪಿರ್ಯಾದಿದಾರ ಅಂಗಾಲಿನ ಮೇಲೆ  ಹತ್ತಿ ಹೋಗಿದ್ದು, ಕಾರು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು,  ಪಿರ್ಯಾದಿದಾರರ ಬಲ ಅಂಗಾಲಿನ ಮೂಳೆ ಮುರಿತವಾಗಿದ್ದು ಢಿಕ್ಕಿ ಹೊಡೆದ ಕಾರು ಅಲ್ಲೆ ನಿಂತಿದ್ದು ನಂಬ್ರ ನೋಡಲಾಗಿ KA-20-Z-2446  ಆಗಿರುತ್ತದೆ. ಕೂಡಲೇ ಪಿರ್ಯಾದಿದಾರರನ್ನು ಢಿಕ್ಕಿ ಹೊಡೆದ ಕಾರಿನ ಚಾಲಕ ಮತ್ತು ಊರಿನ ಗುರುಪ್ರಸಾದ ಎಂಬುವವರು ಅದೇ ಕಾರಿನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪಿರ್ಯಾದಿದಾರರಿಗೆ  ಪ್ರಥಮ ಚಿಕಿತ್ಸೆಗೆ ನೀಡಿದ್ದು,  ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ  ಪಿರ್ಯಾದಿದಾರರ  ತಮ್ಮ ಶಶಿಧರ ರವರು ಪಿರ್ಯಾದಿರರನ್ನು ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಚಿಕಿತ್ಸೆಯ ಬಗ್ಗೆ  ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 168/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ  ಶಬನಮ್ (25), ಗಂಡ: ಮಹಮ್ಮದ್ ನದೀಮ್, ವಾಸ: ಮೂಡುಬೆಟ್ಟು , ನಿಡಂಬಳ್ಳಿ ಮೂಡುತೋನ್ಸೆ ಇವರು ಮಂಗಳೂರಿನ  ಕುಂಜತ್ ಬೈಲ್ ನಿವಾಸಿ  ಮಹಮ್ಮದ್ ನದೀಮ್ (23) ಎಂಬುವವರನ್ನು ದಿನಾಂಕ 29/12/2020 ರಂದು ಉಳ್ಳಾಲ ದಲ್ಲಿ ತನ್ನ ಚಿಕ್ಕಪ್ಪ ಶಕೀಲ್  ರವರ ಮನೆಯಲ್ಲಿ   ಮದುವೆ ಆಗಿದ್ದು ಮದುವೆ ಆದ ನಂತರ ಮಂಗಳೂರಿನ ಕಾವೂರಿನಲ್ಲಿದ್ದು  , ಈಗ ಎರಡು  ತಿಂಗಳಿನಿಂದ  ನಿಡಂಬಳ್ಳಿ ಮೂಡಬೆಟ್ಟು ಎಂಬಲ್ಲಿ  ವಾಸ ಮಾಡಿಕೊಂಡಿದ್ದು , ಪಿರ್ಯಾಧಿದಾರರು ಮತ್ತು ಅವರ ಗಂಡ ನದೀಮ್ ರವರಿಗೆ  ಸಣ್ಣ ಪುಟ್ಟ ವಿಚಾರದಲ್ಲಿ ಜಗಳವಾಗುತ್ತಿದ್ದು, ಈ ಬಗ್ಗೆ  ಪಿರ್ಯಾಧಿ ದಾರರು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆ ಮತ್ತು ಮಲ್ಪೆ ಠಾಣೆ ಯಲ್ಲಿ ದೂರು  ಅರ್ಜಿ ನೀಡಿದ್ದು ವಿಚಾರಣೆ ನಡೆದಿರುತ್ತದೆ. ದಿನಾಂಕ 07/10/2021 ರಂದು ಪಿರ್ಯಾದಿದಾರರೊಂದಿಗೆ  ,ಪಿರ್ಯಾದಿದಾರರ ಗಂಡ ಜಗಳ ಮಾಡಿ ರಾತ್ರಿ 09:30  ಗಂಟೆಗೆ ಮನೆ ಬಿಟ್ಟು ಹೋಗಿದ್ದು ವಾಪಸ್ಸು ಬಂದಿರುವುದಿಲ್ಲ, ಅಲ್ಲದೆ ಈ ಬಗ್ಗೆ  ಸಂಬಂಧಿಕರ  ಮನೆಯಲ್ಲಿ ಹಾಗೂ  ಪರಿಚಯದವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಶಕೀಲಾ ಶೆಟ್ಟಿ (35), ತಂದೆ: ದಿ. ಸುರೇಂದ್ರ ಶೆಟ್ಟಿ, ವಾಸ:  ಅಂಬಿಕಾ ಗೆಸ್ಟ್ ಹೌಸ್  ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರ ತಂದೆ ದಿ. ಸುರೇಂದ್ರ ಶೆಟ್ಟಿ ಯವರು  ಹೊಸೂರು ಗ್ರಾಮದ  ಸರ್ವೆ ನಂಬ್ರ 86/2B1, ಮತ್ತು 86/2B2,  ರಲ್ಲಿ ಸ್ಥಳ   ಖರೀದಿ ಮಾಡಿ ಕೊಟ್ಟಿದ್ದು  ಸ್ಥಳದ ಮೇಲೆ ಪಿರ್ಯಾದಿದಾರರು ಸೆಂಡಿಕೇಟ್ ಬ್ಯಾಂಕಿನಿಂದ 4 ಕೋಟಿ 75 ಲಕ್ಷ ಸಾಲ ಮಾಡಿ ಕೆ ಎಸ್ ಎಸ್ ಹೋಟೆಲ್ ಮತ್ತು ಲಾಡ್ಜಿಂಗ್  ಕಟ್ಟಡ ಕಟ್ಟಿ  ಸಂಬಂಧಿಸಿದ ಎಲ್ಲಾ ಕಟ್ಟಡದ ಸಾಮಾಗ್ರಿಗಳನ್ನು  ಬ್ಯಾಂಕಿನಿಂದ ದೊರೆತ ಸಾಲದಿಂದ ಖರೀದಿಸಿ ವ್ಯವಹಾರ  ನಡೆಸಿಕೊಂಡು  ಬಂದಿದ್ದು ಕೆಲವು ಆರ್ಥಿಕ ಕಾರಣದಿಂದ ವ್ಯವಹಾರ ನಿಲ್ಲಿಸಿದ್ದು . ದಿನಾಲೂ  ಕಟ್ಟ್ಡದ ಉಸ್ತುವಾರಿ ನೋಡಿಕೊಂಡು  ಬರುತ್ತಿದ್ದು   ದಿನಾಂಕ 08/11/2021 ರಂದು ಸಂಜೆ 5:00 ಗಂಟೆಗೆ ಹೋಗಿ ನೋಡಿದಾಗ  ಕಟ್ಟಡದಲ್ಲಿದ ಪ್ರೀಜ್  ಎಲ್ಲಾ ರೀತಿ  ಅಡುಗೆ ಸಲಕರಣೆಗಳು      ಗ್ರೇಂಡರ್ , ಡೋರ್, ಬಾರ್ ಕ್ಯಾಬಿನೇಟ್, ಕಿಚನ್ ಕ್ಯಾಬಿನೆಟ್, ಫ್ಯಾನ್ಸ್, ಕಾಟ್, ವಾಸ್ ಬೇಸಿನ್,  ಎಲೆ ಕ್ಟ್ರಿಕ್ ಐಟಮ್, ಸಿಸಿ ಟಿವಿ, ಡಿವಿಆರ್, ಹೋಟೇಲ್ ನ ಟೇಬಲ್, ಚೇರ್, ಪಾರ್ಟ ಹಾಲ್ ಚೇರ್- 250-300 ಕ್ರೊಕೇರಿ  ಐಟಮ್  ಇತ್ಯಾದಿ ಸುಮಾರು 30 ಲಕ್ಷ ಮೌಲ್ಯ ಸಾಮಾಗ್ರಿಗಳನ್ನು  ಆರೋಪಿಗಳಾದ ಪ್ರದೀಪ ಶೆಟ್ಟಿ , ಸುನೀಲ್  ನಾಯ್ಕ್, ಕೃಷ್ಣಯ್ಯ ಶೆಟ್ಟಿ, ಅಲೇಕ್ಸ್, ಅಬ್ದುಲ್ ಹಾಗೂ  ಸುರೇಶ್ ಇವರು  ಸೇರಿ ಕಳ್ಳತನ ಮಾಡಿಕೊಂಡು  ಹೋಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರಜ್ವತ್ ಕೆ.ಎಸ್ (34), ತಂದೆ: ಕೆ. ಸಂಜೀವ ಪೂಜಾರಿ, ವಾಸ: ಗುರುದೇವ, ಪಂಚಾಯತ್ ಹತ್ತಿರ, ಕೊಕ್ಕರ್ಣೆ, ಪೆಜಮಂಗೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕೊಕ್ಕರ್ಣೆ ಗ್ರಾಮ ಪಂಚಾಯತ್ ಪೆಜಮಂಗೂರು 2ನೇ ವಾರ್ಡ್‌ನ ಸದಸ್ಯರಾಗಿದ್ದು, ಅವರಿಗೆ  ದಿನಾಂಕ 08/11/2021 ರಂದು ಬೆಳಿಗ್ಗೆ11:15 ಗಂಟೆಗೆ ಸ್ಥಳೀಯ ಓರ್ವರು ಫೋನ್ ಮಾಡಿ ಪೆಜಮಂಗೂರು ಗ್ರಾಮದ, ಗುಂಡಾಲು ಕಿಂಡಿ ಅಣೆಕಟ್ಟಿನ ಬಳಿ, ಸೀತಾನದಿಯಲ್ಲಿ  ನವಜಾತ ಮಗು ಒಂದು ನೀರಿನಲ್ಲಿ ಕವುಚಿ ಬಿದ್ದು ತೇಲುತ್ತಿರುವುದಾಗಿ ತಿಳಿಸಿದ ಮೇರೆಗೆ, ಪಿರ್ಯಾದಿದಾರರು  ಸ್ಥಳಕ್ಕೆ ಬೆಳಿಗ್ಗೆ 11:30 ಗಂಟೆಗೆ ಹೋದಾಗ ಸೀತಾನದಿ ಹೊಳೆಯ ಕಿಂಡಿ ಅಣೆಕಟ್ಟಿನ ಬಳಿ ನವಜಾತ ಮಗುವಿನ ಮೃತ ದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿರುತ್ತದೆ. ಮೃತ ದೇಹವನ್ನು ಪರಿಶೀಲಿಸಿದಾಗ ಆ ಮಗುವು ಗಂಡು ಶಿಶು ಆಗಿದ್ದು, ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿ ಇರುತ್ತದೆ. ಅಲ್ಲದೇ ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತ ದೇಹದೊಂದಿಗೆ ಇರುತ್ತದೆ. ಮಗುವಿನ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಮಗುವಿನ ವಾರಿಸುದಾರರು ಯಾರೂ ಪತ್ತೆಯಾಗಿರುವುದಿಲ್ಲ. ಮಗುವಿನ ಮೃತ ಶರೀರವನ್ನು ನೋಡುವಾಗ ಮಗು ಜನನ ತರುವಾಯ ಅಥವಾ ಜನನ ಕಾಲದಲ್ಲಿ ಯಾರೋ ಮಗುವಿನ ವಾರಿಸುದಾರರು ಮಗುವಿನ ಮೃತ ದೇಹವನ್ನು ರಹಸ್ಯವಾಗಿ ವಿಲೇ ಮಾಡುವ ಸಲುವಾಗಿ  2-3 ದಿನಗಳ ಹಿಂದೆ ಸೀತಾನದಿ ಹೊಳೆಯ ನೀರಿಗೆ ಬೀಸಾಡಿರ ಬಹುದಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2021 ಕಲಂ: 318 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 09-11-2021 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080