ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ನಿತಿನ್ ದೇವಾಡಿಗ (42) ತಂದೆ: ಗೋವಿಂದ ಎಸ್ ದೇವಾಡಿಗ ವಾಸ: ಮಜ್ಜಿಗೆಪಾದೆ, ಸಮೃದ್ದಿ, ಅಂಬಲಪಾಡಿ ಗ್ರಾಮ ಮತ್ತು ಅಂಚೆ ಉಡುಪಿ ಇವರು ದಿನಾಂಕ 08/10/2022 ರಂದು ಸಂಜೆ KA-19 EG-9917 ನೇ ಸ್ಕೂಟರಿನಲ್ಲಿ ತನ್ನ ತಂಗಿ ಪವಿತ್ರಾರವರನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಅಂಬಲಪಾಡಿಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 4:15 ಗಂಟೆಗೆ ಪುತ್ತೂರು ಗ್ರಾಮ ಅಂಬಾಗಿಲು ಜಂಕ್ಷನ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ  KA-20 ER-6953ನೇ ಮೋಟಾರ್ ಸೈಕಲ್ ಸವಾರ ರಾಜು ಎಂಬವರು ದಾಕ್ಷಾಯಿಣಿ ಮತ್ತು ಮಗುವನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ವಿರುದ್ದ ದಿಕ್ಕಿನಲ್ಲಿ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ನಿತಿನ್‌ ದೇವಾಡಿಗ ರವರು ಮತ್ತು ಹಿಂಬದಿ ಸವಾರಳಾದ ಪವಿತ್ರಾಳನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರಳಾದ ಪವಿತ್ರ ರವರು ರಸ್ತೆಗೆ ಬಿದ್ದು, ನಿತಿನ್‌ ದೇವಾಡಿಗ ರವರ ಎಡಭುಜದ ಮೂಳೆ ಮುರಿತದ ಜಖಂ, ಮೂಗಿಗೆ, ಎರಡೂ ಬದಿ ಹಣೆಗೆ, ಮುಖಕ್ಕೆ, ತರಚಿದ ರಕ್ತಗಾಯ ಹಾಗೂ ಎಡಕೈ ಮೊಣಗಂಟಿನ ಬಳಿ ತರಚಿದ  ರಕ್ತಗಾಯವಾಗಿರುತ್ತದೆ. ಅಲ್ಲದೇ ಪವಿತ್ರರವರ ಎಡಕಾಲಿಗೆ ಸೀಳಿದ ಗಾಯದ ಬಲಕಾಲಿನ ಬಳಿ ತರಚಿದ ಗಾಯ ಹಣೆ ಮತ್ತು ತಲೆಗೆ ಗುದ್ದಿದ ಒಳ ಜಖಂ ಆಗಿರುತ್ತದೆ. ಅಫಘಾತಪಡಿಸಿದ ಮೋಟಾರ್ ಸೈಕಲ್ ಸವಾರ ರಾಜು ರವರ ಎಡಕಾಲಿಗೆ ತರಚಿದ ರಕ್ತ ಗಾಯ ಹಾಗೂ ತಲೆಗೆ ರಕ್ತಗಾಯ ಆಗಿದ್ದು, ಹಿಂಬದಿ ಸವಾರಳಾದ ದಾಕ್ಷಾಯಣಿರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 80/2022 ಕಲಂ: 279,337,338 ಮತ್ತು 218. ಐಪಿಸಿ ಜೊತೆಗೆ 177 IMV ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 09/10/2022 ರಂದು 00.30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಸೆಂಟ್ರಲ್‌ ಪಾರ್ಕ್‌ ಹೋಟೇಲಿನ ಬಳಿ ರಾ.ಹೆ. 169ಎ ನೇದರಲ್ಲಿ ಕಾರು ನಂ: ಕೆ.ಎ- 20 ಎಂಎ-3577 ನೇದರ ಚಾಲಕ ದೀಕ್ಷಿತ್‌ ಜಿ. ರಾಜ್‌ ಎಂಬವನು ತನ್ನ ಕಾರನ್ನು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಿತ್‌ ಜಸ್ವಾಲ್‌, ಸಂಸುಲ್‌ ಆರೀಪ್‌ ಹೋಕ್ಯೂ, ಲತೀಪುಲ್‌ ಚೌದುರಿ, ಸುಕ್‌ದೇಬ್‌ ಕರ್ಮಾಕರ್‌ ಮತ್ತು ಸಾಹಿನ್‌ ಎಸ್‌.ಕೆ ಎಂಬವರಿಗೆ ಡಿಕ್ಕಿ ಹೊಡೆದು ಬಳಿಕ ಪಿರ್ಯಾದಿದಾರರಾದ ಸಂತೋಷ್‌ ಕುಲಾಲ್‌ (35) ತಂದೆ: ನಾರಾಯಣ ಕುಲಾಲ್‌, ವಾಸ: ಕೊರಂಗಿಲ್ಲಾ ದರ್ಖಾಸು ಮನೆ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾ ಕೆಎ-20 ಎಬಿ-5223 ಕ್ಕೆ ಡಿಕ್ಕಿ ಹೊಡೆದು, ಕಾರು ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾನೆ.ಅಪಘಾತದಲ್ಲಿ ಮೇಲ್ಕಂಡ ಪಾದಾಚಾರಿಗಳಿಗೆ ಗಾಯಗಳಾಗಿರುತ್ತದೆ. ಗಾಯಾಳುಗಳ ಪೈಕಿ ಸಾಹಿನ್‌ ಎಸ್‌.ಕೆ. ಎಂಬವನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 09/10/2022 ರಂಬು ಬೆಳಿಗ್ಗೆ 06:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 186/2022 ಕಲಂ: 279, 337, 304(ಎ) ಐಪಿಸಿ. ಮತ್ತು ಕಲಂ 134 (ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶೃದ್ದಾ ಪೈ (28) ತಂದೆ: ಸುಬ್ಬಣ್ಣ ಪೈ ವಾಸ: 1-161, ಶ್ರೀ ಮಂಜುನಾಥ ಕೃಪಾ, ಮುಖ್ಯರಸ್ತೆ ಕಲ್ಯಾಣ್‌ಪುರ, ಉಡುಪಿ ಇವರು ದಿನಾಂಕ 30/09/2022 ರಂದು 18:00 ಗಂಟೆಗೆ ಅವರ ಅಜ್ಜಿ ಸಾವಿತ್ರಿ ಪೈ (82), ಅಮ್ಮ ಹಾಗೂ ಅತ್ತೆಯೊಂದಿಗೆ ಉಡುಪಿ ತಾಲೂಕು ಅಂಬಲ್ಪಾಡಿ ಗ್ರಾಮದ ಅಂಬಲ್ಪಾಡಿ ಜನಾರ್ಧನ ದೇವಸ್ಥಾನಕ್ಕೆ ಹೋಗಿದ್ದು, ದೇವಸ್ಥಾನದ ಒಳಗೆ ಪ್ರದಕ್ಷಿಣೆ ಮಾಡಿ ತೀರ್ಥ ಪ್ರಸಾದ ತೆಗೆದುಕೊಂಡು ಹೊರ ಬಂದ ಬಳಿಕ ಶೃದ್ದಾ ಪೈ ರವರ ಅಜ್ಜಿಯ ಕುತ್ತಿಗೆಯಲ್ಲಿದ್ದ 5 ಪವನ್‌ತೂಕದ ಚಿನ್ನದ ಸರ ಇಲ್ಲದೆ ಇರುವುದು ಗಮನಕ್ಕೆ ಬಂದಿದ್ದು, ನವರಾತ್ರಿ ಉತ್ಸವ ಕಳೆದ ಬಳಿಕ ದಿನಾಂಕ 08/10/2022 ರಂದು ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲನೆ ಬಳಿಕ, ಇಬ್ಬರು ಹೆಂಗಸರು ಶೃದ್ದಾ ಪೈ ರವರ ಅಜ್ಜಿಯ ಕುತ್ತಿಗೆಯ ಬಳಿ ಕೈ ಇಟ್ಟು ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ರೂಪಾಯಿ 2,80,000/- ಆಗಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 150/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಹಮದ್ ಹುಸೈನ್ ತಂದೆ: ಹುಸೈನ್ ಬ್ಯಾರಿ ವಾಸ: ಸಂತೋಷ ಕ್ಯಾಶೂ ಫ್ಯಾಕ್ಟರಿ ಹತ್ತಿರ ನಿಟ್ಟೆ  ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ 09/10/2022 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಪೂರ್ವಾಬಾವಿಯಾಗಿ ನಡೆಸುವ ಮಿಲಾದ್ ಪೆಸ್ಟ್ ಕಾರ್ಯಕ್ರಮ ದಿನಾಂಕ 08/10/2022 ರಂದು ಸಂಜೆ 7:00 ಗಂಟೆಗೆ ಮಸೀದಿಯಲ್ಲಿ ಪ್ರಾರಂಭಗೊಳಿಸಿದ್ದು, ಆ ಸಮಯ ಜಮಾತಿನ ಸದಸ್ಯ ಹಾಗೂ ಮಾಜಿ ಅದ್ಯಕ್ಷರಾದ ಮಹಮ್ಮದ್ ಹಾಳೆಕಟ್ಟೆ ಎಂಬಾತನು ಬಿಳಿ ಬಣ್ಣದ ಸ್ವಿಫ್ಟ್  ಕಾರಿನಲ್ಲಿ  ಚೂರಿ ತೆಗೆದುಕೊಂಢು ಬಂದು ಕಾರ್ಯಕ್ರಮದ ಅತಿಧಿಗಳನ್ನು ಕರೆದುಕೊಂಢು ಹೋಗುತ್ತಿದ್ದ ಅಹಮದ್ ಹುಸೈನ್ ಅಹಮದ್ ಹುಸೈನ್ ರವರನ್ನು ಹಾಗೂ ಕಾರ್ಯದರ್ಶಿಯಾದ ಅಬ್ದುಲ್ ಜಬ್ಬಾರ್ ನನ್ನು ತಡೆದು ನಿಲ್ಲಿಸಿ ಅಹಮದ್ ಹುಸೈನ್ ಇವರ ಬೆನ್ನಿಗೆ ಚೂರಿಯ ಇಡಿಯಿಂದ ಗುದ್ದಿದ್ದು, ಅಬ್ದುಲ್ ಜಬ್ಬಾರ್ ಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 125/2022 ಕಲಂ :341,323,324,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾಧ ರಾಘವೇಂದ್ರ ಸಿ, ಪಿಎಸ್‌ಐ, (ಕಾ&ಸು), ಶಿರ್ವ ಪೊಲೀಸ್‌ಠಾಣೆ  ಇವರು ದಿನಾಂಕ 09/10/2022 ರಂದು ಬೆಳಿಗ್ಗೆ 5:00 ಗಂಟೆಗೆ ಮನೆಯಲ್ಲಿರುವಾಗ ಪೊಲೀಸ್‌ ಬಾತ್ಮೀದಾರರು ಕರೆ ಮಾಡಿ  ಬೆಳಪು ಗ್ರಾಮದ ನಿವಾಸಿ ತಬ್ರೇಸ್‌ಎಂಬವರ ಮನೆಯ ಸಮೀಪದ ಜಾಗದಲ್ಲಿ ತಗಡು ಶೀಟ್‌ಅಳವಡಿಸಿದ ಶೆಡ್‌ನಲ್ಲಿ ‌‌‌‌‌‌ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ದನವನ್ನು ಕಡಿಯಲು ತಯಾರು ನಡೆಸುತ್ತಿದ್ಧಾರೆಂಬ ಬಂದ ಮಾಹಿತಿಯಂತೆ ಠಾಣಾ ಸುರೇಶ್‌ಜೆ.ಕೆ ಪೊಲೀಸ್‌ಉಪನೀರಿಕ್ಷಕರು (ತನಿಖೆ), ಸಿಬ್ಬಂದಿಯವರಾದ  ಸಿಪಿಸಿ 2494 ರಘು, ಸಿಪಿಸಿ 2516  ಅಂದಪ್ಪ, ಸಿಪಿಸಿ 2666 ರಾಮರಾಜಪ್ಪ ನಾಯ್ಕ್‌, ಸಿಪಿಸಿ 59 ಅಖಿಲ್ ರವರು ಮತ್ತು ಪಂಚರಾದ ಆನಂದ (35), ತಂದೆ: ಬೊಗ್ಗು, ವಾಸ: ನಡಿಬೆಟ್ಟು, ಕೊಪ್ಪ, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ. ಹರೀಶ್‌ಆಚಾರ್ಯ (28), ತಂದೆ:ಸಂಜೀವ ಆಚಾರ್ಯ, ವಾಸ: ದಡ್ಡಿನಹಿತ್ಲು, ಸೊರ್ಕಳ, ಶಿರ್ವ ಅಂಚೆ  ಮತ್ತು ಗ್ರಾಮ , ಕಾಪು ತಾಲೂಕು, ಉಡುಪಿ ಜಿಲ್ಲೆ. ರವರನ್ನು ಬರಮಾಡಿಕೊಂಡು ಬೆಳಿಗ್ಗೆ 5:30 ಗಂಟೆಗೆ ಠಾಣೆಯಿಂದ ಇಲಾಖಾ ಜೀಪ್‌ನಂಬ್ರ  ಕೆಎ-20 ಜಿ-211 ನೇದರಲ್ಲಿ ಚಾಲಕ ಎಪಿಸಿ 1412ನೇ ಪ್ರಸಾದ್ ರವರೊಂದಿಗೆ ಬೆಳಪು ಗ್ರಾಮದ ತಬ್ರೇಸ್‌ ಇವರ  ಮನೆ  ಸಮೀಪ 06:00 ಗಂಟೆಗೆ ತಲುಪಿದಾಗ ಅಲ್ಲಿಯೇ ಇದ್ದ ವಿದ್ಯುತ್ ಕಂಬದ ದೀಪದ ಬೆಳಕಿನ ಸಹಾಯದಿಂದ  ದೂರದಲ್ಲಿ ನಿಂತು ನೋಡಿದಾಗ ತಗಡಿನ ಶೀಟ್‌ಗಳಿಂದ ನಿರ್ಮಿಸಿದ ಶೆಡ್‌ಇದ್ದು, ಸದ್ರಿ ಸ್ಥಳದಲ್ಲಿ ವಿದ್ಯುತ್‌ ದೀಪ ಉರಿಯುತ್ತಿದ್ದು, ಸುಮಾರು ಮೂರು ಜನರು ಅಲ್ಲಿದ್ದು, ದನವನ್ನು ಕಡಿದು ಮಾಂಸ  ಮಾಡುತ್ತಿರುವುದು  ಕಂಡು  ಬಂತು. ಪಂಚರು  ಮತ್ತು ಸಿಬ್ಬಂದಿಯವರೊಂದಿಗೆ 06:05 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿದ್ದರೆಲ್ಲರೂ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಲು ಪ್ರಯತ್ನಿಸಿದ್ದು ನಾವು ಆ ಮೂರು ಜನರನ್ನು ಸುತ್ತುವರೆದು ಹಿಡಿದುಕೊಂಡಿದ್ದು ಅವರನ್ನು ಜೊತೆಯಲ್ಲಿದ್ದ ಪಂಚರುಗಳ ಸಮಕ್ಷಮ  ಹೆಸರು ವಿಳಾಸ  ಕೇಳಲಾಗಿ 1) ತಬ್ರೇಸ್‌( 30), ತಂದೆ: ದಿ. ಸುಲ್ತಾನ್‌ಅಹಮ್ಮದ್‌‌, ವಾಸ: ಹಾಜಿ ಗೇಟ್‌‌, ಬೆಳಪು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು, ಉಡುಪಿ ಜಿಲ್ಲೆ. 2) ಮೊಹಮ್ಮದ್ ಅಜೀಮ್‌, (39), ತಂದೆ: ಅಮಾನುಲ್ಲಾ ಅಸೈನ್‌‌, ವಾಸ: ಕನ್ನಡ ಶಾಲೆ ಬಳಿ, ಮಲ್ಲಾರು ಗ್ರಾಮ ಮತ್ತು ಅಂಚೆ ಕಾಪು ತಾಲೂಕು, ಉಡುಪಿ ಜಿಲ್ಲೆ. 3) ಮೊಹಮ್ಮದ್‌ವಲೀದ್‌, (20) ತಂದೆ: ಮಕ್ಬುಲ್‌ಹುಸೇನ್‌, ವಾಸ: ಮಧುರಾ ಸ್ಟೋರ್‌ಬಳಿ, ಬೆಳಪು ಗ್ರಾಮ ಮತ್ತು ಅಂಚೆ, ಕಾಪು ತಾಲೂಕು, ಉಡುಪಿ ಜಿಲ್ಲೆ. ಎಂದು ತಿಳಿಸಿದರು. ನಾವು ಮೂರು ಜನರು ಸೇರಿ ನಮ್ಮ ಸ್ವಂತ ಲಾಭಕ್ಕಾಗಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ದಿನಾಂಕ 07/10/2022 ರಂದು ಬೆಳಪು ಜಾರಂದಾಯ ಕೆರೆಯ ಹತ್ತಿರದಿಂದ ಎರಡು ದನಗಳನ್ನು ಹಾಗೂ ಪುಂಚಲಕಾಡು ಬಾರ್‌ ಎದುರಿನ ಹಾಡಿಯ ಹತ್ತಿರದಿಂದ ಎರಡು ದನಗಳನ್ನು ಕಳವು ಮಾಡಿ ಈ ಸ್ಥಳಕ್ಕೆ ತಂದಿದ್ದಾಗಿಯೂ ನಾವೆಲ್ಲರೂ ಸೇರಿ ದಿನಾಂಕ 08/10/2022 ರಂದು ಎರಡು ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಿದ್ದು  ಹಣವನ್ನು ಹಬ್ಬಕ್ಕೆ ಖರ್ಚು ಮಾಡಿರುವುದಾಗಿ ಹಾಗೂ ಈ ದಿನ  ಎರಡು  ದನಗಳನ್ನು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ನಡೆಸಿರುವುದಾಗಿ ತಿಳಿಸಿದರು. ಸ್ಥಳವನ್ನು ಜೊತೆಯಲ್ಲಿದ್ದ ಪಂಚರುಗಳ ಸಮಕ್ಷಮ ಆಪಾದಿತರು ತೋರಿಸಿಕೊಟ್ಟಂತೆ ಪರಿಶೀಲಿಸಲಾಗಿ ಕೃತ್ಯದ  ಸ್ಥಳವು ಕಾಪು  ತಾಲೂಕು ಬೆಳಪು ಗ್ರಾಮದ  ಹಾಜಿಗೇಟ್‌ಬಳಿ ತಬ್ರೇಸ್‌ಎಂಬವರ  ಮನೆಯ ಸಮೀಪ  ಖಾಲಿ ಸ್ಥಳದಲ್ಲಿ  ಹಾಕಿದ್ದ ತಗಡು ಶೀಟ್‌ನ ಶೆಡ್‌ನ  ಒಳಗಡೆ  ಆಗಿರುತ್ತದೆ. ಸ್ಥಳದಲ್ಲಿ  ಶೆಡ್‌ನ  ಒಳಗಡೆ  ನೆಲದ ಮೇಲೆ  ನೀಲಿ ಬಣ್ಣದ  ಟರ್ಪಾಲ್‌ ಹಾಸಿದ್ದು ನೆಲದ ಮೇಲಿನ ಟರ್ಪಾಲ್‌ ಮೇಲೆ ಸುಮಾರು 30 ಕೆ.ಜಿ.  ಕಪ್ಪು ಬಣ್ಣದ ದನವನ್ನು  ಕಡಿದು ಚರ್ಮವನ್ನು ತೆಗೆಯುತ್ತಿರುವುದು ಕಂಡು ಬಂತು. ಅಂದಾಜು  ಮೌಲ್ಯ 3,000/- ಆಗಬಹುದು. ಅಲ್ಲೇ ಪಕ್ಕದಲ್ಲಿ ದಿನಾಂಕ 08/10/2022 ರಂದು 2  ದನಗಳನ್ನು ಕಡಿದು ಮಾಂಸ ಮಾರಾಟ ಮಾಡಿ ಉಳಿದ 10 ಕೆಜಿ ಮಾಂಸವನ್ನು ಪ್ಯಾಕೆಟ್‌ಗಳಲ್ಲಿ ತುಂಬಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಇಟ್ಟಿರುವುದು  ಕಂಡುಬರುತ್ತದೆ. ಇದರ  ಅಂದಾಜು ಮೌಲ್ಯ 1,000/- ಆಗಬಹುದು. ಹಾಗೂ ನಿನ್ನೆಯ ಎರಡು ದನಗಳ  ಕಂದು ಬಣ್ಣದ ಚರ್ಮ-1 ಕಪ್ಪು ಬಣ್ಣದ ಚರ್ಮ -1 ಇದರ ಪಕ್ಕದಲ್ಲೇ ಕಂಡು ಬಂದಿರುತ್ತದೆ. ಅಲ್ಲದೆ ಮಾಂಸ ಮಾಡಲು  ಉಪಯೋಗಿಸಿದ ಒಂದು ಮರದ ತುಂಡು ಎರಡು ಕತ್ತಿಗಳು ಮೂರು ಚಾಕುಗಳು ತೂಕದ ಇಲೆಕ್ಟ್ರಾನಿಕ್‌ಯಂತ್ರ ಅಂದಾಜು ಮೌಲ್ಯ ಸುಮಾರು 1,000/- ಹಗ್ಗ – 5  ಜೀವಂತ ಇರುವ ಕಪ್ಪು ಕಂದು ಬಣ್ಣದ ಗಂಡು ಕರು -1 ಅಂದಾಜು ಮೌಲ್ಯ  2,000/- ಹಾಗೂ ಮಲ್ಲಾರ್‌ನಿಂದ  ಮೊಹಮ್ಮದ್‌ ಅಜೀಮ್‌ನು ಕೃತ್ಯದ ಸ್ಥಳಕ್ಕೆ ಬರಲು ಬಳಸಿದ್ದ ಕಪ್ಪು ಬಣ್ಣದ  ಕೆಎ-20 ಇಟಿ-4097 ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಅಂದಾಜು ಮೌಲ್ಯ  30,000/-, ಮಹಮ್ಮದ್ ವಲೀದ್  ಕೃತ್ಯದ ಸ್ಥಳಕ್ಕೆ ಬರಲು ಬಳಸಿದ ಸಿಲ್ವರ್‌ ಬಣ್ಣದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ  ಕೆಎ-20 ಇಪಿ-6727 ಅಂದಾಜು ಮೌಲ್ಯ  30,000/-, ಹಾಗೂ  ತಬ್ರೇಸ್‌ನು ಕೃತ್ಯಕ್ಕೆ ಬಳಸುತ್ತಿದ್ದ ಬಿಳಿ  ಬಣ್ಣದ ಎಕ್ಸಿಸ್‌125 ಕೆಎ-20 ಇವೈ-3658 ದ್ವಿ ಚಕ್ರ ವಾಹನ ಅಂದಾಜು ಮೌಲ್ಯ  30,000/- ಆಗಬಹುದು ಎಂದು ಪಂಚರು  ಅಭಿಪ್ರಾಯಪಟ್ಟಿದ್ದು  ಎಲ್ಲಾ  ಸೊತ್ತುಗಳನ್ನು ಮುಂದಿನ  ಕ್ರಮದ ಬಗ್ಗೆ ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 75/22 ಕಲಂ: 4, 5, 12 THE KARNATAKA PREVENTION OF SLAUGHTER AND PRESERVATION OF CATTLE ACT-2020, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-10-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080