ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಮುತ್ತು (53) ಗಂಡ: ಎಂ. ನಾರಾಯಣ್‌, ವಾಸ:  ವಿ.ಎ. ಕ್ವಾರ್ಟಸ್‌, ಮಾರ್ಕೆಟ್‌ ರೋಡ್‌ ಪರ್ಕಳ  ಅಂಚೆ,  ಹೆರ್ಗ ಗ್ರಾಮ, ಉಡುಪಿ ಇವರು ಮುದರಂಗಡಿ ಗ್ರಾಮ ಪಂಚಾಯತ್‌ ನಲ್ಲಿ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ  ನಿರ್ವಹಿಸುತ್ತಿದ್ದು, ದಿನಾಂಕ  07/10/2022  ರಂದು  ಮುದರಂಗಡಿ ಗ್ರಾಮ ಪಂಚಾಯತ್‌ನಲ್ಲಿ ಕರ್ತವ್ಯದಲ್ಲಿರುವಾಗ ಎಸ್‌.ಎಲ್‌. ಆರ್‌.ಎಂ. ವಾಹನದ  ಚಾಲಕ  ದಾಮೋದರ ರವರು ಶ್ರೀಮತಿ ಮುತ್ತು ರವರಿಗೆ  ವಿಚಾರ ತಿಳಿಸಿ ದಿನಾಂಕ 07/10/2022 ರಂದು ಸಮಯ   12:50 ಗಂಟೆ ಸುಮಾರಿಗೆ  ತ್ಯಾಜ್ಯ  ವಿಲೇವಾರಿ ವಾಹನ ನೊಂದಣಿ ನಂಬ್ರ ಕೆಎ-20 ಎಬಿ-4249 ನೇ ಟೆಂಪೋವನ್ನು ವಿದ್ಯಾನಗರ ದಿಂದ ಎಸ್‌.ಎಲ್‌. ಆರ್‌ ಘಟಕಕ್ಕೆ  ಹೋಗುವ  ರಸ್ತೆಯಲ್ಲಿ ಚಲಾಯಿಸಿಕೊಂಡು ಪಿಲಾರು ಗ್ರಾಮದ ಮುದರಂಗಡಿ ಮೈದಾನದ ಬಳಿ ತಿರುವಿನಲ್ಲಿ ತಲುಪುವಾಗ ಎದುರಿನಿಂದ ಅಂದರೆ ಸಾಂತೂರು ಗ್ಯಾಸ್‌ ಗೋಡೌನ್‌ನಿಂದ ಮುದರಂಗಡಿ ಕಡೆಗೆ ಕೆಎ-20 ಎಎ-0364 ನೇ ಮಹೀಂದ್ರ ಪಿಕ್‌ಅಪ್‌ ವಾಹನದ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಪಿಕ್‌ಅಪ್‌ ವಾಹನವನ್ನು ಚಲಾಯಿಸಿಕೊಂಡು ಬಂದು  ಚಲಾಯಿಸುತ್ತಿದ್ದ ಕೆಎ-20 ಎಬಿ-4249 ನೇ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದ ಬಲ ಬದಿ  ಜಖಂಗೊಂಡಿದ್ದಲ್ಲದೆ ವಾಹನದ ಒಳಗೆ ಇದ್ದ ಎಸ್‌.ಎಲ್‌.ಆರ್‌.ಎಂ. ಘಟಕದ ಕಾರ್ಯಕರ್ತೆಯಾದ  ಕುಮಾರಿ ಜಾನ್ಸಿ (23)ರವರಿಗೆ ಬಲ ಕಾಲಿನ ಮೊಣಗಂಟಿಗೆ ಗುದ್ದಿದ ನೋವಾಗಿರುತ್ತದೆ. ಕುಮಾರಿ ಸುಂದರಿ (23), ಸಂತೋಷ್‌ (22) ರವರು ಇದ್ದು ಅವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ಕುಮಾರಿ  ಜಾನ್ಸಿರವರನ್ನು ಚಿಕಿತ್ಸೆ  ಬಗ್ಗೆ ಮುದರಂಗಡಿ ಪ್ರಾಥಮಿಕ  ಕೇಂದ್ರಕ್ಕೆ  ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್‌ ನಲ್ಲಿ ಕಳುಹಿಸಿಕೊಟ್ಟಿರುವ ವಿಚಾರವನ್ನು ತಿಳಿಸಿದರು. ಅಪಘಾತ ಪಡಿಸಿದ ಮಹೀಂದ್ರ  ಪಿಕ್‌ಅಪ್‌  ವಾಹನದ ಚಾಲಕನ ಹೆಸರು  ಕೇಳಲಾಗಿ  ಅಶೋಕ್‌  ಕುಮಾರ್‌ ಎಂದು ತಿಳಿಯಿತು. ಈ ಅಪಘಾತಕ್ಕೆ  ಮಹೀಂದ್ರ  ಪಿಕ್‌ಅಪ್‌  ವಾಹನದ ಚಾಲಕನ ಅತೀ  ವೇಗ  ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2022 ಕಲಂ  279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 07/10/2022 ರಂದು ಪಿರ್ಯಾದಿ ಶರತ್‌ ಪೂಜಾರಿಯು ಅವರ ಮೋಟಾರ್‌ ಸೈಕಲ್‌ನಲ್ಲಿ ಅವರ  ಸ್ನೇಹಿತ ಉಮೇಶ್‌ ರೊಂದಿಗೆ ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮನೆ ಕಡೆಗೆ ಹೊರಟು  ರಾತ್ರಿ ಸುಮಾರು 11:30 ಗಂಟೆಗೆ ರಾಹೆ 66ರ ಬೈಕಾಡಿ ಗ್ರಾಮದ ಸುಪ್ರೀಮ್ ಫೀಡ್ಸ್‌ ಎದುರು ತಲುಪುವಾಗ ಅವರ  ಎದುರಿನಿಂದ ಬ್ರಹ್ಮಾವರ ಕಡೆಗೆ ಆರೋಪಿ ಮೋನಾ ಪೂಜಾರಿಯು  ಅವರ KA-20 EX-1511 ನೇ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ  ಸವಾರಿ ಮಾಡಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಪುಟ್ಟರಾಜು @ ಪುಟ್ಟಣ್ಣ ರವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆರೋಪಿ ಹಾಗೂ ಪಾದಚಾರಿ ಇಬ್ಬರೂ ರಸ್ತೆಗೆ ಬಿದ್ದರು. ಈ ಅಪಘಾತದಿಂದ ಪುಟ್ಟರಾಜು @ ಪುಟ್ಟಣ್ಣ ರವರ ತಲೆಗೆ ರಕ್ತಗಾಯವಾಗಿ, ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಒಳಜಖಂ ಆಗಿದ್ದು ಹಾಗೂ ಆರೋಪಿ ಮೋನಾ ಪೂಜಾರಿಗೂ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 164/2022 ಕಲಂ  279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಕೋಟ: ಪಿರ್ಯಾದಿದಾರರಾದ ಬಾಬು ಪೂಜಾರಿ (78) ತಂದೆ: ದಿ. ನಾಗಪ್ಪ ಪೂಜಾರಿ ವಾಸ: ಭಾಸ್ಕರ ನಿಲಯ ರಾಮಮಂದಿರ ಬಳಿ ನಾಯಕವಾಡಿ ಗುಜ್ಜಾಡಿ ಗ್ರಾಮ ಕುಂದಾಪುರ ಇವರು ದಿನಾಂಕ 06/10/2022 ರಂದು ಮಧ್ಯಾಹ್ನ ಸಮಯ ದೇವರ ದರ್ಶನ ಕೆಲಸಕ್ಕಾಗಿ ಹೋಗುವರೇ ಕೋಟೇಶ್ವರ - ಹಾಲಾಡಿ ರಸ್ತೆಯಲ್ಲಿ ಆರೋಪಿ ಸವಾರ ನಾರಾಯಣ ಪೂಜಾರಿ ರವರೊಂದಿಗೆ ಆತನ KA-20 EX-7948 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಕುಳಿತಿದ್ದು, ಅವರು ಮಧ್ಯಾಹ್ನ 3:30 ಗಂಟೆಯ ಸಮಯಕ್ಕೆ ಹೊಂಬಾಡಿ-ಮಂಡಾಡಿ ಗ್ರಾಮದ ಕಾಮತ್‌ ಇನ್‌ಸ್ಟಿಟ್ಯೂಟ್‌ ಎದುರು ಬಂದಾಗ, ರಸ್ತೆಯಲ್ಲಿ ನಾಯಿ ಬಂದದ್ದನ್ನು ಕಂಡು ಅತೀವೇಗವಾಗಿದ್ದ ಬೈಕಿಗೆ ಸವಾರ ನಾರಾಯಣ ಪೂಜಾರಿ ರವರು ಒಮ್ಮೆಲೆ ಬ್ರೇಕ್‌ ಹಾಕಿದ್ದು ಆಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಬಾಬು ಪೂಜಾರಿ ರವರ ಬಲಕಾಲಿಗೆ ತೀವ್ರ ಸ್ವರೂಪದ ರಕ್ತಗಾಯ ಮತ್ತು ಎಡಕಾಲು ಎಡಕೈಗೆ ತರಚಿದ ಗಾಯ ಹಾಗೂ ಸವಾರ ನಾರಾಯಣ ಪೂಜಾರಿ ರವರ ಬಲಕೈಗೆ ಮತ್ತು ಮೈಕೆಗೆ ತರಚಿದ ಸಾದಾ ಗಾಯ ಮತ್ತು ಒಳಜಖಂ ಆಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕೋಟೇಶ್ವರದ ಎನ್ ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 169/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ವಿನೋದ (22) ತಂದೆ: ಉದಯ ಮರಕಾಲ ವಾಸ: ಮುಸಾಪುರಿ, ಬಾರಾಳಿ,  ಮಂದರ್ತಿ ಪೋಸ್ಟ್, ಹೆಗ್ಗುಂಜೆ ಗ್ರಾಮ, ಕುಂದಾಪುರ  ತಾಲೂಕು, ಉಡುಪಿ ಇವರು ದಿನಾಂಕ 07/10/2022 ರಂದು ತನ್ನ ಬೈಕಿನಲ್ಲಿ ಸ್ಯಾಬ್ರಕಟ್ಟೆಯಿಂದ ಬಾರಾಳಿ ಕಡೆಗೆ ಹೋಗುತ್ತಿದ್ದು, ಮಧ್ಯಾಹ್ನ 03:30 ಗಂಟೆಗೆ ಯಡ್ತಾಡಿ ಗ್ರಾಮದ ಸ್ಯಾಬ್ರಕಟ್ಟೆಯ ಜಂಬೂರು ಎಂಬಲ್ಲಿ ತಲುಪಿದಾಗ ಇವರ ಎದುರಿನಲ್ಲಿ ಬನ್ನೇರಳಕಟ್ಟೆ ಕಡೆಯಿಂದ ಸ್ಯಾಬ್ರಕಟ್ಟೆ ಕಡೆಗೆ KA-20 EY-1841 ಹೊಂಡಾ ಆಕ್ಟೀವ್ ಸ್ಕೂಟರನ ಸವಾರನಾದ ಕಾರ್ತಿಕ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಹಿಂಬದಿ ಸವಾರಳಾದ ಮೇರಿ, (20) ಎಂಬವರ ಚೂಡಿದಾರರ ವೇಲ್ ಸ್ಕೂಟರಗೆ ಸಿಕ್ಕಿ ಮಹಿಳೆಯು ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಕೈಕಾಲುಗಳಿಗೆ ತರಚಿದ ಗಾಯವಾಗಿರುವುದಲ್ಲದೇ ತಲೆಗೆ ತೀವೃ ತರದ ಗಾಯವಾಗಿದ್ದು, ಮಾತನಾಡುವ  ಸ್ಥಿತಿಯಲ್ಲಿ ಇರಲಿಲ್ಲ. ಸ್ಕೂಟರ ಸವಾರನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ನಂತರ ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 170/2022 ಕಲಂ  279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ದಿನಾಂಕ 06/10/2022  ರಂದು ರಾತ್ರಿ ಸುಮಾರು 10:30 ಗಂಟೆಗೆ, ಕುಂದಾಪುರ ತಾಲೂಕಿನ ಅಸೋಡು ಗ್ರಾಮದ ದಬ್ಬೆಕಟ್ಟೆ ಎಂಬಲ್ಲಿ ರಸ್ತೆಯಲ್ಲಿ, ಆಪಾದಿತ ಸ್ವಾಮಿ ಜಿ.ಕೆ ಎಂಬವರು  KA-53 MB-4254ನೇ ಮಾರುತಿ ಇರ್ಟಿಗಾ ಕಾರನ್ನು ಕುಂದಾಪುರ ಕಡೆಯಿಂದ ಅಸೋಡು  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ  ಮಾಡಿಕೊಂಡು ಬಂದು, ರಸ್ತೆಗೆ ಅಡ್ಡ ಬಂದ ಜಿಂಕೆಗಳನ್ನು ನೋಡಿ, ಚಾಲಕ  ಸ್ವಾಮಿ ಜಿ.ಕೆ  ರವರು  ಕಾರನ್ನು ರಸ್ತೆಯ ಎಡಬದಿಗೆ ಮಣ್ಣಿನ ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ವಾಮಿ ಜಿ.ಕೆ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿ ಅಶೋಕ್‌ ಕುಮಾರ್‌ ಹಾಗೂ ಯೊಗೀಶ್‌‌ರವರು ಗಾಯಗೊಂಡು ಸ್ವಾಮಿ ಜಿ.ಕೆ  ರವರು ಒಳರೋಗಿಯಾಗಿ, ಹಾಗೂ ಅಶೋಕ್‌ಕುಮಾರ್‌ಹಾಗೂ ಯೊಗೀಶ್‌‌ರವರು ಹೊರ ರೋಗಿಯಾಗಿ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 106/2022 ಕಲಂ  279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂಧಾಫುರ: ದಿನಾಂಕ 07/10/2022  ರಂದು  ಮಧ್ಯಾಹ್ನ  ಸುಮಾರು 3:45 ಗಂಟೆಗೆ, ಕುಂದಾಪುರ  ತಾಲೂಕಿನ ಕಸಬಾ  ಗ್ರಾಮದ ಆಭರಣ ಜ್ಯುವೆಲ್ಲರಿ ಶಾಫ್‌‌ಬಳಿ  ಪುರಸಭಾ  ರಸ್ತೆಯಲ್ಲಿ,  ಆಪಾದಿತ ಸುಪ್ರಿತ್‌ ಚಾತ್ರಾ ಎಂಬವರು  KA-04-MQ-8589 ನೇ  ಕಾರನ್ನು ಕುಂದಾಪುರ  ಶಾಸ್ತ್ರಿ ಸರ್ಕಲ್‌‌ಕಡೆಯಿಂದ ಹೊಸ ಬಸ್‌ನಿಲ್ದಾಣದ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ  ಮಾಡಿಕೊಂಡು ಅದೇ ದಿಕ್ಕಿನಲ್ಲಿ ಸಚ್ಚಿದಾನಂದ  ಎಂ.ಎಲ್‌ (55) ತಂದೆ ದಿ. ಲಕ್ಷ್ಮಣ ಗಾಣಿಗ ವಾಸ: ಮುಡ್ಕೇರಿ, ಕೆ.ಎಸ್‌‌‌. ಆರ್‌‌.ಟಿ. ಸಿ ಬಸ್‌ನಿಲ್ದಾಣದ  ಬಳಿ, ಕಸಬಾ ಗ್ರಾಮ ಎಂ.ಎಲ್‌‌ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EF-9799ನೇ ಸ್ಕೂಟರ್‌‌‌ನ್ನು  ಓವರ್‌ ‌ಟೇಕ್‌‌ ಮಾಡಿಮುಂದೆ  ಹೋಗಿ ಬಳಿಕ  ಯಾವುದೇ  ಸೂಚನೆ ನೀಡದೇ  ರಸ್ತೆಯ  ಬಲಬದಿಯಿಂದ  ರಸ್ತೆಯ  ಎಡಬದಿಯ ರಸ್ತೆಗೆ  ತಿರುಗಿಸಿ ಸ್ಕೂಟರ್‌‌‌ಗೆ  ಅಪಘಾತಪಡಿಸಿದ  ಪರಿಣಾಮ ಸಚ್ಚಿದಾನಂದ  ಎಂ.ಎಲ್‌‌ರವರ  ಬಲಕಾಲಿನ ಹಿಮ್ಮಡಿ ಗಂಟಿಗೆ ಒಳಜಖಂ,  ಎಡ ಹಾಗೂ  ಬಲಕಾಲಿಗೆ, ಎದೆಗೆ ಒಳನೋವು ಮತ್ತು  ತರಚಿದ  ಗಾಯವಾಗಿ  ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 107/2022 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ರಕ್ಷಿತ್ ಕುಂದರ (26) ತಂದೆ: ಶಂಕರ ಸುವರ್ಣ ವಾಸ: ಸುವರ್ಣ ಮಾತಾ ,ಕದಿಕೆ, ಬಡನಿಡಿಯೂರು ಇವರ ಸ್ನೇಹಿತನ ಮಗನಾದ ಶಿವರಾಜ್(32) ಇಬ್ಬರು ಮಲ್ಪೆ  ಬಂದರಿನಲ್ಲಿ ಕನ್ನಿಪಾರ್ಟಿಯಲ್ಲಿ ಕೆಲಸ ಮಾಡಿಕೊಂಡಿದ್ದು ಬಿಡುವಿನ ವೇಳೆಯಲ್ಲಿ  ಹೊಳೆ  ಹಾಗೂ ಸಮುದ್ರದಲ್ಲಿ ಗಾಳ  ಹಾಕಿ  ಮೀನು ಹಿಡಿಯುವ ಕೆಲಸ ಮಾಡುತ್ತಿದ್ದು, ದಿನಾಂಕ 07/10/2022 ರಂದು  ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ  ಸಂಜೆ 5:30 ಗಂಟೆ ಸಮಯಕ್ಕೆ  ರಕ್ಷಿತ್ ಕುಂದರ ರವರು ಮತ್ತು ಶಿವರಾಜ್  ಕಲ್ಯಾಣಪುರದ ಸ್ವರ್ಣನದಿಯಲ್ಲಿ ಕಡವಿನ ಬಾಗಿಲು ಬಳಿ ಇಬ್ಬರು ಬೇರೆ ಬೇರೆ ಸಣ್ಣ ದೋಣಿಯಲ್ಲಿ ಬಲೆ ಬೀಸಿ  ಮೀನು ಹಿಡಿಯುತ್ತಿದ್ದ ಸಮಯ ಸುಮಾರು 6:00 ಗಂಟೆ ಸಮಯಕ್ಕೆ  ಶಿವರಾಜ್ ಮೀನುಗಾರಿಕೆ ಮಾಡುತ್ತಿದ್ದ ದೋಣಿಯಲ್ಲಿ ಕಾಣಿಸದೆ ಇದ್ದು ರಕ್ಷಿತ್ ಕುಂದರ ರವರು ಶಿವರಾಜ್ ಇದ್ದ ದೋಣಿಯ ಹತ್ತಿರ ಬಂದು ನೋಡಿದಾಗ ಶಿವರಾಜ  ಈಜುತ್ತ ಹೊಳೆಯ ದಡದ ಬದಿಗೆ ಹೋಗುತ್ತಿದ್ದು ದಡದಿಂದ ಸುಮಾರು 50 ಮೀಟರ್ ದೂರದಲ್ಲಿ ಶಿವರಾಜ್  ಹೊಳೆಯ ನೀರಿನಲ್ಲಿ ಮುಳುಗಿ  ಕಾಣೆಯಾಗಿದ್ದು ಸಿಕ್ಕಿರುವುದಿಲ್ಲ, ದಿನಾಂಕ 08/10/2022 ರಂದು  ಕಲ್ಯಾಣಪುರ ಕಡವಿನ ಬಾಗಿಲಿನ ಬಳಿ   ವಿಠೋಭ ಭಜನಾ ಮಂದಿರದ  ಹತ್ತಿರ ಸ್ವರ್ಣನದಿಯಲ್ಲಿ ಶಿವರಾಜ್ ನ ಮೃತದೇಹ ದೊರಕಿರುತ್ತದೆ.  ದಿನಾಂಕ 07/10/2022 ರಂದು  ಸಂಜೆ 5:30 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಕಲ್ಯಾಣಪುರ ಸ್ವರ್ಣ ನದಿಯಲ್ಲಿ ದೋಣಿಯಲ್ಲಿ  ಬಲೆ  ಬೀಸಿ ಮೀನುಗಾರಿಕೆ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ಹೊಳೆಯ ನೀರಿಗೆ ಬಿದ್ದು ಶಿವರಾಜ್  ಈಜುತ್ತ ದಡ ಸೇರಲು ಪ್ರಯತ್ನಿಸುತ್ತಾ ಸಾಧ್ಯವಾಗದೇ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಮೃತರ ಸಾವಿನಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 56/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಪಡುಬಿದ್ರಿ: ಪಿರ್ಯಾದಿದಾರರಾದ ಶಕುಂತಳ, (47) ಗಂಡ: ಬಾಬು, ವಾಸ: ಕಂಚುಗಾರ ಕೇರಿ, ಲಚ್ಚಿಲ್, ಪಣಿಯೂರು ಅಂಚೆ, ಎಲ್ಲೂರು ಗ್ರಾಮ, ಕಾಫು ತಾಲೂಕು ಇವರ  ಚಿಕ್ಕಮ್ಮನ ಮಗಳು ರಕ್ಷಿತಾ (24) ಎಂಬುವರು ಕಾಪು ವಿನ ಫ್ಯಾನ್ಸಿ ಸ್ಟೋರ್‌‌ನಲ್ಲಿ ಕೆಲಸ ಮಾಡುತ್ತಿದ್ದು, ಅವಳ ಗಂಡ ಸಂಜಯ್ ಎಂಬಾತನು ಬ್ಯಾಂಕುಗಳಿಗೆ ಚೆಕ್‌‌ ಹಾಕುವ ಕೆಲಸ ಮಾಡಿಕೊಂಡಿರುತ್ತಾನೆ. ಸುಮಾರು 2 ವರ್ಷಗಳ ಹಿಂದೆ ರಕ್ಷಿತಾಳು ಉಡುಪಿ ಎ1 ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ ಆಚಾರಿ ಎಂಬುವರನ್ನು ಪ್ರೀತಿಸಿ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದು, ನಂತರ ರಕ್ಷಿತಾಳ ತಾಯಿಗೆ ಹುಷಾರಿಲ್ಲದ ಕಾರಣ ಕಾಪು ತಾಲೂಕು ಎಲ್ಲೂರು ಕಂಚುಗಾರ ಕೇರಿ ಎಂಬಲ್ಲಿ ವಾಸವಾಗಿರುವ ಅವಳ ತಾಯಿಯ ಮನೆಗೆ ಬಂದು ಅವಳ ತಂದೆ, ತಾಯಿ, ಗಂಡ ಸಂಜಯ್ ನೊಂದಿಗೆ ವಾಸವಾಗಿದ್ದರು. ತಾಯಿ ಮೃತಪಟ್ಟ ಬಳಿಕ ಈ ಮೇಲಿನ ಮೂವರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಾ, ದಿನಾಂಕ 03/10/2022 ರಂದು ಮಧ್ಯಾಹ್ನ ಸುಮಾರು14:30 ಗಂಟೆಗೆ ರಕ್ಷಿತಾಳನ್ನು ಅವಳ ಗಂಡ ಸಂಜಯ್ ಹಾಗೂ ಅವಳ ಜೊತೆ ಕಾಪುವಿನ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸ ಮಾಡುವ 3 ಜನ ಹುಡುಗಿಯರೊಂದಿಗೆ ಶಕುಂತಳ ರವರ ಮನೆಗೆ ಬಂದು ರಕ್ಷಿತಾಳ ನಡತೆ ಸರಿ ಇಲ್ಲ, ಎಂಬುದಾಗಿ ತಿಳಿಸಿ, ಅವಳನ್ನು ಶಕುಂತಳ ರವರ ಮನೆಯಲ್ಲಿ ಬಿಟ್ಟು ಸಂಜಯನು ಸಂಜೆ 16:30 ಗಂಟೆಗೆ ರಕ್ಷಿತಾಳ ಗೆಳತಿಯರೊಂದಿಗೆ ವಾಪಾಸ್ಸು ಹೋಗಿರುತ್ತಾನೆ. ಸುಮಾರು 17:00 ಗಂಟೆಯ ವೇಳೆಗೆ ರಕ್ಷಿತಾಳು ತನಗೆ ಎದೆ ನೋವು ಆಗುವುದಾಗಿ ಹೇಳಿ ಶಕುಂತಳ ರವರ ಮನೆಯಿಂದ ಅವಳ ಮನೆಗೆ ಹೋಗಿದ್ದು, ಸ್ವಲ್ಪ ಹೊತ್ತಿನ ಬಳಿಕ ರಕ್ಷಿತಾಳ ಆರೋಗ್ಯ ವಿಚಾರಿಸಲು ಶಕುಂತಳ ರವರು ಅವರ ಗಂಡ ಬಾಬು ಮತ್ತು ಅವರ ತಂಗಿ ಸುನೀತಾರವರೊಂದಿಗೆ ರಕ್ಷಿತಾಳ ಮನೆಗೆ ಹೋದಾಗ ಅವರ ಮನೆಗೆ ಬೀಗ ಹಾಕಿರುತ್ತದೆ, ನಂತರ ರಾತ್ರಿ 20:00 ಗಂಟೆಗೆ ಸಂಜಯನಿಗೆ ಫೋನ್ ಮಾಡಿ ಕೇಳಿದಾಗ, ಆತನು ರಕ್ಷಿತಾಳು ಯಾರೊಂದಿಗೋ ಹೋಗಿರಬಹುದಾಗಿ ತಿಳಿಸಿದನು. ನಂತರ ಮರುದಿನ ದಿನಾಂಕ 04/10/2022 ರಂದು ಬೆಳಿಗ್ಗೆ 08:00 ಗಂಟೆಗೆ ಸಂಜಯನು ಶಕುಂತಳ ರವರ ಮನೆಗೆ ಬಂದಿರುವ ಸಮಯ ರಕ್ಷಿತಾಳ ಬಗ್ಗೆ ಕೇಳಿದಾಗ ಅವಳು ಮನೆಯಲ್ಲಿಯೇ ಇರುವುದಾಗಿ ತಿಳಿಸಿದಂತೆ, ಶಕುಂತಳ ರವರು ಅವರ ಗಂಡ ಹಾಗೂ ದೊಡ್ಡಮ್ಮ ಶಾಂತಾ ರವರೊಂದಿಗೆ ರಕ್ಷಿತಾಳ ಮನೆಗೆ ಹೋದಾಗ ಅಲ್ಲಿ ಮನೆಗೆ ಬೀಗ ಹಾಕಿದ್ದು, ಸಂಜಯನ ಬಳಿ ಇದ್ದ ಮನೆಯ ಬೀಗದ ಕೀಯಿಂದ ಬಾಗಿಲು ತೆರೆದು ಒಳಗೆ ನೋಡಿದಾಗ ಅಲ್ಲಿ ರಕ್ಷಿತಾಳು ಕಂಡು ಬಂದಿರುವುದಿಲ್ಲ. ನಂತರ ದಿನಾಂಕ 07/10/2022 ರವರೆಗೆ ಸಂಜಯನು ರಕ್ಷಿತಾಳ ಮನೆಗೆ  ಬಂದು ಹೋಗುತ್ತಿದ್ದನು. ನಂತರ ದಿನಾಂಕ 08/10/2022 ರಂದು ಸಂಜೆ 16:15 ಗಂಟೆಗೆ ಶಕುಂತಳ ರವರ ಗಂಡ ಹಾಗೂ ಚಿಕ್ಕಮ್ಮನ ಮಗಳು ಮಲ್ಲಿಕಾ ರವರು ರಕ್ಷಿತಾಳ ಮನೆಯ ಕಡೆಯಿಂದ ಶಕುಂತಳ ರವರ ಮನೆಗೆ ನಡೆದು ಬರುವ ದಾರಿಯಲ್ಲಿ ಎಲ್ಲೂರು ಗ್ರಾಮದ ದಿ. ಪೊಲ್ಲಶೆಟ್ಟಿ ಎಂಬುವರ ಹಾಡಿಯಲ್ಲಿರುವ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾಳ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ತೇಲಾಡುತ್ತಿರುವುದನ್ನು ಕಂಡು ಶಕುಂತಳ ರವರಿಗೆ ತಿಳಿಸಿರುತ್ತಾರೆ. ದಿನಾಂಕ: 03/10/2022 ರಂದು ಸಂಜೆ 17:00 ಗಂಟೆಯಿಂದ ದಿನಾಂಕ 08/10/2022 ರ ಸಂಜೆ 16:15 ಗಂಟೆಯ ನಡುವಿನ ಅವಧಿಯಲ್ಲಿ ರಕ್ಷಿತಾಳು ಪಾಳು ಬಾವಿಗೆ ಬಿದ್ದಿರುವ ಅಥವಾ ಅವಳನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆಯು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ರಕ್ಷಿತಾಳ ಮರಣದ ಬಗ್ಗೆ ಅವಳ ಗಂಡ ಸಂಜಯ ಆಚಾರಿಯ ಮೇಲೆ ಸಂಶಯವಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2022 ಕಲಂ: 174(3)(Vi) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಮಾಲತಿ ಪೂಜಾರಿ (47) ಗಂಡ: ಮಂಜುನಾಥ ಪೂಜಾರಿ ವಾಸ:  ಹದನಕೇರಿಮನೆ,ಕಂಚಿಕಾನ, ಬಿಜೂರು ಗ್ರಾಮ ಬೈಂದೂರು ಇವರ ತಾಯಿ ದೊಟ್ಟಮ್ಮ,ತಾಯಿಯ ಅಕ್ಕ ದಾರು ಹಾಗೂ ತಾಯಿಯ ಅಣ್ಣನಾದ ಮೂಡೂರ ಪೂಜಾರಿರವರ ಹೆಸರಿನಲ್ಲಿ ಬಿಜೂರು ಗ್ರಾಮದ ಕಂಚಿಕಾನ, ಹದನಕೇರಿಮನೆ ಎಂಬಲ್ಲಿ 39 ಸೆಂಟ್ಸ್ ಜಾಗವಿದ್ದು ಮಾಲತಿ ಪೂಜಾರಿ ರವರ ತಾಯಿಯ ಅಕ್ಕ ದಾರು ಹಾಗೂ ತಾಯಿಯ ಅಣ್ಣನಾದ ಮೂಡುರ ಪೂಜಾರಿ ಈಗಾಗಲೇ ಮರಣಹೊಂದಿದ್ದು, ಮೂಡುರ ಪೂಜಾರಿ ಯವರ ಮಕ್ಕಳು ಮೂಡುರ ಪೂಜಾರಿಯವರ ಜಾಗದಲ್ಲಿ ಮನೆಮಾಡಿ ವಾಸಮಾಡಿಕೊಂಡಿರುತ್ತಾರೆ, ಮಾಲತಿ ಪೂಜಾರಿ  ರವರ ತಾಯಿಯ ಅಕ್ಕನಾದ ದಾರುರವರ ಮಗಳಾದ ಆಪಾದಿತೆ ಸರಸ್ಪತಿ ಹಾಗೂ ಆಕೆಯ ಮಕ್ಕಳು ಸದ್ರಿ ಜಾಗವನ್ನು ಅನುಭವಿಸುತ್ತಿದ್ದು ಹಲವು ಬಾರಿ ಆಪಾದಿತೆ ಸರಸ್ಪತಿ ಹಾಗೂ ಆಕೆಯ ಮಕ್ಕಳಲ್ಲಿ ತನ್ನ ತಾಯಿಯ ಜಾಗವನ್ನು ಪಾಲುಮಾಡಿಕೊಡುವಂತೆ ಕೇಳಿಕೊಂಡಿದ್ದು ಇದುವರೇಗೂ ಪಾಲುಮಾಡಿಕೊಡದೇ ಇದ್ದು ದಿನಾಂಕ 07/10/2022 ರಂದು ಆಪಾದಿತೆ ಸರಸ್ಪತಿ ಹಾಗೂ ಆಕೆಯ ಮಗ ಆಪಾದಿತ ಆಕಾಶ ಪೂಜಾರಿ ಸದ್ರಿ ಜಾಗದಲ್ಲಿ ರವೀಂದ್ರ ಹಾಗೂ ರಾಜು ರವರನ್ನು ತೆಂಗಿನ ಮರದ ಕಟ್ಟೆಯನ್ನು ಬಿಡಿಸುವ ಕೆಲಸಕ್ಕೆ ನೇಮಿಸಿದ್ದು ಮಾಲತಿ ಪೂಜಾರಿ ರವರು ಸಂಜೆ 4:45 ಗಂಟೆಗೆ ಸದ್ರಿ ಜಾಗದ ಬಳಿ ಹೋಗಿ ಕೆಲಸ ಮಾಡುತ್ತಿರುವ ರವೀಂದ್ರ  ಹಾಗೂ ರಾಜುರವರಲ್ಲಿ ಸದ್ರಿಜಾಗದಲ್ಲಿ ತನ್ನ ತಾಯಿಗೂ  ಪಾಲು ಇದ್ದು ಈ ಜಾಗದ ಬಗ್ಗೆ  ನಮಗೂ ಮತ್ತು ಆಪಾದಿತೆ ಸರಸ್ಪತಿಯವರಿಗೆ ತಕರಾರಿದ್ದು ಕೆಲಸಮಾಡದಂತೆ ಆಕ್ಷೇಪ ಮಾಡಿರುತ್ತಾರೆ, ಆಗ ರವೀಂದ್ರ ರವರು ಸರಸ್ಪತಿಯವರಿಗೆ ದೂರವಾಣಿ ಕರೆಮಾಡಿ ಮಾಲತಿ ಪೂಜಾರಿ ರವರು ಕೆಲಸಮಾಡುವ ಬಗ್ಗೆ ಆಕ್ಷೇಪ  ಮಾಡಿರುವುದಾಗಿ ತಿಳಿಸಿದ್ದು ಆಗ ಅಲ್ಲಿಗೆ ಆಪಾದಿತರಾದ ಸರಸ್ಪತಿ ಹಾಗೂ ಅಕೆಯ ಮಗನಾದ ಆಕಾಶ ಪೂಜಾರಿ ಸ್ಥಳಕ್ಕೆ ಬಂದು ಇಬ್ಬರು ಸೇರಿ ಮಾಲತಿ ಪೂಜಾರಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಸರಸ್ಪತಿಯವರು ಮಾಲತಿ ಪೂಜಾರಿ ರವರ ಕೂದಲನ್ನು ಹಿಡಿದೆಳೆದು ಕೆಳಗಡೆ ದೂಡಿಹಾಕಿದ್ದು, ಆಕಾಶ ಪೂಜಾರಿಯು ಮಾಲತಿ ಪೂಜಾರಿ ಇವರ ಬಲಕೈಯನ್ನು ತಿರುಗಿಸಿದ್ದು, ಇಬ್ಬರು ಸೇರಿ ಮುಂದಕ್ಕೆ ಜಾಗದ ವಿಚಾರಕ್ಕೆ ಬಂದಲ್ಲಿ ಕೊಲೆಮಾಡುವುದಾಗಿ ಬೆದರಿಕೆ  ಹಾಕಿರುತ್ತಾರೆ, ಅಲ್ಲದೆ  ಕೆಲಸಕ್ಕೆ ಬಂದ  ರವೀಂದ್ರ ಸಹಾ ಬೆದರಿಕೆ ಹಾಕಿದ್ದು, ಮಾಲತಿ ಪೂಜಾರಿ  ರವರು  ತನಗಾದ ಹಲ್ಲೆಯ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 203/2022 ಕಲಂ: 323, 354, 354(ಬಿ) 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ಪ್ರಶಾಂತ್‌.ಸಿ (32) ತಂದೆ: ಶಂಕರ ವಿಳಾಸ: ನಂಬ್ರ: 1-94ಎ, ಕಸ್ತೂರ್ಬಾ ನಗರ, 76-ಬಡಗುಬೆಟ್ಟು ಗ್ರಾಮ, ಉಡುಪಿ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಉಡುಪಿಯ ಸಾರ್ವಜನಿಕ ನೌಕರರ ಗ್ರಾಹಕರ ವಿವಿದ್ದೋಶ ಸಹಕಾರಿ ಸಂಘ (ನಿ) ಇದರಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿಕೊಂಡಿದ್ದು, ಕಾಲಿಗೆ ಪೆಟ್ಟಾಗಿ ದಿನಾಂಕ 01/03/2022 ರಿಂದ 27/06/2022 ರವರೆಗೆ ವೈದ್ಯಕೀಯ ನೆಲೆಯಲ್ಲಿ ರಜೆಯಲ್ಲಿದ್ದು, ದಿನಾಂಕ 28/06/2022 ರಂದು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ದಿನಾಂಕ 01/08/2022 ರಂದು ಪ್ರಶಾಂತ್‌.ಸಿ ರವರು ಸಂಪೂರ್ಣ ಗುಣಮುಖರಾದ ನಂತರ ಪ್ರಭಾರವನ್ನು ಮರಳಿ ಪಡೆದುಕೊಳ್ಳಲು ಕೇಳಿಕೊಂಡಾಗ ಆರೋಪಿತ 1) ಅಶ್ವಿನಿ ಕುಮಾರ್‌, 2) ಮಂಜುಳ, 3) ಶ್ರೀನಿವಾಸ ಶೆಟ್ಟಿ ಇವರು ಸಮಾನ ಉದ್ದೇಶದಿಂದ ಪ್ರಶಾಂತ್‌.ಸಿ ರೌರನ್ನು ಕೀಳಾಗಿ ಕಾಣುತ್ತಿದ್ದುದಲ್ಲದೆ, ಗದರಿಸುವುದು, ಅವಮಾನ ಮಾಡುವುದು, ತಾರತಮ್ಯ ಮಾಡುತ್ತಾ ಬಂದಿದ್ದು, ದಲಿತನೆಂದು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಸಭೆಗೆ ಕರೆಯಿಸಿ ಹೀನಾಯವಾಗಿ ನಿಂದಿಸಿ, ಏಕವಚನದಲ್ಲಿ ಏರುಧ್ವನಿಯಲ್ಲಿ ಎಲ್ಲಾ ಸಭಿಕರ ಮುಂದೆ ಹಿಗ್ಗಾಮುಗ್ಗಾ ಬೈದಿರುತ್ತಾರೆ. ಪ್ರಶಾಂತ್‌.ಸಿ ರವರು ದಲಿತನೆಂದು ಅವರ ಜೊತೆ ಕೀಳಾಗಿ ಮಾತನಾಡುತ್ತಾ, 'ನೀನು ದೊಡ್ಡ ಜನವೇ ಆಹ್ವಾನ ನೀಡಲು' ಎಂದು ಅವಮಾನ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 149/2022 ಕಲಂ: 504 Rw 34 IPC & ಕಲಂ: 3(1)(r) 3(1)(s) SC ST ACT-1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-10-2022 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080