ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಉಡುಪಿ ನಗರ ಠಾಣಾ ಎನ್‌.ಸಿ ನಂಬ್ರ: 198/ಪಿಟಿಎನ್‌/ಯುಟಿಪಿಎಸ್‌/2021 ನ್ನು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದಾಖಲಿಸಿದ ಪ್ರಕರಣದ  ಸಾರಾಂಶವೇನೆಂದರೆ, ಪಿರ್ಯಾದಿ ಅಬ್ದುಲ್‌ ಮುನಾಫ್‌ (59) ತಂದೆ: ಅಮೀರ್‌ ಸಾಹೇಬ್‌‌ ವಾಸ: ಡೋರ್‌ ನಂಬ್ರ: 7-1-58, ಚಿಟ್ಪಾಡಿ, ಬೈಲಕೆರೆ,  ಉಡುಪಿ ತಾಲೂಕು ಇವರ  ಪೂರ್ವಿಕರಿಗೆ  ಸೇರಿದ ಸ್ಥಿರಾಸ್ತಿಯಾದ  ಉಡುಪಿ  ತಾಲೂಕು  76-ಬಡಗುಬೆಟ್ಟು  ಗ್ರಾಮದ  ಸ.ನಂ: 28/18 ರ 43 ಸೆಂಟ್ಸ್‌ ಜಾಗದ ಮಾಲಕತ್ವದ  ವ್ಯಾಜ್ಯವು  ಮಾನ್ಯ ಉಚ್ಛ ನ್ಯಾಯಾಲಯ ಮತ್ತು ಉಡುಪಿಯ ಮಾನ್ಯ 3ನೇ ಸಿವಿಲ್ ನ್ಯಾಯಾಲಯದಲ್ಲಿ ದಾವೆ ತನಿಖೆಯಲ್ಲಿರುವಾಗ ದಿನಾಂಕ: 01/10/2021 ರಂದು ಆರೋಪಿ ವಿಠಲ್ ಶೆಟ್ಟಿಯವರು ತನ್ನ ಮಕ್ಕಳು ಹಾಗೂ ಇತರರೊಂದಿಗೆ ಸೇರಿ,  ಪಿರ್ಯಾದುದಾರರಿಗೆ ಸೇರಿದ ಮೂರು ಮನೆಯನ್ನು ನಾಶ ಮಾಡಿ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 145/2021 ಕಲಂ: 427 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಕೋಟ:  ಪಿರ್ಯಾದಿ ಅದ್ವೈತ ಎಸ್ ಕುಮಾರ್ ಪ್ರಾಯ 20 ವರ್ಷ ತಂದೆ:ಸುನೀಲ್ ಕುಮಾರ್ ವಿ ಕೆ ವಾಸ: ಮಂತ್ರಾಛಾಯ ಬ್ರಹ್ಮ ಲಿಂಗೇಶ್ವರ ರಸ್ತೆ ಎಡಬೆಟ್ಟು ಮೂಡಹಡು ಗ್ರಾಮ ಬ್ರಹ್ಮಾವರ ಇವರು ದಿನಾಂಕ 7/10/2021 ರಂದು  ಎಂದಿನಂತೆ ಬೆಳಿಗ್ಗೆ ತನ್ನ ತಂದೆ ಸುನೀಲ್ ಕುಮಾರ್ ರವರನ್ನು  ತನ್ನ  KA20EP3133 ನೇ ಜುಪಿಟರ್  ಸ್ಕೂಟಿಯಲ್ಲಿ  ಹಿಂದೆ ಕುಳ್ಳಿರಿಸಿ ಕೊಂಡು ಅಂಗಡಿಯಿಂದ ಮನೆಗೆ ಹೊರಟು ರಾಹೆ 66 ರಸ್ತೆಯಲ್ಲಿ  ಸಾಗುತ್ತಾ  ಗುಂಡ್ಮಿ ಗ್ರಾಮದ  ಅಂಬಾಗಿಲು ಜಂಕ್ಷನ್ ನಲ್ಲಿ  ಸುಮಾರು 09.00 ಗಂಟೆಗೆ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA20EB8658 ನೇ ನಂಬ್ರದ ಫಲ್ಸರ್ ಮೋಟಾರ್ ಸೈಕಲ್ ಸವಾರನು ತನ್ನ ಮೊಟಾರ್ ಸೈಕಲನ್ನುಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಸ್ಕೂಟಿಯ ಹಿಂದೆ ಢಿಕ್ಕಿ ಹೊಡೆದನು. ಪರಿಣಾಮ ಎರಡೂ ವಾಹನಗಳು ರಸ್ತೆಗೆ ಬಿದ್ದು, ಎರಡೂ ವಾಹನಗಳು ಜಖಂ ಗೊಂಡಿದ್ದು. ಅಲ್ಲದೇ ಅಪಘಾತದಿಂದ ಪಿರ್ಯಾದಿದಾರರಿಗೆ ಸೊಂಟಕ್ಕೆ ಗುದ್ದಿದ ಒಳ ನೋವು ಮತ್ತು ಬಲ ಕೈಗೆ ತರಚಿದಗಾಯವಾಗಿದ್ದು  ಸ್ಕೂಟಿಯ ಹಿಂದೆ ಕುಳಿತಿದ್ದ  ಸುನೀಲ್ ಕುಮಾರ್ ರವರಿಗೆ ತಲೆಯ ಹಿಂದೆ ತೀವೃ ವಾದ ರಕ್ತ ಗಾಯ ,ಬಲ ಕೈಗೆಕಾಲಿಗೆ ತರಚಿದ ಗಾಯ ಮತ್ತು ಮುಖದ ಗಲ್ಲಕ್ಕೆ ಒಳ ಗಾಯವಾಗಿದ್ದು ,ಅಲ್ಲದೇ ಅಪಘಾತಪಡಿಸಿದ KA20EB8658 ನೇ ನಂಬ್ರದ ಫಲ್ಸರ್ ಮೋಟಾರ್ ಸೈಕಲ್ ಸವಾರ ಮನೋಜನಿಗೆ ತಲೆಯ ಹಿಂದೆ  ಗುದ್ದಿದ ಒಳ ಗಾಯ ಕೈಗೆ ಭುಜಕ್ಕೆ ಗಾಯ ಉಂಟಾಗಿರುತ್ತದೆ .ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 173/2021 ಕಲಂ: 279,337,338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-10-2021 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ