ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕೋಟ:  ಪಿರ್ಯಾದಿದಾರರು ಶರತ್ ಪ್ರಾಯ 21 ವರ್ಷ ತಂದೆ: ರಾಜು ಮೊಗವೀರ ವಾಸ: ಶ್ರೀ ಚಿಕ್ಕು ಅನುಗೃಹ ಕೊರವಾಡಿ ಕುಂಭಾಶಿ ಪೋಸ್ಟ , ಕುಂದಾಪುರ ತಾಲ್ಲೂಕು,  ಬ್ರಹ್ಮಾವರ ಇವರು  ದಿನಾಂಕ 9/10/2021 ರಂದು  ಎಂದಿನಂತೆ ಬೆಳಿಗ್ಗೆ ತನ್ನ ಸಂಬಂದಿ  ಮಾಲತಿ ರವರನ್ನು  ತನ್ನ  KA20.EW.8694  ನೇ ನಂಬ್ರದ ಮೋಟಾರು ಸೈಕಲ್ ನಲ್ಲಿ   ಹಿಂದೆ ಕುಳ್ಳಿರಿಸಿ ಕೊಂಡು ಕೊರವಾಡಿ ಕಡೆಯಿಂದ  ಹೊರಟು ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ಮುಖ್ಯ ರಾಹೆ 66 ರಸ್ತೆಯಲ್ಲಿ  ಸಾಗುತ್ತಾ  ಮಣೂರು ಗ್ರಾಮದ  ಶ್ರೀ ಮಣುರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಬರುತ್ತಿರುವಾಗ   ಸುಮಾರು ಬೆಳಿಗ್ಗೆ 7:45  ಗಂಟೆಗೆ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA20.D.8027  ನೇ ನಂಬ್ರದ ಬಸ್ಸಿನ ಚಾಲಕ ಗುರುರಾಜ್  ತನ್ನ  ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬೇರೆ ವಾಹನವನ್ನು ಓವರಟೇಕ್ ಮಾಡುವ ಭರದಲ್ಲಿ ಒಮ್ಮೇಲೆ ಎಡಕ್ಕೆ ಚಲಾಯಿಸಿ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಹೋಗಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲ ಕೈ ಹಾಗೂ ಬಲ ಕಾಲಿನ ಮೊಣಗಂಟಿನ ಬಳಿ  ಹಾಗೂ ಮಾಲತಿ ಎಂಬವರಿಗೆ ಬಲ ಕೈನ ಮೊಣಗಂಟಿನ ಬಳಿ ಸಾದಾ ಸ್ವರೂಪದ ಗಾಯ ಉಂಟಾಗಿರುತ್ತದೆ . ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 174/2021 ಕಲಂ: 279,  337,IPC ಮತ್ತು 134 (a)&(b) IMV ACT ರಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ:  ದಿನಾಂಕ:08/10/2021 ರಂದು ಸಂತೋಷ್ ಕುಮಾರ್ ಇವರು ತನ್ನ KA.20.ES.6651 ನೇ ದ್ವಿ-ಚಕ್ರ ವಾಹನವನ್ನು ಹೆಬ್ರಿ-ಅಜೆಕಾರು ಮುಖ್ಯ ರಸ್ತೆಯಲ್ಲಿ  ಹೆಬ್ರಿ ಕಡೆಯಿಂದ ಅಜೆಕಾರು ಕಡೆಗೆ ಚಲಾಯಿಸಿಕೊಂಡು ಸಮಯ ಸುಮಾರು ರಾತ್ರಿ 8-30 ಗಂಟೆಗೆ ವರಂಗ ಗ್ರಾಮದ ಬಂಡಿಮಠ ಎಂಬಲ್ಲಿಗೆ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಅಜೆಕಾರು ಕಡೆಯಿಂದ KA.20.EU.5726 ನೇ ಪಲ್ಸರ್ ಮೋಟಾರ್ ಸೈಕಲ್ ನ್ನು ಅದರ ಸವಾರ ಸಂತೋಷ್ ಶೆಟ್ಟಿ ಇವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲ ಬದಿಗೆ ಬಂದು ಸಂತೋಷ್ ಕುಮಾರ್ ಇವರು ಚಲಾಯಿಸುತ್ತಿದ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸಂತೋಷ್ ಕುಮಾರ್ ಇವರಿಗೆ ಮುಖಕ್ಕೆ ಮತ್ತು ಹಣೆಯ ಬಳಿ ಗಾಯವಾಗಿದ್ದು. ಅಪಘಾತ ಪಡಿಸಿದ ಪಲ್ಸರ್ ಮೋಟಾರ್ ಸೈಕಲ್ ಸವಾರ ಸಂತೋಷ್ ಶೆಟ್ಟಿ ಇವರಿಗೂ ಗಾಯವಾಗಿರುತ್ತದೆ. ಈ ಅಪಘಾತವು KA.20.EU.5726 ನೇ ಪಲ್ಸರ್ ಮೋಟಾರ್ ಸೈಕಲ್ ಸವಾರ ಸಂತೋಷ್ ಶೆಟ್ಟಿ ಇವರ ಅತೀವೇಗ ಹಾಗೂ ಅಜಾಗರುಕತೆಯ ಚಾಲನೆಯಿಂದ ಅಗಿರುವುದಾಗಿ ಪಿರ್ಯಾದಿದಾರರ ದೂರಿನ ಸಾರಾಂಶವಾಗಿರುತ್ತದೆ. ಈ ಬಗ್ಗೆ ರಾಜೇಶ್ ಶೆಟ್ಟಿ ಪ್ರಾಯ 32 ವರ್ಷ ತಂದೆ: ನಾರಾಯಣ ಶೆಟ್ಟಿ  ವಾಸ: ಮೀನಾಕ್ಷಿ  ಕೃಪಾ ಹೆಂಡಿಬೆಟ್ಟು  ಎಣ್ಣೆಹೊಳೆ  ಕಾರ್ಕಳತಾಲೂಕು ಇವರು ದೂರು ನೀಡಿದ್ದು ಹೆಬ್ರಿ ಠಾಣಾ ಅಪರಾಧ ಕ್ರಮಾಂಕ  58/2021 ಕಲಂ:,279  337 ಐ ಪಿ ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: : ಬ್ರಹ್ಮಾವರ ತಾಲೂಕು, ಚಾಂತಾರು ಗ್ರಾಮದ ಮಟಪಾಡಿ ರಸ್ತೆ ಮನನದಲ್ಲಿ  ವಾಸವಾಗಿರುವ ಪಿರ್ಯಾದಿ ಶ್ರೀಮತಿ ಶೀಲಾ ಜಿ ರಾವ್‌‌‌‌ (61), ಗಂಡ: ದಿವಂಗತ ಗಿರಿಧರ್‌‌ ರಾವ್‌‌‌ ವಾಸ: ಮನನ, ಮಟಪಾಡಿ ರಸ್ತೆ ಚಾಂತಾರು ಗ್ರಾಮ , ಅವರ  ಮಗಳು ತೃಪ್ತಿ ಜಿ. ರಾವ್‌‌‌‌  ಪ್ರಾಯ 30 ವರ್ಷ ಇವರು ಅವಿವಾಹಿತೆಯಾಗಿದ್ದು ಆಕೆಗೆ ಸುಮಾರು 10 ವರ್ಷದಿಂದ IBS ಎಂಬ ಕರಳು  ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ  ಜೀವನಜ್ಯೋತಿ ಆಸ್ಪತ್ರೆ ಬ್ರಹ್ಮಾವರ  ಮತ್ತು ಕೆ.ಎಂ.ಸಿ ಆಸ್ಪತ್ರೆ ಮಣಿಪಾಲನಲ್ಲಿ  ಚಿಕಿತ್ಸೆಯನ್ನು ಕೊಡಿಸಿದ್ದು  ದಿನಾಂಕ:01-10-2021 ರಂದು ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಧರಾದ ವರನ್ನು 3 ದಿನ ಜೀವನ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಗೆ ಬಂದು ಫಿರ್ಯಾದಿಯೊಂದಿಗೆ ಮಾಮೂಲಾಗಿದ್ದಳು  ದಿನಾಂಕ:08-10-2021ರಂದು ರಾತ್ರಿ 10:00 ಗಂಟೆಗೆ ಫಿರ್ಯಾದಿದಾರರು ಹಾಗೂ ಮೃತೆ ತೃಪ್ತಿ ಜಿ. ರಾವ್‌‌‌ ರವರು  ಊಟ ಮಾಡಿ ಒಟ್ಟಿಗೆ ಮಲಗಿದ್ದು ಈ ದಿನ  ದಿನಾಂಕ:09-10-2021 ರಂದು  ಬೆಳಿಗ್ಗೆ 6:00 ಗಂಟೆಗೆ ಫಿರ್ಯಾದಿದಾರರ ಪಕ್ಕದಲ್ಲಿ ಮಗಳು ಇಲ್ಲದೇ  ಇದ್ದು ನಂತರ ಪಕ್ಕದ ರೂಂಗೆ  ಒಳಗಿನಿಂದ ಲಾಕ್‌‌‌ ಆಗಿದ್ದು  ಕೂಡಲೇ ಫಿರ್ಯಾದಿದಾರರ ಮಗ ಬಂದು ಕೋಣೆಯ ಕಿಟಕಿ ಗಾಜನ್ನು ಒಡೆದು ನೋಡಿದಾಗ ಫಿರ್ಯಾದಿದಾರರ ಮಗಳು ಸೀಲಿಂಗ್‌‌ ಫ್ಯಾನ್‌ಗೆ ಸೀರೆ ತುಂಡನ್ನು ಕಟ್ಟಿ ಇನ್ನೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಅಲ್ಲದೇ  ಸೀರೆ ತುಂಡಿನಿಂದ ಆಕೆ 2 ಕೈಗಳನ್ನು  ಕಟ್ಟಿಕೊಂಡಿದ್ದು ಸಹ ಕಂಡು ಬಂದಿದ್ದು ಬಳಿಕ ನೆರೆಕೆರೆಯವರು ಸೇರಿ ಕಿಟಕಿಯ ಮೂಲಕ ಕಬ್ಬಿಣದ ಸರಳಿನ ಸಹಾಯದಿಂದ ಬಾಗಿಲಿನ ಒಳಗಿನ ಲಾಕನ್ನು ತೆಗೆದು  ಒಳಗೆ ಹೊಗಿ ನೋಡಿದಾಗ ಕೋಣೆಯಲ್ಲಿ  ಬಟ್ಟೆ ಇಟ್ಟಿರುವ ಟೇಬಲ್‌‌‌ನ ಮೇಲೆ  ಸುಸೈಡ್‌‌ ನೋಟ್‌‌‌ ಎಂದು ಹೆಡ್ಡಿಂಗ್‌‌‌ ಬರೆದು 7 ಹಾಳೆಗಳಲ್ಲಿ ಇಂಗ್ಲೀಷ್‌‌ನಲ್ಲಿ ಮೃತೆಯ ಕೈ ಬರಹದಲ್ಲಿ ಬರೆದಿರುವುದು ಕಂಡು ಬಂದಿರುತ್ತದೆ. ಫಿರ್ಯಾದಿದಾರರ ಮಗಳು IBS ಎಂಬ ಕರಳು  ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಯನ್ನು ನೀಡಿದರೂ ಗುಣಮುಖ ಆಗದೇ ಇರುವುದರಿಂದ ಮಾನಸಿಕವಾಗಿ ನೊಂದು ಅದೇ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ:08-10-2021 ರಂದು ರಾತ್ರಿ  10:00 ಗಂಟೆಯಿಂದ  ಈ ದಿನ ದಿನಾಂಕ:09-10-2021 ರ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದು ಅವರ  ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣಾ ಯು.ಡಿ.ಆರ್‌ ಸಂಖ್ಯೆ 60/2021 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಉಡುಪಿ:  ದಿನಾಂಕ:09-10-2021 ರಂದು ಪಿರ್ಯಾದಿ ನಾರಾಯಣ, ಪಿ.ಎಸ್.ಐ. ,ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ.ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು, ಸಿಬ್ಬಂದಿಯವರೊಂದಿಗೆ, ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ನಂದಾ ಹೋಟೇಲ್ ಬಳಿಯ ಸಾರ್ವಜನಿಕ   ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಸ್ಥಳಕ್ಕೆ 12.40 ಗಂಟೆಗೆ ದಾಳಿ ನಡೆಸಿ, ಆರೋಪಿ ಪ್ರವೀಣ ಪೂಜಾರಿ, ಪ್ರಾಯ 48 ವರ್ಷ, ತಂದೆ: ರಮನಾಥ ಪೂಜಾರಿ, ವಾಸ: ಅಬ್ಬಣ್ಣನಕುದ್ರು, ಉಪ್ಪೂರು ಗ್ರಾಮ ಇವನನ್ನು ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂ.1,280/- ಮಟ್ಕಾ ಚೀಟಿ, ಬಾಲ್ ಪೆನ್ ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ  ಎಂಬಿತ್ಯಾದಿ. ಈ ಬಗ್ಗೆ ಉಡುಪಿ ಸೆನ್‌  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47/2021   ಕಲಂ 78(1)(111) ಕೆ.ಪಿ.ಆಕ್ಟ್  ರಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 09-10-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080