ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಹರೀಶ ಕೆ. ಸಾಲಿಯಾನ್ (45),  ತಂದೆ : ದಿ. ಕೃಷ್ಣಪ್ಪ, ಸಿ. ಶ್ರೀಯಾನ್ ವಾಸ : ಆರ್.ಟಿ ನಿವಾಸ ಸುಭಾಷನಗರ ರಸ್ತೆ, ಉಚ್ಚಿಲ ಬಡಾ ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 08/09/2022 ರಂದು ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ ತನ್ನ ನೆರೆಮನೆಯ ನಿವಾಸಿ ಸುರೇಶ ಎಲ್. ಪುತ್ರನ್  ರವರು ಸವಾರಿ ಮಾಡಿಕೊಂಡಿದ್ದ ಅವರ KA-19-ET-1810 ನೇ ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಮೂಳೂರು ಕಡೆಗೆ  ಹೊರಟು ಕಾಪು ಕೆ1 ಹೊಟೇಲ್ ತಲುಪಿ, ಹೊಟೇಲ್‌ ಎದುರಿಗಿರುವ ಡಿವೈಡರ್‌ನಲ್ಲಿ ಉಡುಪಿ ಮಂಗಳೂರು ರಸ್ತೆಯಿಂದ ಸುರೇಶ ಎಲ್ ಪುತ್ರನ್ ರವರು ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಉಡುಪಿ ರಸ್ತೆಗೆ  ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬಂದು ರಸ್ತೆಯ ಏಕಮುಖ ಸಂಚಾರ ವಿರುದ್ಧ ದಿಕ್ಕಿನಲ್ಲಿ ಮೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಂಜೆ 7:00 ಗಂಟೆಗೆ ಮೂಳೂರು ಬೊಬ್ಬರ್ಯ ದೈವಸ್ಥಾನವನ್ನು ತಲುಪಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ, ಸುರೇಶ ಎಲ್. ಪುತ್ರನ್  ರವರು ತನ್ನ ಮೋಟಾರು ಸೈಕಲ್ಲನ್ನು ಒಮ್ಮೇಲೆ ಅತೀ ವೇಗ ಹಾಗೂ ತೀವೃ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಈರಣ್ಣ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಈರಣ್ಣ ರವರ ರಸ್ತೆಯ ಬದಿಗೆ ಬಿದ್ದಿದ್ದು, ಪಿರ್ಯಾದಿದಾರರು ಹಾಗೂ ಸವಾರ ಸುರೇಶ ಎಲ್. ಪುತ್ರನ್  ರವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಹಣೆಗೆ, ಮೂಗಿಗೆ ಹಾಗೂ ಬಲಗೈನ ಅಲ್ಲಲ್ಲಿ ತರಚಿದ ಗಾಯ, ಸುರೇಶ ಎಲ್. ಪುತ್ರನ್ ರವರ ತಲೆಗೆ ತೀವೃ ಗಾಯವಾಗಿ ಪ್ರಜ್ಞಾಹೀನರಾಗಿದ್ದು ಮತ್ತು ಈರಣ್ಣ ರವರಿಗೆ ಎಡಕಾಲು ಒಳ ಜಖಂ ಆಗಿದ್ದು, ಕೂಡಲೇ ಸ್ಥಳೀಯರು 108 ವಾಹನದಲ್ಲಿ ಗಾಯಗೊಂಡ ಮೂರು ಜನರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಸುರೇಶ ಎಲ್. ಪುತ್ರನ್ ರವರನ್ನು ಪರೀಕ್ಷಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈರಣ್ಣ ರವರನ್ನು ಪರೀಕ್ಷಿಸಿ ಎಡಗಾಲಿನ ಮೂಳೆಮುರಿತವಾಗಿರುವುದಾಗಿ ತಿಳಿಸಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: 279, 337, 338, 304(ಎ) ಐಪಿಸಿ ಮತ್ತು ರೂಲ್ 218 ಜೊತೆಗೆ 177 ಐ.ಎಮ್.ವಿ ಕಾಯ್ದೆ. ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 08/09/2022 ರಂದು ಮಧ್ಯಾಹ್ನ  01:00   ಗಂಟೆಗೆ,  ಕುಂದಾಪುರ  ತಾಲೂಕಿನ, ತಲ್ಲೂರು  ಗ್ರಾಮದ  ತಲ್ಲೂರು ವ್ಹೇ ಬ್ರಿಡ್ಸ್‌ ಬಳಿ NH 66 ರಸ್ತೆಯಲ್ಲಿ, ಆಪಾದಿತ ಚಂದ್ರಶೇಖರ  ಶೆಟ್ಟಿ    ಎಂಬುವವರು  KA-20-N-6822ನೇ ಕಾರನ್ನು  ಕುಂದಾಪುರ  ಕಡೆಯಿಂದ ಹೆಮ್ಮಾಡಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ   ಮಾಡಿಕೊಂಡು ಬಂದು,  ಅದೇ  ದಿಕ್ಕಿನಲ್ಲಿ  ಪಿರ್ಯಾದಿದಾರರಾದ  ಶಿವ ಕುಮಾರ್‌  ಎಂಬುವವರು KA-20-ES-1895  Honda Activa ಸ್ಕೂಟರ್‌‌ನಲ್ಲಿ  ಅವರ ಹೆಂಡತಿ  ಮಂಜುಳಾರವರನ್ನು ಸಹ ಸವಾರರಾಗಿ  ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಹಿಂದಿನಿಂದ   ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ,  ಬೆನ್ನಿಗೆ ಒಳನೋವಿನ ಗಾಯ ಹಾಗೂ ಮಂಜುಳಾರವರಿಗೆ  ಎಡಮಾಂಸ ಖಂಡಕ್ಕೆ  ಚರ್ಮ ಹರಿದ ಗಾಯ,  ಎಡಮೊಣ ಗಂಟಿಗೆ ಒಳನೋವು ಹಾಗೂ  ಎರಡೂ ಕೈಗಳಿಗೆ  ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಹುಡುಗ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಘುವೀರ ಶೆಟ್ಟಿ (49), ತಂದೆ:  ದಿವಂಗತ ಕೃಷ್ಣಯ್ಯ ಶೆಟ್ಟಿ , ವಾಸ: ಕೃಷ್ಣ ವೇಣಿ ನಿಲಯ,  ವಿಠಲವಾಡಿ ವಡೇರಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರ ಮಗ ಸಾಯಿಶ್(18)  ಇವರು ಶಿವಮೊಗ್ಗದ  ಡಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ  ವ್ಯಾಸಂಗ ಮುಗಿಸಿ ನೀಟ್ ಪರೀಕ್ಷೆ ಬರೆದಿದ್ದು, ಪರೀಕ್ಷೆಯ ಫಲಿತಾಂಶ ಬರುತ್ತದೆ ಎಂದು ಹೇಳಿದ್ದು ದಿನಾಂಕ 08/09/2022 ಪಿರ್ಯಾದಿದಾರರು  ಬೆಳಿಗ್ಗೆ  08:30  ಗಂಟೆಗೆ ಮಗಳೊಂದಿಗೆ ಕೆಲಸದ ಬಗ್ಗೆ ಮನೆಯಿಂದ  ಹೋಗಿದ್ದು ತಾಯಿಯೂ  ಕೂಡಾ  ಕೆಲಸದ  ಬಗ್ಗೆ  ಹೋದಾಗ ಬೆಳಿಗ್ಗೆ 11:30 ಗಂಟೆಗೆ ಮನೆಯಿಂದ  ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಸೈಕಲ್‌ನಲ್ಲಿ   ಹೋದವನು ಮಧ್ಯಾಹ್ನ 1:15  ಗಂಟೆ ಯ  ಸಮಯ  ಆತನ ಸೈಕಲ್‌  ಮತ್ತು  ಮೊಬೈಲ್ ಹೇರಿಕುದ್ರು ಸೇತುವೆಯ  ಮೇಲೆ  ಸಿಕ್ಕಿರುತ್ತದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: ಹುಡುಗ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಘವೇಂದ್ರ ಖಾರ್ವಿ (41), ಲಕ್ಷ್ಮಣ ಖಾರ್ವಿ, ವಾಸ:ಶ್ರೀ ಮೂಕಾಂಬಿಕಾ ನಿಲಯ ಹೊಸಕೇರಿ ಕುಂದಾಫುರ ಕಸಬಾ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 02/09/2022 ರಂದು ಕುಂದಾಫುರ ಕಸಬಾ  ಗ್ರಾಮದ ಹೊಸ ಬಸ್ ನಿಲ್ದಾಣದ ಸಮೀಪ ಓರ್ವ  ಅಪರಿಚಿತ ಗಂಡಸು ಪ್ರಾಯ 55-60 ಅಸ್ವಸ್ಥಗೊಂಡು ಮಲಗಿಕೊಂಡಿದ್ದವನನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07/09/2022 ರಂದು ಮಧ್ಯಾಹ್ನ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 28/2022 ಕಲಂ: 174   CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ: ದಿನಾಂಕ 08/09/2022 ರಂದು ತೇಜಸ್ವಿ .̧ಟಿ ಪೊಲೀಸ್ ಉಪ ನಿರೀಕ್ಷಕ̧ರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು  ರೌಂಡ್ಸ್ ನಲ್ಲಿರುವಾಗ  ನಿಟ್ಟೆ ಗ್ರಾಮದ ನಿಟ್ಟೆ ಗರಡಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ನಶೆಯಲ್ಲಿ ರಸ್ತೆ ಬದಿ ತೇಲಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ  ನಿಟ್ಟೆ ಗ್ರಾಮದ ನಿಟ್ಟೆ ಗರಡಿ ಬಳಿಯ ಬಸ್ ನಿಲ್ದಾಣದ ಬಳಿ ಹೋದಾಗ ನಶೆಯಲ್ಲಿ ತೇಲಾಡುತ್ತಿದ್ದ ಶಹದತ್ (21) ಎಂಬಾತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಾಯಿಯಲ್ಲಿ ಘಾಟು ವಾಸನೆ ಬರುತ್ತಿದ್ದು,  ಗಾಂಜಾ ಅಥವಾ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಸಂಶಯ ಬಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ  ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವೈದ್ಯರ ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/2022 ಕಲಂ: 27(b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು:  ದಿನಾಂಕ 08/09/2022 ರಂದು ಶ್ರೀಶೈಲ ಡಿ ಎಂ,  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ ಏಣಗುಡ್ಡೆ ಗ್ರಾಮದ ನ್ಯೂ ನಯನ ಬೇಕರಿ ಬಳಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು  ಹಿಡಿದು ವಿಚಾರಸಲಾಗಿ ತನ್ನ ಹೆಸರು  ಮೊಹಮ್ಮದ್ ಆಸಿಫ್ ಎಂದು ತಿಳಿಸಿದ್ದು ಆತನ ಬಳಿಯಿದ್ದ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಆತನ ಕೈಯಲ್ಲಿದ್ದ ಮಟ್ಕಾ ನಂಬ್ರ ಬರೆಯಲು ಬಳಸಿದ ಮಟ್ಕಾ ಚೀಟಿ -1 ನಗದು, ರೂಪಾಯಿ 850/- ರೂಪಾಯಿಗಳಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ 78(i)&(iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 08/09/2022 ರಂದು ಪವನ್‌ ನಾಯಕ್‌ ಬಿ.ಎಸ್‌, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮೇರ್ಡಿ ಹಳೇ ರೂಪಮ್‌ ಬಾರ್‌ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ನವೀನ, ಸಚಿನ್‌, ಶ್ರೀನಾಥ, ವಸಂತ್‌, ಶ್ರೀಧರ, ಸುಕೇಶ ಇವರನ್ನು  ವಶಕ್ಕೆ ಪಡೆದುಕೊಂಡಿದ್ದು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂಪಾಯಿ 5,150/, ಖಾಕಿ ಬಣ್ಣದ ರಟ್ಟಿನ ಹಾಳೆ -1, ಇಸ್ಪೀಟು ಎಲೆಗಳು-52 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022  ಕಲಂ: 87 ಕೆ.ಪಿ ಆ್ಯಕ್ಟ್‌  ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ದಿನಾಂಕ 08/09/2022 ರಂದು ಶ್ರೀಶೈಲ ಡಿ ಎಂ,  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರಿಗೆ ಮೂಡಬೆಟ್ಟು ಗ್ರಾಮದ  ನವರಂಗ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಸಲಾಗಿ ತನ್ನ ಹೆಸರು  ಜನಾರ್ಧನ ಎಂದು ತಿಳಿಸಿದ್ದು  ಆತನ ಬಳಿಯಿದ್ದ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು  ಮಟ್ಕಾ ಚೀಟಿ -1 ನಗದು ರೂ 770/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022  ಕಲಂ 78(i)&(iii) KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
     

        

ಇತ್ತೀಚಿನ ನವೀಕರಣ​ : 09-09-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080