ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ರಾಮ ದೇವಾಡಿಗ (55), ತಂದೆ: ದಿ.ಶೀನ ದೇವಾಡಿಗ, ವಾಸ: ವಾಟರ್ ಟ್ಯಾಂಕ್ ಬಳಿ, ಬೇಂಗ್ರೆ ರಸ್ತೆ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು. ಉಡುಪಿ ಜಿಲ್ಲೆ ಇವರ ಅಣ್ಣ ಆನಂದ ದೇವಾಡಿಗ(65) ಎಂಬುವವರು ದಿನಾಂಕ 08/09/2021 ರಂದು ರಾತ್ರಿ 19:15 ಗಂಟೆಯ ವೇಳೆಗೆ ಪಡುಬಿದ್ರಿ ಪೇಟೆಯ ರಿಕ್ಷಾ ನಿಲ್ದಾಣದ ಬಳಿ ಪಿರ್ಯಾದಿದಾರರೊಂದಿಗೆ ಮಾತನಾಡಿ, ನಂತರ ತನಗೆ ಹಾಗೂ ತನ್ನ ತಮ್ಮ ಬಾಲಕೃಷ್ಣರವರಿಗೆ ಊಟ ತರಲು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಪಲ್ಲಿವಿ ಹೋಟೆಲ್‌‌ಗೆ ಹೋಗವುದಾಗಿ ಪಿರ್ಯಾದಿದಾರರ ಬಳಿ ಹೇಳಿ, ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯನ್ನು ದಾಟಿ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯನ್ನು ದಾಟಲು ಪಲ್ಲವಿ ಹೋಟೆಲ್ ಎದುರು ಮಧ್ಯದ ಡಿವೈಡರ್ ಬಳಿ ನಿಂತಿರುವ ಸಮಯ KA-19-F-3381 ನೇ ನಂಬ್ರದ KSRTC ಬಸ್ ಚಾಲಕ ನಾರಾಯಣ ತನ್ನ ಬಸ್ಸನ್ನು ಅತಿವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಡಿವೈಡರ್ ಬಳಿ ನಿಂತಿದ್ದ ಆನಂದ ದೇವಾಡಿಗ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಆನಂದ ದೇವಾಡಿಗ ರವರು ರಸ್ತೆ ಮೇಲೆ ಕವುಚಿ ಬಿದ್ದು, ತಲೆಗೆ ಗಂಭೀರ ಗಾಯಗೊಂಡವರನ್ನು ಉಪಚರಿಸಿ, ತಕ್ಷಣ ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಆನಂದ ದೇವಾಡಿಗ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 07/09/2021 ರಂದು ಮಧ್ಯಾಹ್ನ 1:00 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಭ್ರಾಮರಿ ಜಂಕ್ಷನ್ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ TS-13-EK-3085 ನೇಯದರ ಚಾಲಕರಾದ ಭಾರತಿ ಎಂಬುವವರು  ಕಾರನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಅದೇ ದಿಕ್ಕಿನಲ್ಲಿ ತನ್ನ ಮುಂದಿನಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾ ನಂಬ್ರ KA-20-C-7653 ನೇಯದನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವ ಸಮಯ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ವಾಹನವೊಂದನ್ನು ಕಂಡು ಕಾರನ್ನು ತನ್ನ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗಿ ಕಾರು ಅಟೋರಿಕ್ಷಾದ ಮುಂಭಾಗದ ಬಲಬದಿಗೆ ಢಿಕ್ಕಿ ಹೊಡೆದು ಅಟೋರಿಕ್ಷಾವು ಚಾಲಕನ ಸಮೇತ ಡಾಮಾರು ರಸ್ತೆಯಲ್ಲಿ ಮಗುಚಿಬಿದ್ದ ಪರಿಣಾಮ ಅಟೋರಿಕ್ಷಾ ಚಾಲಕ ಲಕ್ಷ್ಮಣ ಪೂಜಾರಿಯವರ ತಲೆಗೆ ರಕ್ತ ಗಾಯ ಹಾಗೂ ಎದೆಗೆ ಗುದ್ದಿದ ರೀತಿಯ ನೋವಾಗಿದ್ದು, ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 07/09/2021 ರಂದು ಪಿರ್ಯಾದಿದಾರರಾದ ಜ್ಯೋತಿ ಎಸ್. ರಾವ್(67), ಗಂಡ : ದಿ. ಶ್ರೀನಿವಾಸರಾವ್ ವಾಸ: 1-85 ಬಿ ಹೆರ್ಡೆ ಪಟ್ಟರ ಬೆಟ್ಟು ಪೆರ್ಡೂರು ಗ್ರಾಮ ಉಡುಪಿ ತಾಲೂಕು ಇವರು ಪೆರ್ಡೂರು ಗ್ರಾಮದ ಹತ್ರಬೈಲು ಬಸ್ ಸ್ಟಾಂಡ್ ಬಳಿ ಪೆರ್ಡೂರು ಪೋಸ್ಟ ಆಫೀಸ್ ಗೆ ಹೋಗಲು  ಬಸ್ಸು ಕಾಯುತ್ತಿದ್ದಾಗ  ಹಬ್ರಿ ಸಂತೆಕಟ್ಟೆ ಕಡಯಿಂದ ಬರುತ್ತಿದ್ದ ಸ್ಕೂಟರ್  ಸವಾರರನ್ನು ಕೈ ತೋರಿಸಿ ನಿಲ್ಲಿಸಿ ಆ ಸ್ಕೂಟರ್ ನಲ್ಲಿ ಪಿರ್ಯಾದಿದಾರರು ಸ್ಕೂಟರ್ ನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಬರುತ್ತಾ ಪೆರ್ಡೂರು ಪೇಟೆ ದಾಟಿ ಅಪರಾಹ್ನ 12:30 ಗಂಟೆಗೆ ಸದಾನಂದ ಕಾಂಪ್ಲೆಕ್ಸ್ ಬಳಿ ತಲುಪುವಾಗ ಇಳಿಜಾರು ರಸ್ತೆಯಲ್ಲಿ ಸ್ಕೂಟರ್ ಸವಾರನು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ನಿಂದ ಜಾರಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ ಕಣ್ಣಿನ ಹತ್ತಿರ ಹಾಗೂ ಹಣೆಗೆ ರಕ್ತ ಗಾಯವಾಗಿದ್ದು, ನಂತರ ಸ್ಕೂಟರ್ ಸವಾರನೇ ಒಂದು ರಿಕ್ಷಾದಲ್ಲಿ ಪಿರ್ಯಾದಿದಾರರನ್ನು ಹಿರಿಯಡಕ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ಕರೆ ತಂದಾಗ ಪಿರ್ಯಾದಿದಾರರಾದ ಸಂಬಂಧಿಕರಾದ ಸಂತೋಷ ಕುಮಾರ್ ಎಂಬುವರು ಅಲ್ಲಿಗೆ ಬಂದಿದ್ದು  ಗಾಯಾಳು ಪಿರ್ಯಾದಿದಾರರನ್ನು ವೈದ್ಯರಲ್ಲಿ ತೋರಿಸಿದಾಗ ವೈದ್ಯರು  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕಂಡು ಹೋಗುವಂತೆ ತಿಳಿಸದ ಮೇರೆಗೆ ಸಂತೋಷ ಕುಮಾರ್ ರವರು ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ಒಳ ರೋಗಿಯಾಗಿ ದಾಖಲಿಸಿರುತ್ತಾರೆ . ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗೌರೀಶ್ ಶೆಟ್ಟಿ (40), ತಂದೆ: ಆನಂದ ಶೆಟ್ಟಿ,  ವಾಸ: ಮರತ್ತೂರು ದೊಡ್ಡಮನೆ  ಮೊಳಹಳ್ಳಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಆನಂದ ಶೆಟ್ಟಿ (77) ರವರು ಕೃಷಿಕರಾಗಿದ್ದು ದಿನಾಂಕ 07/09/2021 ರಂದು ಬೆಳಿಗ್ಗೆ 11:00 ಗಂಟೆಗೆ ಅವರ ಮನೆಯ ಪಕ್ಕದ ತೋಟದಲ್ಲಿ ಅಡಿಕೆ ಹೆಕ್ಕಲೆಂದು ಹೋದವರು ಸಂಜೆಯಾದರೂ ಮನೆಗೆ ವಾಪಾಸ್ಸು ಬಾರದೇ ಇದ್ದು  ನಂತರ ಪಿರ್ಯಾದಿದಾರರು ಹುಡುಕಲಾಗಿ ಸಿಗದೇ ಇದ್ದು, ದಿನಾಂಕ 08/09/2021 ರಂದು ತೋಟದ ಬದಿಯಲ್ಲಿರುವ ಹೊಳೆಯಲ್ಲಿ ಹುಡುಕುವಾಗ 17:00 ಗಂಟೆಗೆ ತಲ್ಲೂರಿನ ಹಾಲಾಡಿ ನದಿಯಲ್ಲಿ ಆನಂದ ಶೆಟ್ಟಿಯವರ ಮೃತದೇಹವು ತೇಲುತ್ತಾ ಹೋಗುತ್ತಿದ್ದು ನಂತರ ಅಗ್ನಿಶಾಮಕದಳದವರ ಮೂಲಕ ಮೇಲಕ್ಕೆತ್ತಲಾಗಿರುತ್ತದೆ. ಮೃತ ಆನಂದ ಶೆಟ್ಟಿರವರು ಕೃಷಿಕರಾಗಿದ್ದು ಅವರ ತೋಟದಲ್ಲಿ ಅಡಿಕೆ ಹೆಕ್ಕಲು ಹೋದಾಗ ಕಾಲು ಜಾರಿ ಹೊಳೆಗೆ ಬಿದ್ದು ಹೊಳೆಯಲ್ಲಿ ಈಜಲಾಗದೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 09-09-2021 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080