ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 08/09/2021 ರಂದು  ಪಿರ್ಯಾದಿ ಹೋಳಿಯಪ್ಪ ಬೂದಿಯಾಳ ಇವರು ಸಮಯ ಸುಮಾರು 19:45 ಗಂಟೆಗೆ  ನಿಟ್ಟೂರು ಜಂಕ್ಷನ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ KA 20EJ 7254 ಸ್ಕೂಟರ್ ಸವಾರ ಜೀವನ ಎಂಬಾತನು ಅಂಬಾಗಿಲು ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಬಂದು ಪುತ್ತೂರು ಗ್ರಾಮದ ನಿಟ್ಟೂರು ಹೊಂಡಾ ಶೋ ರೂಂ ಎದುರು ರಾ.ಹೆ 66 ತಲುಪುವಾಗ, ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಸವಾರಿ ಮಾಡಿ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕಾಲಿಗೆ ಮೂಳೆಮರಿತ ಉಂಟಾಗಿ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿ ಗಣೇಶ ಶೆಟ್ಟಿ ಇವರು ದಿನಾಂಕ 08/09/2021ರಂದು ಮಧ್ಯಾಹ್ನ ಪೂಜೆಗೆಂದು ಹೂವು ತರಲು ತನ್ನ ಸ್ನೇಹಿತ ನಾದ ಪ್ರದೀಪನ ಜೊತೆಗೆ ಪಿರ್ಯಾದಿದಾರರ  ಬಾಬ್ತು KA20EU6711 ನೇ ನಂಬ್ರದ ಆಕ್ಟಿವ್ ಹೊಂಡಾ ಸ್ಟೂಟಿಯಲ್ಲಿ  ಕೆದೂರು ಕಡೆಯಿಂದ ಉಳ್ತೂರು ಮಾರ್ಗವಾಗಿ ತೆಕ್ಕಟ್ಟೆ ಕಡೆಗೆ ಬರುವಾಗ ಸುಮಾರು 13.30 ಗಂಟೆಯ ಸಮಯಕ್ಕೆ ಉಳ್ತೂರು ಗ್ರಾಮದ   ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಗುಳ್ಳಾಡಿ ಕಡೆಯಿಂದ ಉಳ್ತೂರು -ತೆಕ್ಕಟ್ಟೆ ಮುಖ್ಯ ರಸ್ತೆಗೆ KA20AA9068ನೇ ಗೂಡ್ಸ ಮಹೇಂದ್ರ ಚೀತಾ ವಾಹನದ ಚಾಲಕ ಮಹೇಶನು ತನ್ನ ಬಾಬ್ತು ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಸ್ಕೂಟಿಯ ಎಡ ಬದಿಗೆ ಬಂದು ತಾಗಿಸಿರುತ್ತಾನೆ  ಪಿರ್ಯಾದಿದಾರರು ಹಾಗೂ ಸಹ ಸವಾರ ಪ್ರದೀಪ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ತಲೆಯ ಬಲ ಭಾಗಕ್ಕೆ ರಕ್ತಗಾಯವಾಗಿದ್ದು ಹಾಗೂ  ಬಲ ಕಾಲಿನ ಮೊಣ ಗಂಟಿಗೆ ಗಾಯವಾಗಿರುತ್ತದೆ. ಪ್ರದೀಪನಿಗೆ ಮುಖ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2021 ಕಲಂ: 279 ,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಬೈಂದೂರು: ಫಿರ್ಯಾದಿ ಶೇಖರ ನಾಯ್ಕ್ ಇವರು ದಿನಾಂಕ 08/09/2021 ರಂದು ಸಂಜೆ ಸಮಯ ಸುಮಾರು 6:30 ಗಂಟೆಗೆ ಗೋಳಿಹೊಳೆ ರಿಕ್ಷಾ ನಿಲ್ದಾಣದ ಬಳಿ ಇರುವಾಗ ಆರೋಪಿತ ವಾಸು ಮರಾಠಿ ತನ್ನ ಬಿಳಿ ಬಣ್ಣದ ಇಕೋ ಕಾರಿನಲ್ಲಿ ಬಂದು ಇಳಿದು ಫಿರ್ಯಾದುದಾರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಾಗ ಫಿರ್ಯಾದುದಾರರು ಅಲ್ಲಿಂದ ಹೋಗಲು ಯತ್ನಿಸಿದಾಗ ಆರೋಪಿತನು ಫಿರ್ಯಾದುದಾರರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಏಕಾಏಕಿ ಫಿರ್ಯಾದುದಾರರ  ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಕೈಹಾಕಿ ಎಳೆದಿದ್ದು, ಫಿರ್ಯಾದುದಾರರು ತಡೆದಾಗ ಕೈಯಿಂದ ಮುಖಕ್ಕೆ ಹೊಡೆದು ಎದೆಗೆ ಗುದ್ದಿ ಫಿರ್ಯಾದುದಾರರನ್ನು ದೂಡಿ ಹಾಕಿದ್ದು, ಫಿರ್ಯಾದಿದಾರರು ನೆಲಕ್ಕೆ ಬಿದ್ದಾಗ ಪಕ್ಕದಲ್ಲಿ ಬಿದ್ದಿದ್ದ ಮರದ ಕೋಲನ್ನು ತೆಗೆದುಕೊಂಡು ಬಂದು ಅದರಿಂದ ಬೆನ್ನಿಗೆ, ಸೊಂಟಕ್ಕೆ ಹಾಗೂ ಕಾಲಿಗೆ ಹೊಡೆದಿದ್ದು ಫಿರ್ಯಾದುದಾರರು ಜೋರಾಗಿ ಕೂಗಿದಾಗ ಅಲ್ಲಿಯೇ ಪಕ್ಕದಲ್ಲಿದ್ದ ಚಂದ್ರ ಮರಾಠಿ, ಬಾಬು ಮರಾಠಿ ಹಾಗೂ ಇತರರು ಬರುವುದನ್ನು ನೋಡಿ ಆರೋಪಿಯು ಕೋಲನ್ನು ಅಲ್ಲಿಯೇ ಬಿಸಾಕಿ ಇಷ್ಟಕ್ಕೆ ನಿನ್ನನ್ನು ಬಿಡುವುದಿಲ್ಲ ನನ್ನ ವೈಯುಕ್ತಿಕ ವಿಚಾರಕ್ಕೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತಾನು ಬಂದ ಕಾರಿನಲ್ಲಿ ಅಲ್ಲಿಂದ ಹೋಗಿರುತ್ತಾನೆ. ಆರೋಪಿತನು ಫಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಳೆದ ಪರಿಣಾಮ ಸರವು ತುಂಡಾಗಿ ಬಿದ್ದಿದ್ದು ಹುಡುಕಾಡಿದಾಗ ಸಿಕ್ಕಿರುತ್ತದೆ.   ಫಿರ್ಯಾದುದಾರರಿಗೆ ಈ ಕೃತ್ಯದಿಂದ ದೆಗೆ, ಸೊಂಟಕ್ಕೆ ಬೆನ್ನಿಗೆ ಒಳನೋವು ಮುಖಕ್ಕೆ ಕುತ್ತಿಗೆಗೆ ಗಾಯವಾಗಿದ್ದು ಬೈಂದೂರು ಅಂಜಲಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147-2021 ಕಲಂ: 341 504, 327, 324, 506, 323   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಅಜೆಕಾರು: ಅಜೆಕಾರು ಪೊಲೀಸ್ ಠಾಣಾ ಎ.ಎಸ್.ಐ ಚಂದ್ರ ಎಕೆ ರವರು ದಿನಾಂಕ: 08/09/2021 ರಂದು 11:00 ಗಂಟೆಗೆ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಮೋಟಾರು ಸೈಕಲ್‌ನಲ್ಲಿ ಹೊರಟು ಎಣ್ಣೆಹೊಳೆ, ಹೆರ್ಮುಂಡೆ, ಕಾಡುಹೊಳೆ, ಕಡ್ತಲ ಕಡೆಗಳಲ್ಲಿ ರೌಂಡ್ಸ್ ಮಾಡುತ್ತಾ ದಿನಾಂಕ: 09/09/2021 ರಂದು ಬೆಳಗಿನ ಜಾವ 04:10 ಗಂಟೆಯ ಸಮಯಕ್ಕೆ ಅಂಡಾರು ಪೇಟೆ ಬಳಿ ಸಂಚರಿಸಿಕೊಂಡಿರುವಾಗ ಅಂಡಾರು ಬಸ್ ನಿಲ್ದಾಣದ ಕಡೆಗೆ ಟಾರ್ಚ್‌ ಬೆಳಕು ಹಾಯಿಸುವಾಗ ಬಸ್ ನಿಲ್ದಾಣದ ಹಿಂಬದಿ ಗಣೇಶ್ ಭವನ ಹೋಟೇಲ್ ಬಳಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಲು ತನ್ನ ಮುಖವನ್ನು ಮುಚ್ಚಿಕೊಂಡು ಹತ್ತಿರ ಹೋದಾಗ ಸಮವಸ್ತ್ರದಲ್ಲಿದ್ದ ಅವರನ್ನು ನೋಡಿ ಓಡಲು ಯತ್ನಿಸಿದಾಗ ಹಿಡಿದು ವಿಚಾರಿಸಲಾಗಿ ಆತನು ತನ್ನ ಹೆಸರು ಮೆಹಬೂಬ್ ಎಂತಲೂ, ಇನ್ನೊಂದು ಬಾರಿ ಕೇಳಿದಾಗ ಮಹಮ್ಮದ್ ಎಂತಲೂ ತಾನು ಕೊಲ್ಲೂರು ವಾಸಿ ಎಂದು ಸರಿಯಾಗಿ ಹೆಸರನ್ನು ಹೇಳದೆ ತಡವರಿಸಿದ್ದು, ನಂತರ ಕೂಲಂಕುಷವಾಗಿ ವಿಚಾರಿಸಲಾಗಿ ತನ್ನ ಹೆಸರು ಅಬ್ದುಲ್ ರೆಹಮಾನ್ ಪ್ರಾಯ 42 ವರ್ಷ ತಂದೆ: ದಿ. ಚಯ್ಯಬ್ಬ ಬ್ಯಾರಿ ವಾಸ: ಕೆ.ಸಿ.ಮಂಜಿಲ್, ಕೆರೆಬಳಿ ಹೌಸ್, ಸಂಗಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ ಎಂಬುದಾಗಿ ತಿಳಿಸಿ ತಾನು ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ಬಗ್ಗೆ ಸಂದೇಹ ಮೂಡಿದ ಮೇರೆಗೆ  ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021  ಕಲಂ 96 K.P ACT ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ: 08/09/2021ರಂದು ಅಶೋಕ್‌ ಕುಮಾರ್‌ ಪಿ.ಎಸ್.ಐ,ಉಡುಪಿ ನಗರ ಪೊಲೀಸ್ ಠಾಣೆ ಉಡುಪಿ ಇವರು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ 23:00 ಗಂಟೆಗೆ ಉಡುಪಿ ನಗರ ಠಾಣೆಯ ಪಿ. ಐ ರವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ದಿನಾಂಕ: 09/09/2021ರಂದು 00:30 ಗಂಟೆಗೆ ಉಡುಪಿ ತಾಲೂಕು ಅಂಬಲ್ಪಾಡಿ ಗ್ರಾಮದ ಆದಿ ಉಡುಪಿ ಮಾರ್ಕೇಟ್‌ ಯಾರ್ಡ್‌ ಗೆ ದಾಳಿ ನಡೆಸಿ, ರಾಜ್ಯ ಸರ್ಕಾರ ವಿಧಿಸಿದ ಕೋವಿಡ್ ಸಾಂಕ್ರಾಮಿಕ  ರೋಗದ  ತಡೆ ಸಂಬಂಧ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ, ಕೊರೊನಾ ಖಾಯಿಲೆಯ ಹರಡುವುದನ್ನು ತಡೆತಟ್ಟಲು ನಿರ್ಲಕ್ಷ್ಯ ವಹಿಸಿ, ಮಾರ್ಕೇಟ್‌ ಯಾರ್ಡ್‌ ತೆರೆದ ಶೆಡ್‌ನಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿತ 1) ದೇವೇಂದ್ರ ತಂದೆ: ಓಬಯ್ಯ ಕೊಡಗಳ್ಳಿ ವಾಸ: ಚಿಕ್ಕೊಬನಳ್ಳಿ ಗ್ರಾಮ, ಮೊಳಕಾಲ್ಮೂರು ತಾಲೂಕು, ಚಿತ್ರದುರ್ಗ 2) ಚಂದಪ್ಪ ಎಸ್ (39) ತಂದೆ: ಸಿದ್ದಪ್ಪ ವಾಸ: ಮಜಲುಮನೆ, ಮೂಡಬೆಟ್ಟು, ಕೊಡವೂರು ಉಡುಪಿ 3) ನಿಂಗಣ್ಣ ಅಂಗಡಿ (48) ತಂದೆ: ಪರಪ್ಪ ವಾಸ: ಅಂಬಲಹಾಳ, ಸುರಪುರ ತಾಲೂಕು, ಯಾದಗಿರಿ ಜಿಲ್ಲೆ 4) ಭೀರಪ್ಪ ಹೆಚ್. ನಾಯ್ಕೋಡಿ (29) ತಂದೆ: ಹಣಮಂತರಾಯ ವಾಸ: ಅಂಬಲಹಾಳ, ಸುರಪುರ ತಾಲೂಕು, ಯಾದಗಿರಿ ಜಿಲ್ಲೆ 5) ಶರಣಪ್ಪ ಒಕ್ಕರಾಣಿ (36) ತಂದೆ: ಬಸಪ್ಪ ವಾಸ: ಗಂಜಿಹಾಳ ಗ್ರಾಮ, ಹುನಗುಂದ ತಾಲೂಕು, ಬಾಗಲಕೋಟ ಜಿಲ್ಲೆ 6) ಮಲ್ಲಿಕಜಾನ್ ಮಕಾನದಾರ್ (29) ತಂದೆ: ಅಬ್ದುಲ್ ರಜಾಕ ವಾಸ: ಟಿಪ್ಪು ನಗರ, ಹುಬ್ಬಳ್ಳಿ, ಧಾರವಾಡ ಜಿಲ್ಲೆ 7) ಮಡಿವಾಳಪ್ಪ ಕೆಳಗಿನಮನಿ (32) ತಂದೆ: ಹಣಮಂತಪ್ಪ ವಾಸ: ಅಂಬಲಹಾಳ, ಸುರಪುರ ತಾಲೂಕು, ಯಾದಗಿರಿ ಜಿಲ್ಲೆ ಇವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಇಸ್ಪೀಟು ಜುಗಾರಿ  ಆಟಕ್ಕೆ ಬಳಸಿದ  ಒಟ್ಟು ನಗದು ರೂ 5,325/-,  52 ಇಸ್ಪೀಟು ಎಲೆಗಳು, 5 ಮೊಬೈಲ್ ಪೋನ್, 6 ಮೋಟಾರ್‌ ಸೈಕಲ್‌ ಗಳನ್ನು ಮುಂದಿನ ನಡವಳಿಕೆಯ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ: 269 ಐಪಿಸಿ ಮತ್ತು ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ: 09-09-2021 ರಂದು ಬೆಳಿಗ್ಗೆ 11.30 ಗಂಟೆಗೆ ಕುಂದಾಫುರ ತಾಲೂಕು ಯಡಮೊಗೆ ಗ್ರಾಮದ ಅಸ್ಕಿಮನೆ ಎಂಬಲ್ಲಿನ ಪಿರ್ಯಾದಿ ಜಲಜ ಶೆಡ್ತಿ ಇವರ ಜಾಗಕ್ಕೆ ಆರೋಪಿ ಮಂಜುನಾಥ ಶೆಟ್ಟಿ, ಯಡಮೊಗ್ಗೆ ಗ್ರಾಮ ಈತಯು  ತನ್ನ ಬಿಳಿಕಾರಿನಲ್ಲಿ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರನ್ನು ಉದ್ದೇಶಿಸಿ ನಿನ್ನಮಗ ಮಹೇಶನು ಧರ್ಮಕ್ಕೆ  ಬಂದಿದ್ದಾನೆ , ಅವನನ್ನು  ಧರ್ಮಕ್ಕೆ ಕಳಿಸಿ ಬಿಡುತ್ತೇನೆ , ನನ್ನ ವಿಷಯ ನಿಮಗೆಲ್ಲರಿಗೂ  ಗೊತ್ತಲ್ಲಾ  , ಆ ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ಅಕ್ರ 89/2021 ಕಲಂ: 447, 504,506  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-09-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080