ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಧಾ ದೇವಾಡಿಗ (38), ಗಂಡ: ನಾಗರಾಜ, ವಾಸ: ಮೇಲ್ ಮಿಯಾಣಿ, ಬಿಜೂರು ಗ್ರಾಮ ಬೈಂದೂರು ತಾಲೂಕು ಇವರ ಗಂಡ ನಾಗರಾಜ (44) ರವರು ಒಂದು ವಾರದ ಹಿಂದೆ ನಾಗರಾಜ ರವರು ಹೊಟೇಲ್ ಕೆಲಸಕ್ಕೆ  ಹುಬ್ಬಳಿಗೆ ಹೋಗಿದ್ದು,  ನಾಗರಾಜ ರವರು ಸುಮಾರು 2 ವರ್ಷಗಳಿಂದ ಹೃದಯ ಹಾಗೂ ಲಿವರ್ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆ, ಆದರ್ಶ ಆಸ್ಪತ್ರೆ  ಹಾಗೂ ಅಂಬಾಗಿಲು ಕಾರಂತರ ಕ್ಲಿನಿಕ್ ನಲ್ಲಿ ಮದ್ದು ಮಾಡುತ್ತಿದ್ದು ಅನಾರೋಗ್ಯದಿಂದ ಕೆಲಸ ಮಾಡಲು ಆಗದೇ ಹುಬ್ಬಳ್ಳಿಯಿಂದ ದಿನಾಂಕ 08/08/2022 ರಂದು ಸಂಜೆ 6:00 ಗಂಟೆಗೆ ಮನೆಗೆ ಬರುವುದಾಗಿ ಪಿರ್ಯಾದಿದಾರರಿಗೆ ಹೇಳಿ ಹೊರಟವರು ದಿನಾಂಕ 09/08/2022 ರಂದು ರಾತ್ರಿ 1:00 ಗಂಟೆಗೆ ಬೈಂದೂರು ಬಸ್ ನಿಲ್ದಾಣದಲ್ಲಿಇಳಿದು ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿ ಮನೆ ಕಡೆಗೆ ನಡೆದುಕೊಂಡು ಬರುವ ವೇಳೆ  ರಾತ್ರಿ 1:00 ಗಂಟೆಯಿಂದ ಬೆಳಿಗ್ಗೆ 8:30 ಗಂಟೆಯ ಮದ್ಯಾವಧಿಯಲ್ಲಿ ಯಡ್ತರೆ ಗ್ರಾಮದ ಬೈಂದೂರು ಸ್ವಾಮಿ ಮೆಡಿಕಲ್ ಬಳಿ ಕುಸಿದು ಬಿದ್ದವರನ್ನು 108 ವಾಹನದವರು  ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ದಾರಿ ಮಧ್ಯೆ ನಾಗರಾಜ ರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ:  ಪಿರ್ಯಾದಿದಾರರಾದ ಹರೀಶ ( 34), ತಂದೆ: ದಿ.ನಾರಯಣ ದೇವಾಡಿಗ, ವಾಸ: ಕಾತ್ಯಾಯಿನಿ ನಿಲಯ, ದೇವಾಡಿಗರ ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ತಮ್ಮ ಗಿರೀಶ (32) ಎಂಬುವವರಿಗೆ ಮದುವೆ ಆಗದೇ ಇದ್ದು, ಅವರು ವಿಪರೀತ ಮದ್ಯಸೇವನೆ ಮಾಡುವ ಚಟ ಹೊಂದಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು  ದಿನಾಂಕ 08/08/2022 ರಂದು ಮಧ್ಯಾಹ್ನ 12:30 ಗಂಟೆಯಿಂದ ಸಂಜೆ 6:15 ಗಂಟೆಯ ಮಧ್ಯಾವಧಿಯಲ್ಲಿ ಬ್ರಹ್ಮಾವರ  ತಾಲೂಕು, ನೀಲಾವರ ಗ್ರಾಮದ ನೀಲಾವರ ಮಹಿಷ ಮರ್ದಿನಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಒಳಗೆ ಮಾಡಿನ ಮರದ ಅಡ್ಡೆಗೆ ಪಂಚೆಯನ್ನು ಕಟ್ಟಿ ಇನ್ನೊಂದು ತುದಿಯಲ್ಲಿ ನೇಣನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 36/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣ

 • ಉಡುಪಿ: ದಿನಾಂಕ 09/08/2022ರಂದು ಬೆಳಿಗ್ಗೆ 08:00 ಗಂಟೆಗೆ ವಿಜಯ್‌ .ಸಿ, ಸಹಾಯಕ ಪೊಲೀಸ್‌ ಉಪನಿರೀಕ್ಷಕರು,ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ  ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ  ಸಿಟಿ  ಬಸ್‌  ನಿಲ್ದಾಣದ  ಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸಂತೋಷ (46), ತಂದೆ: ದಿ.ಸೋಮಪ್ಪ, ವಾಸ : ಶುಭನಿಲಯ ಕಡೆಕಾರು ಪಂಚಾಯ್ತಿ ಹತ್ತಿರ ಕಡೆಕಾರು ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2ನೇ ಆಪಾದಿತ  ಲಿಯೋ ಕರ್ನೆಲಿಯೋ ಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 3490 /- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-6, ಬಾಲ್‌ಪೆನ್‌-1, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 122/2022 ಕಲಂ: 78 (i) (iii) Karnataka Police ACT ರಂತೆ ಪ್ರಕರಣ ದಾಖಲಾಗಿರುತ್ತದೆ.  

 ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ರಾಜೀವ (40), ತಂದೆ: ಪದ್ದ ಕುಲಾಲ, ವಾಸ : ಬಳ್ಕೂರು  ಗ್ರಾಮ, ಕುಂದಾಪುರ ತಾಲೂಕು ಇವರ ಬಾವ ನಾಗರಾಜ ಕುಲಾಲ (43)ರವರು ಬ್ರಹ್ಮಾವರದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ಮನೆಯಲ್ಲಿ ವಾಸ್ತವ್ಯ ಇರುವುದಾಗಿದೆ. ಇವರು ವಿಪರೀತ ಕುಡಿಯುವ ಚಟ ಹೊಂದಿದ್ದು ದಿನಾಂಕ 07/08/2022  ರಂದು ರಾತ್ರಿ 10:00 ಗಂಟೆಗೆ ಮನೆಯಿಂದ ಯಾರಿಗೂ ಹೇಳದೆ ಹೊರಗೆ ಹೋಗಿದ್ದು ವಾಪಾಸು ಮನೆಗೆ ಬಾರದೇ ಇದ್ದು ಪಿರ್ಯಾದಿದಾರರು ಮತ್ತು ಮನೆಯವರು ಎಲ್ಲರೂ ಸೇರಿಕೊಂಡು ಹುಡುಕಾಡಿದಲ್ಲಿ ಪತ್ತೆಯಾದೇ ಕಾಣೆಯಾಗಿರತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2022 ಕಲಂ: MAN Missing ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 09-08-2022 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080