ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುಬ್ರಹ್ಮಣ್ಯ (30), ತಂದೆ; ಪರಮೇಶ್ವರ ಖಾರ್ವಿ, ವಾಸ: ಎರಡು ತಲೆ ಮನೆ ಗಾಂಧಿನಗರ ಕೊಡೇರಿ ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 08/08/2022 ರಂದು ಅವರ ಸ್ನೇಹಿತ ಸುರೇಶರವರ ಮನೆಯ ಎದುರು ಕುಮಾರ ರವರೊಂದಿಗೆ ಮಾತನಾಡುತ್ತಾ ನಿಂತುಕೊಂಡಿರುವಾಗ 11:30 ಗಂಟೆಗೆ ಪಿರ್ಯಾದಿದಾರರ ಸ್ನೇಹಿತ ಸುರೇಶರವರ ಅಜ್ಜಿ ಅಮ್ಮಕ್ಕ (70) ವರು ಶಿವದಾಸ ಖಾರ್ವಿಯವರ ಮನೆ ಕಡೆಯಿಂದ ಅವರ ಮನೆ ಕಡೆಗೆ ಕೊಡೇರಿ ಗಾಂಧಿ ನಗರ ಕ್ವಾರ್ಟಸ್ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅವರ ಹಿಂದಿನಿಂದ ಹೆಚ್.ಪಿ ಗ್ಯಾಸ್ ಏಜೆನ್ಸಿಯ ಬೊಲೇರೋ ವಾಹನ ಸಂಖ್ಯೆ KA-20-D-6286ನೇದರ ಚಾಲಕ ನಿತೀನ್ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಕೊಡೇರಿ ಗಾಂಧಿನಗರ ಕ್ವಾರ್ಟಸ್ ಗಳಿಗೆ ಗ್ಯಾಸ್ ಡೆಲಿವರಿ ಮಾಡುವರೇ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಅಮ್ಮಕ್ಕರವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅಮ್ಮಕ್ಕರವರು ರಸ್ತೆಯ ಮೇಲೆ ಬಿದಿದ್ದು, ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಓಡಿ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ಅಮ್ಮಕ್ಕರವರನ್ನು ಎತ್ತಿ ಉಪಚರಿಸಿದ್ದು, ಅಮ್ಮಕ್ಕರವರಿಗೆ ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಗೊಂಡ ಅಮ್ಮಕ್ಕರವರನ್ನು ಪಿರ್ಯಾದಿದಾರರು ಇತರರೊಂದಿಗೆ 108 ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 153/2022 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಾಜೇಶ ಪೂಜಾರಿ (40), ತಂದೆ: ಮುತ್ತ ಪೂಜಾರಿ, ವಾಸ: ಧೂಮಾನ ಕೆರೆ ಕಟ್ಕೇರಿ ಕೋಣಿ ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ಸುರೇಶ ಪೂಜಾರಿ(48) ವಿಪರೀತ ಶರಾಬು ಸೇವಿಸುವರಾಗಿದ್ದು, ಹೆಂಡತಿಮನೆ ಅಂಪಾರು ಗ್ರಾಮದ ನೆಲ್ಲಿಕಟ್ಟೆಯ ಶಾಂತಾವರೆ ಎಂಬ ವಿಳಾಸದಲ್ಲಿ ವಾಸವಾಗಿರುತ್ತಾರೆ ದಿನಾಂಕ 08/08/2022 ರಂದು 12:00 ಗಂಟೆಗೆ ಪಿರ್ಯಾದಿದಾರರ ಅತ್ತಿಗೆಯ ಮಗ ರಾಘವೇಂದ್ರ ಎನ್ನುವವರು ಕರೆ ಮಾಡಿ, ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಂಜುಶ್ರೀ ಫ್ಯಾಕ್ಟ್ರಿಗೆ ಹೋಗುವ ತಿರುವಿನ ಬಳಿ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಮಾತಾಶ್ರೀ ಕಾಂಪ್ಲೇಕ್ಸ ಎದುರು  ರಾಜೇಶರವರು ನಡೆದುಕೊಂಡು ಹೋಗುವಾಗ ಕವುಚಿ ಬಿದ್ದಿರುವುದಾಗಿ ತಿಳಿಸಿದಂತೆ ಸ್ಥಳಕ್ಕೆ ಬಂದು ನೋಡಿದಾಗ ಸುರೇಶ ಪೂಜಾರಿಯವರು ಕವುಚಿ ಬಿದ್ದ ಸ್ಥಿತಿಯಲ್ಲಿದ್ದು ಆಗಲೇ ಮೃತಪಟ್ಟಿರುವುದಾಗಿರುದಾಗಿದ್ದು, ಸುರೇಶ ಪೂಜಾರಿಯವರು ವಿಪರೀತ ಮಧ್ಯಪಾನ ಮಾಡಿ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಣ್ಣ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಸಂಗಪ್ಪ (42), ತಂದೆ: ಹೊಳೆಬಸಪ್ಪ, ವಾಸ: ಅವರಾದಿ ಗ್ರಾಮ, ರಾಮದುರ್ಗಾ ತಾಲೂಕು, ಬೆಳಗಾವಿ ಜಿಲ್ಲೆ ಇವರ ತಮ್ಮ ಬಸವರಾಜ(37) ರವರು 1 ವರ್ಷದಿಂದ ಕುಂದಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ವೀಪರೀತ ಮದ್ಯಪಾನ ಮಾಡುವ ಅಭ್ಯಾಸವುಳ್ಳವನಾಗಿರುತ್ತಾರೆ. ದಿನಾಂಕ 08/08/2022 ರಂದು ಬೆಳಿಗ್ಗೆ 07:45 ಗಂಟೆಗೆ ಸ್ಥಳೀಯರೊಬ್ಬರು ಪಿರ್ಯಾದಿದಾರರಿಗೆ ಮೊಬೈಲ್ ಕರೆ ಮಾಡಿ ಬಸವರಾಜ್ ರವರು ಕುಂದಾಪುರ ತಾಲೂಕು ಕಸಬ ಗ್ರಾಮದ ಶಾಸ್ತ್ರೀ ಪಾರ್ಕಿನ ಫ್ಲೈ ಓವರ್ ನ ಕೆಳಗೆ ಮೃತಪಟ್ಟಿದ್ದು, ಮೃತದೇಹವನ್ನುಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ    ಇಟ್ಟಿರುವುದಾಗಿ ತಿಳಿಸಿದಂತೆ ದಿನಾಂಕ 08/08/2022 ರಂದು ಸಂಜೆ 05:00 ಗಂಟೆಗೆ ಕುಂದಾಪುರಕ್ಕೆ ಬಂದು ಶವಾಗಾರದಲ್ಲಿದ್ದ ಮೃತದೇಹವನ್ನು ನೋಡಿದ್ದು, ಪಿರ್ಯಾದಿದಾರ ತಮ್ಮ ಬಸವರಾಜ್ ರವರು ಆರೋಗ್ಯ ಸಮಸ್ಯೆಯಿಂದ ಅಥವಾ ಯಾವುದೋ ಖಾಯಿಲೆಯಿಂದ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಿತೇಶ ಪೂಜಾರಿ (27), ತಂದೆ: ನರಸಿಂಹ ಪೂಜಾರಿ, ವಾಸ: ಕಪ್ಪಾಡಿ ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಇವರು ಕಾಲ್ತೋಡು ಗ್ರಾಮದ 1 ನೇ ವಾರ್ಡ್ ನ ಸದಸ್ಯರಾಗಿದ್ದು   ದಿನಾಂಕ 08/08/2022 ರಂದು ವಿಪರೀತ ಮಳೆಯಿದ್ದ  ಕಾರಣ  ತಮಗೆ ಸಂಬಂಧಿಸಿದ ವಾರ್ಡನ ನೆರೆ ವೀಕ್ಷಣೆಯ ಬಗ್ಗೆ  ಬೀಜಮಕ್ಕಿ ಕಡೆಯಲ್ಲಿರುವಾಗ 3:15 ಗಂಟೆಯ ಸುಮಾರಿಗೆ ಬೀಜಮಕ್ಕಿ ಮಹಾಲಿಂಗ ಗಾಣಿಗ ರವರ ಮನೆಯ ಬಳಿಯ ಕಾಲುಸಂಕದಲ್ಲಿ ದಾಟುತ್ತಿದ್ದ ಶಾಲೆಯ ಹುಡುಗಿ ಕಾಲು ಜಾರಿ ಬಿದ್ದಿರುವುದಾಗಿ ಮಾಹಿತಿ ತಿಳಿದು ಬಂದ ಮೇರೆಗೆ ಸ್ಥಳಕ್ಕೆ ಹೋದಲ್ಲಿ ಚಪ್ಪರಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿರುವ ಭಾರತಿ ಗಾಣಿಗ ರವರು ಮಳೆಯ ಕಾರಣ ಶಾಲೆಗೆ ಮಧ್ಯಾಹ್ನ ಊಟದ ಬಳಿಕ ರಜೆ ನೀಡಿದ ಕಾರಣ ತಮ್ಮ  ಮೂವರು ಮಕ್ಕಳ ಜೊತೆಯಲ್ಲಿ  ಮಕ್ಕಿಮನೆ ಸುಮಿತ್ರಾ, ಪ್ರದೀಪ ಪೂಜಾರಿ ರವರ ಮಗಳು ಸನ್ನಿಧಿ (7) ಮತ್ತು  ಪಕ್ಕದ ಮನೆಯ ಭೂಮಿ ಹಾಗೂ ತನ್ಮಯ್ ಎಂಬ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮಧ್ಯಾಹ್ನ 3:00 ಗಂಟೆಗೆ ಬೀಜಮಕ್ಕಿ ಮಹಾಲಿಂಗ ಗಾಣಿಗ ರವರ ತೋಟದ ಬಳಿ ಇರುವ ಚಪ್ಪರಿಕೆ ಹೊಳೆಗೆ ಹಾಕಿದ ಮರದ ಕಾಲು ಸಂಕದಲ್ಲಿ ಭಾರತಿ ಗಾಣಿಗ ರವರು ಮಕ್ಕಳಲ್ಲಿ ತನ್ಮಯ್ ಹಾಗೂ ಭೂಮಿ ರವರನ್ನು ಒಬ್ಬೊಬ್ಬರಾಗಿ ಹೊಳೆಯನ್ನು ಕಾಲು ಸಂಕದ ಮೂಲಕ ದಾಟಿಸಿ, ಸನ್ನಿಧಿ ಯನ್ನು ದಾಟಿಸಲು ಆಕೆಯ ಬ್ಯಾಗ್ ನ್ನು ತಾನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಸನ್ನಿಧಿಯ ಕೈಯನ್ನು ಹಿಡಿದು ಕಾಲುಸಂಕದ ಮೇಲೆ ನಡೆದುಕೊಂಡು ಬರುವಾಗ ಸನ್ನಿಧಿಯ ಕಾಲು ಮರದ ಕಾಲು ಸಂಕದಲ್ಲಿ ಆಕಸ್ಮಿಕವಾಗಿ ಜಾರಿದ್ದು,  ಭಾರತಿ ಗಾಣಿಗ ರವರ ಕೈನಿಂದಲೂ ಜಾರಿ ರಭಸವಾಗಿ ತುಂಬಿ ಹರಿಯುತ್ತಿದ್ದ ಚಪ್ಪರಿಕೆ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಊರಿನ ಗ್ರಾಮಸ್ಥರು ನೆರೆಕರೆಯವರು ಹೊಳೆಯಲ್ಲಿ ಹುಡುಕಾಡಿದ್ದು ಸನ್ನಿಧಿ ಪತ್ತೆ ಆಗಿರುವುದಿಲ್ಲ.   ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 154/2022 ಕಲಂ: ಹುಡುಗಿ  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ:  ಪಿರ್ಯಾದಿದಾರರಾದ ನಜೀಮಾ (30), ಕೋಂ ಇರ್ಫಾನ್, ವಾಸ: ಕೇರ್ ಆಫ್ ಮಹಮ್ಮದ್, ಫಿರ್ದೋಸ್, ಗಾಂಧಿ ಮೈದಾನ ರಸ್ತೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಅಣ್ಣ ಫಿರ್ದೋಸ್ ರವರ ಮನೆಯಲ್ಲಿ ಕಾರ್ಕಳ ಗಾಂಧಿ ಮೈದಾನ್ ರಸ್ತೆಯಲ್ಲಿ ವಾಸವಾಗಿರುತ್ತಾರೆ. 1ನೇ ಅಪಾದಿತ ಶಬೀರ್ ಪಿರ್ಯಾದಿದಾರರ ಗಂಡನ ಅಕ್ಕನ ಗಂಡನಾಗಿದ್ದು, 2 ನೇ ಅಪಾದಿತ ಇಮ್ರಾನ್ ಪಿರ್ಯಾದಿದಾರರ ಗಂಡನ ತಮ್ಮನಾಗಿದ್ದು, 3 ನೇ ಅಪಾದಿತ ಶಾಹಿದ್ ಗಂಡನ ತಂಗಿಯ ಗಂಡನಾಗಿರುತ್ತಾನೆ. ಪಿರ್ಯಾದಿದಾರರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ತನ್ನ ಗಂಡ ಇರ್ಫಾನ್ ಮತ್ತು ಇತರರ  ವಿರುದ್ಧ ಕೇಸು ದಾಖಲಿಸಿದ್ದು, ದಿನಾಂಕ 12/06/2022 ರಂದು ಸಂಜೆ 4:20 ಗಂಟೆಗೆ ಪಿರ್ಯಾದಿದಾರರು ತನ್ನ ಮಗಳೊಂದಿಗೆ ಕಾರ್ಕಳ ಕಾಬೆಟ್ಟು ಜಯಭಾರತಿ ಕ್ರಾಸ್  ಬಳಿ ನಡೆದುಕೊಂಡು ಹೋಗುತ್ತಿದ್ದಾಗ 1ನೇ ಅಪಾದಿತನು  ಅಪಾದಿತ 2 ಮತ್ತು 3 ನೇರವರೊಂದಿಗೆ  ಕಾರು KA-20-A-1252 ರಲ್ಲಿ ಬಂದು  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ: 341, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 09-08-2022 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080