ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಮಲ್ಪೆ: ದಿನಾಂಕ 07/08/2021 ರಂದು ಬೆಳಿಗ್ಗೆ ಕೆಲಸದ ಬಗ್ಗೆ ಪಿರ್ಯಾದಿದಾರರಾದ ಸುರೇಂದ್ರ (29) ತಂದೆ: ಸುಂದರ ವಾಸ:  ಸುಷ್ಮಾ ನಿಲಯ  ರಾಜೀವನಗರ  1 ನೇ ಅಡ್ಡರಸ್ತೆ  ನೇಜಾರು ಮೂಡುತೋನ್ಸೆ ಇವರ ಅಣ್ಣನ KA-20-EB-2446 ನೇ ಮೋಟಾರು ಸೈಕಲ್ ನಲ್ಲಿ ಕೆಮ್ಮಣ್ಣುನಿಂದ ನೇಜಾರಿಗೆ ಆತನ ಸ್ನೇಹಿತ  ಸುರಜ್ ಆಚಾರ್ಯ ನೊಂದಿಗೆ ಹೊರಟು ಸದ್ರಿ ಮೋಟಾರು ಸೈಕಲ್ ನ್ನು ಸುರಜ್ ಆಚಾರ್ಯ ಸವಾರಿ ಮಾಡಿಕೊಂಡಿದ್ದು, ಸುರೇಂದ್ರ ರವರು ಹಿಂಬದಿ ಸಹ ಸವಾರನಾಗಿ ಕುಳಿತುಕೊಂಡಿದ್ದು  ಸಮಯ ಸುಮಾರು  08:45 ಗಂಟೆಗೆ ನೇಜಾರು ಮಸೀದಿಯಿಂದ ಸ್ವಲ್ಪ ಮುಂದೆ ಹೋಗುವಾಗ ಸುರಜ್  ಆಚಾರ್ಯ  ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾಗ ತಮ್ಮ ಮುಂದಿನಿಂದ ಹೋಗುತ್ತಿದ್ದ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೆ ಮೋಟಾರು ಸೈಕಲ್ ನ್ನು ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಸುರೇಂದ್ರ ರವರು ಹಾಗೂ ಸುರಜ್ ರಸ್ತೆಗೆ ಬಿದ್ದ  ಪರಿಣಾಮ ಸುರೇಂದ್ರ ರವರಿಗೆ ಬಲಕಾಲಿನ ಪಾದದ ಮಣಿಗಂಟಿನ ಮೇಲೆ ಮೂಳೆ ಮುರಿತ ಉಂಟಾಗಿರುತ್ತದೆ, ಸುರಾಜ್ ಗೆ ಯಾವುದೇ ಗಾಯ ಆಗಿರುವುದಿಲ್ಲ. ಗಾಯಗೊಂಡ ಸುರೇಂದ್ರ ಇವರನ್ನು ಸುರಜ್ ಆಚಾರ್ಯ ಹಾಗೂ ಅಫಘಾತ ಸ್ಥಳದಲ್ಲಿದ್ದ ಆಟೋ ಚಾಲಕ ಅಯುಬ್ ರವರು ಉಪಚರಿಸಿ, ಅಯುಬ್ ರವರ ಆಟೋ ರಿಕ್ಷಾ ದಲ್ಲಿ  ಉಡುಪಿ ಹೈಟೆಕ್ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಕೊಡಿಸಿ , ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿ ಈ ಅಫಘಾತಕ್ಕೆ KA-20-EB-2446 ನೇ ಮೋಟಾರು ಸೈಕಲ್ ಸವಾರ ಸುರಜ್ ಆಚಾರ್ಯ  ರವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆಯೆ ಕಾರಣವಾಗಿದರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 07/08/2021 ರಂದು ರಂದು ರಾತ್ರಿ  ಸುಮಾರು 9:45 ಗಂಟೆಗೆ, ಕುಂದಾಪುರ  ತಾಲೂಕಿನ ಆನೆಗಳ್ಳಿ ಗ್ರಾಮದ ದತ್ತಾಶ್ರಮ ಬಳಿ ರಸ್ತೆಯಲ್ಲಿ, ಆಪಾದಿತ ಶರಣ್ ಆಚಾರಿ ಎಂಬವರು KA-20-ES-0674ನೇ Honda ಸ್ಕೂಟರ್‌ನಲ್ಲಿ ಪಿರ್ಯಾದಿದಾರರಾದ ಪ್ರದೀಪ್‌ ಮೋಗವೀರ (22) ತಂದೆ ಗೋಪಾಲ ವಾಶ: ಶ್ರೀ ಬೆನಕಾ, ಹೆಬ್ಬಾರ್‌ಬೆಟ್ಟು, ಆನೆಗಳ್ಳಿ ಗ್ರಾಮ, ಕುಂದಾಪುರ ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸಾಲಿಗ್ರಾಮದಿಂದ ಮನೆಗೆ (ಆನೆಗಳ್ಳಿ) ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ರಸ್ತೆಗೆ ಅಡ್ಡ ಬಂದ ಜಾನುವಾರು (ಎತ್ತು) ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರದೀಪ್‌ ಮೋಗವೀರ ರವರ ಬಲಬುಜಕ್ಕೆ ಒಳಜಖಂ, ಹಾಗೂ ಬಲಬುಜಕ್ಕೆ ಮತ್ತು ಬಲ ಹಣೆಗೆ ತರಚಿದ ಗಾಯವಾಗಿದ್ದು, ಆಪಾದಿತನಿಗೆ ಎಡಹಣೆಗೆ, ಎಡಭುಜ, ಎಡಕೈ, ಬಲಕೈ ಹಾಗೂ ಬಲಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಆಪಾದಿತನು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರದೀಪ್‌ ಮೋಗವೀರ ರವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳ  ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 09/08/2021 ರಂದು ಬೆಳಿಗ್ಗೆ 08:40 ಘಂಟೆಗೆ ಪಿರ್ಯಾದಿದಾರರಾದ ಚಂದ್ರ (40) ತಂದೆ: ದಿವಂಗತ ಸುಂದರ ವಾಸ: ಪಳ್ಳಿ ಕೊಕೈಕಲ್  ಪಳ್ಳಿ ಗ್ರಾಮ ಕಾರ್ಕಳ ಇವರು ತನ್ನ  ಮೋಟಾರ್ ಸೈಕಲಿನಲ್ಲಿ ಬೈಲೂರು ಮಾರ್ಗವಾಗಿ ಕುಕ್ಕುಂದೂರು ಗ್ರಾಮದ ದುರ್ಗಾ ನಗರ ಬಳಿ ತಲುಪಿದ ಸಮಯ ಬೈಲೂರು ಕಡೆಯಿಂದ ಬಂದ ಬಸ್ಸಿನಿಂದ ದುರ್ಗಾನಗರ ಬಳಿ ಇಳಿದು ರಸ್ತೆ ದಾಟುತ್ತಿದ್ದ ಚಂದ್ರ ರವರ ಪರಿಚಯಸ್ಥರಾದ ಪಳ್ಳಿ ಗ್ರಾಮದ ನಾರಾಯಣ (61) ಎಂಬುವವರಿಗೆ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಸಾಗುತ್ತಿದ್ದ KA-20-EN-3492 ನೇ ಮೋಟಾರ್ ಸೈಕಲ್ ಸವಾರ ಕರುಣಾಕರ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಾರಾಯಣ ರವರಿಗೆ ಡಿಕ್ಕಿ ಹೊಡೆದ ಪರಿಣಾಮ  ನಾರಾಯಣ ರವರು ಡಾಮಾರು ರಸ್ತೆಗೆ ಬಿದ್ದು ಎಡಕಾಲು ಮತ್ತು ಎಡಕೈ ಹಾಗೂ ತಲೆಯ ಎಡಬದಿಗೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 11:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 97/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ಹರೀಶ್ ಆಚಾರ್ಯ (36), ತಂದೆ: ಸುಂದರ ಆಚಾರ್ಯ, ವಾಸ: ಶ್ರೀ ದುರ್ಗಾಪರಮೇಶ್ವರಿ, ಜೋಡುರಸ್ತೆ, ಕುಕ್ಕಂದೂರು ಗ್ರಾಮ, ಕಾರ್ಕಳ ಇವರ ತಂಗಿಯಾದ ಅರ್ಚನಾ (30) ಎಂಬವರು ದಿನಾಂಕ 25/03/2014 ರಲ್ಲಿ ಮದುವೆಯಾಗಿ ತನ್ನ ಗಂಡನ ಮನೆಯಾದ ಬ್ರಹ್ಮಾವರ ತಾಲೂಕು, 34ನೇ ಕುದಿ ಗ್ರಾಮದ, ಕಲ್‌ಗೋಳಿ ಎಂಬಲ್ಲಿ ತನ್ನ ಎರಡು ಮಕ್ಕಳೊಂದಿಗೆ ಗಂಡನ ಜೋತೆ ತುಂಬಾ ಅನ್ಯೋನತೆ ಇಂದ ವಾಸಮಾಡಿಕೊಂಡಿರುವುದಾಗಿದೆ. ಅರ್ಚನಾರವರಿಗೆ ಸುಮಾರು 15 ವರ್ಷಗಳಿಂದ ಉಬ್ಬಸ ಖಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದಾಗ ಉಬ್ಬಸ ಸ್ವಲ್ಪ ಕಮ್ಮಿಯಾಗಿರುತ್ತದೆ. ಉಬ್ಬಸ ಬಂದಾಗ ಅವರಿಗೆ  ಉಸಿರಾಡಲು ತುಂಬಾ ಕಷ್ಟ  ಆಗುತ್ತಿತ್ತು.  ದಿನಾಂಕ 09/08/2021 ರಂದು ಬೆಳಿಗ್ಗೆ 04:00 ಗಂಟೆಯ ಸಮಯಕ್ಕೆ ಅರ್ಚನಾರವರಿಗೆ ಉಬ್ಬಸ ಜಾಸ್ತಿಯಾಗಿದ್ದು  ಚಿಕಿತ್ಸೆ ಬಗ್ಗೆ ಅವರ ಗಂಡ ರಮೇಶ್ ಆಚಾರ್ಯ ರವರು ಅವರನ್ನು ರಿಕ್ಷಾದಲ್ಲಿ ಕರೆದುಕೊಂಡು  ಹತ್ತಿರದ ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 07:30 ಗಂಟೆ ಸುಮಾರಿಗೆ ಹೋದಾಗ ಅಲ್ಲಿಯ ವೈಧ್ಯರು ಇಲ್ಲದಿರುವುದರಿಂದ ಅದೇ ರಿಕ್ಷಾದಲ್ಲಿ ಬೆಳಿಗ್ಗೆ 10:05 ಗಂಟೆ ಸುಮಾರಿಗೆ ಬ್ರಹ್ಮಾವರ ಜೀವನ ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅರ್ಚನಾರವರನ್ನು ಪರೀಕ್ಷಿಸಿದ ವೈಧ್ಯರು ಅರ್ಚನಾ ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ.     ಅರ್ಚನಾರವರು ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು, ಉಬ್ಬಸ ಖಾಯಿಲೆ ಜಾಸ್ತಿಯಾಗಿ ಉಸಿರಾಡಲು ತೊಂದರೆಯಾಗಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿರುವುದಾಗಿದೆ, ಅಲ್ಲದೇ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 45/2021 ಕಲಂ: 174 ಸಿ.ಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ಪಿರ್ಯಾದಿದಾರರಾದ ಸುಧೀರ ಶೆಟ್ಟಿ (46), ತಂದೆ: ನಾರಾಯಣ ಶೆಟ್ಟಿ, ವಾಸ: ಮಲ್ಯಾಡಿ ರಸ್ತೆ, ತೆಕ್ಕಟ್ಟೆ ಇವರ ತಂದೆ ನಾರಾಯಣ ಶೆಟ್ಟಿ (78) ಇವರು ಪತ್ನಿಯ ಜೊತೆ ಕೊರ್ಗಿ ಗ್ರಾಮದ ನೂಜಿ ಎಂಬಲ್ಲಿ ಮೂಲಮನೆಯಲ್ಲಿ ವಾಸವಾಗಿದ್ದು, ಇವರು ವಯೋ ಸಹಜ ಮರೆವು, ಖಿನ್ನತೆ ಹಾಗೂ ಅಸೌಖ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09/08/2021 ರಂದು ಬೆಳಿಗ್ಗೆ 08:30 ಗಂಟೆಯಿಂದ ಬೆಳಿಗ್ಗೆ 09:40 ಗಂಟೆಯ ನಡುವೆ ಅವರ ಮನೆಯ ಬಳಿಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 09-08-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080