ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಕವಿತಾ ಆನಂದ ನೆವಣಿ, ಪ್ರಾಯ: 24 ವರ್ಷ, ಗಂಡ: ಆನಂದ ನೆವಣಿ, ವಾಸ: ಸುಳಖೋಡ ಗ್ರಾಮ,  ಬಸವನ ಬಾಗೇವಾಡಿ ತಾಲೂಕು, ಇವರು ಕಳೆದ ಏಳು ವರ್ಷಗಳಿಂದ ಉಡುಪಿ ಜಿಲ್ಲೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಸಲೀಂ ಸಾಹೇಬರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಅವರ ಜೊತೆ ಅವರ ಬಾವನ ಮಗನಾದ ಅಣ್ಣೇಶ್ (15 ವರ್ಷ) ನು ವಾಸವಾಗಿದ್ದು, ನಿನ್ನೆ ದಿನ ದಿನಾಂಕ:07.07.2022 ರಂದು ಸಂಜೆ ಮನೆಗೆ ಅಂಗಡಿಯ ಸಾಮಾನು ತರಲು ಉಚ್ಚಿಲ ಪೇಟೆಗೆ ಬಂದು ಸಮಯ ಸುಮಾರು 19:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯ ಬಲಬದಿಯಲ್ಲಿ ಉಚ್ಚಿಲದ ಸ್ಪೈಸ್ ಹೋಟೆಲ್ ಎದುರು ನಡೆದುಕೊಂಡು ಹೋಗುತ್ತಿರುವಾಗ KA-21-N-5519 ನೇ ನಂಬ್ರದ  ಕಾರು ಚಾಲಕ ಕಿಶೋರ್ ಸಾಲಿಯಾನ್ ಎಂಬಾತನು ತನ್ನ ಬಾಬ್ತು ಕಾರನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಣ್ಣೇಶ್ ನಿಗೆ ಡಿಕ್ಕಿ ಹೊಡೆದ ಪರಿಣಾಮ ಅಣ್ಣೇಶನು ರಸ್ತೆಗೆ ಬಿದ್ದು, ಆತನ ಎಡಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಅದೇ ಕಾರಿನಲ್ಲಿ ಚಿಕಿತ್ಸೆಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ ಪಿರ್ಯಾದು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಹರಣ ಪ್ರಕರಣ

  • ಶಿರ್ವಾ:  ಪಿರ್ಯಾದಿ ಅಮೀರ್‌ ಹಂಜ(55) ತಂದೆ: ದಿವಂಗತ ಪಿ ಅಬ್ದುಲ್ಲ. ವಾಸ:ಅಬ್ದುಲ್‌ ರಹಿಮಾನ್‌ ದರ್ಗಾ ರಸ್ತೆ, ಬೆಳಪು ಗ್ರಾಮ ಮತ್ತು ಅಂಚೆ. ಕಾಪು ಇವರ  ತಮ್ಮ ಅಬ್ದುಲ್‌  ಖಾದರ್‌ ವಿದೇಶದಲ್ಲಿದ್ದು ಆತನ ಹೆಂಡತಿ ಮಕ್ಕಳು ಕಳತ್ತೂರು ಸೂರ್ಯಗುಡ್ಡೆಯಲ್ಲಿ ವಾಸ್ತವ್ಯ ಇದ್ದಾರೆ. ದಿನಾಂಕ: 08.07.2022 ರಂದು ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ  ಪಿರ್ಯಾದಿದಾರರ ತಂಗಿ  ಜೌರಳ ಮನೆಯಿಂದ  ಸಾಹಿದ್‌ ಜೊತೆಯಲ್ಲಿ ಅಬ್ದುಲ್‌  ಖಾದರ್‌ನ ಮಗ ನೌಫಿಲ್‌(19) ಮೋಟಾರ್‌ ಸೈಕಲಿನಲ್ಲಿ ಬೆಳಪು ಮಸೀದಿಗೆ ಹೋಗುವುದಾಗಿ ಹೇಳಿ ಹೋಗಿರುತ್ತಾರೆ. ಸಾಹಿದ್‌ ಪಿರ್ಯಾದಿದಾರರ ತಂಗಿ ಜೌರಳ ಮನೆಗೆ  ಬಂದು ನೌಪೀಲ್‌ನನ್ನು ಪಣಿಯೂರು – ಬೆಳಪು ಮಾರ್ಗದ ಮದ್ಯೆ ಕಾರಿನಲ್ಲಿ  3 ರಿಂದ 4 ಜನ ಬಂದಿದ್ದು ಅದರಲ್ಲಿ ದಾವೂದ್‌ ಇಬ್ರಾಹಿಂ ಎಂಬವನು ಕಾರಿನಿಂದ ಇಳಿದು ಬಂದು ನೌಫಿಲ್‌ನನ್ನು ಕಾರಿನಲ್ಲಿ ಬಲವಂತವಾಗಿ ಕುಳ್ಳಿರಿಸಿ ಮದ್ಯಾಹ್ನ 1:15 ಗಂಟೆಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಕೊಂದು ಹಾಕುತ್ತೇನೆ ಎಂದು ಹೇಳಿದ ವಿಚಾರವನ್ನು ಜೌರಳ  ಗಂಡ ಜುಬೇರ ಇಸ್ಮಾಯಿಲ್‌  ಪಿರ್ಯಾದಿದಾರರಿಗೆ ತಿಳಿಸಿರುತ್ತಾನೆ. ನೌಪೀಲ್‌ನನ್ನು ಈತನಕ ಎಲ್ಲಾ ಕಡೆ ಹುಡುಕಾಡಿದ್ದು ಆತನು ಸಿಕ್ಕಿರುವುದಿಲ್ಲ.ನೌಪೀಲ್‌ನನ್ನು ದಾವೂದ್‌  ಇಬ್ರಾಹಿಂ ಎಂಬಾತನು ಆತನ ಸಂಗಡಿಗರೊಂದಿಗೆ ಕಾರಿನಲ್ಲಿ ಬಂದು ಪಣಿಯೂರು – ಬೆಳಪು ಮಾರ್ಗದ ಮದ್ಯೆ ಕಾರಿನಲ್ಲಿ ಬಲವಂತವಾಗಿ  ಕುಳ್ಳಿರಿಸಿ  ಅಪಹರಣ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  40/22, ಕಲಂ 363, 506, ಜೊತೆಗೆ 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

  • ಮಣಿಪಾಲ: ಪಿರ್ಯಾದಿ ವಿವೇಕ ಆರ್ ಗವಾಸ್  ಪ್ರಾಯ: 41 ವರ್ಷ    ತಂದೆ: ಶ್ರೀ ರಮೇಶ ಬಿ ಗವಾಸ ವಾಸ: ಮನೆ ನಂ: 183, ನಡೋರಾ ವಾರ್ಡ, ಕೋಲವಾಲೆ ಪೋಸ್ಟ್ , ಬ್ರಡ್ಜ್  ತಾಲೂಕು ಗೋವಾ  ಇವರು ಕೊಂಕಣ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ಟ್ರೇನ್ ನಂ: 16345 ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ದಿನಾಂಕ: 08.07.2022 ರಂದು ಕರ್ತವ್ಯದಲ್ಲಿರುವ  ಸಮಯ ಬೆಳಿಗ್ಗೆ  ಸುಮಾರು 03:20 ಗಂಟೆಗೆ ಪಿರ್ಯಾದಿದಾರರ ಸಹದ್ಯೋಗಿಯಾದ ಮಂಗಲದಾಸ್ ನಾಯ್ಕ್ ಪ್ರಾಯ: 51 ವರ್ಷ ಇವರಿಗೆ ತೀವ್ರವಾದ ಆಯಾಸ ಮತ್ತು ಕೈ ನೋವು ಕಾಣಿಸಿಕೊಂಡಿದ್ದು ಅವರು ವಿಶ್ರಾಂತಿಯನ್ನು ಪಡೆಯುತ್ತೇನೆಂದು ತಿಳಿಸಿ ಮಲಗಿದ್ದು ರೈಲು ಬೆಳಿಗ್ಗೆ 04:30 ಗಂಟೆಯ ಸಮಯಕ್ಕೆ ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣ ತಲುಪಿದಾಗ ಪಿರ್ಯಾದಿದಾರರು ಮಂಗಲದಾಸ್ ನಾಯ್ಕ್ ರವರನ್ನು ನೋಡಲಾಗಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಅವರನ್ನು ಚಿಕಿತ್ಸೆ ಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಮಂಗಲದಾಸ್ ನಾಯ್ಕ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 22/2022ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು್

  • ಕಾರ್ಕಳ : ಫಿರ್ಯಾದಿ ದಾಮೋದರ ಕೆ.ಬಿ  ಪೊಲೀಸ್ ಉಪ ನಿರೀಕ್ಷಕರು ಕಾರ್ಕಳ ನಗರ ಪೊಲೀಸ್ ಠಾಣೆ  ರವರು  ದಿನಾಂಕ 8.7.2022 ರಂದು ಸಂಜೆ 18.00 ಗಂಟೆಗೆ ಠಾಣಾ ಸಿಬ್ಬಂದಿಯವರಾದ ಪಿಸಿ 16 ಸಿದ್ಧರಾಯಪ್ಪ, ಪಿಸಿ 174 ಪ್ರತಾಪ್ ಮತ್ತು ಪಿಸಿ 2680 ಪ್ರಭು ಅಥಣಿ ಇವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ, ಸಾಣೂರು ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬವನ ಮನೆ ಮುಂದೆ ಶೀಟ್ ಹಾಕಿದ ಸ್ಥಳದಲ್ಲಿ ದನವನ್ನು ಕಡಿದು ಮಾಂಸ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಾಣೂರು ಸೇತುವೆ ಬಳಿ ಇರುವ ಅಬ್ದುಲ್ ರಹಿಮಾನ್ ರವರ ಮನೆ ಬಳಿ ದಾಳಿ ನಡೆಸಿದಾಗ ಮನೆ ಬಳಿ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಮಾಂಸವನ್ನು ತುಂಬಿ ತೂಕ ಮಾಡುತ್ತಿದ್ದು,  ಆತನು  ತನ್ನ ಸಂಬಂಧಿ ಲತೀಫ್ ಎಂಬವನಿಗೆ ಸೇರಿದ   ಗೂಡ್ಸ್‌ ವಾಹನ ನಂಬ್ರ  ಕೆಎ 19 ಸಿ 9168 ನೇಯದರಲ್ಲಿ ತಾನು ಹಾಗೂ ಸಾಣೂರು ನಿವಾಸಿಗಳಾದ ರಜಾಕ್ ಮತ್ತು ಷರೀಫ್ ಇವರೊಂದಿಗೆ 2 ದಿನದ ಹಿಂದೆ ರಾತ್ರಿ ಸಮಯ ಸಾಣೂರು ಗ್ರಾಮದ ಸಾಣೂರು ಗ್ರಾಮ ಪಂಚಾಯತ್‌ ಬಸ್‌ಸ್ಟ್ಯಾಂಡ್ ಬಳಿ ರಸ್ತೆಯ ಬದಿ ಮಲಗಿಕೊಂಡಿದ್ದ 1 ಕಪ್ಪು ಬಣ್ಣದ ಗಂಡು ದನವನ್ನು 1 ಕಂದು ಬಣ್ಣದ ಗಂಡು ದನವನ್ನುಹಾಗೂ ಇನ್ನೊಂದು ಕಪ್ಪು ಬಣ್ಣದ ಹೆಣ್ಣು ದನವನ್ನು ಹಿಡಿದು ಮಾಂಸ ಮಾಡುವ ಉದ್ದೇಶದಿಂದ  ಕಳವು ಮಾಡಿ, ಗೂಡ್ಸ್ ವಾಹನದಲ್ಲಿ ತುಂಬಿಸಿಕೊಂಡು  ಈ ದಿನ ಬೆಳಗ್ಗಿನ ಜಾವ 4.00 ಗಂಟೆಗೆ ಕಳವು ಮಾಡಿ ತಂದಿದ್ದ ಕಪ್ಪು ಬಣ್ಣದ ಗಂಡು ದನವನ್ನು ತಾನು ಷರೀಫ್‌ ಹಾಗೂ ರಜಾಕನು ಸೇರಿಕೊಂಡು ಮಾಂಸ ಮಾಡಿ  ಸುಮಾರು 27 ಕೆ.ಜಿ ತೂಕದ ಮಾಂಸ, ಅದರ ಅಂದಾಜು ಮೌಲ್ಯ  5400/-ರೂ, ದನವನ್ನು ಕಡಿಯಲು ಉಪಯೋಗಿಸಿದ  3 ಕಬ್ಬಿಣದ ಕತ್ತಿಯನ್ನು ಹಾಗೂ ದನದ ಮಾಂಸವನ್ನು ತೂಕ ಮಾಡಲು ಉಪಯೋಗಿಸಿದ ತೂಕದ ಮಾಫನವನ್ನು ಸ್ವಾಧೀನಪಡಿಸಿಕೊಂಡಿದ್ದು, ಕತ್ತಿಯ ಅಂದಾಜು ಮೌಲ್ಯ ರೂ. 100/- ಆಗಿದ್ದು,  ತೂಕದ ಮಾಫನದ ಅಂದಾಜು ಮೌಲ್ಯ ರೂ. 500/- ಆಗಿದ್ದು, ನಂತರ ದನವನ್ನು ಸಾಗಾಟ ಮಾಡಿದ ಗೂಡ್ಸ್ ವಾಹನ ನಂಬ್ರ ಕೆಎ 19 ಸಿ 9168  ನೇಯದನ್ನು ಸ್ವಾಧೀನಪಡಿಸಿಕೊಂಡು, ಈ ಗೂಡ್ಸ್‌ ವಾಹನದ ಅಂದಾಜು ಮೌಲ್ಯ 1.5 ಲಕ್ಷ ಆಗಬಹುದೆಂದು, ಕಳ್ಳತನ ಮಾಡಿದ  2 ದನದ ಅಂದಾಜು ಮೌಲ್ಯ ರೂ. 10,000/- ಆಗಿರುತ್ತದೆ. ಈ  ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ  96/2022 ಕಲಂ 379, 34  ಐಪಿಸಿ  ಮತ್ತು 4,5,7,12  The Karnataka Prevention of slaughter and preservation of cattle  Act 2020 & 11(1)(d) Prevention of cruelty to Animal Actಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 09-07-2022 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080