ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ರಾಮ ( 45), ತಂದೆ; ದಿ. ನಾಗ, ವಾಸ: ಆಶ್ರಯ ಕಾಲೋನಿ, ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರ ಮಗ ಸುಬ್ರಹ್ಮಣ್ಯ (25) ಎಂಬುವವರು  ಜೀವನದಲ್ಲಿ ಜಿಗುಪ್ಸೆಗೊಂಡು ಡೆತ್‌ ನೋಟ್‌ ಬರೆದುಕೊಂಡು ದಿನಾಂಕ 07/07/2021 ರಂದು ರಾತ್ರಿ 10:00 ಗಂಟೆಯಿಂದ 08/07/2021 ರಂದು ಬೆಳಿಗ್ಗೆ 8:00 ಗಂಟೆಯ ನಡುವೆ ಆಶ್ರಯ ಕಾಲೋನಿ ನಾರಾಯಣ ಎಂಬುವವರ ಕಾಟು ಮರದ ಹಾಡಿಯಲ್ಲಿರುವ ನೇರಳೆ ಮರದ ಕೊಂಬೆಗೆ ನೈಲನ್ ಹಗ್ಗವನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ನವ್ಯ (19), ತಂದೆ:: ಶ್ರೀಧರ್ ಮಯ್ಯ, ವಾಸ: ಕಾಮೇಶ್ವರ ದೇವಸ್ಥಾನ ವಠಾರ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತಂದೆ, ತಾಯಿಯೊಂದಿಗೆ ವಾಸವಾಗಿದ್ದು, ಅವರ ತಂದೆ ಶ್ರೀಧರ್ ಮಯ್ಯ (60)  ಎಂಬುವವರಿಗೆ ವಿಪರೀತ ಕಾಲು ನೋವು ಹಾಗೂ ಬಿಕ್ಕಳಿಕೆ ಸಮಸ್ಯೆ ಇರುತ್ತದೆ. ಅವರ ಸಮಸ್ಯೆ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿಯೇ ಇರುವುದಾಗಿದೆ. ದಿನಾಂಕ 08/07/2021 ರಂದು ಸಂಜೆ 5:15 ಗಂಟೆಗೆ ಶ್ರೀಧರ್ ಮಯ್ಯ ರವರು ಪಿರ್ಯಾದಿದಾರರಲ್ಲಿ ನನಗೆ ಕೋರ್ಟ್ ಕೇಸ್ ಇದೆ, ಚಿಕ್ಕಮಗಳೂರಿಗೆ ಹೊಗುತ್ತಿದ್ಧೇನೆ. ನಾಲ್ಕು ದಿನ ಬಿಟ್ಟು ಬರುತ್ತೇನೆ  ಎಂದು ಹೇಳಿ ಮನೆಯಲ್ಲಿಯೇ ಮೊಬೈಲ್ ಫೋನ್ ಬಿಟ್ಟು ಹೋಗಿರುತ್ತಾರೆ. ಆದರೆ ಸಂಜೆ 6:30 ಗಂಟೆಗೆ ಕಾಮೇಶ್ವರ ದೇವಸ್ಥಾನದ ಹೆಸರಿಗೆ ಶ್ರೀಧರ ಮಯ್ಯ ರವರು ಬರೆದ ಒಂದು ರಿಜಿಸ್ಟರ್ ಪತ್ರ ಬಂದಿದ್ದು, ಅದರಲ್ಲಿ ಶ್ರೀಧರ ಮಯ್ಯ ರವರು ನನ್ನ ಆರೋಗ್ಯ ತುಂಬಾ ಕೆಳಮಟ್ಟದಲ್ಲಿದೆ, ವಿಪರೀತ ಕಾಲು ನೋವು ಹಾಗೂ ವಿಪರೀತ ಬಿಕ್ಕಳಿಕೆಯಿಂದಾಗಿ  ಮನಸ್ಸಿಗೆ ಜಿಗುಪ್ಸೆಗೊಂಡು ನನಗೆ ಜೀವವೇ ಬೇಡವಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದಾಗಿ ದೇವಸ್ಥಾನದ ಅಧ್ಯಕ್ಷರು ಪಿರ್ಯಾದಿದಾರರಿಗೆ ಫೋನ್ ಮಾಡಿ ತಿಳಿಸಿರುತ್ತಾರೆ. ನಂತರ ಮನೆಯವರು ಹಾಗೂ ಗ್ರಾಮಸ್ಥರು ಸೇರಿ ಶ್ರೀಧರ್ ಮಯ್ಯ ರವರನ್ನು ಎಲ್ಲಾಕಡೆ ಹುಡುಕಾಡಿದ್ದಲ್ಲಿ ಅವರು ಪತ್ತೆ ಯಾಗದೇ ಇರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಉಡುಪಿ: ಆರೋಪಿ 1) ಅಶ್ವಿನ್‌ ಕೊರೆಯಾ ಇವರು ಪಿರ್ಯಾದಿದಾರರಾದ ರೋಷಲ್‌ಡಿ’ಕೋಸ್ಟಾ (32), ಗಂಡ: ಅಶ್ವಿನ್ ಕೊರೆಯಾ , ವಾಸ:  ಎ.ಕೆ ನಗರ , ಉದ್ಯಾವರ , ಕುತ್ಪಾಡಿ ಗ್ರಾಮ ಇವರ ಗಂಡನಾಗಿದ್ದು, 2) ಹಿಲರಿ  ಕೊರೆಯಾ,3) ಅನ್ನಿ  ಕೊರೆಯಾ ಇವರು  ಪಿರ್ಯಾದಿದಾರರ  ಅತ್ತೆ ಮಾವನಾಗಿರುತ್ತಾರೆ.  ದಿನಾಂಕ 02/05/2015 ರಂದು  ಪಿರ್ಯಾದಿದಾರರು ಮತ್ತು 1ನೇ ಆರೋಪಿಯು Mother of Sorrows Church  ನಲ್ಲಿ ಮದುವೆಯಾಗಿದ್ದು, ಮದುವೆಯ  ನಂತರ  ಪಿರ್ಯಾದಿದಾರರು ಸಂಸಾರಿಕ ಜೀವನದ ನಡೆಸಲು ಉದ್ಯಾವರದ ಎ.ಕೆ ನಗರ್ ಎಂಬಲ್ಲಿರುವ ಆಪಾದಿತರ ಮನೆಗೆ ಹೋದವರು , ನಂತರ 1ನೇ  ಆಪಾದಿತ  ಕೆಲಸ ಮಾಡುತ್ತಿರುವ  ಜಾಗಕ್ಕೆ 1 ನೇ ಆಪಾದಿತನೊಂದಿಗೆ  ಹೋಗಿ  ಸಂಸಾರ  ನಡೆಸಿ ವಾಪಾಸು ಉದ್ಯಾವರ ವಿಳಾಸಕ್ಕೆ ಬಂದು ಆಪಾದಿತರಾದ 2 ಮತ್ತು  3 ನೇಯವರೊಂದಿಗೆ ವಾಸಮಾಡಿಕೊಂಡಿರುತ್ತಾರೆ. ಈ ಸಮಯದಲ್ಲಿ ಆರೋಪಿ 1 ರಿಂದ 3 ನೇಯವರು ಪಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ  ಹಿಂಸೆ ನೀಡಿ ಹಣ ನೀಡುವಂತೆ  ಪೀಡಿಸುತ್ತಿದ್ದ ರು .ನಂತರದ ದಿನಗಳಲ್ಲಿ 1ನೇ ಆರೋಪಿ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ಅವ್ಯಾ ಚ್ಚ  ಶಬ್ಬಗಳಿಂದ ಬೈಯ್ಯುತ್ತಿದ್ದು  ಅಲ್ಲದೆ   ಪಿರ್ಯಾದಿದಾರರ  ಚಿನ್ನಾಭರಣ ತೆಗೆದಿರಿಸಿ ಅದನ್ನು ಅಡವಿರಿಸಿ  ಪೊಲೀಸ್ ಠಾಣೆ ದೂರು ನೀಡದಂತೆ ಬೆದರಿಕೆ ಹಾಕಿ,  ಊಟ ,ತಿಂಡಿ  ನೀಡದೆ ಮಲಗಲು ಬಿಡದೆ , ಹಿಂಸೆ  ನೀಡಿರುತ್ತಾನೆ. ದಿನಾಂಕ 20/02/2021 ರಂದು ರಾತ್ರಿ 9:00 ಗಂಟೆಗೆ ಆರೋಪಿತರು ಪಿರ್ಯಾದಿದಾರರಿಗೆ ಟೀಕೆ ಮಾಡಿ ಹೆಚ್ಚಿನ  ವರದಕ್ಷಿಣೆ  ಬೆಡಿಕೆ ಇಟ್ಟು ಹಲ್ಲೆ ನಡೆಸಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 498(A), 323,384,339, 504, 506 ಜೊತೆಗೆ 34  ಐಪಿಸಿ ಮತ್ತು ಕಲಂ 3 DP Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ಪಿರ್ಯಾದಿದಾರರಾದ ಗಣೇಶ ಶೆಟ್ಟಿ (51), ತಂದೆ : ದಿ. ದೇಜಪ್ಪ ಶೆಟ್ಟಿ, ವಾಸ : 92 ಹೇರೂರು ಸಾನದ ಮನೆ,  ಹೇರೂರು ಗ್ರಾಮ ಕಾಪು ತಾಲೂಕು ಇವರು ಬಂಟಕಲ್ಲಿನಲ್ಲಿ ಸಾಯಿಬಾಬಾ ಎಂಬ ಹೆಸರಿನ ಬೇಕರಿ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು, ಮಾಜಿ ಮಜೂರು ಪಂಚಾಯತ್ ಅಧ್ಯಕ್ಷನಾಗಿದ್ದು, ಅಂಗವಿಕಲರಾಗಿರುತ್ತಾರೆ. ದಿನಾಂಕ 08/07/2021 ರಂದು ರಾತ್ರಿ 9:00 ಗಂಟೆಗೆ ತನ್ನ ಬೇಕರಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ಹೊರಡಲು ಅಂಗಡಿಯ ಎದುರುಗಡೆ ನಿಂತುಕೊಂಡಿರುವಾಗ ಗುರುತು ಪರಿಚಯದ ಸ್ಟೀಫನ್ ಮೇಂಡೋನ್ಸಾಮತ್ತು ಚರಣ ಶೆಟ್ಟಿ ರವರು ಮೋಟಾರ್ ಸೈಕಲ್‌ನಲ್ಲಿ ಬಂದು ಏಕಾಏಕಿಯಾಗಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆ ಸಮಯ ಆಪಾದಿತರ ಪೈಕಿ ಸ್ಟೀಪನ್ ಮೆಂಡೋನ್ಸಾ ಈತನು ಈಗ ನಿನ್ನನ್ನು ರಕ್ಷಿಸಲು ಯಾರಿದ್ದಾರೆ ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಆ ಬಳಿಕ ಆಪಾದಿತರಾದ ಚರಣ ಶೆಟ್ಟಿ ಮತ್ತು ಸ್ಟೀಪನ್ ಮೆಂಡೋನ್ಸಾ ರವರು ಪಿರ್ಯಾದಿದಾರರಿಗೆ ಕೈಯಿಂದ ಕೆನ್ನೆಗೆ, ತಲೆಗೆ, ಬೆನ್ನಿಗೆ ಹೊಡೆದಿದ್ದು ಆ ಸಮಯ ಪಿರ್ಯಾದಿದಾರರು ಆಯ ತಪ್ಪಿ ನೆಲಕ್ಕೆ ಬಿದ್ದಾಗ ಆಪಾದಿತರು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿನಲ್ಲಿದ್ದ ಮಾರಕಾಸ್ತ್ರವನ್ನು ತೆಗೆದು ಹೊಡೆಯಲು ಬಂದಾಗ ಜೋರಾಗಿ ಬೊಬ್ಬೆ ಹೊಡೆದಾಗ ಸಾರ್ವಜನಿಕರು ಬಂದಿದ್ದು ಆ ಸಮಯ ಆಪಾದಿತರು ಪಿರ್ಯಾದಿದಾರರಿಗೆ ಜೀವ ಸಹಿತ ಬಿಡುವುದಿಲ್ಲ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 341, 504 ,323, 307, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 07/07/2021 ರಂದು ಪಿರ್ಯಾದಿದಾರರಾದ ಬೇಬಿ ಶೆಡ್ತಿ (48), ಗಂಡ: ಚಂದ್ರಶೇಖರ ಶೆಟ್ಟಿ, ವಾಸ:  ವಾಲ್ತೂರು ಕೊಕ್ಕೊಡು ಕಾವ್ರಾಡಿ ಗ್ರಾಮ ಹಾಗೂ ಮನೆಯವರು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಲು ತಯಾರಿ ನೆಡೆಸುತ್ತಿರುವಾಗ  11:00 ಗಂಟೆಗೆ  ಸಂಬಂಧಿಯಾದ ಆರೋಪಿ ಹರೀಶ ಶೆಟ್ಟಿ  ಪಿರ್ಯಾದಿದಾರರ ಮನೆಯ ಹೊರಗಿನ ಕಂಪೌಂಡ್ ಹಾರಿ ಒಳಗೆ ಬಂದು ಮಗ ಸುರೇಶ ರವರು ಮಲಗುವ ಕೋಣೆಯ ಬಳಿ ಬಂದು ಆರೋಪಿತನ ಕೈಯಲ್ಲಿದ್ದ  ಬ್ಯಾಟರಿಯ ಬೆಳಕನ್ನು ರೋಮಿನೊಳಗೆ ಹಿಡಿದು ಕಬ್ಬಿಣದ ರಾಡ್ ನಿಂದ ಬಾಗಿಲನ್ನು ಬಡಿದು ಸುರೇಶ ಹೊರಗಡ ಬಾ ಎಂದು ಅವಾಚ್ಯ ಶಬ್ದಿದಿಂದ ಬೈದು ಕೊಲ್ಲುವುದಾಗಿ ಬೆದರಿಕೆ ಹಾಕಿ ಕೂಗಾಡುತ್ತಿರುವ ಶಬ್ದ ಕೇಳಿ ಪಿರ್ಯಾದಿದಾರರು ಮನೆಯ ಹೊರಗೆ ಬಂದು ವಿಚಾರಿಸುವಾಗ ಪಿರ್ಯಾದಿದಾರರಿಗೆ ಹಾಗೂ ಇತರಿಗೆ ಬೈದು  ಕಲ್ಲನ್ನು ಎಸೆದು  ಮನೆಯಿಂದ ಹೊರಟು ಹೋಗುವಾಗ ಇತರ ಇಬ್ಬರೊಂದಿಗೆ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 447, 504, 506 (2) ಜತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 09-07-2021 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ