ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ರಂಜಿತ್ ಶೆಟ್ಟಿ (21) ತಂದೆ: ರಾಜು ಶೆಟ್ಟಿ, ವಾಸ: ಭಂಡಾರಿ ಮನೆ, ಬೇಳಂಜೆ ಗ್ರಾಮ, ಹೆಬ್ರಿ ತಾಲೂಕು. ಉಡುಪಿ ಇವರು ಹೇರೂರು ಗ್ರಾಮದಲ್ಲಿರುವ ಬ್ರಹ್ಮಾವರದಲ್ಲಿರುವ ಮಾನಸ ಬಾರ್ & ರೇಸ್ಟೋರೆಂಟ್ ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 08/07/2021 ರಂದು ಬಾರ್‌ನಲ್ಲಿ ಕೆಲಸ ಮುಗಿಸಿ ರಾತ್ರಿ ಸುಮಾರು 11:05 ಗಂಟೆಗೆ ರಂಜಿತ್ ಶೆಟ್ಟಿ ರವರು ಬಾರ್‌ನ ಹೊರಗೆ ಬಂದಾಗ ಬಾರ್‌ನ ಎದುರುಗಡೆ ಇರುವ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ ದಿಂದ ಉಡುಪಿಗೆ ಹೋಗುವ ಏಕಮುಖ ಸಂಚಾರದ ಡಾಂಬಾರು ರಸ್ತೆಯಲ್ಲಿ ಆರೋಪಿ ಕೆ. ಕಾದ್ರಿ ಬ್ಯಾರಿ ಎಂಬವರು ಅವರ KA-20-D-5222 ನೇ ನಂಬ್ರದ ಲಾರಿಯನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ, ಪಾರ್ಕಿಂಗ್ ಲೈಟ್ ಅಳವಡಿಸದೇ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ನಿರ್ಲಕ್ಷತನದಿಂದ ಸದ್ರಿ ಲಾರಿಯನ್ನುರಸ್ತೆಯ ಮಧ್ಯ ನಿಲ್ಲಿಸಿದ್ದು ಅದೇ ಸಮಯ ಪವನ್‌ನಾಯ್ಕ ಎಂಬವರು ಅವರ KA-20-ES-0479 ನೇ ನಂಬ್ರದ ಮೋಟಾರ್‌ ಸೈಕಲ್‌ನಲ್ಲಿ ಸಂದೇಶ್ ನಾಯ್ಕ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು  ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಸವಾರಿ ಮಾಡಿ ಕೊಂಡು ಬಂದು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದ ಸದ್ರಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಅಪಘಾತದಿಂದ    ಮೋಟಾರ್ ಸೈಕಲ್ ಸಮೇತ ಇಬ್ಬರೂ ರಸ್ತೆಗೆ ಬಿದ್ದು ಸವಾರ ಪವನ್ ನಾಯ್ಕ ಎಂಬವರ ತಲೆಗೆ ತೀವ್ರವಾದ ರಕ್ತಗಾಯವಾಗಿದ್ದು ಹಾಗೂ ಸಹಸವಾರ ಸಂದೇಶ್ ನಾಯ್ಕ ಎಂಬವರ ತಲೆಗೆ ತೀವ್ರ  ರಕ್ತಗಾಯವಾಗಿರುತ್ತದೆ. ಗಾಯಾಳು ಇಬ್ಬರನ್ನೂ ಕೂಡ ಚಿಕಿತ್ಸೆ ಬಗ್ಗೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ ಸಂದೇಶ್ ನಾಯ್ಕ ಎಂಬವರು ಮೃತ  ಪಟ್ಟಿರುವುದಾಗಿ ತಿಳಿಸಿದ್ದು, ಪವನ್ ನಾಯ್ಕ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 132/2021 ಕಲಂ: 279,  338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ವಂಚನೆ ಪ್ರಕರಣ

  • ಕುಂದಾಫುರ: ಆಪಾದಿತ ಸೀತಾರಾಮ್ ಎಂ, ತಂದೆ: ಕೃಷ್ಣ ಮೂರ್ತಿ ಎಂ, ಮೂಡಹಿತ್ತಲು,  ಕಮಲಶಿಲೆ ಗ್ರಾಮ, ಹಳ್ಳಿಹೊಳೆ ಅಂಚೆ, ಕುಂದಾಪುರ ತಾಲೂಕು ಇವರು ಬ್ರಾಹ್ಮಣ ಜಾತಿಯ ಉಪಪಂಗಡ ಮಾಲೇರು ಜಾತಿಗೆ ಸೇರಿದವರಾಗಿದ್ದು ದಿನಾಂಕ 26/12/1988 ರಂದು  ತಾನು ಪರಿಶಿಷ್ಟ ಪಂಗಡದ ಮಲೇರು ಜಾತಿಗೆ ಸೇರಿದವನೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿರುತ್ತಾರೆ. ಸದ್ರಿಯವರ ಜಾತಿ ಪ್ರಮಾಣಪತ್ರವು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಉಡುಪಿ ಜಿಲ್ಲೆರವರ ರವರ ಆದೇಶದಂತೆ ರದ್ದುಗೊಂಡಿರುತ್ತದೆ. ಆಪಾದಿತರು ಬ್ರಾಹ್ಮಣ ಜಾತಿಯ ಉಪಪಂಗಡ ಮಾಲೇರು ಜಾತಿಗೆ ಸೇರಿದವರೆಂದು ಗೊತ್ತಿದ್ದು ತಾನು ಪರಿಶಿಷ್ಟ ಪಂಗಡದ ಮಲೇರು ಜಾತಿಗೆ ಸೇರಿದವನೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದು ಸರ್ಕಾರಕ್ಕೆ ವಂಚಿಸಿರುವುದಾಗಿದೆ, ಎಂಬುದಾಗಿ ಡಿ.ಎನ್ ಕುಮಾರ್, ಪೊಲೀಸ್ ಉಪನಿರೀಕ್ಷಕರು, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಮಂಗಳೂರು ಇವರು ನೀಡಿದ ದೂರಿನಂತೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 87/2021  ಕಲಂ: 198, 420 ಐಪಿಸಿ ಮತ್ತು 3(1)(q) SC/ST (POA) Act-1989 ರಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ಶೃತನ್‌ರಾಜ್ ಶೆಟ್ಟಿ, (22), ತಂದೆ: ಶಾಂತರಾಜ್ ಶೆಟ್ಟಿ, ವಾಸ: ತಾವರೆಕೆರೆ ಮನೆ, ಬೆಣ್ಣೆಕದ್ರು, ಹಂದಾಡಿ ಗ್ರಾಮ, ಇವರ ತಂದೆ ಶಾಂತರಾಜ್ ಶೆಟ್ಟಿ (58) ರವರು ಸುಮಾರು 6 ವರ್ಷಗಳಿಂದ ಕಚ್ಚೂರು ನಾಗೇಶ್ವರ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗೇರು ಬೀಜ ಪ್ಲಾಟ್ ವಹಿಸಿಕೊಳ್ಳು ವ್ಯವಹಾರ ಮಾಡಿಕೊಂಡಿರುತ್ತಾರೆ.  ಅವರು ದಿನಾಂಕ 08/07/2021ರಂದು ಸಂಜೆ 6:15 ಗಂಟೆಗೆ ಉಪ್ಪೂರು ಗ್ರಾಮದ ಲಕ್ಷ್ಮೀ ಬಾರ್ ಬಳಿ ಕುಸಿದು ಬಿದ್ದು, ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಸಂಜೆ 6:45 ಗಂಟೆ ಸಮಯಕ್ಕೆ ಹೋದಾಗ ವೈಧ್ಯರು ಪರೀಕ್ಷಿಸಿ ಶಾಂತರಾಜ್ ಶೆಟ್ಟಿಯವರು ಅದಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದುದಾಗಿ ಶಾಂತರಾಜ್ ಶೆಟ್ಟಿರವರ ಅಣ್ಣ ಅಶೋಕ ರಾಜ್ ಶೆಟ್ಟಿ ರವರು ಪಿರ್ಯಾದಿದಾರರಿಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವಾ: ಪಿರ್ಯಾದಿದಾರರಾಧ ಮಂಜುನಾಥ (31) ತಂದೆ: ಈಶ್ವರ, ವಾಸ: ಮದ್ವ ಕಾಲೋನಿ, ಪಡುಬೆಳ್ಳೆ, ಬೆಳ್ಳೆ ಗ್ರಾಮ  ಕಾಪು ತಾಲೂಕು, ಉಡುಪಿ ಇವರ ತಂದೆ: ಈಶ್ವರ (53) ರವರು ಸುಮಾರು 20 ವರ್ಷಗಳಿಂದ ಟಿಬಿ ಕಾಯಿಲೆ ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು. ಈ ಬಗ್ಗೆ ಚಿಕಿತ್ಸೆ ಮಾಡಿಸಿದ್ದು, ಗುಣಮುಖವಾಗದೆ ಇದ್ದು, ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08/07/2021 ರಂದು ಬೆಳಿಗ್ಗೆ 11:30 ಗಂಟೆಯಿಂದ ಮಧ್ಯಾಹ್ನ 15:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಪಡಸಾಲಿನ ಮಾಡಿನ ಜಂತಿಗೆ ನೈಲಾನ್ ಸೀರೆ ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದ್ರಿಯವರ ಅಂಗಿಯ ಜೇಬಿನಲ್ಲಿ 1 ಪೇಪರ್‌ಇದ್ದು ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂಬುದಾಗಿ ಬರೆದಿರುತ್ತಾರೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾಧ ಗಣೇಶ್‌ ಶೆಟ್ಟಿ (51)ತಂದೆ: ದೇಜಪ್ಪ ಶೆಟ್ಟಿ, ವಾಸ: ಹೇರೂರು ಸಾನದ ಮನೆ, 92 ಹೇರೂರು ಗ್ರಾಮ, ಕಾಪು ಇವರು ಬಂಟಕಲ್ಲಿನಲ್ಲಿ ಸಾಯಿಬಾಬಾ ಎಂಬ ಹೆಸರಿನ ಬೇಕರಿ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು, ಮಾಜಿ ಮಜೂರು ಪಂಚಾಯತ್‌ ಅಧ್ಯಕ್ಷನಾಗಿದ್ದು, ಅಂಗವಿಕಲನಾಗಿರುತ್ತಾರೆ. ದಿನಾಂಕ 08/07/2021 ರಂದು ಸಮಯ ಸುಮಾರು ರಾತ್ರಿ 9:00 ಗಂಟೆಗೆ ತನ್ನ ಬೇಕರಿ ಅಂಗಡಿಯನ್ನು ಬಂದ್‌ಮಾಡಿ ಮನೆಗೆ ಹೊರಡುವರೇ ಅಂಗಡಿಯ ಎದುರುಗಡೆ ನಿಂತುಕೊಂಡಿರುವಾಗ ಗುರುತು ಪರಿಚಯದ ಸ್ಟೀಪನ್‌ ಮೆಂಡೋನ್ಸಾ ಮತ್ತು ಚರಣ ರವರು ಸಮಾನ ಉದ್ದೇಶದಿಂದ ಮೋಟಾರ್‌ಸೈಕಲ್‌ನಲ್ಲಿ ಬಂದು ಏಕಾಏಕಿಯಾಗಿ ಗಣೇಶ್‌ ಶೆಟ್ಟಿ ರವರನ್ನು ತಡೆದು ನಿಲ್ಲಿಸಿ ಆ ಸಮಯ ಆಪಾದಿತರ ಪೈಕಿ ಸ್ಟೀಪನ್‌ ಮೆಂಡೋನ್ಸಾ ಈತನು "ಈಗ ನಿನ್ನನ್ನು ರಕ್ಷಿಸಲು ಯಾರಿದ್ದಾರೆ ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಆ ಬಳಿಕ ಆಪಾದಿತರಾದ ಚರಣ ಮತ್ತು ಸ್ಟೀಪನ್‌ಮೆಂಡೋನ್ಸಾ ರವರು ಗಣೇಶ್‌ ಶೆಟ್ಟಿ ರವರಿಗೆ ಕೈಯಿಂದ ಕೆನ್ನೆಗೆ, ತಲೆಗೆ, ಬೆನ್ನಿಗೆ ಹೊಡೆದಿದ್ದು ಸದ್ರಿ ಸಮಯ ಗಣೇಶ್‌ ಶೆಟ್ಟಿ ರವರು ಆಯ ತಪ್ಪಿ ನೆಲಕ್ಕೆ ಬಿದ್ದಾಗ ಆಪಾದಿತರು ಇವರನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿನಲ್ಲಿದ್ದ ಮಾರಕಾಸ್ತ್ರವನ್ನು ತೆಗೆದು  ಹೊಡೆಯಲು ಬಂದಾಗ ಜೋರಾಗಿ ಬೊಬ್ಬೆ ಹೊಡೆದಾಗ ಸಾರ್ವಜನಿಕರು ಬಂದಿದ್ದು ಆ ಸಮಯ ಆಪಾದಿತರು ಗಣೇಶ್‌ ಶೆಟ್ಟಿ ರವರಿಗೆ ಜೀವಸಹಿತ ಬಿಡುವುದಿಲ್ಲ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಘಟನೆಗೆ ರಾಜಕೀಯ ದ್ವೇಷವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2021 ಕಲಂ: 341, 504, 323, 307, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಶಿರ್ವಾ: ಪಿರ್ಯಾದಿದಾರರಾದ ಜೋಕಿಮ್ ಸ್ಟೀಫನ್ ಮೆಂಡೋನ್ಸಾ (47) ತಂದೆ: ದಿ.ಪಾಸ್ಕಲ್ ಮೆಂಡೋನ್ಸಾ, ವಾಸ: ಜೆನಿಕಾ ವಿಲ್ಲಾ, ದುರ್ಗಾ ನಗರ,ಶಂಕರಪುರ ಅಂಚೆ, ಕುರ್ಕಾಲು ಗ್ರಾಮ,ಕಾಪು ಇವರು ತನ್ನ ಪರಿಚಯದ ಚರಣ್ ಶೆಟ್ಟಿಯವರೊಂದಿಗೆ ದಿನಾಂಕ 08/07/2021 ರಂದು ಸಂಜೆ 07:30 ಗಂಟೆಗೆ ತನ್ನ ಕ್ಯಾಂಟೀನ್ ಕೆಲಸ ಮುಗಿಸಿ ಹೊಸ ಟಿವಿಎಸ್ ಕಂಪೆನಿಯ ಮೋಟಾರು ಸೈಕಲ್ ನಲ್ಲಿ ಬಂಟಕಲ್ ಶಕ್ತಿ ಬಾರ್ ಗೆ ಹೋಗಿದ್ದು ಮದ್ಯಪಾನ ಸೇವಿಸಿ, ಊಟ ಮಾಡಿ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಬಾರ್ ನಿಂದ ಹೊರಟು ಚರಣ್ ಶೆಟ್ಟಿಯವರನ್ನು ಬಿಡುವರೇ ಹೋಗುವಾಗ ಅಲ್ಲಿಯೇ ಎದುರುಗಡೆ ಇರುವ ಸಾಯಿಬಾಬಾ ಬೇಕರಿ ಅಂಗಡಿಯ ಎದುರುಗಡೆ ಇದ್ದಾಗ  ಅಂಗಡಿ ಮಾಲಕನಾದ ಗಣೇಶ ಶೆಟ್ಟಿಯವರು  ಗುರಾಯಿಸಿ ತಡೆದು ನಿಲ್ಲಿಸಿದ್ದು, ಕೇಳಿದಾಗ ಗಣೇಶ ಶೆಟ್ಟಿರವರು ತನಗೂ ಚರಣ್ ಶೆಟ್ಟಿಗೂ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮಿಬ್ಬರನ್ನು ಕೊಲ್ಲದೇ  ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ, ಕೈಯಿಂದ ಜೋಕಿಮ್ ಸ್ಟೀಫನ್ ಮೆಂಡೋನ್ಸಾ ರವರ ಕೆನ್ನೆಗೆ,ಬೆನ್ನಿಗೆ ಹಾಗೂ ಚರಣ್ ಶೆಟ್ಟಿಯವರಿಗೆ ಕೂಡಾ ಕೈಯಿಂದ ಹೊಡೆದಿರುತ್ತಾರೆ. ಸದ್ರಿ ಸಮಯ ಜೋಕಿಮ್ ಸ್ಟೀಫನ್ ಮೆಂಡೋನ್ಸಾ ರವರು ಆಯಾ ತಪ್ಪಿ ನೆಲಕ್ಕೆ ಬಿದ್ದಿದ್ದು, ಪರಿಣಾಮ ಬಲ ಕಣ್ಣಿನ ಬಳಿ ತರಚಿದ ಗಾಯವಾಗಿದ್ದು,ಆ ಸಮಯ ಇತರ ಮೂರು ಜನ ಬಂದಿದ್ದು ಅವರು ಕೂಡಾ ಜೋಕಿಮ್ ಸ್ಟೀಫನ್ ಮೆಂಡೋನ್ಸಾ ರವರಿಗೆ ಮತ್ತು ಚರಣ್  ಶೆಟ್ಟಿಯವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಸದ್ರಿಯವರು ಗಣೇಶ ಶೆಟ್ಟಿಯವರ ಪರಿಚಯದವರಾಗಿದ್ದು ಮುಂದಕ್ಕೆ ಅವರನ್ನು ನೋಡಿದರೆ ಗುರುತಿಸುವುದಾಗಿ ನಂತರ  ಬೊಬ್ಬೆ ಹಾಕಿದಾಗ ಸಾರ್ವಜನಿಕರು ಬಂದಾಗ ಹಲ್ಲೆ ಮಾಡಿದವರು ಹೋಗಿರುತ್ತಾರೆ, ಈ ಘಟನೆಗೆ ಈ ಹಿಂದಿನ ಗಲಾಟೆ ವಿಚಾರವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2021 ಕಲಂ: 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-07-2021 09:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080