ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವೆಂಕಟೇಶ ಖಾರ್ವಿ (38), ತಂದೆ: ರಾಮ ಖಾರ್ವಿ, ವಾಸ: ಎರಡು ತಲೆ ಮನೆ ಕೊಡೇರಿ ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಹಾಗೂ ಅವರ ಬಾವ ಬಚ್ಚ ಯಾನೆ ಭಾಸ್ಕರ ಖಾರ್ವಿಯವರು ದಿನಾಂಕ 08/06/2022 ರಂದು ಸಂಬಂಧಿ ಮರವಂತೆಯ ಮಂಜುನಾಥ ಖಾರ್ವಿಯವರ ಮಗನ ಮದುವೆಗೆ ಹೊರಟಿದ್ದು, ಪಿರ್ಯಾದಿದಾರರು ಅವರ ಮೋಟಾರ್ ಸೈಕಲ್ ನಲ್ಲಿ, ಅವರ ಬಾವ ಬಚ್ಚ ಯಾನೆ ಭಾಸ್ಕರ ಖಾರ್ವಿಯವರು ಅವರ ಮೋಟಾರ್ ಸೈಕಲ್ ನಂಬ್ರ KA-20-EP-4207 ನೇದರಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಬದಿಯ ರಸ್ತೆಯಲ್ಲಿ ಬೆಳಿಗ್ಗೆ 7:00 ಗಂಟೆಗೆ ನಾವುಂದ ಮಸ್ಕಿ ಬಳಿ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರಿನಿಂದ  ಮರವಂತೆ ಕಡೆಯಿಂದ ನಾಗೂರು ಕಡೆಗೆ ಏಕಮುಖ ರಸ್ತೆಯಲ್ಲಿ ವಿರುದ್ದ ಧಿಕ್ಕಿನಲ್ಲಿ KA-20-AA-6633ನೇ ಟಾಟಾ ಏಸ್ ವಾಹನದ ಚಾಲಕನು ಆತನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಬಚ್ಚ ಯಾನೆ ಭಾಸ್ಕರ ಖಾರ್ವಿಯವರ ಮೋಟಾರ್ ಸೈಕಲ್ ಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಎದೆಗೆ ಮತ್ತು ತಲೆಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಪಿರ್ಯಾದಿದಾರರು ಎತ್ತಿ ಉಪಚರಿಸಿ, ಒಂದು ರಿಕ್ಷಾದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ, ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 279,337 ಐಪಿಸಿ ಮತ್ತು 218 ಜೊತೆಗೆ 177 ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಪ್ರಜ್ವಲ್ (25), ತಂದೆ: ಉಮೇಶ ದೇವಾಡಿಗ, ವಾಸ: ಶ್ರೀರಾಮ್ ನಿವಾಸ ಚಿಟ್ಪಾಡಿ 76 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಅಜ್ಜ ರಾಮ ಶೇರಿಗಾರ ರವರು ದಿನಾಂಕ 07/06/2022 ರಂದು KA-20-X-8553 ನೇ ಸ್ಕೂಟರನಲ್ಲಿ ಪತ್ನಿ ಪದ್ಮವತಿಯವರನ್ನು ಹಿಂಬದಿ ಕುಳ್ಳಿರಿಸಿಕೋಂಡು ಕಡಿಯಾಳಿ ಯಿಂದ ಕಟ್ಟೆ ಆಚಾರ್ಯ ಮಾರ್ಗವಾಗಿ ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 01 00 ಗಂಟೆಗೆ  ಶ್ರೀಕೃಷ್ಣ ಕಸ್ತೂಭ  ಆಪಾರ್ಟ್ಮೆಂಟ್ ಬಳಿ ಶಾರದ ನಗರ ರಸ್ತೆಯ ತಿರುವಿನಲ್ಲಿ ಪಿರ್ಯಾದಿದಾರರ ಅಜ್ಜ  ರಾಮಶೇರಿಗಾರ ರವರು  ತೀರಾ ರಸ್ತೆಯ ಎಡ ಅಂಚಿಗೆ ಹೋಗಿ ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಆ ಸಮಯ ರಾಮ ಶೇರಿಗಾರ ರವರಿಗೆ ಕುತ್ತಿಗೆಗೆ ಗುದ್ದಿದ್ದ ಒಳನೋವಾಗಿರುತ್ತದೆ. ಈ ಬಗ್ಗೆ ಕೆಎಂಸಿ ಅಸ್ಪತ್ರೆ ಮಣಿಪಾಲದಲ್ಲಿ ಒಳರೋಗಿಯಾಗಿ ಚಿಕೆತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮನ್ಸೂರ್  ಅಹಮದ್ (56), ತಂದೆ:  ಇಸಾಕ್ ಸಾಹೇಬ್, ವಾಸ: 2-86-(1) 76 ಬಡಗುಬೆಟ್ಟು ಇಂದಿರಾನಗರ 1 ನೇ ಕ್ರಾಸ್ ಉಡುಪಿ ತಾಲೂಕು ಇವರು KA-20-EW-3563 ನೇ ಸ್ಕೂಟರ್ ನಲ್ಲಿ ಕನ್ನರ್ ಪಾಡಿಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ 9:15 ಗಂಟೆಗೆ ಉಡುಪಿ ಕಿನ್ನಿಮುಲ್ಕಿ  ಕನ್ನರ್ ಪಾಡಿ ರಸ್ತೆಯಲ್ಲಿರುವ ಸ್ವಾಗತ ಗೋಪುರದ  ಬಳಿ ತಲುಪುವಾಗ ಅಂಬಲಪಾಡಿ ಕಡೆಯ ಸರ್ವಿಸ್ ರಸ್ತೆಯಿಂದ  KA-20-ED-0910 ಸ್ಕೂಟರ್ ಸವಾರ  ರೋಷನ್  ಶೆಟ್ಟಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮನ್ಸೂರ್ ಅಹಮದ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಎಡ ಕಾಲಿಗೆ ಹಾಗೂ ಎಡ ಕೈ   ಮೂಳೆ ಮುರಿತ ಉಂಟಾಗಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕೋಟ: ಫಿರ್ಯಾದಿದಾರರಾದ ಉದಯ (40), ತಂದೆ: ಗೋವಿಂದ,  ವಾಸ: ಗುಳ್ಳಾಡಿ, ಬೇಳೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಅಕ್ಕನ ಮಗ ಸೃಜನ್ ಸುಮಾರು 2-3 ದಿನಗಳಿಂದ ಪಿರ್ಯಾದಿದಾರರಿಗೆ ಪೇಟೆಯಲ್ಲಿ ಸಿಕ್ಕಾಗ ಕೊಲೆ ಬೆದರಿಕೆ ಹಾಕುತ್ತಿದ್ದು, ದಿನಾಂಕ 07/06/2022 ರಂದು ಸಂಜೆ 6:15 ಗಂಟೆಗೆ ಪಿರ್ಯಾದಿದಾರರು ಪೇಟೆಗೆ ಹೋಗಿ ವಾಪಾಸ್ಸು ಬರುವಾಗ ಪಿರ್ಯಾದಿದಾರರ ಮನೆಯ ಎದುರು ಆಪಾದಿತ ಪಿರ್ಯಾದಿದಾರರನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಆಗ ಪಿರ್ಯಾದಿದಾರರು ಸೃಜನ್ ಬಳಿ ಏನು ಮಾತನಾಡದೇ ಮನೆಗೆ ಹೋಗಿರುತ್ತಾರೆ. ಅದೇ ದಿನ ರಾತ್ರಿ 10:45 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ಸೃಜನ್ ಕೈನಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದಲೇ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ತಲೆಗೆ ತೀವ್ರ ಸ್ವರೂಪದ ರಕ್ತಗಾಯ ಮಾಡಿರುವುದಲ್ಲದೇ, ಎಡಕಾಲಿನ ಪಾದದ ಮೊಣಗಂಟಿಗೆ ರಾಡ್ ನಿಂದ ಹೊಡೆದು ಮೂಳೆ ಮುರಿತದ ಗಾಯವನ್ನುಂಟು ಮಾಡಿರುತ್ತಾನೆ. ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಸೃಜನ್ ಪಿರ್ಯಾದಿದಾರರ ಮನೆಯ ಡೈನಿಂಗ್ ಟೇಬಲ್ ನ್ನು ರಾಡ್ ನಿಂದ ಹೊಡೆದು ಹುಡಿ ಮಾಡಿ ಮನೆಯ ಹೊರಗಿನ ಮಾಡಿನ ಶೀಟ್‌ನ್ನು ಹೊಡೆದು  ಹುಡಿ ಮಾಡಿರುತ್ತಾನೆ . ಪಿರ್ಯಾದಿದಾರರಿಗೆ ಸೃಜನ್ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದರಿಂದ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2022 ಕಲಂ:341, 448, 427, 307, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ : ದಿನಾಂಕ 07/06/2022 ರಂದು ಸಂಜೆ 7:30 ಗಂಟೆಯ ಸಮಯಕ್ಕೆ  ಪಿರ್ಯಾದಿದಾರರಾದ ಶ್ರೀಮತಿ ವನಜ (54), ಗಂಡ: ನಾರಾಯಣ, ವಾಸ: ಗುಳ್ಳಾಡಿ ರೈಸ್ ಮಿಲ್ ಬಳಿ  ಬೇಳೂರು ಗ್ರಾಮ ಕುಂದಾಪುರ ತಾಲೂಕು ಮತ್ತು ಅವರ ಗಂಡ  ಮನೆಯಲ್ಲಿರುವಾಗ  ಮನೆಯ ಪಕ್ಕದಲ್ಲಿ ವಾಸವಾಗಿರುವ ತಮ್ಮ ಉದಯ ಎಂಬಾತ ಏಕಾಏಕಿ ಕೈಯಲ್ಲಿ ಕತ್ತಿ ಹಿಡಿದುಕೊಂಡು ಪಿರ್ಯಾದಿದಾರರ  ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಪಿರ್ಯಾದಿದಾರರ ರಟ್ಟೆಯನ್ನು ಹಿಡಿದು ಮನೆಯ ಹೊರಗಡೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ  ಪಿರ್ಯಾದಿದಾರರ ಗಂಡ  ಗಲಾಟೆಯನ್ನು ತಪ್ಪಿಸಲು ಬಂದಾಗ  ಉದಯನು  ಪಿರ್ಯಾದಿದಾರರ ಗಂಡನನ್ನು  ದೂಡಿ ಕಾಲಿನಿಂದ  ತುಳಿದಿರುತ್ತಾನೆ. ಪಿರ್ಯಾದಿದಾರರ ಬೆನ್ನಿಗೆ ಕೈಯಿಂದ ಬಲವಾಗಿ ಹೊಡೆದಿರುತ್ತಾನೆ. ಕೂಗಿಕೊಂಡಾಗ ಉದಯನು ಮನೆಯ ಕಿಟಕಿಯ ಗಾಜುಗಳನ್ನು  ಕತ್ತಿಯಿಂದ ಒಡೆದಿರುತ್ತಾನೆ. ಪಿರ್ಯಾದಿದಾರರನ್ನು ಉದ್ದೇಶಿಸಿ ಇದು ನಮ್ಮ ಮನೆ ನೀವು ಮನೆಯನ್ನು ಖಾಲೀ ಮಾಡದೇ ಇದ್ದರೆ ಪುನಃ ಬಂದು ನಿಮ್ಮನ್ನು  ಇದೇ ಕತ್ತಿಯಿಂದ  ಕಡಿಯುತ್ತೇನೆಂದು  ಹೇಳಿ ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: 447 , 427 , 354, 504, 506(2) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
      

ಇತ್ತೀಚಿನ ನವೀಕರಣ​ : 09-06-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080