ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ವೀರಭದ್ರ ದೇವಾಡಿಗ (52), ತಂದೆ: ಪುಟ್ಟ ದೇವಾಡಿಗ, ವಾಸ: ಪಡುವಾಯನ ಮನೆ, ಕಂಬದಕೋಣೆ ಗ್ರಾಮ, ಬೈಂದೂರು ತಾಲೂಕು ಇವರ ಸಹೋದರ ಅಳಿಯ ಮಂಜುನಾಥ ದೇವಾಡಿಗ(38) ಇವರು ದಿನಾಂಕ 06/06/2022 ರಂದು ಬೆಳಿಗ್ಗೆ 6:00 ಗಂಟೆಗೆ ತಾಯಿಯಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ರಾತ್ರಿ 8:00 ಗಂಟೆಯ ತನಕ ಮನೆಗೆ ವಾಪಾಸು ಬಾರದೇ ಇದ್ದು ವಿಷಯ ತಿಳಿದ ಪಿರ್ಯಾದಿದಾರರು ಆತನ ದೂರವಾಣಿ ಸಂಖೈಗೆ ದೂರವಾಣಿ ಕರೆ ಮಾಡಿದಲ್ಲಿ ಕರೆಯನ್ನು ಸ್ವೀಕರಿಸಿರುವುದಿಲ್ಲ. ನಂತರ ಅವರ ಹೆಂಡತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಲ್ಲಿ  ಮನೆಗೆ  ಬಂದಿರುವುದಿಲ್ಲವಾಗಿ ತಿಳಿಸಿದ್ದು, ಪಿರ್ಯಾದಿದಾರರು ಹಾಗೂ ಮನೆಯವರೆಲ್ಲರೂ ಮಂಜುನಾಥನನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ 09/06/2022 ರಂದು 7:45 ಗಂಟೆಗೆ ಪಿರ್ಯಾದಿದಾರರ ಪರಿಚಯದ ಸುರೇಶ್ ದೇವಾಡಿಗ ರವರು ದೂರವಾಣಿ ಕರೆ ಮಾಡಿ ಕೆರ್ಗಾಲ್ ಗ್ರಾಮದ  ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಬದಿಯ ಖಾಲಿ ಜಾಗದಲ್ಲಿ ಒಂದು ಮೃತ ದೇಹ ಇರುವ ಬಗ್ಗೆ ತಿಳಿಸಿದ ಮೇರೆಗೆ  ಸ್ಥಳಕ್ಕೆ ಹೋಗಿ ನೋಡಿದಲ್ಲಿ ಮೃತ ದೇಹವು ಪಿರ್ಯಾದಿದಾರರ ಅಳಿಯ ಮಂಜುನಾಥ ದೇವಾಡಿಗ ರವರ ಮೃತ ದೇಹವಾಗಿರುತ್ತದೆ.  ಮಂಜುನಾಥ ದೇವಾಡಿಗ ರವರು ದಿನಾಂಕ 06/06/2022 ರಂದು ಬೆಳಿಗ್ಗೆ 6:00 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವರು ವಾಪಾಸ್ಸು ಬಾರದೇ ಇದ್ದು ಕೆರ್ಗಾಲ್ ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಬದಿಯ  ಖಾಲಿ ಜಾಗದಲ್ಲಿ ಬಿದ್ದಿದ್ದು ಬಿದ್ದಿದ್ದು  ಆತನ ಮರಣದಲ್ಲಿ ಅನುಮಾನವಿರುವುದಾಗಿ ನೀಡಿದ ದೂರಿನಂತೆ  ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2022 ಕಲಂ: 174 (ಸಿ) ಸಿ.ಆರ್ .ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಾಣೆ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಶಕುಂತಳಾ (40), ಗಂಡ: ಬಸವರಾಜ್, ವಾಸ: ಬಸವರಾಜ್ ನಿಲಯ ಭಕ್ರೆ ಮುದ್ರಾಡಿ, ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರ ಗಂಡ  ಬಸವರಾಜ್ (48) ರವರು ದಿನಾಂಕ 22/05/2022 ರಂದು ಬೆಳಿಗ್ಗೆ 08:30 ಗಂಟೆಗೆ ಮುದ್ರಾಡಿ ಗ್ರಾಮದ ಭಕ್ರೆ ಎಂಬಲ್ಲಿರುವ ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಸುನೀತಾ ಮಡಿವಾಳ (25), ಗಂಡ: ಶಿವಾನಂದ ಮಡಿವಾಳ , ವಾಸ:ಶ್ರೀ ಕೃಷ್ಣ ನಿಲಯ, ಪೊಸಾರು, ಕಟಪಾಡಿ,ಮೂಡಬೆಟ್ಟು ಗ್ರಾಮ ಇವರು ಮನೆವಾತೆ೯ ಕೆಲಸ ಮಾಡಿಕೊಂಡಿದ್ದು, ದಿನಾಂಕ 06/05/2018 ರಂದು ತನ್ನ ಸಂಬಂದಿ ಶಿವಾನಂದ ಎಂಬುವವರ ಜೊತೆ ಜಟ್ಟಿಗೇಶ್ವರ ದೇವಸ್ಥಾನ ಹಿರೇರೂಗಿ, ಇಂಡಿ ತಾಲೂಕು  ಬಿಜಾಪುರ ಜಿಲ್ಲೆ ಇಲ್ಲಿ ಮದುವೆಯಾಗಿರುತ್ತಾರೆ, ಮದುವೆಯ ಬಳಿಕ ಪಿರ್ಯಾದದಿದಾರರು ತನ್ನ ಗಂಡನ ಮನೆಯಾದ ಹಿರೇರೂಗಿಯಲ್ಲಿಯೇ ಗಂಡ ಮತ್ತು ಆತನ ಮನೆಯವರೊಂದಿಗೆ ಎರಡು ವಷ೯ ವಾಸವಾಗಿದ್ದರು. ತನ್ನ ಗಂಡ ಹಾಗೂ ಆತನ ಮನೆಯವರು ಮದುವೆಯಾದ ಎರಡು ತಿಂಗಳು ಪಿರ್ಯಾದಿದಾರರೊಂದಿಗೆ ಒಳ್ಳೆಯ ರೀತಿಯಿಂದ ಇದ್ದು ನಂತರ  ಸಣ್ಣ ಸಣ್ಣ ವಿಷಯಕ್ಕೂ ತಕರಾರು ಮಾಡುತ್ತಿದ್ದರು, ಪಿರ್ಯಾದಿದಾರರು ಮದುವೆಯಾದ ಬಳಿಕ ಮೂರು ಸಲ ಗಭಿ೯ಣಿಯಾಗಿದ್ದು, ಮೂರು ಬಾರಿಯೂ ಮನೆಯಲ್ಲಿ ವಿಪರೀತ ಮನೆ ಕೆಲಸವಿದ್ದುದರಿಂದ ವಿಪರೀತ ರಕ್ತಸ್ರಾವವಾಗಿ ಗರ್ಭಪಾತವಾಗಿರುತ್ತದೆ. ಗರ್ಭಪಾತವಾದ ಸಮಯದಲ್ಲಿ ಪಿರ್ಯಾದಿದಾರ ರ ಗಂಡ  ಶಿವಾನಂದ ಮಡಿವಾಳನು ಆತನ ಬಳಿ ಹಣವಿಲ್ಲವೆಂದು ಹೇಳಿ ಯಾವುದೇ ಚಿಕಿತ್ಸೆಯನ್ನು ಕೊಡಿಸಿರುವುದಿಲ್ಲ. ಪಿರ್ಯಾದಿದಾರರು  ತನ್ನ ತಾಯಿಮನೆ ಕಟಪಾಡಿಗೆ ಹೋಗುತ್ತೇನೆಂದು ಹೇಳಿದಾಗ ಅವರ ಗಂಡ ಮತ್ತು ಗಂಡನ ತಾಯಿ ಸಾವಿತ್ರಿ ಅವಾಚ್ಯ ಶಬ್ದಗಳಿಂದ ಬೈದು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಬಿಡದೇ ಮನೆಯ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಒಂದು ವಾರ ಕಳೆದ ನಂತರ  ತಾಯಿ ರುಕ್ಮೀಣಿರವರು ತಾಯಿ ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಪಿರ್ಯಾದಿದಾರರು  ತಾಯಿ ಮನೆಗೆ ಬಂದಾಗ ಶಿವಾನಂದ ಮಡಿವಾಳ ಮೂಡಬೆಟ್ಟಿನ ಪೊಸಾರಿನ ಪಿರ್ಯಾದಿದಾರ ರ ತಾಯಿ ಮನೆಗೆ ಬಂದು ಒಂದು ವಾರ ಇದ್ದು ಆ ಸಮಯದಲ್ಲೂ ಸಣ್ಣ ಸಣ್ಣ ವಿಷಯಕ್ಕೆ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಕೊಡುತ್ತಿದ್ದು, ನಂತರ ಪಿರ್ಯಾದಿದಾರರು ಹಾಗೂ ಅವರ ಗಂಡ ತನ್ನ ತಾಯಿ ಮನೆಯ ಹತ್ತಿರವೇ ಬಾಡಿಗೆ ಮನೆ ಮಾಡಿ ಅವರಿಬ್ಬರೂ ಬಾಡಿಗೆ ಮನೆಯಲ್ಲಿ  ವಾಸ ಮಾಡಿಕೊಂಡಿದ್ದು, ಆ ಸಮಯದಲ್ಲಿಯೂ ತನ್ನ ಗಂಡ ಪ್ರತಿದಿನ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಿಂಸೆ ನೀಡುತ್ತಿದ್ದನು.  ಅಲ್ಲದೇ ಈ ವಿಷಯ ನಿನ್ನ ಮನೆಯವರಿಗೆ  ಹೇಳಿದರೇ ನಿನ್ನನ್ನು ಕೋಲ್ಲುತ್ತೇನೆ ಎಂದು ಬೆದರಿಸಿರುತ್ತಾನೆ. ನಾಲ್ಕು ದಿನ ಬಿಟ್ಟು ಬರುವುದಾಗಿ ತಿಳಿಸಿ ಹೋಗಿದ್ದು ಬಳಿಕ ಮರಳಿ ಬಂದಿರುವುದಿಲ್ಲ. ಅಲ್ಲದೇ ಊರಿಗೆ ಹೋದವನು ವಾಪಾಸು ಬಾರದೇ ಇದ್ದು, ಇದುವರೆಗೂ ತನ್ನ ಗಂಡ ತನ್ನನ್ನು ಕರೆದುಕೊಂಡು ಹೋಗದೇ ಇದ್ದುದರಿಂದ  ಗಂಡನೊಂದಿಗೆ ಮುಂದಕ್ಕೆ ಜೀವನ ನೆಡೆಸಲು ಕಷ್ಟವಾಗುತ್ತಿದ್ದು ಗಂಡ ಶಿವಾನಂದ ಮಡಿವಾಳ ಮತ್ತು ಗಂಡನ ತಾಯಿ ಸಾವಿತ್ರಿರವರು ಮಾನಸಿಕ ಕಿರುಕುಳ ನೀಡಿ ತೊಂದರೆ ನೀಡುತ್ತಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ:  498 (ಎ), 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 09/06/2022 ರಂದು ರವಿ ಕುಮಾರ್,  ಸಹಾಯಕ ಪೊಲೀಸ್  ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು  ಠಾಣಾ ಅರ್ಜಿ ತನಿಖೆಗೆಂದು ಮೋಟಾರು ಸೈಕಲ್ ನಲ್ಲಿ ಕೋಟ ಮೂರಕೈ ಕಡೆಯಿಂದ ಸಾಹೈಬರಕಟ್ಟೆ ಕಡೆಗೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಬ್ರಹ್ಮಾವರ ತಾಲ್ಲೂಕು ವಡ್ಡರ್ಸೆ ಗ್ರಾಮದ ರೈಲ್ವೆ ಬ್ರೀಜ್ ಸಮೀಪ 15:30 ಗಂಟೆಗೆ  ರಸ್ತೆಯ ಬದಿಯಲ್ಲಿ  ಒಂದು ಮೋಟಾರು ಸೈಕಲ್‌ನಿಂತಿದ್ದು ಅದರ ನೊಂದಣಿ ನಂಬ್ರ ನೋಡಲಾಗಿ ನಂಬರ್ ಪ್ಲೇಟ್ ಇರುವುದಿಲ್ಲ. ಹಾಗೂ ಮೋಟಾರು ಸೈಕಲ್ ಬಳಿ ಇಬ್ಬರು ವ್ಯಕ್ತಿಗಳನ್ನು  ಕಂಡು ಅನುಮಾನಸ್ಪದವಾಗಿ ಕಂಡುಬಂದ  ಮೇರೆಗೆ ಮೋಟಾರು ಸೈಕಲ್‌ ಬಳಿ ನಿಂತಿದ್ದವರಲ್ಲಿ ಮೋಟಾರು ಸೈಕಲ್  ದಾಖಲಾತಿಯನ್ನು ಪರಿಶೀಲನೆಗೆ ಹಾಜರುಪಡಿಸಲು ತಿಳಿಸಿದಾಗ ಯಾವುದೇ ದಾಖಲಾತಿಯನ್ನು ಹಾಜರುಪಡಿಸದೇ ಇರುವುದರಿಂದ ಅವರಿಬ್ಬರನ್ನು ಪುನ: ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ತಾವು ಮೋಟಾರು ಸೈಕಲ್ ನ್ನು ಹತ್ತು ದಿನಗಳ ಹಿಂದೆ ಬ್ರಹ್ಮಾವರದ ಹೇರಾಡಿ ಬಳಿ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ.  1.ಶಂಕರ ಗೌಡ (23), ತಂದೆ:ಯಲ್ಲನ ಗೌಡ, ವಾಸ:ಚಿಕ್ಕೆರನಕೇರಿ, ಹೊಸಮನೆ, ಹುನಗುಂಡ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, 2. ಸೋಮ ಶೇಖರ (21), ತಂದೆ:ತಿಮ್ಮೇಶ, ವಾಸ: ಅತ್ತಿಗುಡ್ಡ ,ಈಶ್ವರ ದೇವಸ್ಥಾನದ ಬಳಿ .ಸಿಂಧನೂರು ತಾಲ್ಲೂಕು, ರಾಯಚೂರು ಇವರನ್ನು ಮೋಟಾರು ಸೈಕಲ್ ಸಮೇತ ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: 41(1)(D)CRPC & 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 09-06-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080